ಮೊಗವೀರ ವ್ಯವಸ್ಥಾಪಕ ಮಂಡಳಿ:115ನೇ ವಾರ್ಷಿಕ ಮಹಾಸಭೆ


Team Udayavani, Jan 10, 2018, 4:24 PM IST

09-mum01A.jpg

ಮುಂಬಯಿ: ಮುಂಬಯಿಯ ಹಿರಿಯ ಸಾಮಾಜಿಕ, ಶೈಕ್ಷಣಿಕ, ಸಾಹಿತ್ಯಿಕ ಸಂಘಟನೆಯಾದ ಮೊಗವೀರ ವ್ಯವಸ್ಥಾಪಕ ಮಂಡಳಿಯ 115ನೇ ವಾರ್ಷಿಕ ಮಹಾಸಭೆಯು ಮಂಡಳಿಯ ಅಧ್ಯಕ್ಷರಾದ ಪಣಂಬೂರು ಕೃಷ್ಣಕುಮಾರ್‌ ಎಲ್‌. ಬಂಗೇರ ಅವರ ಅಧ್ಯಕ್ಷತೆಯಲ್ಲಿ ಡಿ.30ರಂದು ಅಪರಾಹ್ನ 3ರಿಂದ  ಮಂಡಳಿಯ ಶ್ರೀಮತಿ ಶಾಲಿನಿ ಜಿ. ಶಂಕರ್‌ ಕನ್ವೆನ್‌ಶನ್‌ ಸೆಂಟರ್‌, ಮೊಗವೀರ ಭವನ, ಅಂಧೇರಿ ಪೂರ್ವ ಇಲ್ಲಿ ಜರಗಿತು.

ಪ್ರಾರಂಭದಲ್ಲಿ ಪ್ರಧಾನ ಕಾರ್ಯದರ್ಶಿ ನೇಜಾರ್‌ ಸಂಜೀವ ಕೆ. ಸಾಲ್ಯಾನ್‌ ಅವರು ಸದಸ್ಯರನ್ನು ಸ್ವಾಗತಿಸಿದ ಬಳಿಕ ಸುತ್ತೋಲೆಯನ್ನು ಓದಿದರು.

ಉಪಾಧ್ಯಕ್ಷರಾದ ಬಪ್ಪನಾಡು ಶ್ರೀನಿವಾಸ ಸಿ. ಸುವರ್ಣ ಅವರು ವರದಿ ವರ್ಷದಲ್ಲಿ ದೈವಾಧೀನರಾದ ಮಂಡಳಿಯ ಸದಸ್ಯರನ್ನು ಸ್ಮರಿಸುತ್ತಾ ಸಂತಾಪ ಠರಾವನ್ನು ಮಂಡಿಸಿದರು. ಸಭೆಯು 2 ನಿಮಿಷದ ಮೌನ ಪ್ರಾರ್ಥನೆ ಮಾಡುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಿತು. ಬಳಿಕ ಅಧ್ಯಕ್ಷರು ಮೊಗವೀರ ವ್ಯವಸ್ಥಾಪಕ ಮಂಡಳಿಯ ವರದಿ ವರ್ಷದ ಕಾರ್ಯಚಟುವಟಿಕೆಗಳನ್ನು ವಿವರಿಸುತ್ತ, ಮಂಡಳಿಯ ಘನತೆ,ಮಹತ್ವದ ಬಗ್ಗೆ ವಿವರಿಸಿದರು.

ಪ್ರಧಾನ ಕಾರ್ಯದರ್ಶಿಯವರು 114ನೇ ವಾರ್ಷಿಕ ಮಹಾಸಭೆ ಮತ್ತು ಮುಂದೂಡಲ್ಪಟ್ಟ ಸಭೆಯ ಟಿಪ್ಪಣಿಗಳನ್ನು ಓದಿದರು. ಇವು ಪಡುಬಿದ್ರೆ ಬಿ. ಎನ್‌. ಕರ್ಕೇರ ಅವರ ಸೂಚನೆ ಮತ್ತು ಪೊಲಿಪು ಎಸ್‌. ವೈ. ಸುವರ್ಣ ಅವರ ಅನುಮೋದನೆಯೊಂದಿಗೆ ಮಂಜೂರಾಯಿತು.

ಕೋಶಾಧಿಕಾರಿ ದಿಲೀಪ್‌ ಮೂಲ್ಕಿ ಅವರು 2017ರ ಮಾರ್ಚ್‌ಗೆ ಅಂತ್ಯಗೊಂಡಿದ್ದ ಮಂಡಳಿಯ ಆಯ-ವ್ಯಯ ಪಟ್ಟಿಯನ್ನು ಮಂಡಿಸುತ್ತಾ, ಮಂಡಳಿಯು ವರದಿ ವರ್ಷದಲ್ಲಿ ಕೈಗೊಂಡ ಯೋಜನೆಗಳು, ಚಟುವಟಿಕೆಗಳು ಹಾಗೂ ಗೈದ ಸಾಧನೆಗಳ ಬಗ್ಗೆ ವಿವರಿಸಿದರು. ಗತ ವರ್ಷದ ಆಯ ವ್ಯಯ ಲೆಕ್ಕಪತ್ರವು ಚರಂತಿಪೇಟೆ ಅಡ್ವೊಕೇಟ್‌ ಜನಾರ್ದನ ಮೂಲ್ಕಿ ಅವರ ಅನುಮೋದನೆಯೊಂದಿಗೆ ಸ್ವೀಕರಿಸಲ್ಪಟ್ಟಿತು.

ಬೊಕ್ಕಪಟ್ಲ ನೀತಾ ಜೆ. ಮೆಂಡನ್‌ ಅವರು ಲೆಕ್ಕಪರಿಶೋಧಕರ ಠರಾವನ್ನು ಮಂಡಿಸುತ್ತಾ ಲೆಕ್ಕ ಪರಿಶೋಧಕರಾದ ಮೆಸರ್ಸ್‌ ರಾವ್‌ ಆ್ಯಂಡ್‌ ಅಶೋಕ್‌ ಚಾರ್ಟರ್ಡ್‌ ಅಕೌಂಟೆಂಟ್ಸ್‌ ಅವರನ್ನು ಸೂಚಿಸಿದರು. ಈ ಠರಾವು ಸುರತ್ಕಲ್‌ ಎನ್‌. ಮುರಾರಿ ಅವರ ಅನುಮೋದನೆಯೊಂದಿಗೆ ಮಂಜೂರಾಯಿತು. ಬಪ್ಪನಾಡು ರಘುಚಂದ್ರ ಕೋಟ್ಯಾನ್‌, ಪಡುಬಿದ್ರಿ ಬಿ.ಎನ್‌. ಕರ್ಕೇರ, ಉಚ್ಚಿಲ ಮಾಧವ ಸುವರ್ಣ, ಕದಿಕೆ ಚಂದ್ರಕಾಂತ್‌ ಪುತ್ರನ್‌ ಮತ್ತು ಚರಂತಿಪೇಟೆ ಸದಾನಂದ ಎ. ಕೋಟ್ಯಾನ್‌ ಅವರು ಮಂಡಳಿಯ ಶ್ರೇಯೋಭಿವೃದ್ಧಿಯ ಬಗ್ಗೆ ತಮ್ಮ ತಮ್ಮ ಅಭಿಪ್ರಾಯಗಳನ್ನಿತರು.

ಅಧ್ಯಕ್ಷರು ತಮ್ಮ ಭಾಷಣದಲ್ಲಿ ಮಂಡಳಿಯು ಕಳೆದ 115 ವರ್ಷಗಳಿಂದ ಸಮಾಜ ಬಾಂಧವರಿಗಾಗಿ ಮೀಸಲಿಟ್ಟ ಹದಿನಾಲ್ಕು ಸಮಾಜ ಕಲ್ಯಾಣ ಯೋಜನೆಯ ಅಡಿಯಲ್ಲಿ ಸಹಾಯಧನವನ್ನು ನೀಡುತ್ತಿದೆ. ಮಂಡಳಿಯು ಶೈಕ್ಷಣಿಕ ಸಂಕುಲವನ್ನು ಇನ್ನೂ ವಿಸ್ತರಿಸಬೇಕಾದ ಅಗತ್ಯವಿರುವುದರಿಂದ ಸಮಾಜ ಬಾಂಧವರು, ಮೊಗವೀರ ಗ್ರಾಮ ಸಭಾ ಮತ್ತು ಮೊಗವೀರ ಮೂಲಸ್ತಾನ ಸಭಾದವರು ಎಂದಿನಂತೆ ಬೆಂಬಲ ಮತ್ತು ಪ್ರೋತ್ಸಾಹವನ್ನು ನೀಡಬೇಕೆಂದು ಕೇಳಿಕೊಂಡರು.

ಮಂಡಳಿಯ ಶಾಖೆಗಳು ಸ್ಥಳೀಯ ಸದಸ್ಯರಿಗಾಗಿ ರೂಪುಗೊಂಡಿದ್ದು, ಈ ಶಾಖೆಗಳನ್ನು ಅಲ್ಲಿಯ ಸಮಾಜ ಬಾಂಧವರು ಸಂಪರ್ಕಿಸಿ, ಮಂಡಳಿಯಿಂದ ದೊರೆಯುವ ಸವಲತ್ತುಗಳ ಮಾಹಿತಿಯನ್ನು ಪಡೆಯಬೇಕೆಂದೂ ಅವರು ತಿಳಿಸಿದರು. ಅಧ್ಯಕ್ಷರು ಮಾತು ಮುಂದುವರಿಸುತ್ತಾ, ಮಂಡಳಿಯ ಅಂಧೇರಿ ಶಿಕ್ಷಣ ಸಂಕುಲದಲ್ಲಿ ವಿಶೇಷವಾಗಿ ತುಳು ಕನ್ನಡಿಗರಿಗೆ ಮೀಸಲಾತಿ ಸೌಲಭ್ಯವನ್ನು ಸರಕಾರದ ಅನುಮತಿ ಮೇರೆಗೆ ಪಡೆಯಲಾಗಿದ್ದು, ಅದರ ಪ್ರಯೋಜವನ್ನು ಪಡೆದುಕೊಳ್ಳಬೇಕೆಂದು ಅಧ್ಯಕ್ಷರಾದ ಪಣಂಬೂರು ಕೃಷ್ಣಕುಮಾರ್‌ ಎಲ್‌. ಬಂಗೇರ ತಿಳಿಸಿದರು.

ಮಂಡಳಿಯಲ್ಲಿ ಹೊಸ ಕ್ರೀಡಾ ತರಬೇತಿ ಕೇಂದ್ರವನ್ನು ಅನುಭವೀ ಕ್ರೀಡಾ ತಜ್ಞರಿಂದ ಸ್ಥಾಪನೆ ಮಾಡಿರುವುದು ಒಂದು ಸಾಧನೆಯಾಗಿದೆ. ಮಂಡಳಿಯ ಈ ಹಿಂದಿನ ಯೋಜನೆಯಂತೆ ದಕ್ಷಿಣ ಕನ್ನಡದಲ್ಲಿ ಚಟುವಟಿಕೆಗಳನ್ನು ವಿಸ್ತರಿಸುವ ಪ್ರಯುಕ್ತ ಮಂಗಳೂರು ಸಮೀಪ ಮೂಡಾ ಸಂಸ್ಥೆಯಿಂದ ಭೂಮಿಯನ್ನು ಖರೀದಿಸಲಾಗಿದ್ದು, ಶೀಘ್ರವೇ ಇಲ್ಲಿನ ಯೋಜನೆಯ ಬಗ್ಗೆ ಯೋಗ್ಯ ನಿರ್ಧಾರವನ್ನು ಮಂಡಳಿಯ ಆಡಳಿತ ಸಮಿತಿಯು ತೆಗೆದುಕೊಳ್ಳಲಿದೆ ಎಂದು ಮಾಹಿತಿಯನ್ನು ನೀಡಿದ ಅವರು, ಮಹಾಸಭೆಯು ಯೋಗ್ಯ ರೀತಿಯಲ್ಲಿ ನಡೆಯಲು ಸಹಕಾರ ನೀಡಿದ ಸದಸ್ಯರೆಲ್ಲರಿಗೂ ಕೃತಜ್ಞತೆ ವ್ಯಕ್ತಪಡಿಸಿದರು.

ಜೊತೆ ಕಾರ್ಯದರ್ಶಿ ಬೋಳೂರು ಲಕ್ಷ್ಮಣ ಶ್ರೀಯಾನ್‌ ಅವರು ಮಂಡಳಿಯ ಸದಸ್ಯರಿಗೆ, ದಾನಿಗಳಿಗೆ, ಗ್ರಾಮ ಸಭೆ, ಮೂಲಸ್ಥಾನ ಸಭೆ, ಹೋಬಳಿ ಸಭೆ, ಮಹಾಲಕ್ಷ್ಮಿ ಸೊಸೈಟಿ ಮತ್ತು ಇತರ ಸಂಸ್ಥೆಗಳಿಗೆ, ಸುದ್ದಿ ಮಾಧ್ಯಮಗಳಿಗೆ ಹಾಗೂ ಮಂಡಳಿಯ ಹಿತೈಷಿಗಳೆಲ್ಲರಿಗೂ ಧನ್ಯವಾದ ಅರ್ಪಿಸಿದರು.

ವೇದಿಕೆಯಲ್ಲಿ ಮಂಡಳಿಯ ಪಾರುಪತ್ಯದಾರರಾದ ಪಡುಬಿದ್ರಿ ಕಾಡಿಪಟ್ಲ ಜಿ.ಕೆ. ರಮೇಶ್‌, ಹೊಸಬೆಟ್ಟು ಪುರಂದರ ಎನ್‌. ಸುವರ್ಣ, ಬೆಂಗ್ರೆ ಅಜಿತ್‌ ಜಿ. ಸುವರ್ಣ, ಉಪಾಧ್ಯಕ್ಷರಾದ ಬಪ್ಪನಾಡು ಶ್ರೀನಿವಾಸ ಸುವರ್ಣ ಮತ್ತು ದೊಡ್ಡಕೊಪ್ಲ ಅರವಿಂದ ಎಲ್‌.ಕಾಂಚನ್‌, ಗೌರವ ಪ್ರಧಾನ ಕಾರ್ಯದರ್ಶಿ ನೇಜಾರ್‌ ಸಂಜೀವ ಕೆ. ಸಾಲ್ಯಾನ್‌, ಜೊತೆ ಕಾರ್ಯದರ್ಶಿ ಬೋಳೂರು ಲಕ್ಷ್ಮಣ ಶ್ರೀಯಾನ್‌, ಕದಿಕೆ ದೇವರಾಜ್‌ ಎಚ್‌. ಕುಂದರ್‌, ಬೈಕಂಪಾಡಿ ಧರ್ಮೇಶ್‌ ಜಿ. ಪುತ್ರನ್‌, ಗೌರವ ಕೋಶಾಧಿಕಾರಿ ಬಪ್ಪನಾಡು ದಿಲೀಪ್‌ ಕುಮಾರ್‌ ಮೂಲ್ಕಿ,  ಜೊತೆ ಕೋಶಾಧಿಕಾರಿ ಬೊಕ್ಕಪಟ್ಲ ನೀತಾ ಜೆ. ಮೆಂಡನ್‌, ಹೊಸಬೆಟ್ಟು ಪ್ರತಾಪ್‌ಕುಮಾರ್‌ ಕರ್ಕೇರ ಮತ್ತು ಮಂಡಳಿಯ ಕಚೇರಿಯ ಅಕೌಂಟ್ಸ್‌ ವಿಭಾಗದ ಮುಖ್ಯಸ್ಥೆ ಜಯಲತಾ ಉಪಸ್ಥಿತರಿದ್ದರು.ರಾಷ್ಟ್ರಗೀತೆ ಯೊಂದಿಗೆ ಸಭೆಯು ಮುಕ್ತಾಯ ಗೊಂಡಿತು.

ಟಾಪ್ ನ್ಯೂಸ್

Manipu: ಸಿಎಂ ಬಿರೇನ್‌ ಸಿಂಗ್‌ ಮನೆಗೆ ನುಗ್ಗಲು ಯತ್ನಿಸಿದ ಗುಂಪು; ಹೆಚ್ಚಿದ ಹಿಂಸಾಚಾರ

Manipur: ಸಿಎಂ ಬಿರೇನ್‌ ಸಿಂಗ್‌ ಮನೆಗೆ ನುಗ್ಗಲು ಯತ್ನಿಸಿದ ಗುಂಪು; ಹೆಚ್ಚಿದ ಹಿಂಸಾಚಾರ

DK-Shivakumar

Racial Remark: ಕುಮಾರಸ್ವಾಮಿಯವರ “ಕರಿಯ” ಎಂದದ್ದು ತಪ್ಪು: ಡಿ.ಕೆ.ಶಿವಕುಮಾರ್‌

MNG-hosp

Mangaluru: ವೆನ್ಲಾಕ್‌ ಆಸ್ಪತ್ರೆ 10 ಕೋಟಿ ರೂ. ವೆಚ್ಚದಲ್ಲಿ ಆಧುನೀಕರಣ: ಸಚಿವ ದಿನೇಶ್‌

Jameer

Illegal Property Case: ಸಚಿವ ಜಮೀರ್‌ ಅಹ್ಮದ್‌ಖಾನ್‌ಗೆ ಲೋಕಾಯುಕ್ತದಿಂದ ನೋಟಿಸ್‌

Gsat20

Space Science: ಸ್ಪೇಸ್‌ಎಕ್ಸ್‌ನಿಂದ ಮೊದಲ ಬಾರಿ ಇಸ್ರೋ ಉಪಗ್ರಹ ನಭಕ್ಕೆ!

Yathanaa

Waqf Issue: ಮೂರು ತಂಡ ರಚನೆಗೆ ಅವ್ವ-ಅಪ್ಪ ಏನೂ ಇಲ್ಲ: ಬಸನಗೌಡ ಪಾಟೀಲ್‌ ಯತ್ನಾಳ್‌ ಆಕ್ಷೇಪ

1-jenu

GKVK Research; ಇನ್ನು ಜೇನು ಗೂಡು ಕಟ್ಟಬೇಕಿಲ್ಲ: 3ಡಿ ಗೂಡು ಆವಿಷ್ಕಾರ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Desi Swara: ಲಕ್ಸಂಬರ್ಗ್‌ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ

Desi Swara: ಲಕ್ಸಂಬರ್ಗ್‌ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ

ಇಂಗ್ಲೆಂಡ್‌ನ‌ ರಾದರಮ್‌ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ

ಇಂಗ್ಲೆಂಡ್‌ನ‌ ರಾದರಮ್‌ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’

Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’

Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್‌

Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್‌

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

Manipu: ಸಿಎಂ ಬಿರೇನ್‌ ಸಿಂಗ್‌ ಮನೆಗೆ ನುಗ್ಗಲು ಯತ್ನಿಸಿದ ಗುಂಪು; ಹೆಚ್ಚಿದ ಹಿಂಸಾಚಾರ

Manipur: ಸಿಎಂ ಬಿರೇನ್‌ ಸಿಂಗ್‌ ಮನೆಗೆ ನುಗ್ಗಲು ಯತ್ನಿಸಿದ ಗುಂಪು; ಹೆಚ್ಚಿದ ಹಿಂಸಾಚಾರ

DK-Shivakumar

Racial Remark: ಕುಮಾರಸ್ವಾಮಿಯವರ “ಕರಿಯ” ಎಂದದ್ದು ತಪ್ಪು: ಡಿ.ಕೆ.ಶಿವಕುಮಾರ್‌

Jameer

Illegal Property Case: ಸಚಿವ ಜಮೀರ್‌ ಅಹ್ಮದ್‌ಖಾನ್‌ಗೆ ಲೋಕಾಯುಕ್ತದಿಂದ ನೋಟಿಸ್‌

MNG-hosp

Mangaluru: ವೆನ್ಲಾಕ್‌ ಆಸ್ಪತ್ರೆ 10 ಕೋಟಿ ರೂ. ವೆಚ್ಚದಲ್ಲಿ ಆಧುನೀಕರಣ: ಸಚಿವ ದಿನೇಶ್‌

Gsat20

Space Science: ಸ್ಪೇಸ್‌ಎಕ್ಸ್‌ನಿಂದ ಮೊದಲ ಬಾರಿ ಇಸ್ರೋ ಉಪಗ್ರಹ ನಭಕ್ಕೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.