ಮೀರಾ-ಡಹಾಣೂ ಬಂಟ್ಸ್‌ ನಾಯ್ಗಾಂವ್‌-ವಿರಾರ್‌: ಪ್ರತಿಭಾ ಪುರಸ್ಕಾರ


Team Udayavani, Aug 7, 2018, 4:20 PM IST

0608mum03.jpg

ಮುಂಬಯಿ: ಮೀರಾ- ಡಹಾಣೂ ಬಂಟ್ಸ್‌ ಇದರ ನಾಯ್ಗಾಂವ್‌-ವಿರಾರ್‌ ವಲಯದ ವತಿಯಿಂದ ಪ್ರತಿಭಾ ಪುರಸ್ಕಾರ, ಆಟಿಡೊಂಜಿ ಕೂಟ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವು ಆ. 5 ರಂದು ವಸಾಯಿ ಪಶ್ಚಿಮದ ದತ್ತಾನಿ ಸ್ಕೆ Ìàರ್‌ ಮಾಲ್‌ನ ಸ್ವರ್ಣ ಬ್ಯಾಂಕ್ವೆಟ್‌ ಸಭಾಗೃಹದಲ್ಲಿ ಜರಗಿತು.

ಮೀರಾ-ಡಹಾಣೂ ಬಂಟ್ಸ್‌ನ ಗೌರವಾಧ್ಯಕ್ಷ ವಿರಾರ್‌ ಶಂಕರ್‌ ಶೆಟ್ಟಿ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಹಸಿರೆಲೆಗಳಿಂದ ಕಂಗೊಳಿಸುವ ಪ್ರಕೃತಿಯ ರಮ್ಯ ಸಸ್ಯರಾಶಿಗಳು ದೈಹಿಕ, ಮಾನಸಿಕ, ಬೌದ್ಧಿಕ ಕ್ಷಮತೆಗಳನ್ನು ಕಾಪಾಡುವ ಆಹಾರವಾಗಿದೆ. ನಾವು ತಿನ್ನುವ ಆಹಾರಗಳು ಔಷಧಿ ಗಳಾಗಬೇಕೇ ವಿನಃ ಔಷಧಗಳು ಆಹಾರವಾಗಬಾರದು. ಇಂತಹ ಪರಿವರ್ತನೆಗೆ ಆಟಿ ತಿಂಗಳಲ್ಲಿ ಮಾತ್ರ ಸಾಧ್ಯ.  ಕಠಿಣ ದುಡಿಮೆಗೆ ಒಂದು ತಿಂಗಳ ವಿರಾಮ ನೀಡುವ ಆಟಿ ತಿಂಗಳು ಭವಿಷ್ಯದ ಬದುಕನ್ನು ಅವಲೋಕಿಸುವ ಆಲೋಚನ ಗೃಹವಾಗಿದೆ. ನಾಡಿನ ಸಂಸ್ಕೃತಿ-ಸಂಸ್ಕಾರಗಳು ಯುವ ಪೀಳಿಗೆಗೆ ಅರಿವು ಮೂಡಿಸಲು  ಇಂತಹ ಕಾರ್ಯಕ್ರಮ ಪ್ರೇರಣೆಯಾಗಿದೆ ಎಂದು ನುಡಿದರು.

ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಮಣಿಕಂಠ ಸೇವಾ ಸಮಿತಿಯ ಗೌರವಾಧ್ಯಕ್ಷ ಕರ್ನೂರು ಶಂಕರ ಆಳ್ವ ಅವರು ಮಾತನಾಡಿ, ಧನಾತ್ಮಕ ಚಿಂತನೆಯಿಂದ ಕೂಡಿದ ಆಟಿದ ತಿಂಗಳು ಅನಿಷ್ಟವೆಂಬ ಕಲ್ಪನೆ ಸಲ್ಲದು. ಬದಲಾವಣೆಯ ಕಾಲಘಟ್ಟದಲ್ಲಿ ಪೂರ್ವಜರ ಸಂಪ್ರದಾಯಗಳನ್ನು ಉಳಿಸಲು ಹೆಚ್ಚಿನ ಆದ್ಯತೆ ನೀಡಬೇಕು ಎಂದು ನುಡಿದರು.

ಸಮಾರಂಭದಲ್ಲಿ ಮೀರಾ- ಭಾಯಂದರ್‌ ಮಹಾನಗರ ಪಾಲಿಕೆಯ ಸಭಾಪತಿ, ಮೀರಾ- ಡಹಾಣೂ ಬಂಟ್ಸ್‌ನ ಅಧ್ಯಕ್ಷ ಅರ ವಿಂದ ಎ. ಶೆಟ್ಟಿ, ಚನಲಚಿತ್ರ ನಟಿ ಶ್ರದ್ಧಾ ಸಾಲ್ಯಾನ್‌ ಅವರನ್ನು ಗಣ್ಯರ ಸಮ್ಮುಖದಲ್ಲಿ ಸಮ್ಮಾನಿಸಲಾಯಿತು. ಮೀರಾ-ಡಹಾಣೂ ಬಂಟ್ಸ್‌ ನಾಯಾYಂವ್‌ ವಿರಾರ್‌ ವಲಯದ ಕಾರ್ಯಾಧ್ಯಕ್ಷ ಅಶೋಕ್‌ ಕೆ. ಶೆಟ್ಟಿ ವಸಾಯಿ ಅವರು ಸ್ವಾಗತಿಸಿ ಅತಿಥಿಗಳನ್ನು ಗೌರವಿಸಿದರು.  ಸಂಚಾಲಕ ನಾಗರಾಜ ಎನ್‌. ಶೆಟ್ಟಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಅತಿಥಿಗಳನ್ನು ಪರಿಚಯಿಸಿದರು. ಸುಕೇಶ್‌ ವಿ. ರೈ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.

ವೇದಿಕೆಯಲ್ಲಿ ನಗರ ಸೇವಕ ಪ್ರವೀಣ್‌ ಶೆಟ್ಟಿ, ರಜಕ ಸಂಘ ಮೀರಾ ರೋಡ್‌ ವಿರಾರ್‌ ವಲಯದ ಮಾಜಿ ಅಧ್ಯಕ್ಷ ದೇವೇಂದ್ರ ಬುನ್ನನ್‌, ಉದ್ಯಮಿ ಮಂಜುನಾಥ ಶೆಟ್ಟಿ, ವಸಾಯಿ-ಕರ್ನಾಟಕ ಸಂಘದ ಅಧ್ಯಕ್ಷ ಓ. ಪಿ. ಪೂಜಾರಿ, ಮೀರಾ- ಭಾಯಂದರ್‌ ಬಂಟ್ಸ್‌ ಫೋರಂನ ಅಧ್ಯಕ್ಷ ಸಂತೋಷ್‌ ರೈ ಬೆಳ್ಳಿಪಾಡಿ, ಡಾ| ಶಂಕರ್‌ ಕೆ. ಟಿ., ರಘುರಾಮ ರೈ, ಭಾಸ್ಕರ ಶೆಟ್ಟಿ ಬೊಯಿಸರ್‌, ರವಿ ಶೆಟ್ಟಿ ಡಹಾಣೂ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕಾರಿ ಸಮಿತಿಯ ಸದಸ್ಯರಾದ ಶುಭಾ ಸತೀಶ್‌ ಶೆಟ್ಟಿ, ಸಂಪತ್‌ ಶೆಟ್ಟಿ, ಪ್ರದೀಪ್‌ ಶೆಟ್ಟಿ, ಲತಾ ಎ. ಶೆಟ್ಟಿ, ದಯಾನಂದ ಪಿ. ಶೆಟ್ಟಿ, ಶ್ರೀನಿವಾಸ ಆಳ್ವ, ಪಳ್ಳಿ ಪ್ರಸನ್ನ ಜೆ. ಶೆಟ್ಟಿ, ಕೃಷ್ಣಯ್ಯ ಶೆಟ್ಟಿ, ನವೀನ್‌ ಎಂ. ಶೆಟ್ಟಿ, ಪ್ರೇಮಾನಂದ ಶೆಟ್ಟಿ, ಸುಜಾತಾ ಶೆಟ್ಟಿ, ರಾಧಾಕೃಷ್ಣ ಶೆಟ್ಟಿ, ತಾರಾನಾಥ ಶೆಟ್ಟಿ, ಶಶಿ ಜೆ. ಶೆಟ್ಟಿ, ಸುಗುಣಾ ಶೆಟ್ಟಿ, ಚಂದ್ರಕಲಾ ಶೆಟ್ಟಿ, ದಿವ್ಯಾ ರೈ, ಪ್ರಮೀಳಾ ಶೆಟ್ಟಿ, ಸರಿತಾ ಶೆಟ್ಟಿ, ಯಶೋದಾ ಶೆಟ್ಟಿ ಮತ್ತಿತರ ಗಣ್ಯರನ್ನು ಸಮಿತಿಯ ವತಿಯಿಂದ ಗೌರವಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮವಾಗಿ ಮಹಿಳಾ ಸದಸ್ಯೆಯರಿಂದ ಆಟಿದ ದಿನಾಚರಣೆ ನ್ಯತ್ಯ ರೂಪಕ, ಗಣೇಶ್‌ ಎರ್ಮಾಳ್‌ ಅವರಿಂದ ರಸಮಂಜರಿ, ರಜತ್‌ ಕುಮಾರ್‌ ಸಸಿಹಿತ್ಲು ಅವರ ನಿರ್ದೇಶನದಲ್ಲಿ ಕಾರಣಿಕದ ಗತ ವೈಭವ ನೃತ್ಯ ವೈವಿಧ್ಯ ನಡೆಯಿತು. ತುಳು-ಕನ್ನಡಿಗರು, ಸಮಾಜ ಬಾಂಧವರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. 

ದೈವಾರಾಧನೆ, ನಾಗಾರಾಧನೆ, ಭೂತಾರಾಧನೆಗಳನ್ನು ಕಾರಣಿಕದ ಗತ ವೈಭವದ ಮೂಲಕ ಆಳವಾದ ತುಳುವರ ಆರಾಧನೆಯನ್ನು ತಿಳಿಯಲು ಸಾಧ್ಯವಾಯಿತು. ಮಹಿಳಾ ಸದಸ್ಯೆಯರು ನೃತ್ಯ ರೂಪಕದ ಮೂಲಕ ಪ್ರಸ್ತುತಪಡಿಸಿದ ಆಟಿದ ತಿಂಗಳ ಮಹತ್ವ ಯುವ ಜನಾಂಗ ಅನುಸರಿಸಿದರೆ ಪರಿಶ್ರಮ ಸಾರ್ಥಕವಾಗುತ್ತದೆ.
-ಪ್ರಕಾಶ್‌ ಎಂ. ಹೆಗ್ಡೆ, ಅಧ್ಯಕ್ಷರು, ವಸಾಯಿ ತಾಲೂಕು ಹೊಟೇಲ್‌ ಅಸೋಸಿಯೇಶನ್‌ 

ಚಿತ್ರ-ವರದಿ:ರಮೇಶ್‌ ಅಮೀನ್‌

ಟಾಪ್ ನ್ಯೂಸ್

Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ

Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ

Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ

Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ

Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ

Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ

121

Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ

CM-Siddu-High-Court

MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ

Trump–Kamala

US Election 2024, Kamala Vs Trump: ಅಮೆರಿಕ ಅಧ್ಯಕ್ಷರ ಚುನಾವಣೆ ಹೇಗೆ? ಏನು? ಎತ್ತ?

ಮಂಗಳೂರಿಗೆ ವಾಟರ್‌ ವೆುಟ್ರೋ; ಎಂಡಬ್ಲ್ಯುಎಂಪಿ ನಿರ್ಮಾಣಕ್ಕೆ ಮುಂದಾಗಿರುವ ಕೆಎಂಬಿ

ಮಂಗಳೂರಿಗೆ ವಾಟರ್‌ ವೆುಟ್ರೋ; ಎಂಡಬ್ಲ್ಯುಎಂಪಿ ನಿರ್ಮಾಣಕ್ಕೆ ಮುಂದಾಗಿರುವ ಕೆಎಂಬಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

12-

Desiswara: ನ್ಯೂಯಾರ್ಕ್‌ ಸರಕಾರದಿಂದ ಭರ್ಜರಿ ದೀಪಾವಳಿ ಆಚರಣೆ

11-1

Desiswara: ಜಾಗತಿಕ ಬೆಳಕಿನ ಹಬ್ಬ ದೀಪಾವಳಿ – ಬೆಳಕೆಂದರೆ ಬರಿಯ ಬೆಳಕಲ್ಲ…

10-

Desiswara: ಕನ್ನಡ ಉಳಿವಿಗೆ ಜವಾಬ್ದಾರಿಯುತ ನಡೆ ನಮ್ಮದಾಗಲಿ

9-desi

Kannada Alphanbets: “ಕ’ ಕಾರದಲ್ಲಿನ ವಿಶೇಷ:‌ ಕನ್ನಡ ಅಕ್ಷರಮಾಲೆಯಲ್ಲಿನ “ಕ’ ಕಾರ ವೈಭವ

8-

ನ.9: ವಿಶ್ವ ಕನ್ನಡ ಹಬ್ಬ: ಈ ಬಾರಿ ಸಿಂಗಾಪುರದಲ್ಲಿ ರಂಗೇರಲಿರುವ ಸಂಭ್ರಮ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ

Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ

Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ

Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ

Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ

Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ

121

Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ

CM-Siddu-High-Court

MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.