ಡಾ|ಮೀನಾಕ್ಷೀ ,ಡಾ|ಜಿ.ಪಿ.ಕುಸುಮಾರಿಗೆ ಮೊಗವೀರ ಸಾಧನಾ ಪ್ರಶಸ್ತಿ

Team Udayavani, Mar 6, 2018, 3:44 PM IST

55.jpg

 ಮುಂಬಯಿ: ದಕ್ಷಿಣ ಕನ್ನಡ ಜಿಲ್ಲೆಯ ಮೊಗವೀರ ಯುವ ವೇದಿಕೆಯ ವಾರ್ಷಿಕ ಮೊಗವೀರ ಸಾಧನಾ ಪ್ರಶಸ್ತಿಗೆ ಸಾಂಸ್ಕೃತಿಕ ಕ್ಷೇತ್ರದ ಸಾಧಕಿ, ಅರುಣೋದಯ ಕಲಾನಿಕೇತನ ಮುಂಬಯಿ ಇದರ ನೃತ್ಯ ಗುರು, ನಿರ್ದೇಶಕಿ ಡಾ| ಮೀನಾಕ್ಷೀ ರಾಜು ಶ್ರೀಯಾನ್‌ ಮತ್ತು ಸಾಹಿತ್ಯ ಕ್ಷೇತ್ರದ ಸಾಧಕಿ ಡಾ| ಜಿ. ಪಿ. ಕುಸುಮಾ ಇವರು ಆಯ್ಕೆಯಾಗಿದ್ದಾರೆ.

ಅದೇ ರೀತಿ ಕ್ರೀಡಾ ಕ್ಷೇತ್ರದ ಸಾಧಕ ಕಮಲಾಕ್ಷ ಅಮೀನ್‌ ಬೋಳಾರ, ವೈದ್ಯಕೀಯ ಕ್ಷೇತ್ರದಲ್ಲಿ ಡಾ| ಭರತ್‌ರಾಜ್‌ ಬೊಕ್ಕಪಟ್ಣ ಹಾಗೂ ಮೀನುಗಾರಿಕಾ ಕ್ಷೇತ್ರದ ಸಾಧಕ ರಘುನಾಥ್‌ ಎಸ್‌. ಪುತ್ರನ್‌ ಇವರು ನೇಮಕಗೊಂಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಮೊಗವೀರ ಯುವ ವೇದಿಕೆಯ ವತಿಯಿಂದ ಮೊಗವೀರ ಕುಲಗುರು ಮಾಧವ ಮಂಗಳ ಪೂಜರಾರ ಸವಿನೆನಪಿಗಾಗಿ ಮೊಗವೀರ ಸಾಧನಾ ಪ್ರಶಸ್ತಿಯನ್ನು ಪ್ರತೀ ವರ್ಷ ನೀಡಲಾಗುತ್ತದೆ. ಪ್ರಶಸ್ತಿ ಪ್ರಧಾನ ಸಮಾರಂಭವು ಮಾ. 11 ರಂದು ಸಂಜೆ 6 ರಿಂದ ಬಂಟರ ಭವನ ಸುರತ್ಕಲ್‌ ಇಲ್ಲಿ ನಡೆಯಲಿದೆ.

ಡಾ| ಮೀನಾಕ್ಷೀ  ರಾಜು ಶ್ರೀಯಾನ್‌ 

ನಗರದ ಪ್ರತಿಷ್ಠಿತ ಅರುಣೋ ದಯ ಕಲಾ ನಿಕೇತನದ ನೃತ್ಯ ಗುರು, ನಿರ್ದೇಶಕಿ ಡಾ| ಮೀನಾಕ್ಷೀ ರಾಜು ಶ್ರೀಯಾನ್‌ ಇವರದ್ದು ಅಪ್ರತಿಮ ಪ್ರತಿಭೆ. ನಾಟ್ಯವನ್ನೇ ಉಸಿರಾಗಿಸಿಕೊಂಡು ಕಳೆದ ಐದು ದಶಕಗಳ ಹಿಂದೆ ಸ್ಥಾಪನೆಗೊಂಡ ಸಂಸ್ಥೆಯನ್ನು ಇಂದಿಗೂ ಅಚ್ಚುಕಟ್ಟಾಗಿ ಮುನ್ನಡೆಸುತ್ತಿರುವ ಮೀನಾಕ್ಷೀ ರಾಜು ಶ್ರೀಯಾನ್‌ ಇವರು ಸಾವಿರಾರು ಮಕ್ಕಳಿಗೆ ಜಾತಿ, ಮತ, ಭೇದವನ್ನು ಮರೆತು ಭರತನಾಟ್ಯ ಹಾಗೂ ಇನ್ನಿತರ ನೃತ್ಯ ಪ್ರಕಾರಗಳನ್ನು  ಧಾರೆ ಎರೆಯುತ್ತಿದ್ದಾರೆ. ಮುಂಬಯಿ ಸೇರಿದಂತೆ ಇನ್ನಿತರ ಉಪನಗರಗಳಲ್ಲಿ ಶಾಖೆಗಳನ್ನು ಹೊಂದಿರುವುದಲ್ಲದೆ, ಪ್ರತೀ ವರ್ಷ ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸಿ ಮಕ್ಕಳಿಗೆ ವೇದಿಕೆಯನ್ನು ಕಲ್ಪಿಸಿಕೊಡುತ್ತಿದ್ದಾರೆ.
ಇವರ ಹಲವಾರು ಶಿಷ್ಯೆಯಂದಿರು ವಿದೇಶದಲ್ಲಿ ನೆಲೆಸಿ ಭಾರತೀಯ ಸಂಸ್ಕೃತಿಯನ್ನು ಬಿಂಬಿಸುವ ಭರತನಾಟ್ಯವನ್ನು ವಿದೇಶಿಯರಿಗೆ ಕಲಿಸಿಕೊಡುತ್ತಿದ್ದಾರೆ. ದೇಶದ ವಿವಿಧ ರಾಜ್ಯಗಳು ಸೇರಿದಂತೆ ವಿದೇಶಿ ನೆಲದಲ್ಲೂ ನೃತ್ಯ ರೂಪಕ ಸೇರಿದಂತೆ ವೈವಿಧ್ಯಮಯ ನೃತ್ಯ ಪ್ರಕಾರಗಳನ್ನು ಪ್ರದರ್ಶಿಸಿದ ಹೆಗ್ಗಳಿಕೆ ಡಾ| ಮೀನಾಕ್ಷೀ ರಾಜು ಶ್ರೀಯಾನ್‌ ಇವರದ್ದಾಗಿದೆ. ಮೀನಾಕ್ಷೀ ರಾಜು ಶ್ರೀಯಾನ್‌ ಇವರು ಉತ್ತಮ ಸಂಘಟಕಿಯಾಗಿಯೂ ಹೆಸರು ಮಾಡಿದವರು. ಅವರ ಸಿದ್ಧಿ-ಸಾಧನೆಗಳಿಗೆ ರಾಷ್ಟ್ರೀಯ, ಅಂತಾರಾಷ್ಟ್ರೀಯ ಪ್ರಶಸ್ತಿಗಳಲ್ಲದೆ, ವಿವಿಧ ಜಾತೀಯ, ತುಳು- ಕನ್ನಡಪರ ಸಂಘಟನೆಗಳ ಸಮ್ಮಾನ- ಪುರಸ್ಕಾರಗಳು ಲಭಿಸಿವೆ.

ಡಾ| ಜಿ. ಪಿ. ಕುಸುಮಾ 
ಮುಂಬಯಿ  ವಿಶ್ವ ವಿದ್ಯಾಲ ಯದ ಎಂ.ಎ, ಎಂ.ಫಿಲ್‌, ಪಿಎಚ್‌.ಡಿ ಪದವಿ ಪಡೆದಿರುವ ಜಿ. ಪಿ. ಕುಸುಮಾ  ಅವರು ಕವಯತ್ರಿ, ಲೇಖಕಿ, ಅನು ವಾದಕಿ, ರಂಗನಟಿಯಾಗಿ ಮುಂಬಯಿ ಕನ್ನಡಿಗರ ಸಾಂಸ್ಕೃತಿಕ  ಬದುಕಿನಲ್ಲಿ ಹಾಸು ಹೊಕ್ಕಾಗಿದ್ದಾರೆ. ತುಳು-ಕನ್ನಡ ಎರಡೂ ಭಾಷೆಯಲ್ಲಿ ಸಾಹಿತ್ಯ  ಕೃಷಿ ಮಾಡುತ್ತಿರುವ ಇವರು ಮುಂಬಯಿಯ ಸಿಟಿ ಸಿವಿಲ್‌ ಮತ್ತು ಸೆಶನ್‌ ಕೋರ್ಟಿನಲ್ಲಿ ಉದ್ಯೋಗಿಯಾಗಿದ್ದಾರೆ. ಅಖೀಲ ಭಾರತ ಸಾಹಿತ್ಯ ಸಮ್ಮೇಳನವೂ ಸೇರಿದಂತೆ ಅನೇಕ ಸಂಘ-ಸಂಸ್ಥೆಗಳಲ್ಲಿ ತಮ್ಮ ಕವನ ಮತ್ತು ಪ್ರಬಂಧ ಮಂಡನೆಯನ್ನು ಮಾಡಿದ್ದಾರೆ. ಹಲವಾರು ಪ್ರಶಸ್ತಿ, ಪ್ರತಿಭಾ ಪುರಸ್ಕಾರ ಗಳನ್ನು ಪಡೆದುಕೊಂಡಿದ್ದಾರೆ.

ಟಾಪ್ ನ್ಯೂಸ್

am

Recipe: ಆರೋಗ್ಯಕ್ಕೆ ಅಮೃತ, ರುಚಿಗೆ ಅದ್ಭುತ ಈ ಚಟ್ನಿ!ಒಂದ್ಸಲ ಈ ವಿಧಾನದಲ್ಲಿ ಟ್ರೈ ಮಾಡಿ…

1-maha-kumbha

Mahakumbh 2025: 45 ಕೋಟಿ ಯಾತ್ರಾರ್ಥಿಗಳ ನಿರೀಕ್ಷೆ

Travis Head made a controversial statement about BCCI

INDvAUS: ಬಿಸಿಸಿಐ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ರಾ ಟ್ರಾವಿಸ್‌ ಹೆಡ್? Video

Sheikh ಹಸೀನಾರನ್ನು‌ ಬಾಂಗ್ಲಾದೇಶಕ್ಕೆ ವಾಪಸ್‌ ಕಳುಹಿಸಿ: ಭಾರತಕ್ಕೆ ಬಾಂಗ್ಲಾ ಮನವಿ

Sheikh ಹಸೀನಾರನ್ನು‌ ಬಾಂಗ್ಲಾದೇಶಕ್ಕೆ ವಾಪಸ್‌ ಕಳುಹಿಸಿ: ಭಾರತಕ್ಕೆ ಬಾಂಗ್ಲಾ ಮನವಿ

1-qwqwewq

Seema Haider; 4 ಮಕ್ಕಳೊಂದಿಗೆ ಭಾರತಕ್ಕೆ ಬಂದಿದ್ದ ಸೀಮಾ ಈಗ ಗರ್ಭಿಣಿ!!

ಆಯನೂರು ಮಂಜುನಾಥ್

Shimoga; ನಿತ್ಯ ಸುದ್ದಿಯಲ್ಲಿರಬೇಕೆಂದು ಸಿ.ಟಿ ರವಿ ʼಆʼ ಹೇಳಿಕೆ ನೀಡಿದ್ದಾರೆ: ಆಯನೂರು

Tragedy: ಆನೆ ತುಳಿದು ಮಾವುತನ ಸಹಾಯಕ ಮೃತ್ಯು… ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ

Tragedy: ಆನೆ ತುಳಿದು ಮಾವುತನ ಸಹಾಯಕ ಮೃತ್ಯು… ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸರಣ ಘಟಕಕ್ಕೆ ಗ್ರಹಣ!

ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!

ಕತಾರ್‌:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್‌ ಶಹನ ಜತೆ ಸಂವಾದ

ಕತಾರ್‌:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್‌ ಶಹನ ಜತೆ ಸಂವಾದ

ಬಹ್ರೈನ್‌ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್‌ ಅಬ್ಬರ-ಕ್ರಿಕೆಟ್‌ ಪ್ರೇಮಿಗಳ ಮೆಚ್ಚುಗೆ

ಬಹ್ರೈನ್‌ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್‌ ಅಬ್ಬರ-ಕ್ರಿಕೆಟ್‌ ಪ್ರೇಮಿಗಳ ಮೆಚ್ಚುಗೆ

Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ 

Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ 

ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!

ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Rachel David hope on Unlock Raghava Movie

Unlock Raghava Movie: ರಾಘವನ ಮೇಲೆ ಕಣ್ಣಿಟ್ಟ ರಚೆಲ್‌

am

Recipe: ಆರೋಗ್ಯಕ್ಕೆ ಅಮೃತ, ರುಚಿಗೆ ಅದ್ಭುತ ಈ ಚಟ್ನಿ!ಒಂದ್ಸಲ ಈ ವಿಧಾನದಲ್ಲಿ ಟ್ರೈ ಮಾಡಿ…

ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸರಣ ಘಟಕಕ್ಕೆ ಗ್ರಹಣ!

ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!

1-maha-kumbha

Mahakumbh 2025: 45 ಕೋಟಿ ಯಾತ್ರಾರ್ಥಿಗಳ ನಿರೀಕ್ಷೆ

Travis Head made a controversial statement about BCCI

INDvAUS: ಬಿಸಿಸಿಐ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ರಾ ಟ್ರಾವಿಸ್‌ ಹೆಡ್? Video

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.