ಮೊಗವೀರ ಮಹಾಜನ ಸೇವಾ ಬಗ್ವಾಡಿ ಥಾಣೆ ಸ್ಥಳೀಯ ವಾರ್ಷಿಕೋತ್ಸವ
Team Udayavani, Jan 2, 2018, 3:25 PM IST
ಮುಂಬಯಿ: ಮೊಗವೀರ ಮಹಾಜನ ಸೇವಾ ಬಗ್ವಾಡಿ ಸಂಘ ಹೋಬಳಿ ಇದರ ಥಾಣೆ ಸ್ಥಳೀಯ ಸಮಿತಿಯ ಐದನೇ ವಾರ್ಷಿಕೋತ್ಸವವು ಡಿ. 17ರಂದು ಘಾಟ್‌ಕೋಪರ್ ಪಶ್ಚಿಮದ ಅಸಲ್ಫಾ ಶ್ರೀ ಗೀತಾಂಬಿಕಾ ಮಂದಿರದ ಸಭಾಗೃಹದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರಗಿತು.
ಸಂಘದ ಮಾಜಿ ಅಧ್ಯಕ್ಷ ಮೊಗವೀರ ಬ್ಯಾಂಕಿನ ನಿರ್ದೇಶಕ ಸುರೇಶ್ ಕಾಂಚನ್ ಅವರು ದೀಪ ಪ್ರಜ್ವಲಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಸಮಾಜ ಬಾಂಧವರಿಗೆ ಶುಭ ಹಾರೈಸಿದರು. ಸಮಾಜ ಬಾಂಧವರು ಸಂಘಟನೆಯಲ್ಲಿ ಸಕ್ರಿಯರಾಗಿರಬೇಕು. ನಮ್ಮ ಸಮಾಜದ ಬಲವರ್ಧನೆಯಾಗಬೇಕು ಹಾಗೂ ಸಂಘಟನೆಯ ಬೆಳವಣಿಗೆಯಲ್ಲಿ ಸಹಕರಿಸಬೇಕು ಎಂದು ನುಡಿದರು.
ಮುಖ್ಯ ಅತಿಥಿಯಾಗಿ ಸಂಘದ ನಿಕಟವೂರ್ವ ಅಧ್ಯಕ್ಷ ಮಹಾಬಲ ಕುಂದರ್ ಅವರು ಉಪಸ್ಥಿತರಿದ್ದು ಕುಂದಾಪುರದಲ್ಲಿ ನಿರ್ಮಾಟವಾಗುತ್ತಿರುವ ಮೊಗವೀರ ಭವನಕ್ಕೆ ಎಲ್ಲಾ ಸಮಾಜ ಬಾಂಧವರು ಸಹಕರಿಸಬೇಕು. ಇದು ನಮ್ಮ ಸಮಾಜದ ಭವ್ಯ ಧೊÂàತಕವಾಗಿದೆ. ಸುರೇಶ್ ಕಾಂಚನ್, ಗೋಪಾಲ್ ಪುತ್ರನ್ ಹಾಗೂ ಸಮಾಜ ಗಣ್ಯರ ನೇತೃತ್ವದಲ್ಲಿ ನಿಧಿ ಸಂಗ್ರಹವಾಗುತ್ತಿದ್ದು ಎಲ್ಲರೂ ಸಹಕರಿಸುವ ಅಗತ್ಯವಿದೆ ಎಂದರು.
ವೇದಿಕೆಯಲ್ಲಿ ಉದ್ಯಮಿ ಪ್ರದೀಪ್ ಚಂದನ್ ಅವರು ಉಪಸ್ಥಿತರಿದ್ದು ಮಾತನಾಡಿ, ಕುಂದಾಪುರದಲ್ಲಿ ನಿರ್ಮಾಣವಾಗುತ್ತಿರುವ ಮೊಗವೀರ ಭವನಕ್ಕೆ ಎಲ್ಲಾ ಸಮಾಜ ಬಾಂಧವರು ಸಹಕರಿಸಬೇಕು. ಇದು ನಮ್ಮ ಸಮಾಜದ ಭವ್ಯ ದ್ಯೋತಕವಾಗಿದೆ. ಸುರೇಶ್ ಕಾಂಚನ್, ಗೋಪಾಲ್ ಪುತ್ರನ್ ಹಾಗೂ ಸಮಾಜದ ಗಣ್ಯರ ನೇತೃತ್ವದಲ್ಲಿ ನಿಧಿ ಸಂಗ್ರಹವಾಗುತ್ತಿದ್ದು ಎಲ್ಲರು ಸಹಕರಿಸಬೇಕು ಎಂದರು.
ವೇದಿಕೆಯಲ್ಲಿ ಉದ್ಯಮಿ ಪ್ರದೀಪ್ ಚಂದನ್, ಥಾಣೆ ಸ್ಥಳೀಯ ಸಮಿತಿಯ ಮಾಜಿ ಕಾರ್ಯಾಧ್ಯಕ್ಷ ರಾಜು ಮೆಂಡನ್ ಡೊಂಬಿವಲಿ, ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷ ನಾರಾಯಣ ಚಂದನ್ ಬಟ್ವಾಡಿ, ಉದ್ಯಮಿ ನಾಗರಾಜ್ ಪುತ್ರನ್, ಮಹಾಜನ ಸೇವಾ ಸಂಘದ ಉಪಾಧ್ಯಕ್ಷರಾದ ರಮೇಶ್ ಬಂಗೇರ, ರಾಜೇಂದ್ರ ಚಂದನ್, ಗೌರವ ಪ್ರಧಾನ ಕಾರ್ಯದರ್ಶಿ ರಾಜು ಶ್ರೀಯಾನ್, ಕೋಶಾಧಿಕಾರಿ ಸಂಜೀವ ಕುಂದರ್, ಕಾಂಚನೀ ಕಲಾ ಕೇಂದ್ರದ ಸುರೇಶ್ ತೋಳಾರ್, ಮೀರಾರೋಡ್ ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷ ರಘುರಾಮ್ ಚಂದನ್, ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷ ಭಾಸ್ಕರ್ ಕಾಂಚನ್, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುಚಿತ್ರಾ ಸಂತೋಷ್ ಪುತ್ರನ್, ಥಾಣೆ ಸ್ಥಳೀಯ ಸಮಿತಿಯ ಗೌರವ ಕಾರ್ಯಾಧ್ಯಕ್ಷ ಕಿಶೋರ್ ಬಂಗೇರ, ಉಪ ಕಾರ್ಯಾಧ್ಯಕ್ಷರಾದ ತಿಮ್ಮಪ್ಪ ಮೆಂಡನ್, ನಾಗೇಶ್ ನಾಯಕ್, ಸಂಘಟನ ಕಾರ್ಯದರ್ಶಿ ಕಿಶೋರ್ ಮೊಗವೀರ, ಕಾರ್ಯದರ್ಶಿ ರಾಧಾ ಮೆಂಡನ್, ಕೋಶಾಧಿಕಾರಿ ಪದ್ಮಾವತಿ ಮೊಗವೀರ, ಮಹಿಳಾ ವಿಭಾಗದ ಕಾರ್ಯದರ್ಶಿ ಕಲ್ಪನಾ ಅಶೋಕ್ ನಾಯ್ಕ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಸಮಾಜದ ಹಿರಿಯರಾದ ಮಹಾದೇವ ಶ್ರೀಯಾನ್, ಶೀನ ತೋಳಾರ್ ಕಿರಿಮಂಜೇಶ್ವರ, ಜಾದುಗಾರ ಸತೀಶ್ ಹೆಮ್ಮಾಡಿ, ದಾನಿ ಅಶೋಕ್ ಮೆಂಡನ್ ಅವರನ್ನು ಸಮ್ಮಾನಿಸಲಾಯಿತು. ಸಮಾಜ ಬಾಂಧವರ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ಗಣೇಶ್ ಎರ್ಮಾಳ್ ಅವರಿಂದ ಸಂಗೀತ ರಸಮಂಜರಿ, ಅಂಕಿತಾ ನಾಯಕ್, ಸೌಜನ್ಯಾ ಬಿಲ್ಲವ ಅವರಿಂದ ಯಕ್ಷಗಾನ ಶೈಲಿಯ ನೃತ್ಯ ಹಾಗೂ ಅಮಿತಾ ಕಲಾಕೇಂದ್ರ ಮೀರಾರೋಡ್, ಅರುಣೋದಯ ಕಲಾನಿಕೇತನ ಮತ್ತು ಶೇಖರ್ ಕುಂದರ್ ತಂಡದವರಿಂತದ ನೃತ್ಯ ಕಾರ್ಯಕ್ರಮ ಜಗರಿತು.
ವೈಷ್ಣವಿ ಸುರೇಶ್ ತೋಳಾರ್, ಕಾರ್ತಿಕ್ ಮೊಗವೀರ, ರಕ್ಷಾ ಮೊಗವೀರ ಅವರ ತಂಡದಿಂದ ವಿಶೇಷ ನೃತ್ಯ ಹಾಗೂ ಜನಪದ ನೃತ್ಯ ಪ್ರದರ್ಶನಗೊಂಡಿತು. ಸಾಂಸ್ಕೃತಿಕ ಕಾರ್ಯಕ್ರಮವನ್ನು ಮಂಜುನಾಥ ನಾಯಕ್, ಸುರೇಶ್ ತೋಳಾರ್ ಸಾಂಸ್ಕೃತಿಕ ಕಾರ್ಯಕ್ರಮ ನಿರ್ವಹಿಸಿದರು.
ಸಭಾ ಕಾರ್ಯಕ್ರಮವನ್ನು ದೇವದಾಸ್ ಸಾಲ್ಯಾನ್ ನಿರೂಪಿಸಿದರು. ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷ ಗೋಪಾಲ್ ಎಸ್. ಚಂದನ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಅಶೋಕ್ ಮೆಂಡನ್ ಹಾಗೂ ರಾಘವೇಂದ್ರ ಕಾಂಚನ್ ಅವರ ಪ್ರಾಯೋಜಕತ್ವದಲ್ಲಿ ಭೋಜನದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು. ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಚಿತ್ರ-ವರದಿ: ಸುಭಾಷ್ ಶಿರಿಯಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಡಾ. ತುಂಬೆ ಮೊಯ್ದೀನ್ ಅವರಿಗೆ ಪ್ರತಿಷ್ಠಿತ ಗ್ಲೋಬಲ್ ವಿಷನರಿ ಎನ್‌ಆರ್‌ಐ ಪ್ರಶಸ್ತಿ
Dubai: ಬಹುಮುಖ ಪ್ರತಿಭೆಯ ದುಬಾೖಯ ಶ್ರೀಖಾ ಶೆಣೈ
ಅರಿವಿಲ್ಲ ಎಂಬುದು ಕೀಳರಿಮೆಯಲ್ಲ-“ಒಂದು ಹಲವಾಗುತ್ತೆ, ಹಲವು ಒಂದಾಗುತ್ತೆ’: ದೇವಲೋಕದ ಕಥೆಗಳು
Jimmy Carter Life Journey: ಜಿಮ್ಮಿ ಕಾರ್ಟರ್- ಮಾನವೀಯತೆ, ಶಾಂತಿಯ ಶಿಲ್ಪಿ
ವೈಕುಂಠ ಏಕಾದಶಿ: ಅಮೆರಿಕ ದೇವಸ್ಥಾನದಲ್ಲಿ ಆಚರಣೆ
MUST WATCH
ಹೊಸ ಸೇರ್ಪಡೆ
ಭಾರತಾಂಬೆಗೆ ಅವಮಾನ; ಕರ್ನಾಟಕ ವಿಶ್ವವಿದ್ಯಾಲಯದಿಂದ ಪಠ್ಯ ಹಿಂದಕ್ಕೆ
ಮೀಟರ್ ಬಡ್ಡಿ: ಯಾದಗಿರಿಯಲ್ಲಿ ಹಲ್ಲೆಗೊಳಗಾಗಿದ್ದ ಯುವಕ ಬಲಿ
BBK11: ಈ ಇಬ್ಬರ ಪೈಕಿ ಒಬ್ಬರು ಬಿಗ್ ಬಾಸ್ ಟ್ರೋಫಿ ಗೆಲ್ಲೋದು ಪಕ್ಕಾ?: ಹೇಗಿದೆ ಟ್ರೆಂಡ್
ಪೆರ್ಡೂರು ಪ್ರೌಢಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ರಾಮಚಂದ್ರ ಐತಾಳ ವಿಧಿವಶ
ಮೈಕ್ರೋ ಫೈನಾನ್ಸ್ ಕಿರುಕುಳ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ: ಜಾರಕಿಹೊಳಿ