ಮಲಾಡ್‌ ಕುರಾರ್‌ ವಿಲೇಜ್‌ನಲ್ಲಿ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ಪೂಜೆ

Team Udayavani, Sep 12, 2018, 4:03 PM IST

56.jpg

ಮುಂಬಯಿ: ಕಳೆದ ಒಂಬತ್ತು ವರ್ಷಗಳಿಂದ ಸತತವಾಗಿ ಈ ಸ್ಥಳದಲ್ಲಿ ಸಮಿತಿಯವರ ಹಾಗೂ ಭಕ್ತಾಭಿಮಾನಿಗಳ ಸಹಕಾರದಿಂದ ವರಮಹಾಲಕ್ಷ್ಮೀ ಪೂಜೆ ನಡೆಸುತ್ತಿದ್ದು, ಇದರೊಂದಿಗೆ ಪರಿಸರದ ಪ್ರತಿಭಾವಂತ ಮಕ್ಕಳನ್ನು ಗುರುತಿಸಿ ಅವರಿಗೆ ಪ್ರೋತ್ಸಾಹ ನೀಡುತ್ತಾ ಬಂದಿದ್ದು ಮಹಾಲಕ್ಷ್ಮೀಯ ಸೇವೆಯೊಂದಿಗೆ ಈ ಸಮಿತಿಯ ಮೂಲಕ ಸರಸ್ವತಿಯ ಸೇವೆಯನ್ನು ಮಾಡುತ್ತಿರುವುದು ಅಭಿಮಾನ ಎನಿಸುತ್ತಿದೆ. ಇದು ನಮ್ಮ ಸಮಿತಿಯ ಎÇÉಾ ಸದಸ್ಯರ ಹಾಗೂ ನಿಮ್ಮೆಲ್ಲರ ಪ್ರೋತ್ಸಾಹದಿಂದ ಸಾಧ್ಯವಾಗುತ್ತಿದೆ ಎಂದು ಮಲಾಡ್‌  ಶ್ರೀ  ವರಮಹಾಲಕ್ಷ್ಮೀ ಪೂಜಾ ಸಮಿತಿಯ ಅಧ್ಯಕ್ಷರಾದ ನ್ಯಾಯವಾದಿ ಜಗನ್ನಾಥ ಶೆಟ್ಟಿ ಅವರು ನುಡಿದರು.

ಸೆ. 9ರಂದು  ಮಾಲಾಡ್‌ ಪೂರ್ವದ  ಕುರಾರ್‌ ವಿಲೇಜ್‌ನ ಆನಂದವಾಡಿ ಜೀಜಾಮಾತಾ ಶಾಲೆಯ ಆವರಣದಲ್ಲಿ ಮಲಾಡ್‌  ಶ್ರೀ ವರಮಹಾಲಕ್ಷ್ಮೀ ಪೂಜಾ ಸಮಿತಿಯ ಆಶ್ರಯದಲ್ಲಿ 9ನೇ ವರ್ಷದ ಶ್ರೀ ವರಮಹಾಲಕ್ಷಿ¾à ಪೂಜೆಯ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು, ಮುಂದಿನ ವರ್ಷ ದಶಮಾನೋತ್ಸವವನ್ನು ಆಚರಿಸುತ್ತಿರುವ ನಮಗೂ ಪೂರ್ವ ಸಿದ್ಧತೆ ಮಾಡಬೇಕಾಗಿದ್ದು ನಿಮ್ಮೆಲ್ಲರ ಸಹಾಯ ಬೇಕಾಗಿದೆ. ನಮ್ಮ ಸಮಿತಿಯು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದು, ದೇಣಿಗೆಗಾಗಿ ಯಾರ ಬಳಿಗೂ ಹೋಗದೆ ಸಮಿತಿಯವರೇ ಎಲ್ಲವನ್ನು ನೀಡುತ್ತಿದ್ದು, ಇಲ್ಲಿ ಮಹಾಲಕ್ಷ್ಮೀಯ ಅನುಗ್ರಹವಿದೆ ಎಂದರು.

ಮೀರಾರೋಡ್‌ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕರಾದ ಸಾಣೂರು ಸಾಂತಿಂಜ ಜನಾದ‌ìನ ಭಟ್‌ ಅವರ ಪೌರೋಹಿತ್ಯದಲ್ಲಿ ಮುಂಬಯಿಯ ಪತ್ರಕರ್ತ, ಬಿ. ದಿನೇಶ್‌ ಕುಲಾಲ್‌ ಅವರ ಸಾರಥ್ಯದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಮೊದಲಿಗೆ  ಸದಾನಂದ ಕೋಟ್ಯಾನ್‌ ಮತ್ತು ಸಮಿತಿಯ ಸದಸ್ಯರಿಂದ ಹಾಗೂ ಶೇಖರ ಸಸಿಹಿತ್ಲು ಮತ್ತು ಬಳಗದವರಿಂದ ಭಜನೆ, ನಂತರ ಮಲಾಡ್‌ ಪರಿಸರದ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನೃತ್ಯ ವೈಭವ ನಡೆಯಿತು.

ಅತಿಥಿಗಳಾಗಿ ವೇದಿಕೆಯಲ್ಲಿ ಕುಲಾಲ ಸಂಘ ಚರ್ಚ್‌ಗೇಟ್‌ – ದಹಿಸರ್‌ ಸ್ಥಳೀಯ ಸಮಿ ತಿಯ ಕಾರ್ಯಾಧ್ಯಕ್ಷ ಗಣೇಶ್‌ ಸಾಲ್ಯಾನ್‌,  ಚಾಮುಂಡೇಶ್ವರಿ ಸೇವಾ ಸಮಿತಿಯ ಅಧ್ಯಕ್ಷ ಕುಮಾರ್‌ ಗೌಡ, ಅಭ್ಯುದಯ ಬ್ಯಾಂಕಿನ ಆಡಳಿತ ನಿರ್ದೇಶಕ ಪ್ರೇಮನಾಥ ಸಾಲ್ಯಾನ್‌, ಸಮಿತಿಯ ಗೌರವ ಕಾರ್ಯದರ್ಶಿ ಗಣೇಶ್‌ ಎಲ್‌. ಕುಂದರ್‌, ಕೋಶಾಧಿಕಾರಿ ಜಗನ್ನಾಥ ಎಚ್‌.  ಮೆಂಡನ್‌, ಸಂತೋಷ್‌ ಪೂಜಾರಿ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಮಿತಿಯ ಸದಸ್ಯರು ಮತ್ತು ಪದಾಧಿಕಾರಿಗಳು ಅತಿಥಿಗಳನ್ನು ಸತ್ಕರಿಸಿದರು. ರತ್ನಾ ಡಿ. ಕುಲಾಲ್‌ ಅವರು ಅತಿಥಿಗಳನ್ನು ಪರಿಚಯಿಸಿದರು.

ಸಮಿತಿಯ ವತಿಯಿಂದ ಮಹಾನಗರದಲ್ಲಿ ಸಾಧನೆಗೈದ ಬೃಹನ್ಮುಂಬಯಿ ಕಸ್ಟಮ್‌ ಬ್ರೋಕರ್ ಅಸೋಸಿಯೇಶನ್‌ ಅಧ್ಯಕ್ಷ  ಕರುಣಾಕರ ಶೆಟ್ಟಿ ಇವರನ್ನು ಸಮ್ಮಾನಿಸಲಾಯಿತು. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸಮ್ಮಾನಿಸಲಾಯಿತು. ಅನಾರೋಗ್ಯ ಪೀಡಿತ ಸ್ಥಳೀಯರಿಗೆ ಸಹಾಯ ಹಸ್ತವನ್ನು ನೀಡಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ನೃತ್ಯ ವೈಭವ ಕಾರ್ಯಕ್ರಮಗಳನ್ನು ಕುಮರೇಶ್‌ ಆಚಾರ್ಯ, ಸೌಮ್ಯಾ ಮೆಂಡನ್‌ ಮತ್ತು ಯೋಗೇಶ್ವರಿ ಗೌಡ ನಿರ್ವಹಿಸಿದರು. ಸಭಾ ಕಾರ್ಯಕ್ರಮಗಳನ್ನು ಬಿ. ದಿನೇಶ್‌ ಕುಲಾಲ್‌ ಅವರು ನಿರ್ವಹಿಸಿದರು.

ಈ ಸಂದರ್ಭದಲ್ಲಿ ಸಿಎ ಪರೀಕ್ಷೆಯಲ್ಲಿ ಉತ್ತಿರ್ಣರಾದ ರಾಜೇಶ್‌ ಮೂಲ್ಯ ಮತ್ತು ಅವರ ಹೆತ್ತವರನ್ನು ಸಮ್ಮಾನಿಸಲಾಯಿತು. 

ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ಪೂಜೆಯ ಬಳಿಕ ಪ್ರಸಾದ ರೂಪದಲ್ಲಿ ದಿನೇಶ್‌ ಕಾಮತ್‌ ಅವರ ಸಹಭಾಗಿತ್ವದಲ್ಲಿ ಅನ್ನಸಂತರ್ಪಣೆ ನಡೆಯಿತು. 
ಕಾರ್ಯಕ್ರಮಗಳ ಯಶಸ್ಸಿಗೆ ಸಮಿತಿಯ ಇತರ ಸದಸ್ಯರುಗಳಾದ ಸತೀಶ್‌ ಭಟ್‌,  ಸಂತೋಷ್‌ ಪೂಜಾರಿ, ದೇವು ಬಿ. ಕೋಟ್ಯಾನ್‌, ಈಶ್ವರ ಕುಲಾಲ್‌,  ಶೈಲೇಶ್‌ ಪೂಜಾರಿ, ಮಹಾಬಲ ಪೂಜಾರಿ, ಉದಯ ಬಿ. ಸಾಲ್ಯಾನ್‌, ಮಹೇಶ್‌ ಗೌಡ, ಮೃತ್ಯುಂಜಯ ಪಲ್ಲಿ, ಶೇಖರ ಪೂಜಾರಿ, ಕುಮಾರೇಶ್‌ ಆಚಾರ್ಯ, ಚಂದ್ರಶೇಖರ ಶೆಟ್ಟಿ, ನಿತ್ಯಾನಂದ ಕೋಟ್ಯಾನ್‌, ಸುಂದರ ಪೂಜಾರಿ, ದಿನೇಶ್‌ ಕುಂಬ್ಳೆ, ದಿನೇಶ್‌ ಪೂಜಾರಿ, ಸೀತಾರಾಮ್‌ ಅಮೀನ್‌, ಸಿದ್ಧರಾಮ ಗೌಡ, ಸೋಮನಾಥ ವಾಗ್ಲೆ,  ಅಂಡಾರ ಕೃಷ್ಣ ಪ್ರಭು, ರವಿ ಮೂಲ್ಯ, ಜಯರಾಮ ಪಾಟ್ಕರ್‌,  ಸನತ್‌ ಪೂಜಾರಿ, ಪ್ರತೀಕ್‌  ಶೆಟ್ಟಿ, ಸಲಹೆಗಾರರಾದ  ಪರಮಾನಂದ ಜೆ. ಭಟ್‌, ರವಿ ಸ್ವಾಮೀಜಿ, ಶ್ರೀನಿವಾಸ ಸಾಫಲ್ಯ,  ಹರೀಶ್‌ ಶೆಟ್ಟಿ, ಪ್ರೇಮನಾಥ ಸಾಲ್ಯಾನ್‌ ಮತ್ತಿತರರು ಸಹಕರಿಸಿದರು. 

ತುಳುನಾಡ ಮಣ್ಣಲ್ಲಿ ಹುಟ್ಟಿ ಬೆಳೆದು ಜೀವನಕ್ಕಾಗಿ ಮುಂಬಯಿಗೆ ಆಗಮಿಸಿದ ನಾವು ಇಲ್ಲಿ  ನಮ್ಮ ದೇವರ ಸೇವೆ ಮಾಡುತ್ತಾ ನಮ್ಮ ಸಂಸ್ಕೃತಿ, ಸಂಸ್ಕಾರ, ಸಂಪ್ರದಾಯವನ್ನು ಉಳಿಸಿ ಬೆಳೆಸುತ್ತಿರುವೆವು. ವರಮಹಾಲಕ್ಷ್ಮೀ ಪೂಜೆಯು ಮಹಿಳೆಯಿಂದ ಪ್ರಾರಂಭಗೊಂಡಿದೆ.
– ರಮೇಶ್‌ ಗುರುಸ್ವಾಮಿ,  ಸಂಸ್ಥಾಪಕರು, ವರ್ಲಿ ಅಪ್ಪಾಜಿ ಬೀಡು ಫೌಂಡೇಶನ್‌

ಮಲಾಡ್‌ ಪರಿಸರದ ತುಳು ಕನ್ನಡಿಗರ ಮಾತ್ರವಲ್ಲ ಇತರ ಸಮುದಾಯದವರ ಕಷ್ಟ ಕಾರ್ಪಣ್ಯಗಳನ್ನು ದೂರ ಮಾಡಲು ಕಳೆದ ಒಂಬತ್ತು ವರ್ಷಗಳಿಂದ ವರಮಹಾ ಲಕ್ಷ್ಮೀ  ಪೂಜೆಯ ಮೂಲಕ ಕಾರ್ಯನಿರತವಾಗಿರುವ ಈ ಸಮಿತಿಯ ಕಾರ್ಯ ಶ್ಲಾಘನೀಯ. ಇದು ಮುಖ್ಯವಾಗಿ ಮಹಿಳೆಯರ ಕಷ್ಟ ಗಳನ್ನು ದೂರ ಮಾಡುವ ಪೂಜೆ. ಭಕ್ತಿಯಿಂದ ಈ ಪೂಜೆ ಮಾಡಿದಲ್ಲಿ ಲಕ್ಷಿ¾ ಮನೆಯಲ್ಲಿ ಬಂದು ನೆಲೆಸಿಯಾಳು.
– ರಘುರಾಮ ಚಂದನ್‌, ಕಾರ್ಯಾಧ್ಯಕ್ಷರು, ಮೊಗವೀರ ಮಹಾಜನ ಸಂಘ ಬಗ್ವಾಡಿ ಮೀರಾರೋಡ್‌ ಸ್ಥಳೀಯ ಸಮಿತಿ

ಚಿತ್ರ-ವರದಿ : ಈಶ್ವರ ಎಂ. ಐಲ್‌

ಟಾಪ್ ನ್ಯೂಸ್

ಕ್ಯುಆರ್‌ ಕೋಡ್‌ ಬದಲಿಸಿ ಬಂಕ್‌ಗೆ ಲಕ್ಷಾಂತರ ರೂ. ವಂಚನೆ

ಕ್ಯುಆರ್‌ ಕೋಡ್‌ ಬದಲಿಸಿ ಬಂಕ್‌ಗೆ ಲಕ್ಷಾಂತರ ರೂ. ವಂಚನೆ

ಬೋಳಂತೂರು ದರೋಡೆ ಪ್ರಕರಣದ ಸೂತ್ರಧಾರ ಕಾರು ಚಾಲಕ?

ಬೋಳಂತೂರು ದರೋಡೆ ಪ್ರಕರಣದ ಸೂತ್ರಧಾರ ಕಾರು ಚಾಲಕ?

ICC Champions Trophy: England boycott match against Afghanistan?

ICC Champions Trophy: ಅಫ್ಘಾನಿಸ್ಥಾನ ವಿರುದ್ಧದ ಪಂದ್ಯಕ್ಕೆ ಇಂಗ್ಲೆಂಡ್‌ ಬಹಿಷ್ಕಾರ?

Sullia: ಬಸ್ಸಿನಿಂದ ವಿದ್ಯಾರ್ಥಿ ರಸ್ತೆಗೆಸೆಯಲ್ಪಟ್ಟ ಪ್ರಕರಣ; ಚಾಲಕ-ನಿರ್ವಾಹಕರಿಗೆ ಶಿಕ್ಷೆ

Sullia: ಬಸ್ಸಿನಿಂದ ವಿದ್ಯಾರ್ಥಿ ರಸ್ತೆಗೆಸೆಯಲ್ಪಟ್ಟ ಪ್ರಕರಣ; ಚಾಲಕ-ನಿರ್ವಾಹಕರಿಗೆ ಶಿಕ್ಷೆ

Bumrah in the race for ICC Player of the Month award

Jasprit Bumrah: ಐಸಿಸಿ ತಿಂಗಳ ಆಟಗಾರ ಪ್ರಶಸ್ತಿ ರೇಸ್‌ನಲ್ಲಿ ಬುಮ್ರಾ

Kerala: Skull found in fridge of house that had been abandoned for 20 years!

Kerala: 20 ವರ್ಷದಿಂದ ಪಾಳು ಬಿದಿದ್ದ ಮನೆಯ ಫ್ರಿಡ್ಜಲ್ಲಿ ತಲೆಬುರುಡೆ ಪತ್ತೆ!

Tannirbhavi: ಜ. 11, 12ರ ಬೀಚ್‌ ಉತ್ಸವ, ಸ್ವಚ್ಛತೆ ಸುರಕ್ಷತೆಗೆ ಗರಿಷ್ಠ ಆದ್ಯತೆ: ಡಿಸಿ

Tannirbhavi: ಜ. 11, 12ರ ಬೀಚ್‌ ಉತ್ಸವ, ಸ್ವಚ್ಛತೆ ಸುರಕ್ಷತೆಗೆ ಗರಿಷ್ಠ ಆದ್ಯತೆ: ಡಿಸಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು

ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು

ಅಬುಧಾಬಿ ಹಿಂದೂ ಮಂದಿರದಲ್ಲಿ ಪ್ರಥಮ ದೀಪಾವಳಿ ಸಂಭ್ರಮ

ಅಬುಧಾಬಿ ಹಿಂದೂ ಮಂದಿರದಲ್ಲಿ ಪ್ರಥಮ ದೀಪಾವಳಿ ಸಂಭ್ರಮ

ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸರಣ ಘಟಕಕ್ಕೆ ಗ್ರಹಣ!

ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!

ಕತಾರ್‌:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್‌ ಶಹನ ಜತೆ ಸಂವಾದ

ಕತಾರ್‌:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್‌ ಶಹನ ಜತೆ ಸಂವಾದ

ಬಹ್ರೈನ್‌ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್‌ ಅಬ್ಬರ-ಕ್ರಿಕೆಟ್‌ ಪ್ರೇಮಿಗಳ ಮೆಚ್ಚುಗೆ

ಬಹ್ರೈನ್‌ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್‌ ಅಬ್ಬರ-ಕ್ರಿಕೆಟ್‌ ಪ್ರೇಮಿಗಳ ಮೆಚ್ಚುಗೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

ಕ್ಯುಆರ್‌ ಕೋಡ್‌ ಬದಲಿಸಿ ಬಂಕ್‌ಗೆ ಲಕ್ಷಾಂತರ ರೂ. ವಂಚನೆ

ಕ್ಯುಆರ್‌ ಕೋಡ್‌ ಬದಲಿಸಿ ಬಂಕ್‌ಗೆ ಲಕ್ಷಾಂತರ ರೂ. ವಂಚನೆ

ಬೋಳಂತೂರು ದರೋಡೆ ಪ್ರಕರಣದ ಸೂತ್ರಧಾರ ಕಾರು ಚಾಲಕ?

ಬೋಳಂತೂರು ದರೋಡೆ ಪ್ರಕರಣದ ಸೂತ್ರಧಾರ ಕಾರು ಚಾಲಕ?

ICC Champions Trophy: England boycott match against Afghanistan?

ICC Champions Trophy: ಅಫ್ಘಾನಿಸ್ಥಾನ ವಿರುದ್ಧದ ಪಂದ್ಯಕ್ಕೆ ಇಂಗ್ಲೆಂಡ್‌ ಬಹಿಷ್ಕಾರ?

Sullia: ಬಸ್ಸಿನಿಂದ ವಿದ್ಯಾರ್ಥಿ ರಸ್ತೆಗೆಸೆಯಲ್ಪಟ್ಟ ಪ್ರಕರಣ; ಚಾಲಕ-ನಿರ್ವಾಹಕರಿಗೆ ಶಿಕ್ಷೆ

Sullia: ಬಸ್ಸಿನಿಂದ ವಿದ್ಯಾರ್ಥಿ ರಸ್ತೆಗೆಸೆಯಲ್ಪಟ್ಟ ಪ್ರಕರಣ; ಚಾಲಕ-ನಿರ್ವಾಹಕರಿಗೆ ಶಿಕ್ಷೆ

Bumrah in the race for ICC Player of the Month award

Jasprit Bumrah: ಐಸಿಸಿ ತಿಂಗಳ ಆಟಗಾರ ಪ್ರಶಸ್ತಿ ರೇಸ್‌ನಲ್ಲಿ ಬುಮ್ರಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.