ಮೀರಾರೋಡ್ ಪಲಿಮಾರು ಮಠದ ಬಾಲಾಜಿ ಸನ್ನಿಧಿ: ಬ್ರಹ್ಮೋತ್ಸವ
Team Udayavani, Oct 3, 2017, 1:55 PM IST
ಮುಂಬಯಿ: ಭಕ್ತಾದಿಗಳು ನೀಡುವ ಒಂದೊಂದು ನಾಣ್ಯಗಳು ಉಡುಪಿಯ ಶ್ರೀ ಕೃಷ್ಣ ದೇವಾಲಯದ ಸುವರ್ಣಗೋಪುರದಲ್ಲಿ ಶೋಭಿಸಲಿದೆ. ಅದರ ಪ್ರತಿ ಯೊಂದು ಕಣ ಕಣದಲ್ಲಿ ಭಕ್ತ ಕೋಟಿಯ ಬಂಗಾರ ಶಾಶ್ವತ ವಾಗಿರಲಿದೆ. ತಿರುಮಲದ ಶ್ರೀನಿವಾಸ ದೇವರ ಸುವರ್ಣ ಗೋಪುರದ ಸೊಬಗು ಉಡುಪಿ ಶ್ರೀ ಕೃಷ್ಣನ ಸನ್ನಿಧಿಯಲ್ಲಿ ಕಾಣುವ ಸೌಭಾಗ್ಯ ನಮ್ಮದಾಗಿಸಿಕೊಳ್ಳೋಣ ಎಂದು ದ್ವಿತೀಯ ಬಾರಿ ಪರ್ಯಾಯ ಪೀಠಾರೋಹಣ ಮಾಡಲಿರುವ ಮಠದ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ ಅವರು ನುಡಿದರು.
ಸೆ. 30ರಂದು ಮೀರಾರೋಡ್ ಪೂರ್ವದ ಪಲಿಮಾರು ಮಠದ ಬಾಲಾಜಿ ಸನ್ನಿಧಿಯಲ್ಲಿ ಬ್ರಹ್ಮೋತ್ಸವ, ರಥೋತ್ಸವ, ವಿಜಯದಶಮಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಉಪಸ್ಥಿ ತರಿದ್ದು ಆಶೀರ್ವಚನ ನೀಡಿದ ಶ್ರೀಗಳು, ಕಲಿಯುಗದಲ್ಲಿ ಬ್ರಹ್ಮೋತ್ಸವ, ತ್ರೇತಾಯುಗದಲ್ಲಿ ರಾವಣನ ಸಂಹಾರ, ದ್ವಾಪರಯುಗದಲ್ಲಿ ಅಜ್ಞಾತವಾಸದಿಂದ ಪಾಂಡವರಿಗೆ ಮುಕ್ತಿ ಮತ್ತು ಕಲಿಯುಗದಲ್ಲಿ ಶ್ರೀ ಕೃಷ್ಣನ ಅವತಾರದಲ್ಲಿ ಮಚಾರ್ಯರ ಜನನ. ಇವುಗಳು ವಿಜಯ ದಶಮಿ ದಿನದ ವಿಶೇಷತೆಗಳು. ನಾಲ್ಕು ಯುಗಗಳ ಒಡೆಯ ಶ್ರೀನಿವಾಸ ದೇವರಿಗೆ ವಿಜಯ ದಶಮಿಯ ಅತ್ಯಂತ ಪ್ರಿಯವಾದ ಲೋಕ ಕಲ್ಯಾಣದ ದಿನವಾಗಿದೆ ಎಂದು ನುಡಿದರು.
ವಿದ್ವಾನ್ ರಮಣ ಆಚಾರ್ಯ ಅವರು ಪರ್ಯಾಯ ಮಹೋತ್ಸವದ ಬಗ್ಗೆ ತಿಳಿಸಿ, ಮುಂದಿನ ವರ್ಷ ಜನವರಿ 18 ರಂದು ಶ್ರೀ ವಿದ್ಯಾದೀಶ ತೀರ್ಥ ಸ್ವಾಮೀಜಿ ಅವರು ಎರಡನೇ ಬಾರಿ ಪರ್ಯಾಯ ಪೀಠಾರೋಹಣ ಮಾಡಲಿದ್ದಾರೆ. ಅವರ ಸಂಕಲ್ಪವಾದ ಶ್ರೀ ಕೃಷ್ಣ ಸುವರ್ಣ ಗೋಪುರಕ್ಕೆ ಸುಮಾರು 100 ಕಿಲೋ ಬಂಗಾರ, ಸುಮಾರು 2500 ಚದರಡಿಗೆ ಬೇಕಾಗುತ್ತದೆ. ಪ್ರತಿಯೊಬ್ಬರು ಕಿಂಚಿತ್ತು ಕಾಣಿಕೆಗಳನ್ನು ನೀಡಿ ಯೋಜನೆಯನ್ನು ಸಾಕಾರಗೊಳಿಸಬೇಕು ಎಂದು ವಿನಂತಿಸಿದರು.
ಇದೇ ಸಂದರ್ಭದಲ್ಲಿ ಬ್ರಹ್ಮೋ ತ್ಸವದಲ್ಲಿ ಶ್ರೀನಿವಾಸ ದೇವರ ಮತ್ತು ಮಧ್ವಾಚಾರ್ಯರ ವಿಗ್ರಹ ಗಲೊಂದಾದ ರಥೋತ್ಸವದ ಶೋಭಾಯಾತ್ರೆಯು ಹೆದ್ದಾರಿಗಳಲ್ಲಿ ಸಂಚರಿತು. ಸುರೇಶ್ ಭಟ್ ಕಂಟಾಡಿ ಅವರ ಬಲಿ ಉತ್ಸವ ನೆರವೇರಿತು. ವಿವಿಧ ರೂಪದಲ್ಲಿ ಶ್ರೀಗಳ ತುಲಾಭಾರ ಸೇವೆಗೈದ ಮಧುಮತಿ ಸಚ್ಚಿದಾನಂದ ರಾವ್, ಲೋಲಾಕ್ಷಿ ಕೃಷ್ಣ ಕೋಟ್ಯಾನ್, ಶಾರದಾ ಪ್ರೇಮ್‌ನಾಥ್ ಹಾಗೂ ಇನ್ನಿತರ ಪೂಜೆಗಳಲ್ಲಿ ಸಹಕರಿಸಿದ ಸುಜತಾ ಅಶೋಕ್ ಪೂಜಾರಿ, ಪಳ್ಳಿ ಮೋಹನ್ ಶೆಟ್ಟಿ, ಮಮತಾ ಶೆಟ್ಟಿ, ವಸಂತಿ ಶೆಟ್ಟಿ, ಬೇಬಿ ಶೆಟ್ಟಿ ಅವರನ್ನು ಸನ್ನಿಧಿಯಲ್ಲಿ ಗೌರವಿಸಲಾಯಿತು.
ಟ್ರಸ್ಟಿ ಸಚ್ಚಿದಾನಂದ ರಾವ್ ದಂಪತಿ ಹಾರಾರ್ಪಣೆ, ಮಂಗಳ ರಾತಿಯೊಂದಿಗೆ ಶ್ರೀಗಳಿಗೆ ಪೂಜೆ ಸಲ್ಲಿಸಿದರು. ಟ್ರಸ್ಟಿ ಹಾಗೂ ಪ್ರಬಂಧಕ ರಾಧಾಕೃಷ್ಣ ಭಟ್ ಅವರು ಪರಿಚಯಿಸಿ ಕಾರ್ಯಕ್ರಮ ನಿರ್ವಹಿಸಿದರು. ಶ್ರೀ ಕ್ಷೇತ್ರದ ಸಂಚಾಲಕ ಶ್ರೀಶ ಭಟ್, ಮೀರಾಗಾಂವ್ ಶ್ರೀ ಮಹಾಲಿಂಗೇಶ್ವರ ಟ್ರಸ್ಟಿ, ಸಾಂತಿಂಜ ಜನಾರ್ಧನ ಭಟ್, ಗುರುರಾಜ ಉಪಾಧ್ಯಾಯ, ಗಿರೀಶ್ ಉಪಾಧ್ಯಾಯ, ಯತಿರಾಜ ಉಪಾಧ್ಯಾಯ, ಗೋವಿಂದ ಭಟ್, ಕರಮಚಂದ ಗೌಡ ಮೊದಲಾದವರು ಉಪಸ್ಥಿತರಿದ್ದರು.
ಶ್ರೀಗಳು ಬಾಲಾಜಿ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ನಂತರ ಪರಿವಾರ ದೇವರಿಗೆ ವಿವಿಧ ಪೂಜಾ ಕೈಂಕರ್ಯಗಳು ನಡೆಯಿತು. ಪ್ರಸಾದ ರೂಪದಲ್ಲಿ ಅನ್ನಸಂತರ್ಪಣೆ ನಡೆ ಯಿತು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಭರತನಾಟ್ಯ ಪ್ರದರ್ಶನ ಗೊಂಡಿತು. ಸುಮಾರು 100 ಕ್ಕೂ ಅಧಿಕ ಬಾಲಾಜಿ ಸನ್ನಿಧಿಯ ಯೋಗ ತರಗತಿಯ ವಿದ್ಯಾರ್ಥಿಗಳು ಹಾಗೂ ಮಹಿಳಾ ಭಜನ ತಂಡದವರು ಶೋಭಾಯಾತ್ರೆಯಲ್ಲಿ ಸಹಕರಿಸಿದರು.
ಚಿತ್ರ-ವರದಿ : ರಮೇಶ್ ಅಮೀನ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ
ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.