ಮೀರಾರೋಡ್ ಪಲಿಮಾರು ಮಠ 6ನೇ ಏಕಾಹ ಭಜನೆ
Team Udayavani, Jan 30, 2018, 4:31 PM IST
ಮುಂಬಯಿ: ಉಡುಪಿ ಶ್ರೀ ಕೃಷ್ಣ ಮಠದ ಪರ್ಯಾಯ ಪೀಠದಲ್ಲಿರುವ ಪಲಿಮಾರು ಮಠಾಧೀಶರಾದ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ ಅವರ ಸಂಕಲ್ಪ ಹಾಗೂ ಪ್ರೇರಣೆಯಂತೆ ಶ್ರೀ ಕೃಷ್ಣನ ಗರ್ಭಗುಡಿಗೆ ಸ್ವರ್ಣದ ಹೊದಿಕೆ, ನಿರಂತರ ಅಖಂಡ ಭಜನೆ, ಪ್ರತಿನಿತ್ಯ ಅನ್ನಸಂತರ್ಪಣೆ ಮತ್ತು ಲಕ್ಷ ತುಳಸಿ ಅರ್ಚನೆಯನ್ನು ಆಯೋಜಿಸಲಾಗಿದೆ. ಎರಡು ವರ್ಷ ನಿತ್ಯೋತ್ಸವದಲ್ಲಿರುವ ಉಡುಪಿ ಶ್ರೀ ಕೃಷ್ಣ ಮಠ ತಿರುಪತಿಯ ಕಾಂಚನಾ ಬ್ರಹ್ಮಂ ಪಂಢರಾಪುರದ ನಾದ ಬ್ರಹ್ಮ, ಉಡುಪಿಯ ಅನ್ನಬ್ರಹ್ಮನ ತ್ರಿವೇಣಿ ಸಂಗಮವಾಗಿ ಭಕ್ತಾದಿಗಳನ್ನು ಆಕರ್ಷಿಸುತ್ತಿದೆ ಎಂದು ಮೀರಾರೋಡ್ ಪಲಿಮಾರು ಮಠದ ಟ್ರಸ್ಟಿ ಹಾಗೂ ಪ್ರಬಂಧಕ ವಿದ್ವಾನ್ ರಾಧಾಕೃಷ್ಣ ಭಟ್ ನುಡಿದರು.
ಜ. 26ರಂದು ಮೀರಾರೋಡ್ ಪೂರ್ವದ ಪಲಿಮಾರು ಮಠದ ಶ್ರೀ ಬಾಲಾಜಿ ಸನ್ನಿಧಿಯಲ್ಲಿ ಬಾಲಾಜಿ ಭಜನ ಮಂಡಳಿ ಪಲಿಮಾರು ಮಠ ಇದರ 6 ನೇ ಏಕಾಹ ಭಜನೆ ಮತ್ತು ಮಂಗಳ್ಳೋತ್ಸವಕ್ಕೆ ಚಾಲನೆ ನೀಡಿ ಆಶೀರ್ವಚನಗೈದ ಅವರು, ಶ್ರೀ ಮಧ್ವಾಚಾರ್ಯರ ಸಿದ್ಧಾಂತದಂತೆ ಕಾಯಾ, ವಾಚಾ, ಮನಸಾ ಶುದ್ಧತೆಯೊಂದಿಗೆ ಭಜನೆಯ ಮೂಲಕ ಭಗವಂತನನ್ನು ಆರಾಧಿಸಬೇಕು. ನಾದಬ್ರಹ್ಮನಾದ ಭಗವಂತನನ್ನು ಲಯಬದ್ಧವಾದ ಸಂಗೀತದೊಂದಿಗೆ ಸ್ತುತಿಸಿ ಜೀವನದಲ್ಲಿ ಸಾರ್ಥಕ್ಯವನ್ನು ಕಾಣಬೇಕು ಎಂದರು.
ಯತಿರಾಜ ಉಪಾಧ್ಯಾಯ ಅವರ ನೇತೃತ್ವದಲ್ಲಿ ಜರಗಿದ 24 ತಾಸುಗಳ ಅಖಂಡ ಭಜನೆಯಲ್ಲಿ ನಗರ ಹಾಗೂ ಉಪನಗರಗಳ ಒಟ್ಟು 21 ಭಜನ ತಂಡಗಳು ಭಾಗವಹಿಸಿದ್ದವು. ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಎರಡು ವರ್ಷಗಳ ಕಾಲ ಜರಗಲಿರುವ ಅಖಂಡ ಭಜನೆಯಲ್ಲಿ ಪಾಲ್ಗೊಳ್ಳುವವರು ಮೀರಾರೋಡ್ ಪಲಿಮಾರು ಮಠವನ್ನು ಸಂಪರ್ಕಿಸಿದರೆ ಸೂಕ್ತ ವ್ಯವಸ್ಥೆಯನ್ನು ಕಲ್ಪಿಸಲಾಗುವುದು. ಭಜನೆಯಲ್ಲಿ ಭಾಗವಹಿಸಿದ ತಂಡಗಳ ಹೆಸರನ್ನು ಮಂತ್ರಾಲಯ ಮತ್ತು ತಿರುಪತಿಯ ದಾಸ ಸಾಹಿತ್ಯ ಪ್ರಾಜೆಕ್ಟ್‌ನಲ್ಲಿ ನೋಂದಾಯಿಸಲಾಗುವುದು ಎಂದು ಅವರು ಯತಿರಾಜ ಉಪಾಧ್ಯಾಯ ಅವರು ನುಡಿದು ಮಾಹಿತಿ ನೀಡಿದರು.
ಜಯರಾಮ ಭಟ್, ವಿಷ್ಣು ಪ್ರಸಾದ್ ಭಟ್, ವೆಂಕಟರಮಣ ಭಟ್, ಕೃಷ್ಣ ಉಡುಪ, ಕರಮಚಂದ್ರ ಗೌಡ, ಮಹಿಳಾ ಸದಸ್ಯೆಯರು, ವಿವಿಧ ಭಜನಾ ಮಂಡಳಿಗಳ ಪ್ರತಿನಿಧಿಗಳು ಸಹಕರಿಸಿದರು.
ಅಹೋರಾತ್ರಿಯ ಅಖಂಡ ಭಜನೆಯಲ್ಲಿ ಲಘು ಉಪಾಹಾರ ಹಾಗೂ ಪ್ರಸಾದ ರೂಪದಲ್ಲಿ ಅನ್ನ ಸಂತರ್ಪಣೆಯನ್ನು ಆಯೋಜಿಸಲಾಗಿತ್ತು.
ಚಿತ್ರ-ವರದಿ:ರಮೇಶ್ ಅಮೀನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು
ಅಬುಧಾಬಿ ಹಿಂದೂ ಮಂದಿರದಲ್ಲಿ ಪ್ರಥಮ ದೀಪಾವಳಿ ಸಂಭ್ರಮ
ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.