ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ:ಅರಸಿನ ಕುಂಕುಮ
Team Udayavani, Mar 9, 2017, 4:43 PM IST
ಮುಂಬಯಿ: ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ ಇದರ ಮಹಿಳಾ ವಿಭಾಗದ ವತಿಯಿಂದ ಅರಸಿನ ಕುಂಕುಮ ಕಾರ್ಯಕ್ರಮವು ಫೆ. 26ರಂದು ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುಚಿತ್ರಾ ಸಂತೋಷ್ ಪುತ್ರನ್ ಅವರ ಅಧ್ಯಕ್ಷತೆಯಲ್ಲಿ ದಹಿಸರ್ ಪೂರ್ವದ ಕ್ಲಾಸಿಕ್ ಹೊಟೇಲ್‌ನ ಸಭಾಗೃಹದಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಜರಗಿತು.
ಶ್ರೀದೇವಿ ಮಹಿಷಾಸುರ ಮರ್ದಿನಿ ಪೂಜೆಯನ್ನು ನೆರವೇರಿಸಿ, ಪ್ರಾರ್ಥನೆಗೈದು ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಪ್ರಾರಂಭದಲ್ಲಿ ಸಂಘದ ಸದಸ್ಯ ಬಾಂಧವರಿಂದ ನೃತ್ಯ, ವಿವಿಧ ವಿನೋದಾವಳಿಗಳು, ಮಹಿಳೆಯರಿಗಾಗಿ ಸಾಂಸ್ಕೃತಿಕ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಸಂಘದ ಅಧ್ಯಕ್ಷ ಎನ್. ಎಚ್. ಬಗ್ವಾಡಿ, ಮಾಜಿ ಅಧ್ಯಕ್ಷರಾದ ಸುರೇಶ್ ಕಾಂಚನ್, ಗೋಪಾಲ್ ಪುತ್ರನ್, ಮಹಾಬಲ ಕುಂದರ್, ಗೌರವ ಪ್ರಧಾನ ಕಾರ್ಯದರ್ಶಿ ರಾಜು ಶ್ರೀಯಾನ್, ಸಂಘದ ಹಿತೈಷಿಗಳಾದ ಶ್ರೀನಿವಾಸ ಕಾಂಚನ್, ಸಂತೋಷ್ ಪುತ್ರನ್, ಶೀಲಾ ಅಮೀನ್, ಸ್ಥಳೀಯ ಸಮಿತಿಯ ಅಧ್ಯಕ್ಷ ರಘುರಾಮ ಚಂದನ್, ಭಾಸ್ಕರ ಕಾಂಚನ್, ಗೋಪಾಲ್ ಚಂದನ್, ಮಹಿಳಾ ವಿಭಾಗದ ಉಪಾಧ್ಯಕ್ಷೆಯರಾದ ಯಶೋದಾ ಕಾಂಚನ್, ಸುಧಾ ಪುತ್ರನ್, ಮೀನಾಕ್ಷೀ ರಾಜು ಶ್ರೀಯಾನ್, ಕಾರ್ಯದರ್ಶಿ ವಸಂತಿ ಕುಂದರ್, ಕೋಶಾಧಿಕಾರಿ ಭಾರತಿ ಶೇಖರ್ ನಾೖಕ್, ಸಂಘದ ಎಲ್ಲಾ ಪದಾಧಿಕಾರಿಗಳು, ಸ್ಥಳೀಯ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಕವಿತಾ ವೇದ ಪ್ರಕಾಶ್ ಶ್ರೀಯಾನ್ ಅವರು ಮಾತನಾಡಿ, ಬಗ್ವಾಡಿ ಹೋಬಳಿ ಮಹಿಳಾ ವಿಭಾಗದ ಕಾರ್ಯವೈಖರಿಯನ್ನು ಕಂಡಾಗ ಸಂತೋಷವಾಗುತ್ತಿದೆ. ಇಂದಿನ ಕಾರ್ಯಕ್ರಮದಲ್ಲಿ ಮಹಿಳೆಯರು ಇಷ್ಟೊಂದು ಸಂಖ್ಯೆಯಲ್ಲಿ ಭಾಗವಹಿಸಿರುವುದು ಅಭಿಮಾನದ ಸಂಗತಿಯಾಗಿದೆ. ನಾವೆಲ್ಲರೂ ಒಂದಾಗಿ ಸಂಘಟನೆಯನ್ನು ಮತ್ತಷ್ಟು ಬಲಪಡಿಸೋಣ ಎಂದರು.
ಇನ್ನೋರ್ವೆ ಅತಿಥಿ ಮಧು ಅಜಿತ್ ಸುವರ್ಣ ಅವರು ಮಾತನಾಡಿ, ಮಹಿಳೆಯರು ಮನೆಯ ನಾಲ್ಕು ಗೋಡೆಗಳ ಮಧ್ಯೆ ಸೀಮಿತವಾಗಿರದೆ, ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಸಮಾಜ ಸೇವೆಯಲ್ಲಿ ತೊಡಗಬೇಕು. ಮಹಿಳೆಯರಿಗೆ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಲು ಇದೊಂದು ಮುಕ್ತ ವೇದಿಕೆಯಾಗಿದೆ ಎಂದು ಹೇಳಿದರು. ಮಹಿಳಾ ವಿಭಾಗದ ನಿಶಾ ಅವರು ಕಾರ್ಯಕ್ರಮ ನಿರ್ವಹಿಸಿದರು.
ಕಾರ್ಯದರ್ಶಿ ವಸಂತಿ ಕುಂದರ್ ವಂದಿಸಿದರು. ಸಂಸ್ಥೆಯ ಪದಾಧಿಕಾರಿಗಳು, ಮಹಿಳಾ ವಿಭಾಗದ ಪದಾಧಿಕಾರಿಗಳು, ಸ್ಥಳೀಯ ಸಮಿತಿಗಳ ಪದಾಧಿಕಾರಿಗಳು, ಮಹಿಳಾ ಸದಸ್ಯೆಯರು, ಸ್ಥಳೀಯ ತುಳು-ಕನ್ನಡಿಗರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು, ದಾನಿಗಳು, ಉದ್ಯಮಿಗಳು, ಸಮಾಜ ಸೇವಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಹಕರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಡಾ. ತುಂಬೆ ಮೊಯ್ದೀನ್ ಅವರಿಗೆ ಪ್ರತಿಷ್ಠಿತ ಗ್ಲೋಬಲ್ ವಿಷನರಿ ಎನ್‌ಆರ್‌ಐ ಪ್ರಶಸ್ತಿ
Dubai: ಬಹುಮುಖ ಪ್ರತಿಭೆಯ ದುಬಾೖಯ ಶ್ರೀಖಾ ಶೆಣೈ
ಅರಿವಿಲ್ಲ ಎಂಬುದು ಕೀಳರಿಮೆಯಲ್ಲ-“ಒಂದು ಹಲವಾಗುತ್ತೆ, ಹಲವು ಒಂದಾಗುತ್ತೆ’: ದೇವಲೋಕದ ಕಥೆಗಳು
Jimmy Carter Life Journey: ಜಿಮ್ಮಿ ಕಾರ್ಟರ್- ಮಾನವೀಯತೆ, ಶಾಂತಿಯ ಶಿಲ್ಪಿ
ವೈಕುಂಠ ಏಕಾದಶಿ: ಅಮೆರಿಕ ದೇವಸ್ಥಾನದಲ್ಲಿ ಆಚರಣೆ