ಮೂಲ್ಕಿ ಸುಂದರ್‌ ರಾಮ ಶೆಟ್ಟಿ ಸಭಾ ಭವನ ನಿರ್ಮಾಣ: ಪುಣೆಯಲ್ಲಿ ಸಭೆ


Team Udayavani, Sep 16, 2018, 4:55 PM IST

1409mum11.jpg

ಪುಣೆ: ಮೂಲ್ಕಿ ಸುಂದರ್‌ ರಾಮ ಶೆಟ್ಟಿಯವರು ಇಡೀ ಬಂಟ ಸಮುದಾಯವನ್ನು ಉದ್ಧರಿಸಿದ ಮಹಾನುಭಾವರಾಗಿದ್ದಾರೆ. ಒಂದು ಕಾಲದಲ್ಲಿ ಭೂಮಸೂದೆಯಿಂದ ಬಂಟ ಸಮುದಾಯವು ಕಂಗಾಲಾಗಿದ್ದ ಸಂದರ್ಭದಲ್ಲಿ ಸಮಾಜದ ಪ್ರತಿಯೊಬ್ಬರ ಮನೆಯಿಂದ ಒಬ್ಬರಿಗೆ ಕರೆದು ವಿಜಯಾ ಬ್ಯಾಂಕಿನಲ್ಲಿ  ಕೆಲಸ ಕೊಡಿಸಿ ಬಾಳಿಗೆ ಆಸರೆಯಾಗಿ ಬೆಳಕನ್ನು  ನೀಡಿದವರು ಸುಂದರ್‌ರಾಮ್‌ ಶೆಟ್ಟಿಯವರಾಗಿದ್ದಾರೆ. ನಮ್ಮ ಸಮಾಜದ ಅಭ್ಯುದಯದ ಏಕೈಕ ಉದ್ದೇಶದಿಂದ ಸಮಾಜಕ್ಕೆ ಕೊಡುಗೆ ನೀಡಿದ ಅವರನ್ನು ಸ್ಮರಿಸಿಕೊಂಡು ಅವರ ಬಗ್ಗೆ ಸ್ಮಾರಕವೊಂದನ್ನು ನಿರ್ಮಾಣ ಮಾಡುವಲ್ಲಿ ಸಮಾಜದ ಹಿರಿಯರು, ಹಿತೈಷಿಗಳು ಚಿಂತನ ನಡೆಸಿ ಆ ನಿರ್ಮಾಣದ ಜವಾಬ್ದಾರಿಯನ್ನು ನನಗೆ  ವಹಿಸಿದ್ದು  ಹಿರಿಯರೆಲ್ಲ ಧೈರ್ಯ ತುಂಬಿ¨ªಾರೆ . ಸಮಾಜದ ಪುಣ್ಯದ ಕೆಲಸವೆಂದು ಭಾವಿಸಿ ಈ ಕೆಲಸವನ್ನು ಮುಂದಿನ ಎಪ್ರಿಲ್‌ನಲ್ಲಿ ಪೂರ್ತಿಗೊಳಿಸಿ ಸಮಾಜ ಕ್ಕೋಪ್ಪಿಸುವಲ್ಲಿ ಶ್ರಮಿಸಲಾಗುವುದು. ಈ ಕಾರ್ಯಕ್ಕೆ ಪುಣೆ ಮುಂಬಯಿಯ ಸಮಾಜ ಬಾಂಧವರು ಸುಂದರ್‌ ರಾಮ ಶೆಟ್ಟಿಯವರಿಗೆ ಗೌರವವೆಂಬಂತೆ ತಮ್ಮಿಂದಾದ ನೆರವನ್ನು ನೀಡಿ ಬೆಂಬಲಿಸಬೇಕು ಎಂದು ಗೋಲ್ಡ… ಪಿಂಚ್‌ ಗ್ರೂಪ್‌ ಆಪ್‌ ಹೋಟೆಲ್ಸ…ನ  ಕಾರ್ಯಾಧ್ಯಕ್ಷರಾದ ಕೆ . ಪ್ರಕಾಶ್‌ ಶೆಟ್ಟಿ  ಅವರು ಅಭಿಪ್ರಾಯಿಸಿದರು.

ಸೆ. 11 ರಂದು ನಗರದ ಬೋಟ್‌ ಕ್ಲಬ್‌ ಸಭಾಂಗಣದಲ್ಲಿ ನಡೆದ ಮುಲ್ಕಿ ಸುಂದರ್‌ ರಾಮ ಶೆಟ್ಟಿ ಸಭಾಭವನ ನಿರ್ಮಾಣ ಪ್ರಯುಕ್ತ ನಡೆದ ಪುಣೆಯ ಸಮಾಲೋಚನಾ ಸಭೆಯಲ್ಲಿ ಮಾತನಾಡಿ, ಪುಣೆಯ ಬಂಟರು ಸ್ವಾಭಿಮಾನಿಗಳು. ಇಲ್ಲಿ ಸಂತೋಷ್‌ ಶೆಟ್ಟಿಯವರ ಸಾಮೂಹಿಕ ನೇತೃತ್ವದಲ್ಲಿ ಸಮಾಜ ಬಾಂಧವರ ನೆರವಿನಿಂದ ಭವ್ಯವಾದ ಸಮಾಜದ ಭವನವನ್ನು ನಿರ್ಮಿಸಿರುವುದು ಅಭಿಮಾನವೆನಿಸುತ್ತದೆ. ಅದೇ ರೀತಿ ಮುಲ್ಕಿಯಲ್ಲಿ 1 ಎಕ್ರೆ 82 ಸೆಂಟ್ಸ್‌ ಜಾಗವನ್ನು ಖರೀದಿಸಲಾಗಿದ್ದು,  ಇಲ್ಲಿ ಸುಂದರ್‌ ರಾಮ ಶೆಟ್ಟಿಯವರ ಸುಂದರವಾದ ಭವನವನ್ನು ಸುಮಾರು 25 ಕೋಟಿ ರೂ. ವೆಚ್ಚದಲ್ಲಿ  ನಿರ್ಮಿಸುವಲ್ಲಿ ತೊಡಗಿಕೊಂಡಿದ್ದೇವೆ. ಈ ಕಾರ್ಯಕ್ಕೆ ಸಮಾಜಬಾಂಧವರ ನೆರವಿನ ಒಂದೊಂದು ಇಟ್ಟಿಗೆಯೂ ಸೇರಿದರೆ ಮಹತ್ವದ ಕಾರ್ಯ ನೆರವೇರುತ್ತದೆ. ಪುಣೆಯಲ್ಲಿರುವ ಪ್ರತಿ ಯೋರ್ವ ಸಮಾಜ ಬಾಂಧವರಿಗೂ ಈ ಮಾಹಿತಿಯನ್ನು ತಲುಪಿಸುವ ಕಾರ್ಯ ಆಗಬೇಕಾಗಿದೆ ಎಂದರು.

ಚಾರ್ಟರ್ಡ್‌ ಹೌಸಿಂಗ್‌ ಆಡಳಿತ ನಿರ್ದೇಶಕರಾದ ಎ. ಬಾಲಕೃಷ್ಣ ಹೆಗ್ಡೆ  ಮಾತನಾಡಿ ದಿ. ಸುಂದರ್‌ ರಾಮ ಶೆಟ್ಟಿಯವರು ಬಂಟ ಸಮಾಜದ ಸೇವೆಗಾಗಿಯೇ ತನ್ನ ಜೀವನವನ್ನು ಅರ್ಪಿಸಿಕೊಂಡವರಾಗಿ¨ªಾರೆ. ಅವರ ಸೇವೆಯನ್ನು ಮನಗಂಡು ಅವರಿಗಾಗಿ ಸ್ಮಾರಕವೊಂದನ್ನು ನಿರ್ಮಿಸಿ ಗೌರವ ಸಲ್ಲಿಸುವ ಕಾರ್ಯ ನಡೆಯುತ್ತಿದ್ದು ಸಮಾಜ ಬಾಂಧವರೆಲ್ಲರ ಸಹಕಾರ ಅಗತ್ಯವಾಗಿದೆ. ಮುಲ್ಕಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಅವರ ಹೆಸರಿನ ಭವನದಲ್ಲಿ 1300 ಜನರು ಆಸೀನರಾಗುವ ಭವ್ಯ ಸಭಾಂಗಣ, ಎರಡು ಕಾನ್ಫರೆನ್ಸ್‌ ಹಾಲ್‌, ವಾಣಿಜ್ಯ ಮಳಿಗೆಗಳು ಸೇರಿದಂತೆ ಸುಸಜ್ಜಿತವಾಗಿ ನಿರ್ಮಿಸಲಾಗುವುದು. ಮುಂದಿನ ಎಂಟು ತಿಂಗಳಲ್ಲಿ ಯೋಜನೆ ಪೂರ್ಣಗೊಳ್ಳುವ ವಿಶ್ವಾಸವಿದೆ ಎಂದರು.

ಪುಣೆ ಬಂಟರ ಸಂಘದ ಮಾಜಿ ಅಧ್ಯಕ್ಷ ಹಾಗೂ ಕೊನೋಟ್‌ ಬೋಟ್‌ ಕ್ಲಬ್‌ನ  ಅಧ್ಯಕ್ಷರಾದ ಮೊಳಹಳ್ಳಿ ಬಾಲಕೃಷ್ಣ ಹೆಗ್ಡೆಯವರು ಮಾತನಾಡಿ, ನಮ್ಮ ಸಮಾಜಕ್ಕೆ ಅಪ್ರತಿಮ ಕೊಡುಗೆ ನೀಡಿದ ದಿ| ಸುಂದರ್‌ ರಾಮ್‌ ಶೆಟ್ಟಿಯವರನ್ನು ನೆನಪಿಸಿಕೊಳ್ಳುವ ಕಾರ್ಯ ಆಗುತ್ತಿರುವುದು ಅಭಿನಂದನೀಯವಾಗಿದೆ. ಆತ್ಮೀಯರಾದ ಪ್ರಕಾಶ್‌ ಶೆಟ್ಟಿಯವರು ಈ ಕಾರ್ಯವನ್ನು ಕೈಗೆತ್ತಿಕೊಂಡು ಉತ್ತಮ ಕಾರ್ಯ ಮಾಡುತ್ತಿ¨ªಾರೆ. ಪುಣೆಯಲ್ಲಿನ ಬಂಟರು ತಮ್ಮಿಂದಾದ ನೆರವನ್ನು ನೀಡಿ  ಅವರನ್ನು ಬೆಂಬಲಿಸಬೇಕಾಗಿದೆ ಎಂದರು.

ವೇದಿಕೆಯಲ್ಲಿ ಪುಣೆ ಬಂಟರ ಸಂಘದ ಗೌರವಾಧ್ಯಕ್ಷ ಓಣಿಮಜಲು ಜಗನ್ನಾಥ ಶೆಟ್ಟಿ, ವಿಜಯಾ ಬ್ಯಾಂಕಿನ ಮಾಜಿ ಕಾರ್ಯಾಧ್ಯಕ್ಷರಾದ ಕೆ. ಸದಾನಂದ ಶೆಟ್ಟಿ, ಯೂನಿಯನ್‌ ಬ್ಯಾಂಕಿನ ಮಾಜಿ ಕಾರ್ಯನಿರ್ವಾಹಕ ನಿರ್ದೇಶಕರಾದ ಕೆ. ರತ್ನಾಕರ ಹೆಗ್ಡೆ, ಓರಿಯೆಂಟಲ್‌ ಬ್ಯಾಂಕಿನ ಮಾಜಿ ಕಾರ್ಯನಿರ್ವಾಹಕ ನಿರ್ದೇಶಕರಾದ ಎಚ್‌. ರತ್ನಾಕರ ಹೆಗ್ಡೆ ಉಪಸ್ಥಿತರಿದ್ದರು. ಅತಿಥಿ ಗಣ್ಯರನ್ನು ಪುಷ್ಪಗುತ್ಛ ನೀಡಿ ಸ್ವಾಗತಿಸಲಾಯಿತು. ಈ ಸಂದರ್ಭ ದಿ|  ಸುಂದರ್‌ ರಾಮ ಶೆಟ್ಟಿ ಸಭಾ ಭವನದ ವಿವರ ನೀಡುವ ಮಾಹಿತಿ ಪತ್ರವನ್ನು ಹಂಚಲಾಯಿತು.

ಸಭೆಯಲ್ಲಿ ಪಿಂಪ್ರಿ-ಚಿಂಚಾÌಡ್‌ ಬಂಟರ ಸಂಘದ ಮಾಜಿ ಅಧ್ಯಕ್ಷರಾದ ಎರ್ಮಾಳ್‌ ವಿಶ್ವನಾಥ ಶೆಟ್ಟಿ, ಎರ್ಮಾಳ್‌ ಸೀತಾರಾಮ್‌ ಶೆಟ್ಟಿ,ಪುಣೆ ಬಂಟರ ಸಂಘದ ಮಾಜಿ ಅಧ್ಯಕ್ಷರಾದ ಜಯಂತ್‌ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಅಜಿತ್‌ ಹೆಗ್ಡೆ, ಉಪಾಧ್ಯಕ್ಷ ರಾಮಕೃಷ್ಣ ಶೆಟ್ಟಿ, ಪದಾಧಿಕಾರಿಗಳಾದ ವಿಶ್ವನಾಥ ಶೆಟ್ಟಿ, ಸತೀಶ್‌ ಶೆಟ್ಟಿ, ಚಂದ್ರಶೇಖರ ಶೆಟ್ಟಿ ನಿಟ್ಟೆ, ವಿವೇಕಾನಂದ ಶೆಟ್ಟಿ ಆವರ್ಸೆ, ಪ್ರಶಾಂತ್‌ ಶೆಟ್ಟಿ ಹೆರ್ಡೆಬೀಡು, ನಿವೃತ್ತ ಐಜಿ ಜಯಾನಂದ ಶೆಟ್ಟಿ, ಜಗದೀಶ್‌ ಹೆಗ್ಡೆ, ಸತೀಶ್‌ ಸೂಡಾ, ಕರುಣಾಕರ ಶೆಟ್ಟಿ, ಸದಾಶಿವ ಶೆಟ್ಟಿ, ಉಮಾನಾಥ ಶೆಟ್ಟಿ, ಸುರೇಶ ಶೆಟ್ಟಿ, ಸಂಕಯ್ಯ ಶೆಟ್ಟಿ, ನಾಗೇಶ್‌ ಶೆಟ್ಟಿ ಮತ್ತಿತರ ಗಣ್ಯರು ಉಪಸ್ಥಿತರಿದ್ದರು. ಸ್ನೇಹಭೋಜನದೊಂದಿಗೆ ಸಭೆ ಮುಕ್ತಾಯಗೊಂಡಿತು. ಮೊಳಹಳ್ಳಿ ಬಾಲಕೃಷ್ಣ ಹೆಗ್ಡೆ ಸ್ವಾಗತಿಸಿ ವಂದಿಸಿದರು. 

ಬಂಟ ಸಮಾಜದ ಒಳಿತನ್ನು ಬಯಸಿ ಬದುಕನ್ನು ಸವೆಸಿದ ದಿ| ಸುಂದರ್‌ ರಾಮ ಶೆಟ್ಟಿಯವರನ್ನು ಎರಡು ಸಲ ಭೇಟಿ ಮಾಡಿದ್ದ ನೆನಪಿದೆ. ಅವರಂತಹ ಮಹಾನ್‌ ವ್ಯಕ್ತಿತ್ವವನ್ನು ನಾನು ಇನ್ನೆಲ್ಲೂ ಕಂಡಿಲ್ಲ. ನಮ್ಮ ಸಮಾಜಬಾಂಧವರಿಗೆ ಬದುಕೇ ಬರಿದಾದಂತಹ ಸಂದರ್ಭದಲ್ಲಿ ಆಸರೆ ನೀಡಿ ಕಾಪಾಡಿದ ಮಾನವತಾವಾದಿಯಾಗಿ¨ªಾರೆ. ಅವರ ನೆನಪಿನ ಭವನವನ್ನು ನಿರ್ಮಿಸುವ ಕಾರ್ಯಕ್ಕೆ ನನ್ನಿಂದಾದ ನೆರವನ್ನು ನೀಡುತ್ತೇನೆ .
ಕುಶಲ್‌ ಹೆಗ್ಡೆ , ಅಧ್ಯಕ್ಷರು :  ಪುಣೆ ಕನ್ನಡ ಸಂಘ

ನಮ್ಮ ಆತ್ಮೀಯರಾದ ಸಮಾಜದಲ್ಲಿ ಉನ್ನತ ಸ್ಥಾನವನ್ನು ಹೊಂದಿದ ಮೇರು ವ್ಯಕ್ತಿತ್ವದ ಪ್ರಕಾಶ್‌ ಶೆಟ್ಟಿಯವರು ಪುಣೆ ಬಂಟರ ಭವನಕ್ಕೆ ಮಹತ್ವದ ಕೊಡುಗೆಯನ್ನು ನೀಡಿರುವುದು ಅವರ ಸಮಾಜದ ಬಗೆಯ ಸಾಮಾಜಿಕ ಕಳಕಳಿಯ ಉತ್ತಮ ನಿದರ್ಶನವಾಗಿದೆ. ಇದೀಗ ಅವರ ನೇತೃತ್ವದಲ್ಲಿ ಬಂಟ ಸಮಾಜದ ಸಾವಿರಾರು ಸಮಾಜ ಬಾಂಧವರ ಬದುಕಿಗೆ ಆಶಾಕಿರಣದಂತೆ ವಿಜಯಾ ಬ್ಯಾಂಕಿನಲ್ಲಿ ಕೆಲಸವನ್ನು ನೀಡಿ ಮಾನವೀಯತೆ ಮೆರೆದ ಸುಂದರ್‌ ರಾಮ ಶೆಟ್ಟಿಯವರ ಹೆಸರಿನ ಉಳಿವಿಗಾಗಿ ಭವನವನ್ನು ನಿರ್ಮಿಸುವ ಯೋಜನೆ 
ಅಭಿನಂದನೀಯವಾಗಿದೆ. ಇದು  ಒಂದು  ಉತ್ತಮ ಕಾರ್ಯ ಎಂದು ತಾನು ಭಾವಿಸುತ್ತೇನೆ. ಸಮಾಜ ರಚನೆಯ ಹಾದಿಯಲ್ಲಿ ಮಾನವೀಯತೆಯ ಸೆಳೆತದೊಂದಿಗೆ ಜನರ ಸೇವೆಗೆ ತನ್ನ ಜೀವನವನ್ನು ಮುಡಿಪಾಗಿಟ್ಟ ಮಹಾಚೇತನಕ್ಕೆ ಗೌರವ ಸಲ್ಲಿಸುವ ಮಹತ್ಕಾರ್ಯ ಆಗುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ. ಈ ಕಾರ್ಯಕ್ಕೆ ನಾವೆಲ್ಲರೂ ಕೈಜೋಡಿಸೋಣ .
ಸಂತೋಷ್‌ ಶೆಟ್ಟಿ  ಇನ್ನಕುರ್ಕಿಲ್‌ಬೆಟ್ಟು , 
ಅಧ್ಯಕ್ಷರು : ಪುಣೆ ಬಂಟರ ಸಂಘ

ಚಿತ್ರ-ವರದಿ : ಕಿರಣ್‌ ಬಿ. ರೈ ಕರ್ನೂರು

ಟಾಪ್ ನ್ಯೂಸ್

Video: ಮನಮೋಹನ್ ಸಿಂಗ್ ನಿಧನ ಹೇಳುವ ಬದಲು ಮೋದಿ ನಿಧನರಾಗಿದ್ದಾರೆ ಎಂದ ನ್ಯೂಸ್ ಆ್ಯಂಕರ್

Video: ಮನಮೋಹನ್ ಸಿಂಗ್ ಹೇಳುವ ಬದಲು ಮೋದಿ ನಿಧನ ಎಂದ ನ್ಯೂಸ್ ಆ್ಯಂಕರ್.!

allu arjun

Stampede case:ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯಕ್ಕೆ ಹಾಜರಾದ ಅಲ್ಲು ಅರ್ಜುನ್

Bandipur: ಆನೆಮರಿಯನ್ನೇ ಬೇಟೆಯಾಡಿ ಕೊಂದ ಹುಲಿ

Bandipur: ಆನೆಮರಿಯನ್ನೇ ಬೇಟೆಯಾಡಿ ಕೊಂದ ಹುಲಿ… ಅರಣ್ಯ ಅಧಿಕಾರಿಗಳಿಂದ ಪರಿಶೀಲನೆ

1-osamu

Suzuki; ಆಟೋಮೊಬೈಲ್ ಕ್ಷೇತ್ರದ ದಿಗ್ಗಜ ಒಸಾಮು ಸುಜುಕಿ ವಿಧಿವಶ

Punjab: ನಿಯಂತ್ರಣ ತಪ್ಪಿ ನದಿಗೆ ಬಿದ್ದ ಬಸ್… 8 ಮಂದಿ ಮೃತ್ಯು, ಹಲವರಿಗೆ ಗಾಯ

Punjab: ನಿಯಂತ್ರಣ ತಪ್ಪಿ ನದಿಗೆ ಬಿದ್ದ ಬಸ್… 8 ಮಂದಿ ಮೃತ್ಯು, ಹಲವರಿಗೆ ಗಾಯ

ಅಯ್ಯಪ್ಪ ಶಿಬಿರದಲ್ಲಿ ಸಿಲಿಂಡರ್‌ ಸ್ಪೋಟ ಪ್ರಕರಣ; ನಾಲ್ಕಕ್ಕೇರಿದ ಮೃತರ ಸಂಖ್ಯೆ

Hubli; ಅಯ್ಯಪ್ಪ ಶಿಬಿರದಲ್ಲಿ ಸಿಲಿಂಡರ್‌ ಸ್ಪೋಟ ಪ್ರಕರಣ; ನಾಲ್ಕಕ್ಕೇರಿದ ಮೃತರ ಸಂಖ್ಯೆ

Dangerous Stunt: ಚಲಿಸುತ್ತಿರುವ ಕಾರಿನ ಬಾನೆಟ್ ಮೇಲೆ ಬಾಲಕನನ್ನು ಕೂರಿಸಿ ರೀಲ್ಸ್…

Dangerous Stunt: 5 ವರ್ಷದ ಬಾಲಕನನ್ನು ಕಾರಿನ ಬಾನೆಟ್ ಮೇಲೆ ಕೂರಿಸಿ ಸ್ಟಂಟ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸರಣ ಘಟಕಕ್ಕೆ ಗ್ರಹಣ!

ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!

ಕತಾರ್‌:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್‌ ಶಹನ ಜತೆ ಸಂವಾದ

ಕತಾರ್‌:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್‌ ಶಹನ ಜತೆ ಸಂವಾದ

ಬಹ್ರೈನ್‌ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್‌ ಅಬ್ಬರ-ಕ್ರಿಕೆಟ್‌ ಪ್ರೇಮಿಗಳ ಮೆಚ್ಚುಗೆ

ಬಹ್ರೈನ್‌ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್‌ ಅಬ್ಬರ-ಕ್ರಿಕೆಟ್‌ ಪ್ರೇಮಿಗಳ ಮೆಚ್ಚುಗೆ

Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ 

Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ 

ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!

ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Video: ಮನಮೋಹನ್ ಸಿಂಗ್ ನಿಧನ ಹೇಳುವ ಬದಲು ಮೋದಿ ನಿಧನರಾಗಿದ್ದಾರೆ ಎಂದ ನ್ಯೂಸ್ ಆ್ಯಂಕರ್

Video: ಮನಮೋಹನ್ ಸಿಂಗ್ ಹೇಳುವ ಬದಲು ಮೋದಿ ನಿಧನ ಎಂದ ನ್ಯೂಸ್ ಆ್ಯಂಕರ್.!

allu arjun

Stampede case:ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯಕ್ಕೆ ಹಾಜರಾದ ಅಲ್ಲು ಅರ್ಜುನ್

Bandipur: ಆನೆಮರಿಯನ್ನೇ ಬೇಟೆಯಾಡಿ ಕೊಂದ ಹುಲಿ

Bandipur: ಆನೆಮರಿಯನ್ನೇ ಬೇಟೆಯಾಡಿ ಕೊಂದ ಹುಲಿ… ಅರಣ್ಯ ಅಧಿಕಾರಿಗಳಿಂದ ಪರಿಶೀಲನೆ

1-osamu

Suzuki; ಆಟೋಮೊಬೈಲ್ ಕ್ಷೇತ್ರದ ದಿಗ್ಗಜ ಒಸಾಮು ಸುಜುಕಿ ವಿಧಿವಶ

Hubli: ವರೂರಿನ ನವಗ್ರಹ ತೀರ್ಥ ಕ್ಷೇತ್ರದಲ್ಲಿ ಜ. 15ರಿಂದ 26ರವರೆಗೆ ಮಹಾಮಸ್ತಕಾಭಿಷೇಕ‌

Hubli: ವರೂರಿನ ನವಗ್ರಹ ತೀರ್ಥ ಕ್ಷೇತ್ರದಲ್ಲಿ ಜ. 15ರಿಂದ 26ರವರೆಗೆ ಮಹಾಮಸ್ತಕಾಭಿಷೇಕ‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.