ಮೊಗವೀರ ಮಹಾಜನ ಸಂಘ ಬಗ್ವಾಡಿ:76ನೇ ವಾರ್ಷಿಕ ಮಹಾಸಭೆ
Team Udayavani, Oct 13, 2017, 4:31 PM IST
ಮುಂಬಯಿ: ಸಂಘವು ಕಳೆದ ಹಲವು ವರ್ಷಗಳಿಂದ ಸಮಾಜೋದ್ಧಾರ ಯೋಜನೆಗಳನ್ನು ಹಮ್ಮಿಕೊಂಡು ಸದಸ್ಯ ಬಾಂಧವರ ಮನೆ-ಮನಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ. ನಮ್ಮ ಮುಂದಿನ ಗುರಿ ಸಂಸ್ಥೆಯ ವತಿಯಿಂದ ಒಂದು ಭವ್ಯ ಭವನ ನಿರ್ಮಾಣವಾಗಿದೆ. ನಾವೆಲ್ಲರು ಒಗ್ಗಟ್ಟಾಗಿ, ಒಮ್ಮತದಿಂದ ಈ ಬೃಹತ್ ಯೋಜನೆಯ ಕನಸಿನ ನನಸಿಗೆ ಮುಂದಾಗಬೇಕು. ಅದಕ್ಕಾಗಿ ಸಮಾಜ ಬಾಂಧವರ ಸಹಕಾರ, ಪ್ರೋತ್ಸಾಹ ಸದಾ ನಮ್ಮೊಂದಿಗಿರಬೇಕು. ಸಮಾಜ ಸೇವೆಯೇ ಸಂಘದ ಪ್ರಮುಖ ಧ್ಯೇಯವಾಗಿದೆ ಎಂದು ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ ಅಧ್ಯಕ್ಷ ನಾರಾಯಣ ಎಚ್. ಬಗ್ವಾಡಿ ಅವರು ನುಡಿದರು.
ಅ.8 ರಂದು ಪೂರ್ವಾಹ್ನ ಫೋರ್ಟ್ ಪರಿಸರದ ಕಾಂಜೀ ಕೇತ್ಸಿ ಸಭಾಗೃಹದಲ್ಲಿ ನಡೆದ ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ ಇದರ 76ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಮ್ಮ ಕುಲಮಾತೆ ಶ್ರೀ ಮಹಿಷಾಸುರ ಮರ್ದಿನಿಯ ಛತ್ರಚಾಮರದ ನೆರಳಿನಲ್ಲಿ ಬದುಕಿದ ನಾವು ಶಿಥಿಲಗೊಂಡ ದೇಗುಲವನ್ನು 2005 ರಲ್ಲಿ ಶಿಲಾಮಯ ದೇಗುಲವನ್ನಾಗಿ ಪುನರ್ ನಿರ್ಮಿಸಿದ್ದೇವೆ. ಇದು ನಮ್ಮ ಸಮಾಜದ ದಾನಿಗಳಾದ ಸುರೇಶ್ ಕಾಂಚನ್ ಮತ್ತು ಗೋಪಾಲ್ ಪುತ್ರನ್ ಹಾಗೂ ಮುಂಬಯಿ, ಊರಿನ ದಾನಿಗಳ ಸಹಕಾರದಿಂದ ಸಾಧ್ಯವಾಗಿದೆ. ಪ್ರಸ್ತುತ ಮಂದಿರವು ಭಕ್ತಾದಿಗಳ ಸೇವೆಗೆ ನಿರಂತರವಾಗಿ ಅನುಕೂಲವಾಗುವಂತೆ ಮಾಡಿರುವುದು ಸಂತೋಷದ ಸಂಗತಿಯಾಗಿದೆ. ಇದೇ ರೀತಿಯಲ್ಲಿ ಸಂಸ್ಥೆಯ ಭವನ ನಿರ್ಮಾಣದ ಕನಸು ಶೀಘ್ರದಲ್ಲೇ ನನಸಾಗುವಂತಾಲಿ ಎಂದು ನುಡಿದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಸಮಾಜದ ವಿದ್ಯಾರ್ಥಿಗಳಿಗೆ ವಿಶೇಷ ಉಪನ್ಯಾಸ ನೀಡಿದ ಪ್ರದೀಪ್ ಚಂದನ್ ಅವರು, ಸಮಾಜದ ಅಭಿವೃದ್ಧಿಯಾಗಬೇಕಾದರೆ ಶಿಕ್ಷಣದಿಂದ ಮಾತ್ರ ಸಾಧ್ಯ. ಪಾಲಕರು ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡಿ ಅವರ ಅಭಿರುಚಿಯನ್ನು ಅರಿತುಕೊಂಡು ಬೆಳೆಸಬೇಕು. ಇಂದಿನ ಆಧುನಿಕ ಯುಗದಲ್ಲಿ ಮಕ್ಕಳು ಮೊಬೈಲ್ ಇಂಟನ್‌ನೆಟ್, ವಾಟ್ಸಾéಪ್, ಫೇಸ್‌ಬುಕ್ ಇತ್ಯಾದಿಗಳ ಗೀಳನ್ನು ಹಚ್ಚಿಸಿಕೊಂಡು ತಮ್ಮ ಬದುಕನ್ನು ನರಕವನ್ನಾಗಿಸಿಕೊಳ್ಳುತ್ತಿದ್ದಾರೆ. ಇದರ ಬಗ್ಗೆ ಪಾಲಕರು-ಪೋಷಕರು ಎಚ್ಚರ ವಹಿಸಬೇಕಾದ ಅನಿವಾರ್ಯತೆ ಇದೆ. ತಮ್ಮ ಮಕ್ಕಳು ಏನು ಮಾಡುತ್ತಿದ್ದಾರೆ, ಎತ್ತ ಸಾಗುತ್ತಿದ್ದಾರೆ ಎಂಬ ಅರಿವು ಹೊಂದಿರಬೇಕು. ಸಂಘದ ಸಮಾಜಪರ ಕಾರ್ಯಕ್ರಮಗಳಲ್ಲಿ ಮಕ್ಕಳನ್ನು ಹೆಚ್ಚಾಗಿ ತೊಡಗಿಸಿಕೊಳ್ಳುವಂತೆ ಮಾಡಿ ಅವರಲ್ಲಿ ನಾಯಕತ್ವದ ಗುಣವನ್ನು ಬೆಳೆಸಬೇಕು. ಇಂದು ಸಂಸ್ಥೆಯಿಂದ ಪಡೆದ ಆರ್ಥಿಕ ನೆರವನ್ನು ಭವಿಷ್ಯದಲ್ಲಿ ಉತ್ತಮ ಪ್ರಜೆಗಳಾಗಿ ಬೆಳೆದು ಸಂಘದ ಋಣ ತೀರಿಸುವ ಕಾರ್ಯದಲ್ಲೂ ವಿದ್ಯಾರ್ಥಿಗಳು ತೊಡಗಬೇಕು ಎಂದರು.
ಸಂಸ್ಥೆಯ ಗೌರವ ಪ್ರಧಾನ ನಾವುಂದ ರಾಜು ಶ್ರೀಯಾನ್ ಅವರು ಸ್ವಾಗತಿಸಿ ಗತ ಮಹಾಸಭೆಯ ಟಿಪ್ಪಣಿ ಓದಿ ಸರ್ವಾನುಮತದಿಂದ ಅಂಗೀಕರಿಸಿಕೊಂಡರು. ವರದಿ ವರ್ಷದಲ್ಲಿ ನಿಧನರಾದ ಸದಸ್ಯರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಗೌರವ ಕೋಶಾಧಿಕಾರಿ ಸತೀಶ್ ಶ್ರೀಯಾನ್ ಅವರು ವಾರ್ಷಿಕ ಲೆಕ್ಕಪತ್ರ ಮಂಡಿಸಿ, ಸರ್ವಾನುಮತದಿಂದ ಅಂಗೀಕರಿಸಿಕೊಂಡರು.
ಸಂಘದ ಲೆಕ್ಕಪತ್ರಗಳನ್ನು ಉಚಿತವಾಗಿ ಪರಿಶೋಧಿಸಿಕೊಟ್ಟು ಸಹಕರಿಸುತ್ತಿರುವ ಸಿಎ ಯಶವಂತ್ ಕರ್ಕೇರ ಅವರನ್ನು 2017-2018 ನೇ ಸಾಲಿಗೆ ಲೆಕ್ಕ ಪರಿಶೋಧಕರನ್ನಾಗಿ ಅವಿರೋಧವಾಗಿ ನೇಮಿಸಲಾಯಿತು. ಸದಸ್ಯರು ಸಂದಭೋìಚಿತವಾಗಿ ಮಾತನಾಡಿ, ಸಂಸ್ಥೆಯ ಸಮಾಜಪರ ಕಾರ್ಯಕ್ರಮಗಳನ್ನು ಅಭಿನಂದಿಸಿ, ಸೂಕ್ತ ಸಲಹೆ-ಸೂಚನೆಗಳನ್ನು ನೀಡಿ ಸಹಕರಿಸಿದರು.
ಕಳೆದ ಸಾಲಿನ ಹತ್ತನೇ ತರಗತಿಯಲ್ಲಿ ಶೇ. 95 ಕ್ಕಿಂತ ಅಧಿಕ ಅಂಕಗಳನ್ನು ಪಡೆದ ಐದು ವಿದ್ಯಾರ್ಥಿಗಳನ್ನು ಶಾಲು ಹೊದೆಸಿ, ಫಲಪುಷ್ಪ, ಸ್ಮರಣಿಕೆಯೊಂದಿಗೆ ಪ್ರತಿಭಾ ಪುರಸ್ಕಾರವನ್ನಿತ್ತು ಗೌರವಿಸಲಾಯಿತು. ಆರ್ಥಿಕವಾಗಿ ಹಿಂದುಳಿದ ಸಮಾಜದ ಸುಮಾರು 20 ವಿದ್ಯಾರ್ಥಿಗಳಿಗೆ ಶೈಕ್ಷಣಿಕ ವಿದ್ಯಾರ್ಥಿ ವೇತನವನ್ನಿತ್ತು ಸಹಕರಿಸಲಾಯಿತು.
ವೇದಿಕೆಯಲ್ಲಿ ಅಧ್ಯಕ್ಷ ಎನ್. ಎಚ್. ಬಗ್ವಾಡಿ, ಗೌರವ ಪ್ರಧಾನ ಕಾರ್ಯದರ್ಶಿ ಎನ್. ಎಚ್. ಬಗ್ವಾಡಿ, ಕೋಶಾಧಿಕಾರಿ ಸತೀಶ್ ಶ್ರೀಯಾನ್, ಮಾಜಿ ಅಧ್ಯಕ್ಷರುಗಳಾದ ಸುರೇಶ್ ಕಾಂಚನ್, ಮಹಾಬಲ ಕುಂದರ್, ಉಪಾಧ್ಯಕ್ಷರುಗಳಾದ ರಮೇಶ್ ಬಂಗೇರ, ರಾಜೇಂದ್ರ ಚಂದನ್, ಸ್ಥಳೀಯ ಸಮಿತಿಗಳ ಅಧ್ಯಕ್ಷರುಗಳಾದ ರಘುರಾಮ ಚಂದನ್, ನಾರಾಯಣ ಚಂದನ್, ಸುರೇಶ್ ನಾಯ್ಕ, ಗೋಪಾಲ್ ಚಂದನ್, ಮಹಿಳಾ ವಿಭಾಗದ ಪದಾಧಿಕಾರಿಗಳಾದ ಭಾರತಿ ನಾಯ್ಕ, ವಸಂತಿ ಕುಂದರ್, ಮಂಜುನಾಥ ನಾಯ್ಕ, ರಾಜು ಮೆಂಡನ್ ವಂಡ್ಸೆ ಮೊದಲಾದವರು ಉಪಸ್ಥಿತರಿದ್ದರು. ಸ್ಥಳೀಯ ಸಮಿತಿಗಳ ಕಾರ್ಯಾಧ್ಯಕ್ಷರುಗಳು, ಮಹಿಳಾ ವಿಭಾಗದ ಮುಖ್ಯಸ್ಥೆಯನ್ನು ತಮ್ಮ ಕಾರ್ಯಚಟುವಟಿಕೆಗಳನ್ನು ವಿವರಿಸಿದರು. ಸಂಸ್ಥೆಯ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು, ಮಹಿಳಾ ವಿಭಾಗದವರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.
ನಾವು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಿದರೆ, ಏನನ್ನಾದರೂ ಸಾಧಿಸಲು ಸಾಧ್ಯವಿದೆ. ಸಹಾಯ-ಸಹಕಾರವು ಸಂಘಕ್ಕೆ ಅತೀ ಅಗತ್ಯವಾಗಿದೆ. ಒಮ್ಮತದ ನಿರ್ಣಯಗಳು ಸಮಾಜ ನಿರ್ಮಾಣ ಮಾಡಲು ಸಹಕಾರಿಯಾಗುತ್ತದೆ. ಸಂಸ್ಥೆಯ ಸಮಾಜಪರ ಕಾರ್ಯಕ್ರಮಪ್ರತಿಯೊಬ್ಬರ ಮನೆಮನಗಳಿಗೆ ತಲುಪಿಸುವ ಜವಾಬ್ದಾರಿ ನಮ್ಮ ಮೇಲಿದೆ. ಈ ನಿಟ್ಟಿನಲ್ಲಿ ನಾವೆಲ್ಲರು ಕಾರ್ಯ ಪ್ರವೃತ್ತರಾಗಬೇಕು. ಆಗ ಸಂಘಟನೆ ಬಲಗೊಳ್ಳಲು ಸಾಧ್ಯವಿದೆ
– ಸುರೇಶ್ ಕಾಂಚನ್ (ಮಾಜಿ ಅಧ್ಯಕ್ಷರು : ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ).
ಸಂಘದ ಏಳ್ಗೆಗಾಗಿ ನಾವೆಲ್ಲರು ಶ್ರಮಿಸೋಣ. ಸಂಘಕ್ಕೆ ಆದಾಯ ಬಂದಾಗ ಮಾತ್ರ ಅದನ್ನು ಸಮಾಜ ಬಾಂಧವರ ಅಭಿವೃದ್ಧಿಗೆ ಬಳಸಲು ಸಾಧ್ಯ. ಪ್ರತಿಯೊಬ್ಬರು ತಮ್ಮ ತಮ್ಮ ಆದಾಯದ ಒಂದು ಅಂಶವನ್ನು ಸಂಘಕ್ಕೆ ನೀಡಿದಾಗ ಸಮು ದಾಯದ ಅಭಿವೃದ್ಧಿªಯಾಗುತ್ತದೆ. ಈ ನಿಟ್ಟಿನಲ್ಲಿ ನಾವೆಲ್ಲರು ಶ್ರಮಿಸೋಣ. ಮಕ್ಕಳು ಸಮಾಜ ಸೇವಾಗುಣವನ್ನು ಬೆಳೆಸಿ ಕೊಂಡು ಸಂಘಟನಾತ್ಮಕ ಚಟುವಟಿಕೆಗಳಲ್ಲಿ ತೊಡಗಬೇಕು
– ಮಹಾಬಲ ಕುಂದರ್ (ಮಾಜಿ ಅಧ್ಯಕ್ಷರು : ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ).
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
ಇಂಗ್ಲೆಂಡ್‌ನ ರಾದರಮ್ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’
Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್
MUST WATCH
ಹೊಸ ಸೇರ್ಪಡೆ
Question paper leak ಶಂಕೆ: ಪಿಡಿಒ ಪರೀಕ್ಷೆ ಬಹಿಷ್ಕರಿಸಿ ಪ್ರತಿಭಟನೆ
Kanakadasa Jayanthi ಇಂದು; ಕನಕದಾಸರ ತಣ್ತೀಗಳು ಹಿಂದೆಂದಿಗಿಂತ ಇಂದಿಗೆ ಹೆಚ್ಚು ಪ್ರಸ್ತುತ
Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ
Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ
Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.