ಮೀರಾರೋಡ್ ಯುವ ಮಿತ್ರ ಮಂಡಳ: ಗಣೇಶೋತ್ಸವ
Team Udayavani, Sep 28, 2018, 4:52 PM IST
ಮುಂಬಯಿ: ಮೀರಾ ರೋಡ್ ಪೂರ್ವದ ಭಾರತಿ ಪಾರ್ಕ್ ಯುನಿಟ್ ಸೊಸೈಟಿಯ ಆವರಣದಲ್ಲಿ ತುಳು-ಕನ್ನಡಿಗರಿಂದ ಸ್ಥಾಪಿಸಲ್ಪಟ್ಟ ಮೀರಾರೋಡ್ ಯುವ ಮಿತ್ರ ಮಂಡಳದ 22 ನೇ ಸಾರ್ವಜನಿಕ ಗಣೇಶೋತ್ಸವ ಸಂಭ್ರಮವು ಸೆ. 13 ರಂದು ಪ್ರಾರಂಭಗೊಂಡು ಸೆ. 23 ರವರೆಗೆ ಹನ್ನೊಂದು ದಿನ ಗಳ ಕಾಲ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಅದ್ದೂರಿ ಯಾಗಿ ನಡೆಯಿತು.
ಪಲಿಮಾರು ಮಠದ ಪ್ರಬಂಧಕ ವಿದ್ವಾನ್ ರಾಧಾಕೃಷ್ಣ ಭಟ್ ಮತ್ತು ಅರ್ಚಕ ವೃಂದದ ಪೌರೋಹಿತ್ಯದಲ್ಲಿ ಗಣಹೋಮ, ಮಹಾಆರತಿ, 108 ತೆಂಗಿನಕಾಯಿಗಳ ಶ್ರೀಗಣಪತಿ ಮಹಾ ಯಜ್ಞ, ಪೂರ್ಣಾಹುತಿ, ರಂಗಪೂಜೆ, ಭಜನೆ ಹಾಗೂ ಪ್ರಸಾದ ರೂಪದಲ್ಲಿ ಅನ್ನಸಂತರ್ಪಣೆ ಜರಗಿತು.
ಪ್ರತಿದಿನ ಸಂಜೆ ಜರಗುವ ಭಜನೆಯಲ್ಲಿ ಕರ್ನಾಟಕ ಮಹಾಮಂ ಡಳ ಭಾಯಂದರ್, ಶ್ರೀ ದುರ್ಗಾ ಭಜನ ಮಂಡಳಿ ಸಿಲ್ವರ್‌ಪಾರ್ಕ್ ಮೀರಾರೋಡ್, ಬಂಟ್ಸ್ ಸಂಘ ಮೀರಾಭಾಯಂದರ್, ಶ್ರೀ ವಿಠuಲ ಭಜನ ಮಂಡಳಿ ಮೀರಾರೋಡ್, ಬಿಲ್ಲವರ ಅಸೋಸಿಯೇಶನ್ ಮೀರಾರೋಡ್ ಸ್ಥಳೀಯ ಸಮಿತಿ, ತುಳುನಾಡ ಸಮಾಜ ಮೀರಾ ಭಾಯಂದರ್, ಬಂಟ್ಸ್ ಫೋರಂ ಮೀರಾ-ಭಾಯಂದರ್, ಶ್ರೀ ಹನುಮಾನ್ ಭಜನಾ ಮಂಡಳಿ ಭಾಯಂದರ್, ರಾಯರ ಬಳಗ ಮೀರಾರೋಡ್, ಶ್ರೀ ಲಕ್ಷ್ಮೀ ನಾರಾಯಣ ಭಜನೆ ಸಮಿತಿ ಮೀರಾರೋಡ್, ಬಾಲಾಜಿ ಮತ್ತು ಸದ್ಗುರು ಭಜನಾ ಮಂಡಳಿ ಮೀರಾರೋಡ್ ಇನ್ನಿತರ ತಂಡಗಳು ಪಾಲ್ಗೊಂಡಿದ್ದವು.
ಸಹ ಸಂಸ್ಥೆಯಾದ ಶ್ರೀ ಲಕ್ಷ್ಮೀನಾರಾ ಯಣ ಭಜನ ಸಮಿತಿಯ ಅಧ್ಯಕ್ಷ ಹರೀಶ್ ಪೂಜಾರಿ, ಕಾರ್ಯಕಾರಿ ಸಮಿತಿಯ ಸದಸ್ಯರನ್ನು ಮತ್ತು ಶ್ರೀ ಅಯ್ಯಪ್ಪ ಭಕ್ತ ಮಂಡಳಿಯ ಗುರುಸ್ವಾಮಿ ಜಯಶೀಲ ತಿಂಗಳಾಯ ಅವರನ್ನು ಮೀರಾರೋಡ್ ಯುವ ಮಿತ್ರ ಮಂಡಳದ ಅಧ್ಯಕ್ಷ ಜಿತು ಸನಿಲ್, ಕಾರ್ಯದರ್ಶಿ ಸಂಪತ್ ಶೆಟ್ಟಿ, ಕೋಶಾಧಿಕಾರಿ ವಿಜಯ ಸುವರ್ಣ, ಕಾರ್ಯಕಾರಿ ಸಮಿತಿಯ ಸದಸ್ಯರು, ಮಹಿಳಾ ವಿಭಾಗದ ಸದಸ್ಯೆಯರು ಸನ್ನಿಧಿ ಪ್ರಸಾದವಿತ್ತು ಗೌರವಿಸಿದರು.
ಸೆ. 23ರಂದು ಭವ್ಯ ಶೋಭಾ ಯಾತ್ರೆಯೊಂದಿಗೆ ಶ್ರದ್ಧಾಭಕ್ತಿಯಿಂದ ಭಾಯಂದರ್ ಪಶ್ಚಿಮದ ನದಿ ಯಲ್ಲಿ ಗಣಪತಿ ವಿಗ್ರಹವನ್ನು ವಿಸರ್ಜಿಸಲಾಯಿತು. ಪರಿಸರದ ಸಂಘ-ಸಂಸ್ಥೆಗಳು, ಕನ್ನಡೇತರರು, ರಾಜಕೀಯ ನೇತಾರರು ಉಪಸ್ಥಿತ ರಿದ್ದರು. ದಿನಂಪ್ರತಿ ನೂರಾರು ಭಕ್ತಾದಿಗಳು ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು.
ಚಿತ್ರ-ವರದಿ: ರಮೇಶ್ ಅಮೀನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು
ಅಬುಧಾಬಿ ಹಿಂದೂ ಮಂದಿರದಲ್ಲಿ ಪ್ರಥಮ ದೀಪಾವಳಿ ಸಂಭ್ರಮ
ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
MUST WATCH
ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !
ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ
ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಹೊಸ ಸೇರ್ಪಡೆ
OnePlus 13 ಮತ್ತು 13R ಬಿಡುಗಡೆ: ಹೊಸ ವೈಶಿಷ್ಟ್ಯಗಳ ಪವರ್ ಹೌಸ್ ಫೋನ್
Fraud: ಸಿಬಿಐ ಹೆಸರಲ್ಲಿ ಕಾರ್ಕಳದ ಮಹಿಳೆಗೆ 24 ಲಕ್ಷ ರೂ. ವಂಚನೆ
Caught On Cam!;ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ: Video
2047 ರ ವೇಳೆಗೆ ದೇಶದ 50% ಜನ ನಗರ ಪ್ರದೇಶಗಳಲ್ಲಿ ವಾಸಿಸುತ್ತಾರೆ: ಸಚಿವ ಖಟ್ಟರ್
VIDEO: ಅಪ್ಪಿಕೊಳ್ಳಲು ಬಂದ ನಿರ್ದೇಶಕನನ್ನು ತಡೆದು ಕೆನ್ನೆಗೆ ಮುತ್ತು ಕೊಟ್ಟ ನಿತ್ಯಾ ಮೆನನ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.