ಮೀರಾರೋಡ್ ಮಹಾಲಿಂಗೇಶ್ವರ ದೇವಾಲಯ: ಮಹಾ ಶಿವರಾತ್ರಿ
Team Udayavani, Mar 12, 2019, 1:10 PM IST
ಮುಂಬಯಿ: ಮೀರಾರೋಡ್ ಪೂರ್ವದ ಮೀರಾ ಗಾಂವ್ ಸೊಸೈಟಿಯ ಆವರಣ ದಲ್ಲಿರುವ ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ಮಾ. 4 ರಂದು ಮಹಾ ಶಿವಾರಾತ್ರಿ ಆಚರಣೆಯು ವಿವಿಧ ಪೂಜಾ ವಿಧಿ-ವಿಧಾನಗಳೊಂದಿಗೆ ಅದ್ದೂರಿಯಾಗಿ ನೆರವೇರಿತು.
ಬೆಳಿಗ್ಗೆ ದೇವಸ್ಥಾನದ ಪ್ರಧಾನ ಅರ್ಚಕ ಸಾಣೂರು ಸಾಂತಿಂಜ ಜನಾರ್ದನ ಭಟ್ ಅವರು ಧಾರ್ಮಿಕ ಕಾರ್ಯಗಳಿಗೆ ಚಾಲನೆ ನೀಡಿ, ಮಹಾ ಶಿವಾರಾತ್ರಿ ವೇಳೆ ಉಪವಾಸ, ಧ್ಯಾನ, ಸಾಮಾಜಿಕ ಸೌಹಾರ್ದತೆಯ ಮೂಲಕ ಶಿವಾಲಯಗಳಲ್ಲಿ ಪೂಜೆ ಸಲ್ಲಿಸಬೇಕು. ಲೋಕದ ಜನರ ಕಷÒಗಳನ್ನು ನುಂಗಿಕೊಂಡ ವಿಷ ಕಂಠ ಸಮಸ್ತ ಭಕ್ತಾದಿಗಳಿಗೆ ಸುಖವನ್ನು ಬಯಸಿದ. ಉಪವಾಸ ಜಾಗರಣೆಯ ಮೂಲಕ ಶಿವನನ್ನು ಆರಾಧಿಸುವ ಮಹಾಶಿವ ಆಚರಣೆ ತಮಗೆಲ್ಲ ಸನ್ಮಾಂಗಲವನ್ನುಂಟು ಮಾಡಲೆಂದು ಹಾರೈಸಿದರು.
ಸಾಣೂರು ಮಾಧವ ಭಟ್ ಅವರ ನೇತೃತ್ವದಲ್ಲಿ ಬೆಳಿಗ್ಗೆ ರುದ್ರಾಭಿಷೇಕ, ಮಹಾಪೂಜೆ ನೆರವೇರಿತು. ಸಂಜೆ ಶ್ರೀ ವಿಟuಲ ಭಜನ ಮಂಡಳಿ ಮೀರಾ ರೋಡ್, ಶ್ರೀ ಹನುಮಾನ್ ಭಜನ ಮಂಡಳಿ ದಹಿಸರ್ ಮತ್ತು ಶ್ರೀ ಲಕ್ಷೀನಾರಾಯಣ ಭಜನ ಮಂಡಳಿ ಮೀರಾರೋಡ್ ಇದರ ಸದಸ್ಯರಿಂದ ದಾಸರ ಕೀರ್ತನೆಯೊಂದಿಗೆ ಶಿವನನ್ನು ಸ್ತುತಿಸಲಾಯಿತು. ಪರಿವಾರ ದೇವ ರಾದ ಶ್ರೀ ಗಣಪತಿ, ಶ್ರೀ ದುರ್ಗಾಮಾತೆ, ನವಗ್ರಹಗಳಿಗೆ ಹಾಗೂ ಶ್ರೀ ಕ್ಷೇತ್ರದ ಶ್ರೀ ಮಹಾಲಿಂಗೇಶ್ವರ ದೇವರಿಗೆ ವಿಶೇಷ ಶ್ರೀ ರಂಗ ಪೂಜೆ ನಡೆಯಿತು.
ಗೌರಿಶಂಕರ ಕಾರಿಂಜ, ದೇವರಾಜ್ ಭಟ್, ರಾಘವೇಂದ್ರ ಉಪಾಧ್ಯಾಯ, ಅನಂತ ಭಟ್, ಶ್ರೀಶ ಭಟ್, ವಾಸುದೇವ ಭಟ್, ಶ್ರೀವತ್ಸ ಭಟ್ ಇವರು ಸಹಕರಿಸಿದರು. ದೇವಸ್ಥಾನದ ಆಡಳಿತ ಮೊಕ್ತೇಸರ ಶಿಮಂತೂರು ಮಜಲಗುತ್ತು ರಂಜನ್ ಬಾಬಾ ಶೆಟ್ಟಿ, ಟ್ರಸ್ಟಿಗಳಾದ ಕೃಷ್ಣ ಜಿ. ಶೆಟ್ಟಿ. ಸುಂದರ ಶೆಟ್ಟಿಗಾರ್, ಅನಿಲ್ ಶೆಟ್ಟಿ, ಪ್ರಸನ್ನ ಶೆಟ್ಟಿ ಕುರ್ಕಾಲ…, ಪ್ರಸನ್ನ ಶೆಟ್ಟಿ ಬೋಳ, ಮತ್ತಿತರರು ಸಹಕರಿಸಿದರು. ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು, ತುಳು
ಕನ್ನಡಿಗರು ಅಧಿಕ ಸಂಖ್ಯೆಯಲ್ಲಿ ಉಪಸ್ಥಿತರಿದ್ದು ಪ್ರಸಾದ ಸ್ವೀಕರಿದರು.
ಚಿತ್ರ-ವರದಿ: ರಮೇಶ್ ಅಮೀನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
ಇಂಗ್ಲೆಂಡ್ನ ರಾದರಮ್ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’
Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.