ಮಾ.11:ಮುಂಬಯಿ ಮೊಗವೀರ ಯಕ್ಷಕಲಾ ವೇದಿಕೆ-ಯಕ್ಷ ರಸದೌತಣ 


Team Udayavani, Mar 6, 2018, 12:44 PM IST

yksh_hotelkhoj.jpg

ಮೊಗವೀರರೆಂದರೆ ಕೇವಲ ಕಡಲಲ್ಲಿ ಮೀನುಗಾರಿಕೆಗೆ ಸೀಮಿತ ಎಂಬ ಅಭಿಪ್ರಾಯ ಒಂದಿತ್ತು. ಆದರೆ ಆ ನಂತರದಲ್ಲಿ ನಡೆದ ಗಮನಾರ್ಹ ಸಾಮಾಜಿಕ ಸ್ಥಿತ್ಯಂತರದೊಂದಿಗೆ ಮೊಗವೀರ ಜನಾಂಗದವರು ಕೇವಲ ಕಡಲಿಗಷ್ಟೇ ಸೀಮಿತವಾಗಿರದೆ ತಮ್ಮ ಬದುಕನ್ನು ವಿಸ್ತಾರ ತಳಹದಿಯಲ್ಲಿ ಭದ್ರಪಡಿಸಿಕೊಂಡರು. ಕರಾವಳಿಯ ಸಾಂಸ್ಕೃತಿಕ ರಂಗದ ಶಿಖರ ಪ್ರಾಯದಲ್ಲಿರುವ ಯಕ್ಷಗಾನ ರಂಗಕ್ಕೂ ಮೊಗವೀರರು ಪ್ರವೇಶಗೈಯುವ ತನ್ಮೂಲಕ ತಮ್ಮ ಜೀವನದಲ್ಲಿ ಹೊಸ ಅಧ್ಯಾಯಕ್ಕೊಂದು ಮೈಲುಗಲ್ಲು ಹಾಕಿದರು. ಈ ಜಗದ ಬಹುತೇಕ ಬಯಲಾಟ ಹಾಗು ಡೇರೆ ಮೇಳಗಳಲ್ಲಿ ತಮ್ಮತನವನ್ನು ತೋರ್ಪಡಿಸುವಲ್ಲಿ ಯಶಸ್ವಿಯಾದುದು ಈಗ ಇತಿಹಾಸ.

ಈ ಎಲ್ಲಾ ಹಿನ್ನೆಲೆಯಲ್ಲಿ ಕರ್ನಾಟಕ ಕರಾವಳಿಯ ಶ್ರೀಮಂತ ಕಲೆಯಾದ ಉಡುಪಿ ಜಿಲ್ಲೆಯ ಯಕ್ಷಗಾನ ಬಡಗುತಿಟ್ಟಿಗೆ ಮೊಗವೀರ ವೃತ್ತಿ ಕಲಾವಿದರ ಪರಂಪರೆ ಬಹಳ ದೊಡ್ಡದಾಗಿದೆ. ಇತ್ತೀಚೆಗೆ ಮೊಗವೀರ ಕಲಾವಿದರಲ್ಲಿ ಮೊತ್ತ ಮೊದಲನೆಯದಾಗಿ ನೆನಪಿರುವ ದೊಡ್ಡ ಹೆಸರು ದಿ| ಕೊಳ್ಕೆಬೈಲು ಹಿರಿಯ ನಾಯ್ಕ, ಕೊಳ್ಕೆಬೈಲು ಶೀನ ನಾಯ್ಕ, ಶಿರಿಯಾರ ಮಂಜು ನಾಯ್ಕ ಇವರು ರಂಗಸ್ಥಳದ ಮಾತುಗಾರಿಕೆಗೆ ಹೊಸ ಆಯಾಮವನ್ನು ಕೊಟ್ಟು ದಾಖಲೀಕರಣ ಮಾಡಿದವರೆಂದು ಹೇಳಿದರೆ ಸತ್ಯಕ್ಕೆ ಹತ್ತಿರವಾದ ಮಾತಾಗುತ್ತದೆ. ಕೊಳ್ಕೆಬೈಲು ಶೀನ ನಾಯ್ಕ ಅಂಗದ, ವೀರಭದ್ರ ನಾಯ್ಕರ ಪ್ರಾಹಸ್ತ, ಹಾರಾಡಿಯವರ ಹಿರಣ್ಯಕಶುಪು, ಕೊಳ್ಕೆಬೈಲು ಶೀನ ನಾಯ್ಕ ಕೈಯಾದು. ಈ ಹಳೆ ತಲೆಮಾರಿನ ಕಲಾಭಿಮಾನಿಗಳನ್ನು ಈಗಲೂ ಮೆಲುಕು ಹಾಕುತ್ತಾರೆ. ಇದೊಂದು ದಂತ ಕತೆಯಾಗಿದೆ.

ಶಿರಿಯಾರವರ ಪೌರಾಣಿಕ ಎಲ್ಲ ಪ್ರಸಂಗದ ಕೃಷ್ಣನ ಪಾತ್ರ ಅವರಿಗೆ ಮೀಸಲು. ಶ್ರೀಯತರ ಬಾಲ ಭೀಷ್ಮ, ಸುದನ್ವ, ಶತಕೀರ್ತಿ ಹೊಸ ಪ್ರಸಂಗದ ಚಾರುದತ್ತ, ಶುಭಾಂಗ ಹೀಗೆ ಅನೇಕ ವೈವಿಧ್ಯ ಪಾತ್ರಗಳು ಅವಿಸ್ಮರಣೀಯ. ಅವರ ಶ್ರುತಿ, ರಂಗದ ಕಲೆ, ಸ್ವಗತ, ಸಂವಾದ, ಸಮಾರೋಪ ಅಷ್ಟು ಚೆನ್ನಾಗಿ ಅಚ್ಚುಕಟ್ಟಾಗಿ ನಿರ್ವಹಿಸುವವರು ಇಲ್ಲವೆಂದರೂ ಅತಿಶಯೋಕ್ತಿಯಲ್ಲ. ಅಂತಹ ಮಹಾನ್‌ ಕಲಾವಿದ ಪರಶುರಾಮನ ವೇಷದಲ್ಲಿ ಇಹಲೋಕ ಯಾತ್ರೆ ಮುಗಿಸಿರುವುದು ಕಲಾಪ್ರಪಂಚದಲ್ಲಿ ಸುವರ್ಣಾಕ್ಷರದಲ್ಲಿ ಬರೆದಿರುವಂತಹದ್ದಾಗಿದೆ. ಮೊಗವೀರ ಯುಗಪುರುಷ ಡಾ| ಜಿ. ಶಂಕರ್‌ ಅವರು ಪ್ರತೀ ವರ್ಷ ಯಕ್ಷಗಾನದ ಹತ್ತು ಕಲಾವಿದರನ್ನು ಆಯ್ಕೆ ಮಾಡಿ ರೂ. 25 ಸಾವಿರ ರೂ. ನಗದು ಪುರಸ್ಕಾರ ನೀಡುತ್ತಿರುವುದು ಅಭಿನಂದನೀಯ.

ಪ್ರಸಾದ್‌ ಕುಮಾರ್‌ ಮೊಗೆಬೆಟ್ಟು ಹಾಗೂ ಶಿರಿಯಾರ ಮಂಜುನಾಥಯ್ಯರ ಪುತ್ರ ರಮೇಶ್ಮಂಜು ಯಕ್ಷಗಾನದ ಪ್ರಸಂಗ ಕಾರ್ಯಕರ್ತರಾಗಿ ಮಿಂಚುತ್ತಿರುವುದು ಮೊಗವೀರರಿಗೆ ಹೆಮ್ಮೆಯ ವಿಷಯವಾಗಿದೆ. ಅವರ ಸಮಕಾಲೀನ ದಿ| ಗುಂಡ್ಮಿ ಶೀನ ನಾಯ್ಕ, ಹಳ್ಳಾಡಿ ಶೀನ ನಾಯ್ಕ, ಉಪ್ಪಿನಕೋಟೆ ಸಂಕ, ಶಿರೂರು ರಾಮ, ಶಿರಿಮಠ ಪಂಜು ನಾಯ್ಕ, ಆನಗಳ್ಳಿ ಹಾಸ್ಯಗಾರ ನಾರಾಯಣ ನಾಯ್ಕ, ಹಿರಿಯಡಪR ರಾಮ, ಬೇಳೂ¤ರು ಕುಷ್ಠ, ಸುಳುಗೋಡು ನಾರಾಯಣ ಇವರೆಲ್ಲಾ ಖ್ಯಾತ ನಾಮಾಂಕಿತರು.

ದಿ| ಕೋಟ ವೈಕುಂಠ ಸ್ತಿÅà ಪಾತ್ರದಲ್ಲಿ ಅದ್ವಿತೀಯರು. ಹಳ್ಳಾಡಿ ಕೃಷ್ಣಪ್ಪ, ದಿ| ಮೊಳಹಳ್ಳಿ ಹಿರಿಯ ನಾಯ್ಕ, ದಿ| ಅರಾಟೆ ಮಂಜುನಾಥ ಪ್ರಥಮ ಸ್ತಿÅà ಪಾತ್ರಧಾರಿ, ಮೊಗವೀರ ಜಾತಿಯಲ್ಲೇ ಯಕ್ಷಗಾನದಲ್ಲಿ ಪ್ರಪ್ರಥಮ ರಾಜ್ಯ ಪ್ರಶಸ್ತಿ ಪುರಸ್ಕೃತರು. ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಸದಸ್ಯರು. ಎಂ. ವಿ. ನಾಯ್ಕ, ಬೇಗಾರು ಶಿವಕುಮಾರ, ವಂಡಾರು ಗೋವಿಂದ ಪ್ರಧಾನ ಸ್ತಿÅà ಭೂಮಿಕೆಯಲ್ಲಿದ್ದಾರೆ.

ಜಮದಗ್ನಿ ಶೀನ, ಬೇಲೂ¤ರು ರಮೇಶ್‌, ಕೋಟ ಸುರೇಶ್‌, ಬೆದ್ರಾಡಿ ನರಸಿಂಹ, ಬೆದ್ರಾಡಿ ಶಂಭು ಕುಮಾರ್‌, ಆಲೂರು ಸುರೇಂದ್ರ, ಆಲೂರು ತೇಜ, ಹಳ್ಳಾಡಿ ಕೃಷ್ಣ, ಸುಳುಗೋಡು ನಾರಾಯಣ, ಎತ್ತಿನಟ್ಟಿ ಭೋಜ, ಮೊಗೆಬೆಟ್ಟು ಶಂಕರ, ಮಾನ್ಯ ನರಸಿಂಹ, ಸೌಡ ಗೋಪಾಲ, ಕೋಟ ಉದಯ, ಲಕ್ಷ್ಮಣ್‌ ಕಾಂಚನ್‌, ಕೆರಾಡಿ ಕೃಷ್ಣ, ಮೊಳಹಳ್ಳಿ ಕೃಷ್ಣ, ಶಿರೂರು ಬಸವ, ನಡೂರು ದಿನಕರ, ಬಿಜೂರು ನಾರಾಯಣ, ಮಾರ್ವಿ ಗೋವಿಂದ, ಹೆಬ್ಬೆರುಳಿ ಚಂದ್ರ, ಬಾಕೂìರು ಸಂತೋಷ್‌, ಆರ್ಡಿ ಮಂಜುನಾಥ, ನಾಗಪ್ಪ ಹೊಳಮೊಗೆ, ಸತೀಶ್‌ ಜಪ್ತಿ, ಪ್ರಭಾಕರ, ಹಾಲಾಡಿ ಕೃಷ್ಣ ಇವರೆಲ್ಲ ಮುಮ್ಮೇಳದ ಕಲಾವಿದರು.

ಹಿಮ್ಮೇಳದಲ್ಲಿ ಭಾಗವತ ಸದಾಶಿವ ಅಮೀನ್‌ ಕೊಕ್ಕರ್ಣೆ, ಉಮೇಶ್‌ ಸುವರ್ಣ ಬೀಜಾಡಿ, ಆನಂದ ಕುಂದರ್‌ ಕೋಟ, ರಾಘವೇಂದ್ರ ಬಾರಾಳಿ, ಮದ್ದಳೆವಾದಕ ಮಹೇಶ್‌ ಕುಮಾರ್‌ ಮಂದಾರ್ತಿ, ಚೆಂಡೆವಾದಕ ಬಸವ ಮರಕಲ, ಹಳ್ಳಾಡಿ ಕುಮಾರ ಇವರು ದುಡಿದು ವಿಜೃಂಭಿಸಿದ್ದಾರೆ. ಸಮಸ್ತ ಮೊಗವೀರ ಕಲಾವಿದರು ಒಂದೆಡೆ ಸೇರಿ ಸಮಾಲೋಚಿನ ತಮ್ಮೊಳಗೆ ಇರಬಹುದಾದ ಕೀಳರಿಮೆಯನ್ನು ಬಿಟ್ಟು ಮುಸುಕಿನಿಂದ ಹೊರ ಬಂದು ಸಮಾಜದ ಮುಖ್ಯ ವಾಹಿನಿಯಲ್ಲಿ ತಮ್ಮನ್ನು ಗುರುತಿಸಿಕೊಳ್ಳಬೇಕು ಎನ್ನುವುದು ಎಲ್ಲರ ಆಶಯವಾಗಿದೆ.

ಉಡುಪಿ ಜಿಲ್ಲೆ ಕುಂದಾಪುರದ ಎಲ್ಲಾ ಹವ್ಯಾಸಿ ಮೊಗವೀರ ಕಲಾವಿದರನ್ನು ಒಂದು ಗೂಡಿಸಿ ಮೊಗವೀರ ಮಹಿಳಾ ಹಾಗೂ ಪುರುಷ ಕಲಾವಿದರನ್ನು ಒಂದೇ ವೇದಿಕೆಗೆ ತಂದು ಮಾ. 11 ರಂದು ಸಂಜೆ 5.30 ಕ್ಕೆ ಮೊಗವೀರ ಯಕ್ಷಕಲಾ ವೇದಿಕೆ ಮುಂಬಯಿ ಇದರ ವತಿಯಿಂದ ಘಾಟ್‌ಕೋಪರ್‌ ಅಸಲ್ಫಾದ ಶ್ರೀ ದತ್ತಾತ್ರೇಯ ದುರ್ಗಾಂಬಿಕಾ ದೇವಸ್ಥಾನ ಸುಭಾಶ್‌ ನಗರ ಇಲ್ಲಿ ವೀರಮಣಿ ಕಾಳಗ ಹಾಗೂ ಮಾಯಾಪುರಿ ಯಕ್ಷಗಾನವನ್ನು ಪ್ರದರ್ಶಿಸಲಾಗುವುದು. ಮೊಗವೀರ ಮಹಿಳಾ ಮತ್ತು ಪುರುಷ ಕಲಾವಿದರು ಯಕ್ಷ ರಸದೌತಣವನ್ನು ನೀಡಲಿದ್ದಾರೆ. ಅಶ್ವಿ‌ನಿ ಕೊಂಡದಕುಳಿ ಇವರ ನಿರ್ದೇಶನದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಮುಂಬಯಿ ಮೊಗವೀರ ಯಕ್ಷಗಾನ ಪ್ರಥಮ ಪ್ರಯತ್ನವಾಗಲಿದೆ. ಹಿರಿಯ ಕಲಾವಿದ ಬೇಳೂ¤ರು ರಮೇಶ್‌ ಮೊಗವೀರ ಇವರನ್ನು ಸಮಾರಂಭದಲ್ಲಿ ಸಮ್ಮಾನಿಸಲಾಗುವುದು.

ಲೇಖಕ : ಚಂದ್ರ ಕಂಡ್ಲೂರು 

ಟಾಪ್ ನ್ಯೂಸ್

Bengal

Filmmaker Died: ಖ್ಯಾತ ಸಿನಿಮಾ ನಿರ್ದೇಶಕ ಶ್ಯಾಂ ಬೆನಗಲ್‌ ವಿಧಿವಶ

Mangaluru: ವಿಎ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ

Mangaluru: ವಿಎ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ

CTR-Wife-pallavi

ಸುಮ್ನೆ ಬ್ಯಾಂಡೇಜ್‌ ಹಾಕಿಕೊಳ್ಳಲು ಯಾರಿಗೂ ತಲೆ ಕೆಟ್ಟಿಲ್ಲ: ಸಿ.ಟಿ.ರವಿ ಪತ್ನಿ ಪಲ್ಲವಿ

CKM-CTR

ಬಿಜೆಪಿ, ಕಾಂಗ್ರೆಸ್‌ಗೆ ಪ್ರತ್ಯೇಕ ಕಾನೂನಿಲ್ಲ, ನನ್ನ ದೂರಿಗೆ ಕ್ರಮವಿಲ್ಲವೇಕೆ?: ಸಿ.ಟಿ.ರವಿ

Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ

Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ

Road Mishap: ಬೈಕ್‌- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು

Road Mishap: ಬೈಕ್‌- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು

Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು

Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸರಣ ಘಟಕಕ್ಕೆ ಗ್ರಹಣ!

ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!

ಕತಾರ್‌:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್‌ ಶಹನ ಜತೆ ಸಂವಾದ

ಕತಾರ್‌:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್‌ ಶಹನ ಜತೆ ಸಂವಾದ

ಬಹ್ರೈನ್‌ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್‌ ಅಬ್ಬರ-ಕ್ರಿಕೆಟ್‌ ಪ್ರೇಮಿಗಳ ಮೆಚ್ಚುಗೆ

ಬಹ್ರೈನ್‌ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್‌ ಅಬ್ಬರ-ಕ್ರಿಕೆಟ್‌ ಪ್ರೇಮಿಗಳ ಮೆಚ್ಚುಗೆ

Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ 

Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ 

ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!

ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

police crime

Gangolli, Ajekaru; ಮಹಿಳೆಯರಿಗೆ ಜೀವ ಬೆದರಿಕೆ

Bengal

Filmmaker Died: ಖ್ಯಾತ ಸಿನಿಮಾ ನಿರ್ದೇಶಕ ಶ್ಯಾಂ ಬೆನಗಲ್‌ ವಿಧಿವಶ

death

Belthangady : ಸೊಪ್ಪು ತರಲು ಹೋಗಿದ್ದ ವ್ಯಕ್ತಿ ಆಕಸ್ಮಿಕ ಸಾ*ವು

baby

Sullia: ಒಂಟಿಯಾಗಿ ಪತ್ತೆಯಾದ ಮಗು ಪೋಷಕರ ಮಡಿಲಿಗೆ

Mangaluru: ವಿಎ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ

Mangaluru: ವಿಎ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.