![BR-Hills](https://www.udayavani.com/wp-content/uploads/2025/02/BR-Hills-415x249.jpg)
![BR-Hills](https://www.udayavani.com/wp-content/uploads/2025/02/BR-Hills-415x249.jpg)
Team Udayavani, May 2, 2019, 4:12 PM IST
ಮುಂಬಯಿ: ವೆಸ್ಟರ್ನ್ ಇಂಡಿಯಾ ಶ್ರೀ ಶನಿಮಹಾತ್ಮಾ ಸೇವಾ ಸಮಿತಿ ಮುಂಬಯಿ ಇದರ ಅಮೃತ ಮಹೋತ್ಸವದ ಅಂಗವಾಗಿ ಮೇ 5ರಂದು ಸರಣಿ ಕಾರ್ಯಕ್ರಮ-6 ರಅಂಗವಾಗಿ ಬಿಲ್ಲವರ ಅಸೋಸಿ
ಯೇಶನ್ ಮುಂಬಯಿ ಸ್ಥಾಪಕ ಎಂ. ಅಪ್ಪಣ್ಣ ವೇದಿಕೆಯಲ್ಲಿ ಮಂಗಳೂರು ಮುಕ್ಕ ಶ್ರೀ ಕ್ಷೇತ್ರ ಶ್ರೀ ಸತ್ಯಧರ್ಮ ದೇವಿ ದೇವಸ್ಥಾನದಲ್ಲಿ ಶ್ರೀ ಶನಿಮಹಾಪೂಜೆ ಮತ್ತು ಧಾರ್ಮಿಕ ಸಭೆಯು ನಡೆಯಲಿದೆ.
ರವಿ ಎಲ್. ಬಂಗೇರ ಅವರ ಸಂಪೂರ್ಣ ಸಹಕಾರದಿಂದ ಯಕ್ಷಗಾನ ತಾಳಮದ್ದಳೆಯ ರೂಪದಲ್ಲಿ ಶ್ರೀ ಶನಿಗ್ರಂಥ ಪಾರಾಯಣಯನ್ನು ಆಯೋಜಿಸಲಾಗಿದೆ. ಈ ಮಧ್ಯೆ ಸಭಾ ಕಾರ್ಯಕ್ರಮ, ಸಮ್ಮಾನ, ಮಂಗಳಾರತಿ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳು ಜರಗಲಿದ್ದು, ಮಧ್ಯಾಹ್ನ 12.30 ರಿಂದ ಅನ್ನ ಸಂತರ್ಪಣೆಯನ್ನು ಆಯೋಜಿಸಲಾಗಿದೆ. ಸಂಜೆ 4ರಿಂದ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಭಾರತ್ ಬ್ಯಾಂಕಿನ ನಿರ್ದೇಶಕ, ಮಂದಿರ ಸ್ಮರಣ ಸಂಚಿಕೆಯ ಕಾರ್ಯಾಧ್ಯಕ್ಷ ಪುರುಷೋತ್ತಮ ಎಸ್. ಕೋಟ್ಯಾನ್ ಅವರು ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಭಾರತ್ ಬ್ಯಾಂಕಿನ ಕಾರ್ಯಾಧ್ಯಕ್ಷ ಜಯ ಸಿ. ಸುವರ್ಣ, ಬಿಲ್ಲವ ಛೇಂಬರ್ ಆಫ್ ಕಾಮರ್ಸ್ ಮುಂಬಯಿ ಇದರ ಕಾರ್ಯಾಧ್ಯಕ್ಷ ಎನ್. ಟಿ. ಪೂಜಾರಿ, ಬಿಲ್ಲವರ ಅಸೋಸಿಯೇಶನ್ ಮುಂಬಯಿ ಮಾಜಿ ಅಧ್ಯಕ್ಷ ಎಲ್. ವಿ. ಅಮೀನ್, ಜ್ಯೋತಿಷ್ಯ ಮಹೇಶ್ ಶಾಂತಿ ಹೆಜ್ಮಾಡಿ ಅವರು ಆಗಮಿಸಲಿದ್ದಾರೆ.
ಗೌರವ ಅತಿಥಿಗಳಾಗಿ ಶ್ರೀ ಸತ್ಯಧರ್ಮ ದೇವಿ ದೇವಸ್ಥಾನ ಮುಕ್ಕ ಅಧ್ಯಕ್ಷ ಗಣೇಶ್ ಐತಾಳ್, ಶ್ರೀ ಕ್ಷೇತ್ರ ಖಂಡಿಕೆ ಧರ್ಮದರ್ಶಿ ಆದಿತ್ಯ ಮುಕ್ಕಾಲ್ದಿ, ಸಾರಂತಾಯ ಗರೋಡಿ ಸಸಿಹಿತ್ಲು ಇದರ ಕಾಂತು ಲಕ್ಕನ ಗುರಿಕಾರ ಯಾನೆ ಪಟೇಲ ಯಾದವ ಜಿ. ಬಂಗೇರ, ಬಂಡಾರ ಮನೆ ದೇವೇಂದ್ರ ಪೂಜಾರಿ ಅವರು ಪಾಲ್ಗೊಳ್ಳಲಿದ್ದಾರೆ. ಭಕ್ತಾಭಿಮಾನಿಗಳು ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸುವಂತೆ ಸಂಸ್ಥೆಯ ಗೌರವಾಧ್ಯಕ್ಷ ಹರೀಶ್ ಜಿ. ಅಮೀನ್, ಅಧ್ಯಕ್ಷ ಜೆ. ಜೆ. ಕೋಟ್ಯಾನ್, ಗೌರವ ಪ್ರಧಾನ ಕಾರ್ಯದರ್ಶಿ ವಿಶ್ವನಾಥ ಭಂಡಾರಿ, ಗೌರವ ಕೋಶಾಧಿಕಾರಿ ಶರತ್ ಜಿ. ಪೂಜಾರಿ ಅವರು ಪ್ರಕಟನೆ ಯಲ್ಲಿ ತಿಳಿಸಿದ್ದಾರೆ.
You seem to have an Ad Blocker on.
To continue reading, please turn it off or whitelist Udayavani.