ಮೀರಾರೋಡ್ ಪಲಿಮಾರು ಮಠ:ಶ್ರೀ ಗಣೇಶ ಚತುರ್ಥಿ ಆಚರಣೆ
Team Udayavani, Aug 29, 2017, 12:12 PM IST
ಮುಂಬಯಿ: ಮೀರಾರೋಡ್ ಪೂರ್ವದ ಪಲಿಮಾರು ಮಠದ ಶ್ರೀ ಬಾಲಾಜಿ ಸನ್ನಿಧಿಯಲ್ಲಿ ಶ್ರೀ ಗಣೇಶ ಚತುರ್ಥಿ ನಿಮಿತ್ತ ಆ. 25ರಂದು ವಿವಿಧ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು.
ಪ್ರಬಂಧಕ ವಿದ್ವಾನ್ ರಾಧಾಕೃಷ್ಣ ಭಟ್, ಟ್ರಸ್ಟಿ ಸಚ್ಚಿದಾನಂದ ರಾವ್, ಗೋಪಾಲ ಭಟ್ ಅವರ ಪೌರೋಹಿತ್ಯದಲ್ಲಿ ಸೂರ್ಯೋದಯದಂದು ಗಣೇಶ ಮೂರ್ತಿಯ ಪ್ರತಿಷ್ಠಾಪನೆ, ತದನಂತರ 108 ತೆಂಗಿನಕಾಯಿಯ ಮಹಾ ಗಣ ಯಾಗ, ಸಂಜೆ ದೀಪಾರಾಧನೆ, ಭಜನೆ, ಶ್ರೀ ಗಣೇಶನಿಗೆ ರಂಗಪೂಜೆ ಹಾಗೂ ಶ್ರೀ ಬಾಲಾಜಿ ಸನ್ನಿಧಿಯ ಪರಿವಾರ ದೇವರಿಗೆ ವಿವಿಧ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು.
ಟ್ರಸ್ಟಿ ಸಚ್ಚಿದಾನಂದ ರಾವ್ ಧಾರ್ಮಿಕ ಕಾರ್ಯಕ್ರಮಗಳ ಬಗ್ಗೆ ಮಾತನಾಡಿ, ಪ್ರತಿ ದಿನ ಬೆಳಗ್ಗೆ ತೆಂಗಿನಕಾಯಿಯ ಮಹಾಯಾಗ, ಸಂಜೆ ಭಜನೆ, ದೀಪಾರಾಧನೆ ಹಾಗೂ ರಂಗಪೂಜೆಯನ್ನು 5 ದಿನಗಳ ವರೆಗೆ ಆಯೋಜಿಸಲಾಗಿದೆ. ಆ. 29ರಂದು ಭವ್ಯ ಶೋಭಾ ಯಾತ್ರೆಯಲ್ಲಿ ಶ್ರೀ ಗಣಪತಿ ದೇವರ ಮೂರ್ತಿಯನ್ನು ವಿಸರ್ಜಿಸಲಾಗುವುದು ಎಂದರು.
ಗಣಪತಿ ಭಟ್, ಜಯಾಲಕ್ಷ್ಮೀ ರಾಧಾಕೃಷ್ಣ ಭಟ್, ಕರಮಚಂದ್ರ ಗೌಡ, ಮಹಿಳಾ ವಿಭಾಗದ ಸದಸ್ಯೆಯರು ಸಹಕರಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.