ಮೀರಾ -ಡಹಾಣು ಬಂಟ್ಸ್‌ನ 7ನೇ ವಾರ್ಷಿಕ ಮಹಾಸಭೆ


Team Udayavani, Mar 31, 2018, 4:10 PM IST

2903mum02.jpg

ವಿರಾರ್‌: ಮೀರಾ – ಡಹಾಣು ಬಂಟ್ಸ್‌ನ ಏಳನೇ ವಾರ್ಷಿಕ ಮಹಾಸಭೆಯಲ್ಲಿ  ನಿರೀಕ್ಷೆಗಿಂತ  ಮೀರಿ ಸದಸ್ಯರು ಪಾಲ್ಗೊಂಡಿರುವುದು ನಮ್ಮ  ಭಾಗ್ಯ. ನಿಮ್ಮ ಉಪಸ್ಥಿತಿಯೇ  ನಮ್ಮ ಯೋಜನೆ  – ಯೋಚನೆಗಳಿಗೆ ಬಲ ಮತ್ತು ಸ್ಫೂರ್ತಿ ನೀಡುತ್ತದೆ. ತನ್ನ ಅಧ್ಯಕ್ಷತೆಯ  ನಾಲ್ಕು ವರ್ಷದ ಅವಧಿಯಲ್ಲಿ ಕಾರ್ಯಕ್ರಮಗಳನ್ನು ಉತ್ತಮ ರೀತಿಯಲ್ಲಿ ಆಯೋಜಿಸಿದ್ದೇವೆ ಎನ್ನುವ ತೃಪ್ತಿ ನನ್ನಲ್ಲಿದೆ. ಸದಸ್ಯರ ನೋಂದಣಿ ಆರಂಭದಲ್ಲಿ ಎಷ್ಟಿತ್ತೋ ಅದ್ಕಕಿಂತ 200 ಸದಸ್ಯರ  ಸಂಖ್ಯೆ ಜಾಸ್ತಿಯಾಗಿದೆ. ಆದರೆ ಮೀರಾ -ಡಹಾಣು ಬಂಟ್ಸ್‌ ಸಂಘದಲ್ಲಿ ಒಗ್ಗಟ್ಟಿನ ಕೊರತೆ ಮತ್ತು  ಜನರ ನಡುವಿನ ಸಂಪರ್ಕದ ಸಮಸ್ಯೆಯಿದೆ.  ಅದನ್ನು ಮೊದಲು ಪರಿಹರಿಸಬೇಕು. ನಮ್ಮ  ಡಹಾಣುವಿನಲ್ಲಿ  ಸುಮಾರು 200 ಬಂಟರ  ಕುಟುಂಬಗಳಿವೆ. ಅವರಲ್ಲಿ ಸ್ಫೂರ್ತಿ ಇದೆ. ಹಣಕ್ಕೆ ಕಡಿಮೆಯಿಲ್ಲ. ನಾವು ಕಳೆದ ಹಲವಾರು ವರ್ಷಗಳಲ್ಲಿ ಡಹಾಣು-ಬೊಯಿಸರ್‌-ಪಾಲ^ರ್‌ಗಳಲ್ಲಿ ಹಲವಾರು ಕಾರ್ಯಕ್ರಮಗಳನ್ನು  ಮಾಡಿ ಸಾವಿರಕ್ಕೂ ಹೆಚ್ಚು ಜನರನ್ನು  ಸೇರಿಸಿದ ಶ್ರೇಯ ನಮ್ಮ ಸಂಘಕ್ಕಿದೆ ಎಂದು ಸಂಘದ ಅಧ್ಯಕ್ಷ ಬೊಯಿಸರ್‌ ಭುಜಂಗ ಶೆಟ್ಟಿ ಅವರು ನುಡಿದರು.

ಅವರು ಮಾ. 19ರಂದು ವಿರಾರ್‌ ಪಶ್ಚಿಮದ  ವಿಷ್ಣು  ಪ್ರತಿಭಾ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ನಡೆದ ಮೀರಾ -ಡಹಾಣು ಬಂಟ್ಸ್‌ನ 7ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಇವರು, ಈ ಬಾರಿ ಯುವ ನಾಯಕ ಅರವಿಂದ್‌ ಎ. ಶೆಟ್ಟಿಯವರನ್ನು ಸಂಘದ  ಅಧ್ಯಕ್ಷರನ್ನಾಗಿ ಆಯ್ಕೆ  ಮಾಡಿರುವುದು ಬಹಳಷ್ಟು ಸಂತಸ ನೀಡಿದೆ. ಇವರ ದಕ್ಷ ನೇತೃತ್ವದಲ್ಲಿ ಮತ್ತು ಪದಾಧಿಕಾರಿಗಳು ಮತ್ತು ನಾಲ್ಕು ಪ್ರಾದೇಶಿಕ ವಲಯಗಳ ಅಧ್ಯಕರು ಮತ್ತು ಪದಾಧಿಕಾರಿಗಳು ಮತ್ತು ಸರ್ವ ಸದಸ್ಯರ ಸಹಕಾರದಲ್ಲಿ ಸಂಘದ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆಯಲಿ ಎಂದು ಶುಭ ಹಾರೈಸಿದರು. ತನಗೆ  ಸಹಕರಿಸಿದ  ವಿರಾರ್‌ ಶಂಕರ್‌ ಶೆಟ್ಟಿ  ಪ್ರಕಾಶ್‌ ಹೆಗ್ಡೆಯವರಿಗೂ ಕೃತಜ್ಞತೆ ಸಲ್ಲಿಸಿದರು.

ಸಂಘದ ಮಾಜಿ  ಅಧ್ಯಕ್ಷ ಪ್ರಕಾಶ್‌ ಹೆಗ್ಡೆ ಇವರು ಮಾತನಾಡಿ, ವಿರಾರ್‌ ಶಂಕರ್‌ ಶೆಟ್ಟಿಯವರ ಯೋಚನೆ ಮತ್ತು ಯೋಜನೆಯಲ್ಲಿ  ಹುಟ್ಟಿದ ಸಂಸ್ಥೆಯಾಗಿದೆ. ಇಂದು  7 ನೇ ವಾರ್ಷಿಕ ಮಹಾಸಭೆಯನ್ನು ಕಂಡಾಗ  ಆನಂದವಾಗುತ್ತಿದೆ. ನಿಮ್ಮ ಸ್ಫೂರ್ತಿಯ ಉಪಸ್ಥಿತಿಗೆ ನಮ್ಮೆಲ್ಲರ ಬೆಂಬಲ ಸದಾ ಇದೆ. ಈಗ ಸಮಾಜದ ಮುಖ್ಯ ವಾಹಿನಿಗೆ  ಬರಲು ಸಜ್ಜಾಗಿ ನಿಂತಿದೆ. ಭುಜಂಗ ಶೆಟ್ಟಿ ಬೊಯಿಸರ್‌ ಮತ್ತವರ ತಂಡ  ಉತ್ತಮ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರೂ ನಮ್ಮಲ್ಲಿ ಜನಸಂಪರ್ಕದ ಕೊರತೆ ಎದ್ದು ಕಾಣುತ್ತಿತ್ತು. ಆದರೆ ಈ ಬಾರಿ ಅರವಿಂದ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ  ಅಂತಹ ಸಮಸ್ಯೆ ಎದುರಾಗದು. ಇವರ ಯುವ ತಂಡ  ಉತ್ತಮ ಕೆಲಸ ನಿರ್ವಹಿಸಲಿದೆ ಎಂಬ ನಂಬಿಕೆ ನನಗಿದೆ. ನಗರ ಸೇವಕರೊಬ್ಬರು  ಒಬ್ಬರು ನಮ್ಮ ಸಂಸ್ಥೆಯ ಅಧ್ಯಕ್ಷರಾಗಿರುವುದು ಅಭಿನಂದನೀಯವಾಗಿದೆ. ಅವರ ಇಂದಿನ ಸದಸ್ಯರೊಂದಿಗಿನ  ನೇರ ಮುಖಾ ಮುಖೀಯೇ ಸಾಕ್ಷಿಯಾಗಿದೆ. ಅರವಿಂದ  ಶೆಟ್ಟಿಯವರು ನಮ್ಮ ಸಂಘದ ಮುಂದಿನ ಭವಿಷ್ಯವಾಗಿದ್ದಾರೆ. ಅವರಿಗೆ ಮತ್ತು ಅವರ ತಂಡಕ್ಕೆ ನನ್ನ  ಅಭಿನಂದನೆಗಳು ಎಂದರು.

ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸಹಾನಿ  ವಿ. ಶೆಟ್ಟಿಯವರು ಮಾತನಾಡಿ, ನನ್ನ  4 ವರ್ಷಗಳ ಕಾರ್ಯಾವಧಿಯಲ್ಲಿ ಸಹಕರಿಸಿದ ಸರ್ವ ಪದಾಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸಿದ್ದರು. ಮುಂದಿನ  ಪದಾಧಿಕಾರಿಗಳಿಂದಲೂ ಇದೇ ರೀತಿಯ ಸಹಕಾರವಿರಲಿ ಎಂದು ಶುಭ ಹಾರೈಸಿದರು. ಯುವ ವಿಭಾಗದ ಚರಣ್‌ ಶೆಟ್ಟಿ  ಇವರು ಮಾತನಾಡಿ, ಮಹಾರಾಷ್ಟ್ರ ಮಣ್ಣಿಗೆ  ನಾವು ಹೊಟ್ಟೆ ಪಾಡಿಗಾಗಿ ಬಂದರೂ ಇದನ್ನು ಕರ್ಮ ಭೂಮಿಯಾಗಿ ಸ್ವೀಕರಿಸಿ, ಇಲ್ಲಿನ ಸಂಸ್ಕಾರ-ಸಂಸ್ಕೃತಿಗಳಿಗೆ ಒಗ್ಗಿ ಕೊಂಡಿದ್ದೇವೆ. ಆದರೆ  ನಾವು ಬಂಟರು  ಎನ್ನುವ ನಮ್ಮತನವನ್ನು ಬಿಟ್ಟುಕೊಟ್ಟಿಲ್ಲ. ನಮ್ಮ ಸಂಘ ಸಂಸ್ಥೆಗಳ  ಮೂಲಕ ನಿಕಟ ಸಂಪರ್ಕದಿಂದಿದ್ದೇನೆ. ನಾನು ಎಷ್ಟೇ ಒತ್ತಡ ದಲ್ಲಿದ್ದರೂ ಮೀರಾ -ಡಹಾಣು ಬಂಟ್ಸ್‌ನ ಸಭೆ ಅಥವಾ ಕಾರ್ಯಕ್ರಮವಿದ್ದಲ್ಲಿ  ಉಪಸ್ಥಿತನಿರಲು  ಪ್ರಯತ್ನಿಸುತ್ತೇನೆ ಎಂದರಲ್ಲದೆ, ಈ ಸಂಘವು ಇನ್ನಷ್ಟು ಉನ್ನತಿಗೇರಲಿ ಮತ್ತು ನೂತನ ಪದಾಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದರು.

ಸಭಾ ಕಾರ್ಯಕ್ರಮದ ವೇದಿಕೆಯಲ್ಲಿ ಗೌರವ ಅಧ್ಯಕ್ಷರಾದ ವಿರಾರ್‌ ಶಂಕರ ಬಿ. ಶೆಟ್ಟಿ,  ಅಧ್ಯಕ್ಷ ಬೊಯಿಸರ್‌ ಭುಜಂಗ ಶೆಟ್ಟಿ, ಅರವಿಂದ್‌ ಎ. ಶೆಟ್ಟಿ,  ಸುರೇಶ್‌ ಶೆಟ್ಟಿ ಗಂಧರ್ವ, ಪ್ರಕಾಶ್‌ ಹೆಗ್ಡೆ, ಬೊಯಿಸರ್‌ ಭಾಸ್ಕರ ಶೆಟ್ಟಿ, ಸಂಪತ್‌ ಶೆಟ್ಟಿ, ಸಹಾನಿ ವಿ. ಶೆಟ್ಟಿ, ಚೇತನ್‌ ಶೆಟ್ಟಿ, ಕಾರ್ಪೊರೇಟರ್‌ (ಸಭಾಪತಿ) ಪ್ರವೀಣ್‌ ಶೆಟ್ಟಿ,  ಉಪಸ್ಥಿತರಿದ್ದರು.  ಈ ಮನಡುವೆ  2018 -19 ಸಾಲಿನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಪದಾಧಿಕಾರಿಗಳ ವಿವರವನ್ನು ನೂತನ ಗೌರವ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್‌ ಶೆಟ್ಟಿ ವಿರಾರ್‌ ಓದಿದರು.

ಸಮಾಜ ಸೇವರ ಕಾರ್ಪೋರೇಟರ್‌ ಅರವಿಂದ ಎ. ಶೆಟ್ಟಿ ಅವರನ್ನು ಮೀರಾ – ಡಹಾಣು ಬಂಟ್ಸ್‌ನ ನೂತನ  ಅಧ್ಯಕ್ಷರನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಇವರನ್ನು ಸಂಘದ  ನಿಕಟಪೂರ್ವ  ಅಧ್ಯಕ್ಷ ಬೊಯಿಸರ್‌ ಭುಜಂಗ ಶೆಟ್ಟಿಯವರು ಮತ್ತು ವೇದಿಕೆಯ ಗಣ್ಯರು ಶಾಲು ಹೊದೆಸಿ, ಪುಷ್ಪಗುತ್ಛ ನೀಡಿ ಗೌರವಿಸಿ ಅಭಿನಂದಿಸಿದರು. ನೂತನ ಅಧ್ಯಕ್ಷ ಅರವಿಂದ ಶೆಟ್ಟಿ ಇವರು ಸದಸ್ಯರೊಂದಿಗೆ ನೇರ ಸಂವಾದ ನಡೆಸಿ, ಸದಸ್ಯರ ಸಲಹೆ-ಸೂಚನೆಗಳನ್ನು ಆಲಿಸಿ, ಸದಸ್ಯರ ಹೆಚ್ಚಳದ ಆವಶ್ಯಕತೆಯನ್ನು ಹೇಳಿ ಎಲ್ಲರ ಸಹಕಾರವನ್ನು ಬಯಸಿದರು.

ಅಲ್ಲದೆ ನೂತನವಾಗಿ ಆಯ್ಕೆಯಾದ ಸರ್ವ ಪದಾಧಿಕಾರಿಗಳು  ಮತ್ತು ನಾಲ್ಕು ವಲಯಗಳ ಅಧ್ಯಕ್ಷರುಗಳನ್ನು ಮತ್ತು ಪದಾಧಿಕಾರಿಗಳನ್ನು ಪುಷ್ಪಗುತ್ಛವನ್ನಿತ್ತು ಸ್ವಾಗತಿಸಲಾಯಿತು. ಈ ಸಂದರ್ಭದಲ್ಲಿ  ನೂತನ  ಸಮಿತಿಯ ವತಿಯಿಂದ ಸಂಘದ  ನಿರ್ಗಮನ ಅಧ್ಯಕ್ಷರಾದ  ಭುಜಂಗ ಶೆಟ್ಟಿ ಬೊಯಿಸರ್‌  ದಂಪತಿಯನ್ನು ಶಾಲು ಹೊದೆಸಿ, ಪುಷ್ಪಗುತ್ಛ ನೀಡಿ ವೇದಿಕೆಯ ಗಣ್ಯರು ಸಮ್ಮಾನಿಸಿದರು.

ಸ್ಥಳೀಯ ನಗರ ಸೇವಕ ಪ್ರವೀಣ್‌ ಶೆಟ್ಟಿ ದಂಪತಿಯನ್ನು ಮೀರಾ – ಡಹಾಣು ಬಂಟ್ಸ್‌ ವತಿಯಿಂದ   ಶಾಲು ಹೊದೆಸಿ, ಪುಷ#ಗುತ್ಛ ನೀಡಿ ಗೌರವಿಸಲಾಯಿತು. ನಗರ ಸೇವಕ  ಪ್ರವೀಣ್‌ ಶೆಟ್ಟಿಯವರು ಮಾತನಾಡಿ, ಸಮ್ಮಾನಿಸಿದ್ದಕ್ಕೆ ಕೃತಜ್ಞತೆಗಳು. ಮೀರಾ – ಡಹಾಣು ಬಂಟ್ಸ್‌ನ  ನೂತನ ಅಧ್ಯಕ್ಷರಾದ ನಗರ ಸೇವಕ ಅರವಿಂದ್‌ ಎ. ಶೆಟ್ಟಿ ಮತ್ತು ಅವರ ಬಳಗಕ್ಕೆ ಶುಭ ಹಾರೈಸಿದರು. ಛತ್ರಪತಿ ಶಿವಾಜಿ  ಮಹಾರಾಜ್‌ ಸಾಧನ ಪ್ರಶಸ್ತಿ ಪುರಸ್ಕೃತರಾದ ವಿರಾರ್‌ ಶಂಕರ್‌ ಬಿ. ಶೆಟ್ಟಿಯವರನ್ನು ಮೀರಾ-ಡಹಾಣು ಬಂಟ್ಸ್‌ ನ ನೂತನ ಸಮಿತಿಯು ಶಾಲು ಹೊದೆಸಿ, ಪುಷ#ಗುತ್ಛ ನೀಡಿ ಗೌರವಿಸಿತು.

ಲೇಖಕ ಅರುಣ್‌ ಶೆಟ್ಟಿ ಎರ್ಮಾಳ್‌, ಶಂಕರ ಆಳ್ವ, ಶಾಲಿನಿ ಸುಧಾಕರ ಶೆಟ್ಟಿ, ದಿವ್ಯಾ ರೈ, ಗಣೇಶ್‌ ಆಳ್ವ ಮಾತನಾಡಿದರು. ಕಾರ್ಯಕ್ರಮವನ್ನು  ಚಂದ್ರಶೇಖರ ಶೆಟ್ಟಿ ನಿರೂಪಿಸಿದರು. ಕಾರ್ಯದರ್ಶಿ ಸಂಪತ್‌ ಶೆಟ್ಟಿ ವಂದಿಸಿದರು.

ಸಭೆಯಲ್ಲಿ ಸೇರಿರುವ ಸದಸ್ಯರನ್ನು ಕಂಡು ಆನಂದವಾಗುತ್ತಿದೆ. ಜೂಹೂದಾನಿ ದೇವಿಯ ಕೃಪೆಯಿಂದ ಮೀರಾ-ಡಹಾಣುವರೆಗಿನ ಗ್ರಾಮೀಣ ಪ್ರದೇಶದ ಬಂಟ ಬಾಂಧವರ ಆಶೋತ್ತರಗಳಿಗೆ ಸ್ಪಂದಿಸುವ ಉದ್ಧೇಶದಿಂದ ಮೀರಾ-ಡಹಾಣು ಬಂಟ್ಸ್‌ನ್ನು ಸ್ಥಾಪಿಸಲಾಗಿದೆ. ಇಂದು  ನೂತನ ಕಾರ್ಯಕಾರಿ ಸಮಿತಿಯ ಆಯ್ಕೆಯಿಂದ ಸಂಘದ ಪುನರ್‌ ಪ್ರತಿಷ್ಠೆಯಾಗಿದೆ. ನಗರ ಸೇವಕರೊಬ್ಬರು ಸಂಘದ ಸಾರಥ್ಯ ವಹಿಸುತ್ತಿರುವುದು ಅಭಿಮಾನಪಡುವ ವಿಷಯವಾಗಿದೆ. ಅವರಿಂದ ಸಂಘವು ಇನ್ನಷ್ಟು ಅಭಿವೃದ್ಧಿಯತ್ತ ಸಾಗಲಿ. ಪ್ರಸ್ತುತ ಕಾರ್ಯಕಾರಿ ಸಮಿತಿಯಲ್ಲಿ ಉತ್ಸಾಹಿ ಯುವಕರಿದ್ದಾರೆ. ನಿಮಗೆ ನಮ್ಮೆಲ್ಲರ ಸಹಕಾರ ಸದಾಯಿದೆ. ಮೀರಾ-ಡಹಾಣು ಬಂಟ್ಸ್‌ ಗ್ರಾಮೀಣ ಪ್ರದೇಶದ ಬಂಟ ಬಾಂಧವರಿಗೆ ಒಂದು ಉತ್ತಮ ವೇದಿಕೆಯಾಗಿದೆ. ಇದನ್ನು ಉತ್ತಮ ರೀತಿಯಲ್ಲಿ ಬೆಳೆಸುವ ಜವಾಬ್ದಾರಿ ನಿಮ್ಮೆಲ್ಲರ ಮೇಲಿದೆ. ಇದೊಂದು ಗ್ರಾಮೀಣ ಭಾಗದ ಸಮಾಜ ಬಾಂಧವರ ಸಂಸ್ಥೆಯಾಗಿದೆ. ಸಂಸ್ಥೆಯನ್ನು ಒಗ್ಗಟ್ಟಿನಿಂದ ಇನ್ನಷ್ಟು ಅಭಿವೃದ್ಧಿಯತ್ತ ಸಾಗಿಸೋಣ.
-ವಿರಾರ್‌ ಶಂಕರ್‌ ಶೆಟ್ಟಿ,
ಗೌರವಾಧ್ಯಕ್ಷರು, ಮೀರಾ-ಡಹಾಣು ಬಂಟ್ಸ್‌ 

ಟಾಪ್ ನ್ಯೂಸ್

Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ

Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ

ಪ್ರಹ್ಲಾದ ಜೋಶಿ

Hubli: ಕಾಂಗ್ರೆಸ್‌ನಲ್ಲಿ ಈಗ ಇರುವವರೆಲ್ಲ ನಕಲಿ ಗಾಂಧಿಗಳು..: ಪ್ರಹ್ಲಾದ ಜೋಶಿ

Birthday Party: ಬರ್ತ್‌ಡೇ ಪಾರ್ಟಿ ಮುಗಿಸಿ ಬರುತ್ತಿದ್ದ ಮೂವರನ್ನು ಗುಂಡಿಕ್ಕಿ ಹತ್ಯೆ…

Birthday Party: ಬರ್ತ್‌ಡೇ ಪಾರ್ಟಿ ಮುಗಿಸಿ ಬರುತ್ತಿದ್ದ ಮೂವರನ್ನು ಗುಂಡಿಕ್ಕಿ ಹ*ತ್ಯೆ…

Belagavi; It hurts a lot, I won’t be afraid even if a hundred CT Ravi comes: Lakshmi Hebbalkar

Belagavi; ಬಹಳ ನೋವಾಗಿದೆ, ನೂರು ಸಿ.ಟಿ.ರವಿ ಬಂದರೂ ಹೆದರುವುದಿಲ್ಲ: ಲಕ್ಷ್ಮೀ ಹೆಬ್ಬಾಳಕರ

champions trophy

Cricket: ಚಾಂಪಿಯನ್ಸ್‌ ಟ್ರೋಫಿ ವೇಳಾಪಟ್ಟಿ ಅಂತಿಮ; ಭಾರತದ ಪಂದ್ಯಗಳಿಗೆ ಯುಎಇ ಆತಿಥ್ಯ

Arrested: ನಟ ಸುನಿಲ್‌ ಪಾಲ್‌, ಮುಸ್ತಾಕ್‌ ಅಪಹರಣ: ಎನ್‌ಕೌಂಟರ್‌ ಮೂಲಕ ಪ್ರಮುಖ ಆರೋಪಿ ಬಂಧನ

Arrested: ನಟ ಸುನಿಲ್‌ ಪಾಲ್‌, ಮುಸ್ತಾಕ್‌ ಅಪಹರಣ; ಎನ್‌ಕೌಂಟರ್‌ ಮೂಲಕ ಪ್ರಮುಖ ಆರೋಪಿ ಬಂಧನ

Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ

Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕತಾರ್‌:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್‌ ಶಹನ ಜತೆ ಸಂವಾದ

ಕತಾರ್‌:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್‌ ಶಹನ ಜತೆ ಸಂವಾದ

ಬಹ್ರೈನ್‌ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್‌ ಅಬ್ಬರ-ಕ್ರಿಕೆಟ್‌ ಪ್ರೇಮಿಗಳ ಮೆಚ್ಚುಗೆ

ಬಹ್ರೈನ್‌ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್‌ ಅಬ್ಬರ-ಕ್ರಿಕೆಟ್‌ ಪ್ರೇಮಿಗಳ ಮೆಚ್ಚುಗೆ

Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ 

Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ 

ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!

ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!

ಲ್ಯಾಂಬೆತ್‌ಗೆ ಸಚಿವ ಎಂ.ಬಿ.ಪಾಟೀಲ್‌ ಭೇಟಿ-ಬಸವೇಶ್ವರ ಪ್ರತಿಮೆ ವೀಕ್ಷಣೆ

ಲ್ಯಾಂಬೆತ್‌ಗೆ ಸಚಿವ ಎಂ.ಬಿ.ಪಾಟೀಲ್‌ ಭೇಟಿ-ಬಸವೇಶ್ವರ ಪ್ರತಿಮೆ ವೀಕ್ಷಣೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Shivanna cinema in Vallarasu director’s film

N.Maharajan: ವಲ್ಲರಸು ನಿರ್ದೇಶಕರ ಚಿತ್ರದಲ್ಲಿ ಶಿವಣ್ಣ ಸಿನಿಮಾ

Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ

Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ

ಪ್ರಹ್ಲಾದ ಜೋಶಿ

Hubli: ಕಾಂಗ್ರೆಸ್‌ನಲ್ಲಿ ಈಗ ಇರುವವರೆಲ್ಲ ನಕಲಿ ಗಾಂಧಿಗಳು..: ಪ್ರಹ್ಲಾದ ಜೋಶಿ

FIR 6 to 6 Kannada movie

FIR 6to6 movie: ಆ್ಯಕ್ಷನ್‌ ಚಿತ್ರದಲ್ಲಿ ವಿಜಯ ರಾಘವೇಂದ್ರ

Birthday Party: ಬರ್ತ್‌ಡೇ ಪಾರ್ಟಿ ಮುಗಿಸಿ ಬರುತ್ತಿದ್ದ ಮೂವರನ್ನು ಗುಂಡಿಕ್ಕಿ ಹತ್ಯೆ…

Birthday Party: ಬರ್ತ್‌ಡೇ ಪಾರ್ಟಿ ಮುಗಿಸಿ ಬರುತ್ತಿದ್ದ ಮೂವರನ್ನು ಗುಂಡಿಕ್ಕಿ ಹ*ತ್ಯೆ…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.