ಮೀರಾ – ಭಾಯಂದರ್ ಬಂಟರ ಸಂಘ : ಶೈಕ್ಷಣಿಕ ನೆರವು, ದತ್ತು ಸ್ವೀಕಾರ
Team Udayavani, Jun 27, 2018, 4:53 PM IST
ಮುಂಬಯಿ: ಸಮಾಜದಲ್ಲಿನ ಜನಸಾಮಾನ್ಯರ ಸೇವೆ ಮಾಡುತ್ತಾ ಬಂದಿರುವ ಬಂಟರ ಸಂಘವು ಇಂದು ವಿಶ್ವದÉೇ ಖ್ಯಾತಿಯನ್ನು ಪಡೆದಿದೆ. ಸಮಾಜದಲ್ಲಿನ ಶ್ರೀಮಂತರು ದಾನಿಗಳಾಗಿ ಸಹಕರಿಸಿ ಬಡವರ ಸೇವೆ ಮಾಡುತ್ತಿರುವುದು ಶ್ಲಾಘನೀಯ ಮಾತ್ರವಲ್ಲದೆ ದಾನಿಗಳಿಂದಾಗಿ ಸಂಘ ಹೆಚ್ಚಿನ ಅಭಿವೃದ್ಧಿಯಾಗುತ್ತಿದೆ. ದಾನಿಗಳಿಂದ ಸಮಾಜದ ಪರಿವರ್ತನೆಗಳು ಕೂಡಾ ಸಾಧ್ಯ. ಮುಂಬಯಿ ಉಪನಗರಗಳಲ್ಲಿನ ಎÇÉಾ ಪ್ರಾದೇಶಿಕ ಸಮಿತಿಗಳ ಸಹಕಾರದೊಂದಿಗೆ ಕಾಲೇಜನ್ನು ಸ್ಥಾಪಿಸುವ ಯೋಜನೆ ನಮ್ಮದಾಗಿದೆ ಎಂದು ಬಂಟರ ಸಂಘ ಮುಂಬಯಿಯ ಅಧ್ಯಕ್ಷ ಪದ್ಮನಾಭ ಎಸ್. ಪಯ್ಯಡೆ ಅವರು ಅಭಿಪ್ರಾಯಪಟ್ಟರು.
ಬಂಟರ ಸಂಘ ಮುಂಬಯಿ ಮೀರಾ – ಭಾಯಂದರ್ ಪ್ರಾದೇಶಿಕ ಸಮಿತಿಯ ವತಿಯಿಂದ ಸ್ಥಳೀಯ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ವಿತರಣೆ ಹಾಗೂ ದತ್ತು ಸ್ವೀಕಾರ ಕಾರ್ಯಕ್ರಮವು ಜೂ. 24 ರಂದು ಮೀರಾರೋಡ್ ಸೆಕ್ಟರ್ 10ರ ಸ್ವಾಮಿ ನಾರಾಯಣ ಮಂದಿರದಲ್ಲಿ ಸಭಾಗೃಹದಲ್ಲಿ ಜರಗಿದ್ದು, ಸಮಾರಂಭವನ್ನು ಉದ್ಘಾಟಿಸಿ, ಆರ್ಥಿಕ ನೆರವು ವಿತರಣೆ ಹಾಗೂ ದತ್ತು ಸ್ವೀಕಾರದ ಬಳಿಕ ಮಾತನಾಡಿದ ಪದ್ಮನಾಭ ಎಸ್. ಪಯ್ಯಡೆ ಅವರು, ದಾನಿಗಳ ಸಹಕಾರದಿಂದ ಈ ಸಲ ದೊಡ್ಡ ಮೊತ್ತದ ಆರ್ಥಿಕ ನೆರವು ನೀಡಲಾಗಿದೆ. ಮುಂಬಯಿಯ ಉಪನಗರದಲ್ಲಿರುವ ಸಂಘದ 9 ಪ್ರಾದೇಶಿಕ ಸಮಿತಿಗಳು ಉತ್ತಮ ವಾಗಿ ಕಾರ್ಯನಿರ್ವಹಿಸುತ್ತಿದ್ದು, ಅವರ ಸಹಕಾರದೊಂದಿಗೆ ಸಂಘವು ಇನ್ನಷ್ಟು ಶೈಕ್ಷಣಿಕ ಯೋಜನೆಗಳನ್ನು ತಂದು, ಪ್ರತೀ ಉಪನಗರಗಳಲ್ಲಿ ಕಾಲೇಜು ನಿರ್ಮಾಣದ ಉದ್ದೇಶವನ್ನು ಹೊಂದಲಾಗಿದ್ದು, ದಾನಿಗಳ ಸಹಕಾರ ಸದಾಯಿರಲಿ ಎಂದು ನುಡಿದರು.
ಸಂಘದ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷ ಉಳೂ¤ರು ಮೋಹನ್‌ದಾಸ್ ಶೆಟ್ಟಿ ಅವರು ಮಾತನಾಡಿ, ಮುಂದಿನ ವರ್ಷ ಪ್ರಥಮ ದರ್ಜೆಯಿಂದ ಹತ್ತನೆಯ ತರಗತಿಯವರೆಗೆ ಹೆಚ್ಚಿನ ಮಟ್ಟದಲ್ಲಿ ಶೈಕ್ಷಣಿಕ ನೆರವನ್ನು ನೀಡುವ ಉದ್ದೇಶ ನಮ್ಮದಾಗಿದ್ದು, ಇಲ್ಲಿನ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷರ ನಾಯಕತ್ವದಲ್ಲಿ ಉತ್ತಮ ಕಾರ್ಯಗಳು ನಡೆಯಲಿ ಎಂದು ಶುಭ ಹಾರೈಸಿದರು,
ಈ ಸಮಾರಂಭದಲ್ಲಿ ಮೀರಾ – ಭಾಯಂದರ್ ಪರಿಸರದ ಸುಮಾರು 623 ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು, 61 ವಿಧವೆಯರಿಗೆ ವಿಧವಾ ವೇತದ, ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಗಿರೀಶ್ ಶೆಟ್ಟಿ ತೆಳ್ಳಾರ್ ಮತ್ತು ತಂಡದವರು ಸಂಗ್ರಹಿಸಿದ ನಿಧಿಯಿಂದ 32 ವಿದ್ಯಾರ್ಥಿಗಳನ್ನು ಶೈಕ್ಷಣಿಕವಾಗಿ ದತ್ತು ಸ್ವೀಕರಿಸಲಾಯಿತು. ಕೆಲವು ವಿಕಲಚೇತನರಿಗೆ ಆರ್ಥಿಕ ನೆರವು ನೀಡಲಾಯಿತು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಬಂಟರ ಸಂಘ ಮುಂಬಯಿಯ ಗೌರವ ಪ್ರಧಾನ ಕಾರ್ಯದರ್ಶಿ ಸಿಎ ಸಂಜೀವ ಶೆಟ್ಟಿ, ಜತೆ ಕೋಶಾಧಿಕಾರಿ ಐಕಳ ಗುಣಪಾಲ್ ಶೆಟ್ಟಿ, ಕಾರ್ಯದರ್ಶಿ ಖಾಂದೇಶ್ ಭಾಸ್ಕರ್ ಶೆಟ್ಟಿ ಅವರು ಮಾತನಾಡಿ ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಿದರು.
ಸಂಘದ ಪಶ್ಚಿಮ ಪ್ರಾದೇಶಿಕ ಸಮಿತಿಗಳ ಸಮನ್ವಯಕ ಡಾ| ಪ್ರಭಾಕರ ಶೆಟ್ಟಿ, ಬಂಟರ ಸಂಘ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ರಂಜಿನಿ ಎಸ್. ಹೆಗ್ಡೆ, ಪ್ರಾದೇಶಿಕ ಸಮಿತಿಯ ಸಂಚಾಲಕ ಅರುಣೋದಯ ರೈ, ಉಪ ಕಾರ್ಯಾಧ್ಯಕ್ಷರುಗಳಾದ ಎಲಿಯಾಳ ಉದಯ ಹೆಗ್ಡೆ, ಮುನ್ನಲಾಯಿಗುತ್ತು ಸಚ್ಚಿದಾನಂದ ಶೆಟ್ಟಿ, ಕಾರ್ಯದರ್ಶಿ ರವೀಂದ್ರ ಶೆಟ್ಟಿ ಕೊಟ್ರಾಪಾಡಿಗುತ್ತು, ಕೋಶಾಧಿಕಾರಿ ಉದಯ ಶೆಟ್ಟಿ ಪೆಲತ್ತೂರು, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಅಮಿತಾ ಕೆ. ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ಸಾಯಿಪ್ರಸಾದ್ ಪೂಂಜಾ, ಜತೆ ಕಾರ್ಯಾದರ್ಶಿ ಶಂಕರ ಶೆಟ್ಟಿ, ಶಿಕ್ಷಣ ಸಮಿತಿಯ ಕಾರ್ಯಾಧ್ಯಕ್ಷ ಭಾಸ್ಕರ ಶೆಟ್ಟಿ, ಕಾರ್ಯದರ್ಶಿ ನಿಧಿ ಶೆಟ್ಟಿ, ಕೋಶಾಧಿಕರಿ ರಮೇಶ್ ಶೆಟ್ಟಿ, ಉಪ ಕಾರ್ಯಾಧ್ಯಕ್ಷ ದಿವಾಕರ ಶೆಟ್ಟಿ ಅಡ್ಯಾರು ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮೀರಾರೋಡ್‌ನ ಜನಪ್ರಿಯ ವೈದ್ಯ ಡಾ| ಭಾಸ್ಕರ ಶೆಟ್ಟಿ ಅವರನ್ನು ಸಮ್ಮಾನಿಸಲಾಯಿತು. ಬಂಟರ ಸಂಘ ಮೀರಾ – ಭಾಯಂದರ್ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಗಿರೀಶ್ ಶೆಟ್ಟಿ ತೆಳ್ಳಾರ್ ಸ್ವಾಗತಿಸಿದರು. ಬಾಬಾ ಪ್ರಸಾದ್ ಅರಸ ಕಾರ್ಯಕ್ರಮ ನಿರೂಪಿಸಿದರು. ರವೀಂದ್ರ ಶೆಟ್ಟಿ ಅವರು ವಂದಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.