ಮೇ 26: ಮುಂಬಯಿಯಲ್ಲಿ ಕೈವಲ್ಯ ಮಠಾಧೀಶರ ದೀಕ್ಷಾ ರಜತ ಮಹೋತ್ಸವ
Team Udayavani, May 22, 2019, 5:01 PM IST
ಮುಂಬಯಿ: ಗೌಡ ಸಾರಸ್ವತ ಬ್ರಾಹ್ಮಣ (ಜಿಎಸ್‌ಬಿ) ಸಮಾಜದ ಅನುಯಾಯಿಗಳುಳ್ಳ ಮಠಗಳ ಸಾಲಿನಲ್ಲಿ ಶ್ರೀ ಸಂಸ್ಥಾನ ಗೌಡಪಾದಾಚಾರ್ಯ ಕೈವಲ್ಯ ಮಠಅತಿ ಆದಿ ಮಠವೂ ಹಾಗೂ ಪ್ರಾಚೀನ ವಾದದು. ಸುಮಾರು 2,700 ವರ್ಷಗಳ ಇತಿಹಾಸವುಳ್ಳ ಈ ಮಠವು ಗೋವಾ, ಪೊಂಡಾದ ಕವಳೆ ಎಂಬ ಸ್ಥಾನದಿಂದ ತಮ್ಮ ಆಡಳಿತವನ್ನು ನಡೆಸಿ ಭಾರತಾದ್ಯಂತ ಹಲವು ಶಾಖೆಗಳನ್ನು ಹೊಂದಿದೆ.
ಅತಿ ಪ್ರಾಚೀನ ಸ್ಮಾರ್ಥ ಪಂಥಕ್ಕೆ ಸೇರಿದ ಗೌಡಪಾದಾಚಾರ್ಯ ಕೈವಲ್ಯ ಮಠದ ಆರಾಧ್ಯ ದೇವತೆ ಶ್ರೀ ಭವಾನಿ ಶಂಕರ. ಕ್ರಿಸ್ತಪೂರ್ವ 230ರಲ್ಲಿಮೊಟ್ಟ ಮೊದಲನೆ ಗುರುವರ್ಯರಾದ ಶ್ರೀಮದ್ ಗೌಡಪಾದಾಚಾರ್ಯ ಗುರುವರ್ಯ ಅವರ ಶಿಷ್ಯ ಸ್ವಾಮೀಜಿ ಶ್ರೀ ಗೋವಿಂದ ಭಗವದ್‌ಪಾದಾ ಚಾರ್ಯರು ಹಿಂದೂ ಸಂಸ್ಕೃತಿಯ ಬುನಾದಿಯಾಗಿರುವ ಗಣಮಾನ್ಯ ಶ್ರೇಷ್ಠ ಗುರು ಶ್ರೀ ಆದಿಶಂಕರರಿಗೆ ದೀಕ್ಷೆಯನ್ನು ದಯಪಾಲಿಸಿ ಗೋಮಾಂತಕದಲ್ಲಿ (ಗೋವಾ) ಮಠವನ್ನು ಸ್ಥಾಪಿಸಿ ಭವಾನಿ ಶಂಕರ ದೇವರನ್ನು ಆರಾಧಿಸುತ್ತಾ ಧರ್ಮ ಪ್ರಚಾರಗೈದರು.
ಶ್ರೀ ಸಂಸ್ಥಾನದ ವಿದ್ಯಮಾನ ಗುರುವರ್ಯರಾದ ಪರಮಪೂಜ್ಯ ಶ್ರೀಮದ್ ಶಿವಾನಂದ ಸರಸ್ವತಿ ಸ್ವಾಮೀಜಿ ಅವರು ಸಂಸ್ಥಾನದ 77ನೇ ಯತಿವರ್ಯರಾಗಿ ಗುರು ಶ್ರೀಮದ್ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿಯವರಿಂದ ದೀಕ್ಷೆಯನ್ನು ಸ್ವೀಕರಿಸಿ 1994ನೇ ಇಸವಿಯಲ್ಲಿ ಮಠದ ಪಟ್ಟವನ್ನು ಅಲಂಕರಿಸಿದರು. ಶ್ರೀಗಳು ಅಂದಿನಿಂದ ಹಲವು ಮಠ ಮಂದಿರಗಳನ್ನು ಜೀರ್ಣೋದ್ಧಾರಗೊಳಿಸಲು ಸಕ್ರಿಯರಾದಷ್ಟೇ ಅಲ್ಲ ಭಾರತದಲ್ಲೆಡೆ ಧರ್ಮಪ್ರಚಾರಗೈಯಲು ಸಂಚರಿಸಿ ಶಿಷ್ಯ ವರ್ಗಕ್ಕೆ ಬೋಧಿಸುತ್ತಿದ್ದಾರೆ.
ಮುಂಬಯಿ ದಕ್ಷಿಣ ಭಾಗದಲ್ಲಿ ನೆಲೆಸಿರುವ ಬಾಣಗಂಗಾ ಪರಿಸರದ ಮಠದ ಮಹತ್ವದ ಶಾಖೆ ವಾಲ್ಕೇಶ್ವರದ ಶಾಂತಾದುರ್ಗ ದೇವಳ ಕವಳೇ ಮಠದ ವತಿಯಿಂದ ಮೇ 26ರಂದು ಮುಂಬಯಿಯ ದಾದರ್‌ಪೂರ್ವದ ಕಿಂಗ್ಸ್ ಜಾರ್ಜ್ ಸ್ಕೂಲಿನ ಬಿ.ಎನ್. ವೈದ್ಯ ಸಭಾಗೃಹದಲ್ಲಿಸಂಜೆ 5 ಗಂಟೆಯಿಂದ ಅತಿ
ವಿಜೃಂಭಣೆಯಿಂದ ಸ್ವಾಮೀಜಿ ಅವರ ದೀಕ್ಷಾ ಸಮಾರಂಭದ ರಜತ ಮಹೋತ್ಸವವನ್ನು ಆಚರಿಸಲಿದೆ. ಅಂದು ಸಂಜೆ ಪರಮಪೂಜ್ಯ ಗುರುವರ್ಯರನ್ನು ಭಕ್ತ ಸಮಾಜ ಬಾಂಧವರು ರಾಜಾ ಶಿವಾಜಿ ವಿದ್ಯಾಲಯ ದಾದರ್‌ಗೆಸ್ವಾಗತಿಸಲಿರುವರು. ಈ ಸಂದರ್ಭದಲ್ಲಿ ಭಕ್ತಿ ಸಂಗೀತ ರಸಮಂಜರಿಯನ್ನು ಆಯೋಜಿಸ
ಲಾಗಿದೆ. ಬಳಿಕ ಸ್ವಾಮೀಜಿಯವರು ಸಮಾಜಬಾಂಧವ ರನ್ನು ಉದ್ದೇಶಿಸಿ ಆಶೀರ್ವಚನ ನೀಡಲಿರುವರು.
ಶಾಂತಾದುರ್ಗ ದೇವಿಯ 54ನೇ ವರ್ಧಾಪನಾ ಮಹೋತ್ಸವವನ್ನು ಮೇ 26ರಿಂದ ಮೇ 29ರವರೆಗೆ ಸಂಭ್ರಮದಿಂದ ಆಚರಿಸಲಾಗುವುದು. ಮೇ 29ರಂದು ಸ್ವಾಮೀಜಿ ಅವರ ಉಪಸ್ಥಿತಿಯಲ್ಲಿÉ ದೇವಿಯ ಪಲ್ಲಕ್ಕಿ ಸೇವೆ ನಡೆಯಲಿದೆ. ಮೇ 26ರಂದು ದೀಕ್ಷಾ ಸಮಾರಂಭ ದಲ್ಲಿ ಭಾಗವಹಿಸಲಿಚ್ಛಿಸುವವರು ದೂರವಾಣಿ ಸಂಖ್ಯೆ 23625566 ಅನ್ನು ಸಂಪರ್ಕಿಸಿ ದೇಣಿಗೆ ಪ್ರವೇಶಪತ್ರ ಪಡೆಯಬಹುದೆಂದು ಮಠದ ಸಮಿತಿ ಸದಸ್ಯ, ವಕ್ತಾರ ಕಮಲಾಕ್ಷ ಸರಾಫ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ. ಕಾರ್ಯಕ್ರಮ ದಲ್ಲಿ ಪಾಲ್ಗೊಳ್ಳಲು ಸ್ವಾಮೀಜಿಯವರು ಮೇ 22ರಂದು ಸಂಜೆ 6ಕ್ಕೆ ವಾಲ್ಕೇಶ್ವರದ ಸ್ವಮಠಕ್ಕೆ ಆಗಮಿಸಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
ಇಂಗ್ಲೆಂಡ್‌ನ ರಾದರಮ್ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’
Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.