![Sulya-1](https://www.udayavani.com/wp-content/uploads/2025/02/Sulya-1-415x249.jpg)
![Sulya-1](https://www.udayavani.com/wp-content/uploads/2025/02/Sulya-1-415x249.jpg)
Team Udayavani, Dec 24, 2019, 6:07 PM IST
ಮುಂಬಯಿ, ಡಿ. 23: ಬೊರಿವಲಿ ಪಶ್ಚಿಮದ ಜಯರಾಜ ನಗರದಲ್ಲಿರುವ ಶ್ರೀ ಮಹಿಷಮರ್ದಿನಿ ದೇವಸ್ಥಾನದ ವಾರ್ಷಿಕ ಶ್ರೀ ಸಾರ್ವಜನಿಕ ಶನೀಶ್ವರ ಮಹಾಪೂಜೆಯು ಡಿ. 21ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು.
ಧಾರ್ಮಿಕ ಕಾರ್ಯಕ್ರಮವಾಗಿ ಬೆಳಗ್ಗೆ ಮಹಾಯಾಗ ಹೋಮ ಪ್ರಾರಂಭದೊಂದಿಗೆ ಅರ್ಚಕವೃಂದ ಧಾರ್ಮಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬೆಳಗ್ಗೆ 11ರಿಂದ ಕಲಶ ಪ್ರತಿಷ್ಠೆ ನೆರವೇರಿತು. ಬಳಿಕ ಕಲ್ಪೋಕ್ತ ಪೂಜೆ, ಮಧ್ಯಾಹ್ನ ಶನಿದೇವರಿಗೆ ಮಹಾಪೂಜೆ, ಮಂಗಳಾರತಿ, ತೀರ್ಥ ಪ್ರಸಾದ ವಿತರಣೆ, ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ದೇವಸ್ಥಾನದ ವತಿಯಿಂದ ದಿನಂಪ್ರತಿ ನಾಗ ಸೇವೆ, ಶ್ರೀ ಗಣಪತಿ ಸೇವೆ, ಶ್ರೀ ಆಂಜನೇಯ ಸೇವೆ, ಶ್ರೀ ಮಹಿಷಮರ್ದಿನಿ ಸೇವೆ, ಕೊಡಮಣಿತ್ತಾಯ ಪರಿವಾರ ದೈವಗಳಿಗೆ ವಿವಿಧ ಪೂಜಾ ಕೈಂಕರ್ಯಗಳು ನಡೆಯಿತು.
ಧಾರ್ಮಿಕ ಕಾರ್ಯಕ್ರಮವನ್ನು ನೆರವೇರಿಸಿದ ಬ್ರಹ್ಮಶ್ರೀ ಕೊಯ್ಯೂರು ನಂದಕುಮಾರ ತಂತ್ರಿ ಅವರು ಆಶೀರ್ವಚನ ನೀಡಿ, ಭಗವಂತನ ಧ್ಯಾನದಲ್ಲಿ ನಮ್ಮನ್ನು ನಾವು ಆಗಾಗ ತೊಡಗಿಸಿಕೊಳ್ಳುವ ಮೂಲಕ ಮನಸ್ಸಿಗೆ ಸುಖ, ಶಾಂತಿ, ನೆಮ್ಮದಿಯನ್ನು ಪಡೆಯಬಹುದು. ಶ್ರೀ ದೇವಿಯ ಸನ್ನಿಧಿಯಲ್ಲಿ ನಡೆಯುವ ಪೂಜೆಯಲ್ಲಿ ಭಾಗವಹಿಸುವುದರಿಂದ ಭಕ್ತರ ಸಂಕಷ್ಟಗಳಿಗೆ ಪರಿಹಾರ ದೊರೆಯುವುದರ ಜತೆಗೆ ನಮ್ಮೊಳಗಿನ ಪಾಪ ದೋಷಗಳು ಪರಿಹಾರವಾಗುತ್ತವೆ. ಭಕ್ತರು ಸತ್ಕರ್ಮದೊಂದಿಗೆ ಭಾಗಿಯಾದಾಗ ಎಲ್ಲಾ ದೋಷಗಳು ನಿವಾರಣೆ ಸಾಧ್ಯ. ಹತ್ತು ಜನ ಸೇರಿ ಭಗವಂತನಲ್ಲಿ ಪ್ರಾರ್ಥನೆ ಮಾಡಿದರೆ ಅದರ ಫಲಾಪೇಕ್ಷೆ ಎಲ್ಲರಿಗೂ ದೊರೆಯುತ್ತದೆ. ಮಹಾದೇವಿಯ ಈ ಪೂಜಾ ಸನ್ನಿಧಿಯಲ್ಲಿ ಮಾಡುವ ಪೂಜೆಯ ಮೂಲಕ ವಿವಿಧ ಶನಿ ದೋಷಗಳು ದೇವರ ಅನುಗ್ರಹದಿಂದ ನಿವಾರಣೆಯಾಗುತ್ತದೆ ಎಂದರು. ದೇವಸ್ಥಾನದ ಆಡಳಿತ ಮೊಕ್ತೇಸರ ಕಣಂಜಾರು ಕೊಳಕೆಬೈಲು ಪ್ರದೀಪ್ ಸಿ. ಶೆಟ್ಟಿ ಅವರು ಶನಿಪೂಜಾ ಕಾರ್ಯಕ್ರಮದ ಬಗ್ಗೆ ಮಾತನಾಡಿ, ಆದಾಯದ ಇತಿಮಿತಿಯ ನಡುವೆಯೂ ದೇವಸ್ಥಾನದ ಪ್ರತಿಯೊಂದು ಕಾರ್ಯಕ್ರಮಗಳು ಯಶಸ್ವಿಯಾಗಿ ಜರಗುತ್ತಿದ್ದು, ಶ್ರೀ ದೇವಿ ಮಹಿಷ ಮರ್ದಿನಿಯ ಸನ್ನಿದಾನಕ್ಕೆ ಬರುವ ಭಕ್ತರಿಗೆ ಸದಾ ಅನುಗ್ರಹ ದೊರೆಯುತ್ತಿದೆ.
ಭಕ್ತರ ಸಂಖ್ಯೆಯೂ ದಿನೇ ದಿನೇ ಹೆಚ್ಚಾಗುತ್ತಿರುವುದು ಸನ್ನಿಧಾನದ ಮಹಿಮೆಯಾಗಿದೆ. ದೇವಸ್ಥಾನದ ಶೋಭೆಯನ್ನು ಉತ್ತುಂಗಕ್ಕೆ ಏರಿಸುವಲ್ಲಿ ಸ್ಥಳೀಯ ಹಲವಾರು ದಾನಿಗಳು ಸಹಕರಿಸುವುದರ ಜತೆಗೆ ದೇವಿ ಸನ್ನಿಧಾನದ ಕೀರ್ತಿಯನ್ನು ಎಲ್ಲೆಡೆ ಪಸರಿಸುವಲ್ಲಿ ಸಹಕರಿಸಿದ್ದಾರೆ. ಉದ್ಯಮಿ ಶಿವರಾಮ ಶೆಟ್ಟಿ ದಂಪತಿ, ಸತ್ಯೇಶ್ ಶೆಟ್ಟಿ ಕುಟುಂಬಸ್ಥರು, ಗೋಪಾಲ್ ಶೆಟ್ಟಿ ಬಿಲ್ಡರ್ ಚಿಕ್ಕುವಾಡಿ, ವಿರಾರ್ ಶಂಕರ್ ಶೆಟ್ಟಿ, ಸುಗುಣಾ ಕಮಲಾಕ್ಷ ಕಾಮತ್, ಶೋಭಾ ಕುಲಕರ್ಣಿ, ಜಯಂತ್ ಚಂದಯ್ಯ ಶೆಟ್ಟಿ, ಅಮೃತಾ ಜಯಂತ್ ಶೆಟ್ಟಿ, ಬಾಲಕೃಷ್ಣ ರೈ, ಉಷಾ ಗೋಪಾಲ್ ಶೆಟ್ಟಿ, ಸೀತಾರಾಮ ಶೆಟ್ಟಿ, ಗಂಗಾಧರ ಶೆಟ್ಟಿ, ಶ್ರೀಧರ ಎಚ್. ಶೆಟ್ಟಿ ದಂಪತಿ ಹಾಗೂ ಇನ್ನಿತರ ಮಹಿಷಮರ್ದಿನಿ ದೇವಿಯ ಭಕ್ತರ ಕೊಡುಗೆ ದೇವಸ್ಥಾನದ ಅಭಿವೃದ್ಧಿಗೆ ಸಹಕಾರಿಯಾಗಿದೆ. ಆದಾಯ ಗಳಿಕೆ ಹೆಚ್ಚಾದರೆ ದೇವಸ್ಥಾನವು ಕೆಲವೊಂದು ಮೂಲ ಸೌಕರ್ಯಗಳ ಅಭಿವೃದ್ಧಿಯ ಬಗ್ಗೆ ಚಿಂತನೆ ನಡೆಸಲಾಗುವುದು ಎಂದರು.
ದೇವಸ್ಥಾನದ ಆಡಳಿತ ವಂಶಸ್ಥ ಮೊಕ್ತೇಸರ ಶ್ರೀಮತಿ ಮತ್ತು ಶ್ರೀ ಜಯರಾಜ್ ಶ್ರೀಧರ ಶೆಟ್ಟಿ ಕಲ್ಲಮುಂಡ್ಕೂರು ಹರಿಯಾಳಗುತ್ತು, ಆಡಳಿತ ಮೊಕ್ತೇಸರರಾದ ಶ್ರೀಮತಿ ಮತ್ತು ಕಣಂಜಾರು ಕೊಳಕೆಬೈಲು ಪ್ರದೀಪ್ ಸಿ. ಶೆಟ್ಟಿ, ಮೊಕ್ತೇಸರ ಜಯಪಾಲಿ ಅಶೋಕ್ ಶೆಟ್ಟಿ ಅವರು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ಅರ್ಚಕರಾದ ಬಿ. ವೆಂಕಟರಮಣ ತಂತ್ರಿ, ಶ್ರೀ ಮಹಿಷ ಮರ್ದಿನಿ ದೇವಸ್ಥಾನದ ಆಡಳಿತ ಮಂಡಳಿ, ಶ್ರೀ ಮಹಿಷ ಮರ್ದಿನಿ ಭಜನಾ ಮಂಡಳಿಯ ಸದಸ್ಯರು ಧಾರ್ಮಿಕ ಕಾರ್ಯಕ್ರಮಗಳ ಯಶಸ್ಸಿಗೆ ಸಹಕರಿಸಿದರು. ಸ್ಥಳೀಯ ಉದ್ಯಮಿಗಳು, ಪರಿಸರದ ಸಂಘ ಸಂಸ್ಥೆಗಳ ಪ್ರತಿನಿಧಿಗಳು, ತುಳು ಕನ್ನಡಿಗರು, ವಿವಿಧ ಕ್ಷೇತ್ರಗಳ ಗಣ್ಯರು, ಕನ್ನಡೇತರರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು ಪ್ರಸಾದ ಸ್ವೀಕರಿಸಿದರು.
ಚಿತ್ರ-ವರದಿ: ರಮೇಶ್ ಉದ್ಯಾವರ
Sulya: ಪೈಪ್‌ಲೈನ್ ಕಾಮಗಾರಿಯಿಂದ ರಸ್ತೆಗೆ ಹಾನಿ ಬಗ್ಗೆ ಚರ್ಚಿಸಿ ಕ್ರಮ: ಸತೀಶ್ ಜಾರಕಿಹೊಳಿ
Madikeri: ಆರು ಮಂದಿಗೆ ಅರೆಭಾಷೆ ಅಕಾಡೆಮಿ ಗೌರವ ಪ್ರಶಸ್ತಿ ಪ್ರಕಟ; ಫೆ.28ಕ್ಕೆ ಪ್ರದಾನ
Manipal: ಕಡೇ ದಿನವೂ ಉತ್ತಮ ಸ್ಪಂದನೆ; ಹಾಡು, ನೃತ್ಯದೊಂದಿಗೆ ʼನಮ್ಮ ಸಂತೆʼಗೆ ತೆರೆ
Kambala: ದಾಖಲೆ ಬರೆದ ವಾಮಂಜೂರು ತಿರುವೈಲುಗುತ್ತು ಕಂಬಳ
Sulya: ಪಯಸ್ವಿನಿ ನದಿಯಲ್ಲಿ ಯುವಕನ ಶವ ಪತ್ತೆ
You seem to have an Ad Blocker on.
To continue reading, please turn it off or whitelist Udayavani.