Mogaveera Family; ಶ್ರೀ ಸತ್ಯನಾರಾಯಣ ಪೂಜೆ
Team Udayavani, Sep 9, 2023, 6:43 PM IST
ಮೋಗವೀರ್ಸ್ ಯುಎಇ ವತಿಯಿಂದ ಪ್ರತೀ ವರ್ಷ ಜರಗುವ ಶ್ರೀ ಸತ್ಯನಾರಾಯಣ ಪೂಜೆಯನ್ನು ದುಬೈನ ಜೆ.ಎಸ್.ಎಸ್. ಪ್ರೈವೇಟ್ ಸ್ಕೂಲ್‌ನ ಸಭಾಂಗಣದಲ್ಲಿ ಸೆ.3ರಂದು ಹಮ್ಮಿಕೊಳ್ಳಲಾಗಿತ್ತು. ರಘುಭಟ್ ಅವರ ಪೌರೋಹಿತ್ಯದಲ್ಲಿ ಭಕ್ತಿಪೂರ್ವಕವಾಗಿ ಪೂಜೆಯನ್ನು ನೇರವೇರಿಸಲಾಯಿತು.
ಸಂಘದ ಮಹಿಳಾ ಸದಸ್ಯರು ದೀಪ ಪ್ರಜ್ವಲನೆ ಗೊಳಿಸುವುದರ ಮೂಲಕ ಕಾರ್ಯಕ್ರಮವನ್ನು ಆರಂಭಿಸಲಾಯಿತು. ಹಿರಿಯರಾದ ಸಿಎ ಪ್ರಮೋದ್ ಕುಂದರ್ ಹಾಗೂ ಉಷಾ ಪಿ. ಕುಂದರ್ ದಂಪತಿಗಳು ಪೂಜಾ ಸಂಕಲ್ಪ ಕಾರ್ಯವನ್ನು ನೆರವೇರಿಸಿಕೊಟ್ಟರು. ಸದಸ್ಯರಾದ ಸಚಿನ್ ಗುಜರನ್ ಹಾಗೂ ತಂಡದವರು ಹರಿನಾಮ ಸಂಕೀರ್ತನೆಯನ್ನು ನಡೆಸಿಕೊಟ್ಟರು. ಸಂಘದ ಇತರ ಸದಸ್ಯರು ಮತ್ತು ಮಹಿಳಾ ತಂಡದವರಿಂದ ಕುಣಿತ ಭಜನೆ, ಸ್ಯಾಕೊÕàಫೋನ್ ವಾದ್ಯಬ ಸಂಗೀತ ಕಾರ್ಯಕ್ರಮಗಳು ಜರಗಿದವು. ಪೂಜೆಯ ಕೊನೆಯಲ್ಲಿ ಎಲ್ಲರಿಗೂ ಪ್ರಸಾದವನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಮೊಗವೀರ್ಸ್ ಯುಎಇ ಪದಾಧಿಕಾರಿಗಳಾದ ಸಿಎ ಲೋಕೇಶ್ ಪುತ್ರನ್, ಬಾಲಕೃಷ್ಣ ಸಾಲಿಯಾನ್, ವಿನೋದ್ ಕಾಂಚನ್, ಪುರುಷೋತ್ತಮ್ ಸುವರ್ಣ, ಗೋವರ್ಧನ್ ಸಾಲಿಯಾನ್, ಯತೀಶ್ ಪುತ್ರನ್, ನಿರಂಜನ್ ಪಡುಬಿದ್ರಿ, ಶಶಿಧರ್ ಕೋಟ್ಯಾನ್, ದೀಪಕ್ ರಾಜ್, ಯಶವಿಂದ್ ಬೆಂಗ್ರೆ, ಲೋಹಿತ್ ಮೆಂಡನ್, ಕಿಶೋರ್ ಬಂಗೇರ, ಬಲರಾಮ್, ಬಲರಾಜ್ ಮತ್ತು ಮಹಿಳಾ ಸದಸ್ಯರಾದ ನೀತಾ ಎಲ್. ಪುತ್ರನ್, ಲಕ್ಷ್ಮೀ ಬಿ. ಸಾಲಿಯಾನ್, ನಳಿನಿ ದೀಪಕ್, ಸುಪ್ರಿಯಾ ವಿ. ಕಾಂಚನ್ ಮುಂತಾದವರು ಉಪಸ್ಥಿತರಿದ್ದರು. ಸುಮಾರು ಐನೂರಕ್ಕೂಹೆಚ್ಚು ಭಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು
ಅಬುಧಾಬಿ ಹಿಂದೂ ಮಂದಿರದಲ್ಲಿ ಪ್ರಥಮ ದೀಪಾವಳಿ ಸಂಭ್ರಮ
ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Sky Force: ಭಾರತದ ಮೊದಲ ವೈಮಾನಿಕ ದಾಳಿಯ ʼಸ್ಕೈ ಫೋರ್ಸ್ʼ ಟ್ರೇಲರ್ ಔಟ್- ಮಿಂಚಿದ ಅಕ್ಷಯ್
Doddaballapura: ಘಾಟಿ ಕ್ಷೇತ್ರದಲ್ಲಿ ಶ್ರೀ ಸುಬ್ರಹ್ಮಣ್ಯಸ್ವಾಮಿ ಬ್ರಹ್ಮ ರಥೋತ್ಸವ
Naxalite: ಮುಂಡಗಾರು ಲತಾ ಸೇರಿ ಆರು ನಕ್ಸಲರು ಶೀಘ್ರ ಮುಖ್ಯವಾಹಿನಿಗೆ: ಪ್ರಕ್ರಿಯೆ ಚುರುಕು
Hunsur: ಬ್ಯಾರಿಕೇಡ್ ಗೆ ಸಿಲುಕಿದ ಗಜರಾಜ
Heart Rate Control: ಹೃದಯ ಬಡಿತದ ನಿಯಂತ್ರಣದಲ್ಲಿ ಆಧುನಿಕ ಹೃದಯ ಲಯ ಸಾಧನಗಳ ಅಗತ್ಯ ಪಾತ್ರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.