ಮೋಡೆಲ್ ಬ್ಯಾಂಕ್‌ಗೆ ಉತ್ಕೃಷ್ಟ ಬ್ಯಾಂಕ್ ಪುರಸ್ಕಾರ ಪ್ರದಾನ
Team Udayavani, Sep 28, 2017, 1:26 PM IST
ಮುಂಬಯಿ: ಬೃಹನ್ಮುಂಬಯಿ ನಗರಿ ಸಹಕಾರಿ ಬ್ಯಾಂಕ್ಸ್ ಅಸೋಸಿಯೇಶನ್ ಲಿಮಿಟೆಡ್ ಸಂಸ್ಥೆ ವಾರ್ಷಿಕವಾಗಿ ಕೊಡಮಾಡುವ ಸಹಕಾರಿ ಕ್ಷೇತ್ರದ ಪ್ರತಿಷ್ಠಿತ “ಉತ್ಕೃಷ್ಟ ಬ್ಯಾಂಕ್ ಪುರಸ್ಕಾರ’ ಮತ್ತೆ ಈ ಬಾರಿಯೂ ಕರ್ನಾಟಕ ಕರಾವಳಿ ಮೂಲದ ಕ್ರೈಸ್ತ ಸಮುದಾಯದ ಮೋಡೆಲ್ ಕೋ ಆಪರೇಟಿವ್ ಬ್ಯಾಂಕ್‌ಗೆ ಪ್ರಾಪ್ತಿಯಾಗಿದೆ. 501 ಕೋ. ರೂ. ಗಳಿಂದ 1,000 ಕೋ. ರೂ. ಗಳ ಠೇವಣಿ ವ್ಯವಹಾರದ ಮುಂಬಯಿ ವಿಭಾಗದ ಪುರಸ್ಕಾರ ಶ್ರೇಣಿಯಲ್ಲಿ ಮೋಡೆಲ್ ಬ್ಯಾಂಕ್‌ನ 2015-2016ನೇ ಸಾಲಿನ ಒಟ್ಟು ವ್ಯವಹಾರದಲ್ಲಿ ಪ್ರಥಮ ಸ್ಥಾನ ಹಾಗೂ 2016-2017ರ ಸಾಲಿನ ವ್ಯವಹಾರ ವಹಿವಾಟಿನಲ್ಲಿ ದ್ವಿತೀಯ ಸ್ಥಾನಕ್ಕೆ ಬ್ಯಾಂಕ್ ಪಾತ್ರವಾಗಿದೆ.
ಸೆ. 27ರಂದು ಸಂಜೆ ದಾದರ್ ಪೂರ್ವದ ಹೊಟೇಲ್ ಸಿಟಿ ಪಾಯಿಂಟ್ ಸಭಾಗೃಹದಲ್ಲಿ ಆಯೋಜಿಸಿದ್ದ ಅಸೋಸಿಯೇಶನ್‌ನ ವಾರ್ಷಿಕ ಪುರಸ್ಕಾರ ಪ್ರದಾನ ಸಮಾರಂಭದಲ್ಲಿ ಬ್ಯಾಂಕ್ಸ್ ಅಸೋಸಿಯೇಶನ್‌ನ ಅಧ್ಯಕ್ಷ ದತ್ತರಾಮ ಚಾಳ್ಕೆ, ಉಪಾಧ್ಯಕ್ಷ ದಿನಕರ್ ರಾವ್ ಖಂಡಾಗಳೆ, ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಸಿ. ಬಿ. ಅಡೂÕಲ್ ಇತರ ಪದಾಧಿಕಾರಿಗಳು ಮೋಡೆಲ್ ಬ್ಯಾಂಕ್‌ನ ಉಪ ಕಾರ್ಯಾಧ್ಯಕ್ಷ ವಿಲಿಯಂ ಸಿಕ್ವೇರಾ ಹಾಗೂ ಸಿಇಒ, ಮಹಾ ಪ್ರಬಂಧಕ ವಿಲಿಯಂ ಎಲ್.ಡಿಸೋಜಾ ಅವರಿಗೆ ಪ್ರಶಸ್ತಿಯನ್ನು ಪ್ರದಾನಿಸಿ ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ಸಂಚಾಲಕರಾದ ಕಿಶೋರ್ ರಂಗೆ¡àಕರ್, ಪುರುಷೋತ್ತಮ ಮಾನೆ, ಗುಲಾಬ್‌ರಾವ್ ಜಗ್‌ತಾಪ್, ನಾಗೇಶ್ ಫೂವಾRರ್, ಗಣೇಶ್ ಮಹಾಳೆ, ಮೋಡೆಲ್ ಬ್ಯಾಂಕ್‌ನ ನಿರ್ದೇಶಕರಾದ ವಿನ್ಸೆಂಟ್ ಮಥಾಯಸ್, ಎ. ಕ್ಲೇಮೆಂಟ್ ಲೋಬೊ ಉಪಸ್ಥಿತರಿದ್ದರು. ಮುಂಬಯಿ ಮಹಾನಗರದಲ್ಲಿ ಶತಮಾನದ ಸೇವೆಯಲ್ಲಿ ಕಾರ್ಯನಿರತ ಮೋಡೆಲ್ ಬ್ಯಾಂಕ್ ಕರ್ನಾಟಕ ಕರಾವಳಿ ಮೂಲದ ಕ್ರೈಸ್ತ ಸಮುದಾಯದ ಮುಂದಾಳುಗಳಿಂದ ಮೆಂಗ್ಳೂರಿಯನ್ ಕ್ಯಾಥೋಲಿಕ್ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿ ನಿಯಮಿತ ಎಂದಾಗಿಸಿ 1916 ರಲ್ಲಿ ಸ್ಥಾಪಿಸಲ್ಪಟ್ಟಿತ್ತು. ಇತ್ತೀಚೆಗಷ್ಟೇ ಈ ಬ್ಯಾಂಕ್ ತನ್ನ 100ನೇ ವಾರ್ಷಿಕ ಮಹಾಸಭೆಯನ್ನು ಪೂರೈಸಿರುವುದು ವಿಶೇಷತೆಯಾಗಿದೆ.
ಚಿತ್ರ-ವರದಿ: ರೋನ್ಸ್ ಬಂಟ್ವಾಳ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ
Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ
Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು
Criminal case; ಏಕಕಾಲಕ್ಕೆ ಪಾಲಿಕೆ, ಮುಡಾದಲ್ಲಿ ಕೆಲಸ: ನೌಕರ ವಜಾ
Gujarat: 700 ಕೆ.ಜಿ. ಡ್ರಗ್ಸ್ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.