ನಗರದ ಪತ್ರಕರ್ತ ನವೀನ್ ಕೆ. ಇನ್ನಗೆ ರಾಜೇಶ ಶಿಬಾಜೆ ಮಾಧ್ಯಮ ಪ್ರಶಸ್ತಿ
Team Udayavani, Mar 16, 2017, 3:41 PM IST
ಮುಂಬಯಿ: ದಿ| ರಾಜೇಶ ಶಿಬಾಜೆ ಹೆಸರಿನಲ್ಲಿ ಪತ್ರಕರ್ತರ ವೇದಿಕೆ ಬೆಂಗಳೂರು ಇದರ ಉಡುಪಿ ಘಟಕವು ನೀಡುವ ಪ್ರತಿಷ್ಠಿತ ರಾಜೇಶ ಶಿಬಾಜೆ ಮಾಧ್ಯಮ ಪ್ರಶಸ್ತಿಗೆ ನಗರದ ಪತ್ರಕರ್ತ, ಅಂಕಣಗಾರ ನವೀನ್ ಕೆ. ಇನ್ನ ಮತ್ತು ಉಡುಪಿಯ ಹಿರಿಯ ಪತ್ರಕರ್ತ ಸುಭಾಶ್ಚಂದ್ರ ಎಸ್. ವಾಗ್ಲೆ ಅವರು ಆಯ್ಕೆಯಾಗಿದ್ದಾರೆ ಎಂದು ವೇದಿಕೆಯ ಜಿಲ್ಲಾಧ್ಯಕ್ಷ ಶೇಖರ ಅಜೆಕಾರು ತಿಳಿಸಿದ್ದಾರೆ.
ನವೀನ್ ಕೆ. ಇನ್ನ: ಕಾರ್ಕಳದ ಇನ್ನ ಗ್ರಾಮದಲ್ಲಿ ಜನಿಸಿದ ನವೀನ್ ಕೆ. ಇನ್ನ ಅವರು ಮುಂಬಯಿಯಲ್ಲಿ ಅರಳಿದ ಪ್ರತಿಭೆ, ಮುಂಬಯಿಯಲ್ಲಿ ಕನ್ನಡ ಮಾಧ್ಯಮದಲ್ಲಿ ಓದಿ ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಂಡವರು. ಮುಲುಂಡ್‌ನ ವಿಪಿಎಂ ಹೈಸ್ಕೂಲ್ ಮತ್ತು ಸಿದ್ಧಾರ್ಥ್ ಕಾಲೇಜಿನಲ್ಲಿ ಶಿಕ್ಷಣವನ್ನು ಮುಗಿಸಿದ ಅವರು 1992ರಲ್ಲಿ ಮುಂಬಯಿ ಕನ್ನಡ ಪತ್ರಿಕೋದ್ಯಮಕ್ಕೆ ಕಾಲಿಟ್ಟವರು. ಕಳೆದ 25 ವರ್ಷಗಳಿಂದ ಒಂದೇ ಪತ್ರಿಕೆಯಲ್ಲಿ ಪ್ರತಿವಾರ ಕ್ರೀಡಾ ಅಂಕಣ ಬರೆಯುತ್ತಾ ಬಂದಿದ್ದಾರೆ. ವರದಿಗಾರರಾಗಿ, ಜಾಹೀರಾತುದಾರರಾಗಿ, ಸ್ವತಃಛಾಯಾಗ್ರಾಹಕರಾಗಿ ಮತ್ತು ಸಮಾಜ ಸೇವಕರಾಗಿಯೂ ನಗರದಲ್ಲಿ ಜನಪ್ರಿಯರಾಗಿದ್ದಾರೆ. ದೈವ, ದೇವರ ಬಗ್ಗೆ ಅಪಾರ ಅಭಿಮಾನ ಹೊಂದಿರುವ ಅವರು ಧಾರ್ಮಿಕ ಕ್ಷೇತ್ರಗಳ ಬಗ್ಗೆ ನೂರಾರು ಲೇಖನಗಳನ್ನು ಬರೆದಿದ್ದಾರೆ. ಕ್ರೀಡೆ ಅವರಿಗೆ ಪ್ರಿಯವಾದ ವಿಷಯವಾಗಿದ್ದು, 2003 ರಿಂದ ಬಿಲ್ಲವರ ಅಸೋಸಿಯೇಶನ್ ಮುಖವಾಣಿ ಅಕ್ಷಯ ಮಾಸಿಕದಲ್ಲಿಯೂ ಕ್ರೀಡೆಗೆ ಸಂಬಂಧಿಸಿದ ಲೇಖನಗಳನ್ನು ಬರೆಯುತ್ತಿದ್ದಾರೆ. ಅವರ ಸಿದ್ಧಿ-ಸಾಧನೆಗಳನ್ನು ಗಮನಿಸಿ ಹಲವಾರು ಸಂಘ-ಸಂಸ್ಥೆಗಳು ಅವರನ್ನು ಗೌರವಿಸಿವೆ.
ದಯಾನಂದ ಪೈ ಕುಂಟಾಡಿ ಅವರಿಂದ ಆರಂಭಿಸಿ ಸತತವಾಗಿ ಈ ಗೌರವವನ್ನು ಮೊದಲು ಯುವ ಪ್ರತಿಭಾ ವೇದಿಕೆ ಮೂಲಕ ಮತ್ತು ಈಗ ಪತ್ರಕರ್ತರ ವೇದಿಕೆ ಮೂಲಕ ನೀಡಲಾಗುತ್ತಿದೆ. ಪಾಲಾಕ್ಷ ಸುವರ್ಣ ಬೆಳ್ತಂಗಡಿ, ಜಾನ್ ಡಿಸೋಜಾ ಕುಂದಾಪುರ, ಸುಕುಮಾರ ಮುನಿಯಾಲ್, ಯು. ಎಸ್. ಶೆಣೈ, ವಿಲಾಸ್ ಕುಮಾರ್ ನಿಟ್ಟೆ, ಧನಂಜಯ ಗುರುಪುರ, ಚಂದ್ರ ಕೆ. ಹೆಮ್ಮಾಡಿ ಮೊದಲಾದವರಿಗೆ ಈ ಹಿಂದೆ ರಾಜೇಶ ಶಿಬಾಜೆ ಮಾಧ್ಯಮ ಗೌರವ ನೀಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು
ಅಬುಧಾಬಿ ಹಿಂದೂ ಮಂದಿರದಲ್ಲಿ ಪ್ರಥಮ ದೀಪಾವಳಿ ಸಂಭ್ರಮ
ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಫೆ.21ರಂದು ತೆರೆಗೆ ಬರಲಿದೆ ʼವಿಷ್ಣು ಪ್ರಿಯಾʼ
Bajpe ಪ.ಪಂ.ನಿಂದ ಕುಡಿಯುವ ನೀರು ಪೂರೈಕೆಗೆ ಹೊಸ ಚಿಂತನೆ; ಹೊಸ ಬೋರ್‌ವೆಲ್‌ಗೆ ಸೌರ ಪಂಪ್
Mannagudda: ಗಡ್ಡೆ ಗೆಣಸು ಸೊಪ್ಪುಗಳಿಗೆ ರಾಜ ಮರ್ಯಾದೆ!
Cosmetic surgery:ಸೌಂದರ್ಯವರ್ಧಕ ಶಸ್ತ್ರಚಿಕಿತ್ಸೆ ಮತ್ತು ಭಾರತೀಯ ಜನಸಮುದಾಯದ ಮೇಲೆ ಪರಿಣಾಮ
Oyo Rooms: ಮದುವೆಯಾಗದ ಜೋಡಿಗೆ ಇನ್ಮುಂದೆ ʼಓಯೋʼ ರೂಮ್ ಸಿಗೋದು ಕಷ್ಟ – ವರದಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.