ಮೀರಾರೋಡ್ ಶ್ರೀ ಬಾಲಾಜಿ ಸನ್ನಿಧಿ: ವರ್ಧಂತಿ ಉತ್ಸವ
Team Udayavani, Jan 23, 2019, 5:51 PM IST
ಮುಂಬಯಿ: ಮೀರಾ ರೋಡ್ ಪೂರ್ವದ ಶ್ರೀ ಬಾಲಾಜಿ ಸನ್ನಿಧಿ ಪಲಿಮಾರು ಮಠದ ಏಳನೇ ವಾರ್ಷಿಕ ವರ್ಧಂತಿ ಉತ್ಸವವು ಜ. 21 ರಂದು ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು.
ಶ್ರೀ ವಿದ್ಯಾಧೀಶ ಶ್ರೀಪಾದಂಗಳವರ ದಿವ್ಯ ಪ್ರೇರಣೆ ಮತ್ತು ಶುಭಾಶೀರ್ವಾದಗಳೊಂದಿಗೆ ಜರಗಿದ ಶ್ರೀ ದೇವರ ಉತ್ಸವ ಕಾರ್ಯಕ್ರಮದಲ್ಲಿ ಧಾರ್ಮಿಕ ಕಾರ್ಯಕ್ರಮವಾಗಿ ಬೆಳಗ್ಗೆ ಮಹಾನಾ ರಾಯಣ ಅಷ್ಟಾಕ್ಷರ, ಮಂತ್ರ ಹವನ, ಬ್ರಹ್ಮ ಕಲಶ ಪ್ರತಿಷ್ಠಾಪೂಜೆ, ಬ್ರಹ್ಮಕಲಶಾ ಭಿಷೇಕ ನೆರವೇರಿತು.
ಧಾರ್ಮಿಕ ಕಾರ್ಯಕ್ರಮದಲ್ಲಿ ಶ್ರೀ ಅದಮಾರು ಮಠದ ಕಿರಿಯ ಶ್ರೀಪಾಂದಗಳವರು ಪ್ರವಚನ ನೀಡಿ ಆಶೀರ್ವದಿಸಿದರು. ಅನಂತರ ಶ್ರೀಗಳಿಂದ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಪ್ರಸಾದ ನಡೆಯಿತು.
ಸಂಜೆ 5ರಿಂದ ಸಾಮೂಹಿಕ ಶ್ರೀ ಸತ್ಯನಾರಾಯಣ ಮಹಾಪೂಜೆ, ಶ್ರೀ ದುರ್ಗಾಪೂಜೆ, ಶ್ರೀದೇವರಿಗೆ ಪಲ್ಲಕ್ಕಿ ಉತ್ಸವದೊಂದಿಗೆ ರಥೋತ್ಸವ ಆರಂಭಗೊಂಡಿತು. ಆನಂತರ ಬಾಲಾಜಿ ಸನ್ನಿಧಿಯಿಂದ ಬ್ರಹ್ಮ ಮಂದಿರ ಹಾಗೂ ಅಲ್ಲಿಂದ ಮತ್ತೆ ಬಾಲಾಜಿ ಮಂದಿರವರೆಗೆ ರಥೋತ್ಸವವು ಜರಗಿತು. ಆನಂತರ ಬಲಿಪೂಜೆ, ಶ್ರೀ ರಂಗಪೂಜೆ, ಅಷ್ಠಾವಧಾ ನದೊಂದಿಗೆ ಅನ್ನದಾನ ಇನ್ನಿತರ ಸತ್ಕರ್ಮಗಳು ನಡೆಯಿತು.
ಆಶೀರ್ವಚನ
ಇದೇ ಸಂದರ್ಭದಲ್ಲಿ ಆಶೀರ್ವಚನ ನೀಡಿದ ಮಠದ ವಿದ್ವಾನ್ ರಾಧಾಕೃಷ್ಣ ಭಟ್ ಬೆಳಗ್ಗೆಯ ಮಹಾನಾರಾಯಣ ಅಷ್ಠಾಕ್ಷರ ಮಂತ್ರ ಹವನದೊಂದಿಗೆ ಪ್ರಾರಂಭಗೊಂಡ ಉತ್ಸವವು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಪರಿಪೂರ್ಣಗೊಂಡಿತು.
ಬಾಲಾಜಿ ಸನ್ನಿಧಿಯಲ್ಲಿ ಜರಗಿದ ವರ್ಧಂತಿ ಮಹೋತ್ಸವದಲ್ಲಿ ಶ್ರೀ ದೇವರ ಅನುಗ್ರಹದಿಂದ ಸಮಸ್ತ ಭಕ್ತರ ಆರೋಗ್ಯ ಶಾಂತಿ, ಉದ್ಯೋಗ, ಶಿಕ್ಷಣ, ಸುಖಶಾಂತಿ ನೆಲೆಸುವಂತಾಗಲಿ. ಭಕ್ತರ ಭಕ್ತಿಯು ಪರಿಪೂರ್ಣಗೊಂಡಾಗ ಭಗವಂತನಿಗೂ ನೆಮ್ಮದಿಯಾಗುವುದು ಎಂದು ನುಡಿದು ಸನ್ನಿಧಿಯಲ್ಲಿ ನಡೆಯಲಿರುವ ಕಾರ್ಯಕ್ರಮಗಳ ಬಗ್ಗೆ ವಿವರ ನೀಡಿದರು.
ವರ್ಧಂತಿ ಉತ್ಸವದ ಸೇವೆಯಲ್ಲಿ ಸಚ್ಚಿದಾನಂದ ದಂಪತಿ, ವಿಷ್ಣು ಪ್ರಸಾದ್ ಭಟ್, ಕಾರ್ತಿಕ್ ಭಟ್, ರಾಘವೇಂದ್ರ ನಕ್ಷತ್ರಿ, ಉದಯ ಶಂಕರ ಭಟ್, ಯತಿರಾಜ ಉಪಾಧ್ಯಾಯ, ವೆಂಕಟರಮಣ ಭಟ್, ಸುಬ್ರಹ್ಮಣ್ಯ ಭಟ್ ಹಾಗೂ ಪರಿವಾರ ಮತ್ತು ಜಗದೀಶ್ ಭಟ್ ಇವರುಗಳ ಸಹಯೋಗದೊಂದಿಗೆ ಕಾರ್ಯಕ್ರಮ ನಡೆದವು ವಿಷೇಶವಾಗಿ ರಥದ ಅಲಂಕಾರ ಸೇವೆಗೆ ಸುರೇಶ್ ಪೂಜಾರಿ, ಕರಮಚಂದ ಗೌಡ ಮೊದಲಾದವರು ಸಹಕರಿಸಿದರು. ಸ್ಥಳೀಯ ಅಸಂಖ್ಯಾತ ತುಳು-ಕನ್ನಡಿಗರ ಭಕ್ತರು ದಿನಪೂರ್ತಿ ನಡೆದ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ವೀಕ್ಷಿಸಿ ಬಾಲಾಜಿಯ ದರ್ಶನ ಪಡೆದರು.
ಚಿತ್ರ-ವರದಿ : ರಮೇಶ್ ಉದ್ಯಾವರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪ್ರಧಾನ ಸಂಪಾದಕ ನ್ಯೂಯಾರ್ಕ್ ನ ಬೆಂಕಿ ಬಸಣ್ಣ ವಿರಚಿತ ‘ವಿಶ್ವಕನ್ನಡ ಕೂಟಗಳ ಕೈಪಿಡಿ’ ಬಿಡುಗಡೆ
ಹೊಯ್ಸಳ ಕನ್ನಡ ಸಂಘ: ವಿದೇಶದಲ್ಲಿ ಕಣ್ಮನ ಸೆಳೆದ ಗದಾಯುದ್ಧ ಯಕ್ಷಗಾನ
Desi Swara: ಟ್ಯಾಂಪಾ ಸಾಂಸ್ಕೃತಿಕ ವೇದಿಕೆ – ಹರಿಕಥೆ ಆಯೋಜನೆ
ಕ್ಲೀವ್ ಲ್ಯಾಂಡ್: 40ನೇ ಬೆಳಕಿನ ಕನ್ನಡೋತ್ಸವ, ಹಾಸ್ಯ ಹೊನಲು, ಸಂಗೀತ ಸುಧೆ
ಮೊಗವೀರ್ಸ್ ಬಹ್ರೈನ್ ಪ್ರೊ ಕಬಡ್ಡಿ;ತುಳುನಾಡ್ ತಂಡ ಪ್ರಥಮ,ಪುನಿತ್ ಬೆಸ್ಟ್ All ರೌಂಡರ್
MUST WATCH
ಹೊಸ ಸೇರ್ಪಡೆ
Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್‌ಗಳಲ್ಲಿ 31 ಬಾರಿ ಕಪಾಳ ಮೋಕ್ಷ
Atlee Kumar; ಸಲ್ಮಾನ್ ಖಾನ್ ಜತೆಗೆ ಅಟ್ಲಿ ಸಿನಿಮಾ
ಪ್ರಧಾನ ಸಂಪಾದಕ ನ್ಯೂಯಾರ್ಕ್ ನ ಬೆಂಕಿ ಬಸಣ್ಣ ವಿರಚಿತ ‘ವಿಶ್ವಕನ್ನಡ ಕೂಟಗಳ ಕೈಪಿಡಿ’ ಬಿಡುಗಡೆ
Tumkur: ನೀರಾವರಿ ವಿದ್ಯುತ್ ಬಿಲ್ ಪಾವತಿ ಮಾಡುವಂತೆ ಸಿದ್ದಗಂಗಾ ಮಠಕ್ಕೆ ಪತ್ರ
Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.