ಮೀರಾರೋಡ್ ಶ್ರೀ ಶನೀಶ್ವರ ಮಂದಿರ: ನಾಗರ ಪಂಚಮಿ ಉತ್ಸವ
Team Udayavani, Aug 18, 2021, 1:30 PM IST
ಮೀರಾರೋಡ್: ಮೀರಾರೋಡ್ ಶ್ರೀ ಶನೀಶ್ವರ ಸೇವಾ ಸಮಿತಿಯ ಸಂಚಾಲಕತ್ವದ ಶ್ರೀ ಶನೀಶ್ವರ ಮಂದಿರದಲ್ಲಿ ನಾಗರ ಪಂಚಮಿ ಉತ್ಸ ವವು ಆ. 13ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರಗಿತು.
ವಿದ್ವಾನ್ ವಿಷ್ಣುಮೂರ್ತಿ ಅಡಿಗ ಮತ್ತು ಮಂದಿರದ ಪ್ರದಾನ ಅರ್ಚಕ ನಿರಾವ್ ಭಟ್ ಅವರ ಪೌರೋ ಹಿತ್ಯದಲ್ಲಿ ನಡೆದ ಧಾರ್ಮಿಕ್ರಮದಲ್ಲಿ ಬೆಳಗ್ಗೆ 6 ರಿಂದ ಕ್ಷೇತ್ರ ಶುದ್ಧೀಕರಣ, ಬೆಳಗ್ಗೆ ‰8ರಿಂದ ತನು ಸೇವೆ, ತಂಬಿಲ ಸೇವೆ, ಪಂಚಾಮೃತ ಅಭಿಷೇಕ, ಅಶ್ಲೇಷಾ ಬಲಿ ಸೇವೆ, ಭಜನ ಕಾರ್ಯಕ್ರಮ ನಡೆಯಿತು. ವಿಜಯ ಶೆಟ್ಟಿ ಮೂಡುಬೆಳ್ಳೆ ಇವರ ತಂಡದಿಂದ ಭಕ್ತಿ ರಸಮಂಜರಿ ಭಕ್ತರ ಗಮನ ಸೆಳೆಯಿತು. ಮಧ್ಯಾಹ್ನ ಮಹಾಮಂಗಳಾರತಿ ಬಳಿಕ ತೀರ್ಥಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಿತು.
ಇದನ್ನೂ ಓದಿ:ತಾಲಿಬಾನ್ ಉಗ್ರರಿಗೆ ಸಡ್ಡು ಹೊಡೆದು ಪಡೆ ಕಟ್ಟಿದ್ದ ಮಹಿಳಾ ಗವರ್ನರ್ ಸಲೀಮಾ ಸೆರೆ!
ಅನ್ನಸಂತಪಣೆಯ ಸೇವಾಕರ್ತ ರಾದ ವಿನೋದ್ ನಿರ್ಮಲಾ ವಾಘಷಿಯ ಅವರನ್ನು ಮಂದಿರದ ವತಿಯಿಂದ ಫಲವಸ್ತು, ಪ್ರಸಾದವನ್ನಿತ್ತು ಗೌರವಿಸಲಾಯಿತು. ವಿವಿಧ ಸೇವೆಗ ಳನ್ನು ನೀಡಿದ ಮಾಲಾ ಜೈನ್, ಪ್ರಸಾದದ ಸೇವಾಕರ್ತರಾದ ವಾಸಂತಿ ಶೆಟ್ಟಿ, ಪ್ರೇಮಾ ಶೇಖರ್ ಪೂಜಾರಿ ಅವರನ್ನು ಮಂದಿರದ ವತಿಯಿಂದ ಗೌರವಿಸಲಾ ಯಿತು. ಕಾರ್ಯಕ್ರಮದಲ್ಲಿ ನೂರಾರು ಭಕ್ತರು ಪಾಲ್ಗೊಂಡು ಪ್ರಸಾದ ಸ್ವೀಕರಿಸಿ ನಾಗರ ದೇವರ ಕೃಪೆಗೆ ಪಾತ್ರರಾದರು. ಕೊರೊನಾ ಮಾರ್ಗಸೂಚಿಗಳಿಗೆ ಅನುಗುಣವಾಗಿ ಕಾರ್ಯಕ್ರಮವನ್ನು ಸರಳ ರೀತಿಯಲ್ಲಿ ಆಚರಿಸಲಾಯಿತು. ಸಮಿತಿಯ ಉಪಾಧ್ಯಕ್ಷ ಗುಣಕಾಂತ ಶೆಟ್ಟಿ ಕರ್ಜೆ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Owaisi; ತಿರುಪತಿಯಲ್ಲಿ ಮುಸ್ಲಿಂ ಸ್ಟಾಫ್ ಇಲ್ಲದಿರುವಾಗ ವಕ್ಫ್ ನಲ್ಲೇಕೆ ಹಿಂದೂಗಳು
Sparks Row; ಉಗ್ರರನ್ನು ಹ*ತ್ಯೆ ಮಾಡಬಾರದು…: ಫಾರೂಕ್ ಅಬ್ದುಲ್ಲಾ ಹೇಳಿಕೆ
Shivaji Satam: ಕ್ಯಾಷಿಯರ್ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?
INDIA bloc; ಜಾರ್ಖಂಡ್ ಸೀಟು ಹಂಚಿಕೆ ಒಪ್ಪಂದ ಅಂತಿಮ: ಜೆಎಂಎಂಗೆ 43 ಸ್ಥಾನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.