ರಾಜ್ಯ ಸರಕಾರಿ ಕಚೇರಿಗಳಲ್ಲಿ 2 ಲಕ್ಷಕ್ಕೂ ಹೆಚ್ಚು ಹುದ್ದೆ ಖಾಲಿ
Team Udayavani, Jun 8, 2021, 10:19 AM IST
ಮುಂಬಯಿ: ಕೋವಿಡ್ ಅವಧಿಯಲ್ಲಿ ಅಲ್ಲದೆ ಅದಕ್ಕೂ ಮೊದಲು ರಾಜ್ಯ ಸರಕಾರದಿಂದ ವಿವಿಧ ಹುದ್ದೆಗಳಿಗೆ ಪರೀಕ್ಷೆ ಮತ್ತು ನೇಮಕಾತಿ ನಡೆಯದ ಕಾರಣ ವಿವಿಧ ಇಲಾಖೆಗಳಲ್ಲಿನ ಸುಮಾರು 2 ಲಕ್ಷಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇವೆ ಎಂದು ಆರ್‌ಟಿಐ ಮೂಲಕ ವರದಿಯಾಗಿದೆ.
ರಾಜ್ಯ ಸರಕಾರಿ ಕಚೇರಿಗಳು, ಜಿಲ್ಲಾ ಪರಿಷತ್ ಅಧಿಕಾರಿಗಳು ಮತ್ತು ವಿವಿಧ ಶ್ರೇಣಿಗಳಿಗೆ ಸೇರಿದ ಹುದ್ದೆಗಳು ಖಾಲಿ ಇವೆ. ಖಾಲಿ ಹುದ್ದೆಗಳಲ್ಲಿ 1,41,329 ಹುದ್ದೆಗಳನ್ನು ನೇರ ಸೇವೆಯ ಮೂಲಕ ಭರ್ತಿ ಮತ್ತು 58,864 ಹುದ್ದೆಗಳನ್ನು ಭಡ್ತಿ ಮೂಲಕ ಭರ್ತಿ ಮಾಡಬೇಕಾಗಿದೆ. ಈ ಹುದ್ದೆಗಳ ನೇಮಕಾತಿ ಪ್ರಕ್ರಿಯೆಗಾಗಿ ರಾಜ್ಯಾದ್ಯಂತ ಅಭ್ಯರ್ಥಿಗಳು ಕಾಯುತ್ತಿದ್ದಾರೆ.
ರಾಜ್ಯದ ಲಕ್ಷಾಂತರ ಅಭ್ಯರ್ಥಿಗಳು ತಮ್ಮ ಸರಕಾರಿ ಸೇವೆಯ ಕನಸನ್ನು ಈಡೇರಿಸಲು ಸ್ಪರ್ಧಾ ತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದಾರೆ. ಆದರೆ ಕಳೆದ ಕೆಲವು ವರ್ಷಗಳಿಂದ ಹೆಚ್ಚುತ್ತಿರುವ ಖಾಲಿ ಹುದ್ದೆಗಳ ಹೊರತಾಗಿಯೂ ರಾಜ್ಯ ಸರಕಾರವು ಈ ಖಾಲಿ ಹುದ್ದೆಗಳನ್ನು ಭರ್ತಿ ಮಾಡಿಲ್ಲ.
ರಾಜ್ಯದಲ್ಲಿ ಖಾಲಿ ಹುದ್ದೆಗಳ ಬಗ್ಗೆ ಮಾಹಿತಿ ಹಕ್ಕು ಕಾರ್ಯಕರ್ತ ಸುರೇಶ್ ಗಜ್ಜಲ್ವಾರ್ ಅವರು ಆರ್‌ಟಿಐ ಮೂಲಕ ಸರಕಾರದ ಬಳಿ ವಿವರನ್ನು ಕೋರಿದ್ದರು. ಈ ಬಗ್ಗೆ ಆಡಳಿತ ಇಲಾಖೆಗಳಿಂದ ಮಾಹಿತಿ ಸಂಗ್ರಹಿಸಿದ ಬಳಿಕ ಸಾಮಾನ್ಯ ಆಡಳಿತ ಇಲಾಖೆ ವರದಿ ನೀಡಿದೆ. ವರದಿ ಪ್ರಕಾರ 2019ರ ಡಿ. 31ರ ವರೆಗೆ ರಾಜ್ಯ ಸರಕಾರಿ ಕಚೇರಿಗಳು ಮತ್ತು ಜಿಲ್ಲಾ ಪರಿಷತ್‌ಗಳಲ್ಲಿ 2 ಲಕ್ಷಕ್ಕೂ ಹೆಚ್ಚು ಹುದ್ದೆಗಳು ಖಾಲಿಯಾಗಿದ್ದವು ಎಂಬುದು ಸ್ಪಷ್ಟ ವಾಗಿದೆ. ಆದರೆ ಕೆಲವು ಇಲಾಖೆಗಳಿಂದ ಮಾಹಿತಿ ಲಭ್ಯವಿಲ್ಲದ ಕಾರಣ ಆ ಇಲಾಖೆಗಳ ಖಾಲಿ ಹುದ್ದೆಗಳನ್ನು ಅಂಕಿಅಂಶಗಳಲ್ಲಿ ಸೇರಿಸಲಾಗಿಲ್ಲ.
ರಾಜ್ಯ ಸರಕಾರಿ ಕಚೇರಿಗಳಲ್ಲಿ ಮತ್ತು ಜಿಲ್ಲಾ ಪರಿಷತ್‌ಗಳಲ್ಲಿ 10,99,104 ಮಂಜೂರಾದ ಹುದ್ದೆಗಳಿವೆ. ಅದರಲ್ಲಿ 7,80,523 ಹುದ್ದೆಗಳು ನೇರ ಸೇವೆಗಾಗಿ ಮತ್ತು 3,18,581 ಹುದ್ದೆಗಳು ಮೀಸಲಾತಿ ಭಡ್ತಿಗಾಗಿವೆ. ಅದರಲ್ಲಿ 8,98,911 ಹುದ್ದೆಗಳನ್ನು ಭರ್ತಿ ಮಾಡಲಾಗಿದೆ. ಇನ್ನು 2,00,193 ಹುದ್ದೆಗಳು ಇನ್ನೂ ಖಾಲಿ ಇವೆ. ಖಾಲಿ ಇರುವ ಈ ಹುದ್ದೆಗಳ ಪೈಕಿ 1,41,329 ಹುದ್ದೆಗಳನ್ನು ನೇರ ಸೇವೆಯ ಮೂಲಕ ಭರ್ತಿ ಮಾಡಬೇಕಾದರೆ, 58, 864 ಹುದ್ದೆಗಳನ್ನು ಮೀಸಲಾತಿ ಭಡ್ತಿ ಮೂಲಕ ಭರ್ತಿ ಮಾಡಬೇಕಾಗಿದೆ. ಒಟ್ಟು ಖಾಲಿ ಹುದ್ದೆಗಳಲ್ಲಿ 1,53,231 ಹುದ್ದೆಗಳು ರಾಜ್ಯ ಸರಕಾರಿ ಕಚೇರಿಗಳಲ್ಲಿ ಮತ್ತು 64,962 ಹುದ್ದೆಗಳು ಎಲ್ಲ ಪರಿಷತ್‌ಗಳಲ್ಲಿವೆ.
ಗೃಹ ಇಲಾಖೆಯಲ್ಲಿ ಹೆಚ್ಚಿನ ಹುದ್ದೆಗಳು :
ಹೆಚ್ಚು ಉದ್ಯೋಗ ಖಾಲಿ ಇರುವ ಇಲಾಖೆಗಳ ಪಟ್ಟಿಯಲ್ಲಿ ಗೃಹ ಇಲಾಖೆ ಅಗ್ರಸ್ಥಾನದಲ್ಲಿದೆ. ಗೃಹ ಇಲಾಖೆಯಲ್ಲಿ 24,581 ಹುದ್ದೆಗಳು, ಸಾರ್ವಜನಿಕ ಆರೋಗ್ಯ ಇಲಾಖೆಯಲ್ಲಿ 20,544 ಮತ್ತು ಜಲಸಂಪನ್ಮೂಲ ಇಲಾಖೆಯಲ್ಲಿ 20,873 ಹುದ್ದೆಗಳು ಖಾಲಿ ಇವೆ.
ಗುತ್ತಿಗೆ ನೇಮಕಾತಿ :
ರಾಜ್ಯ ಸರಕಾರಿ ಕಚೇರಿಗಳಲ್ಲಿ ಮತ್ತು ಜಿಲ್ಲಾ ಪರಿಷತ್‌ಗಳಲ್ಲಿ ಲಕ್ಷಾಂತರ ಹುದ್ದೆಗಳು ಖಾಲಿ ಇದ್ದರೂ ರಾಜ್ಯ ಸರಕಾರವು ಗುತ್ತಿಗೆಯ ಒಪ್ಪಂದ ಗಳ ಮೂಲಕ ನೇಮಿಸಿಕೊಳ್ಳುತ್ತಿದೆ. ಆದರೆ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆಯನ್ನು ಮಹಾರಾಷ್ಟ್ರ ಸಾರ್ವಜನಿಕ ಸೇವಾ ಆಯೋಗ (ಎಂಪಿಎಸ್‌ಸಿ) ಸತತವಾಗಿ ಒತ್ತಾಯಿಸುತ್ತಿದೆ.
ರಾಜ್ಯ ಸರಕಾರವು 2019ರ ಡಿಸೆಂಬರ್ ಅಂತ್ಯದವರೆಗೆ ಖಾಲಿಯಾದ ಹುದ್ದೆಗಳನ್ನು ತಿಳಿಸಿದೆ. ಆದ್ದರಿಂದ ಮುಂದಿನ ಒಂದೂವರೆ ವರ್ಷಗಳಲ್ಲಿ ಇನ್ನೂ ಕೆಲವು ಹುದ್ದೆಗಳು ಖಾಲಿಯಾಗಿರಬಹುದು. 35,000 ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಇನ್ನೂ ಪೂರ್ಣಗೊಂಡಿಲ್ಲ. ಇಷ್ಟು ದೊಡ್ಡ ಸಂಖ್ಯೆಯ ಖಾಲಿ ಹುದ್ದೆಗಳ ಹೊರತಾಗಿಯೂ ಸರಕಾರವು ನೇಮಕಾತಿ ಪ್ರಕ್ರಿಯೆಯನ್ನು ಅನುಷ್ಠಾನಗೊಳಿಸುತ್ತಿಲ್ಲ. ಇದು ಆಡಳಿತದ ಮೇಲೆ ಒತ್ತಡ ಹೇರುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಭ್ಯರ್ಥಿಗಳಿಗೆ ಅವಕಾಶ ಸಿಗುವುದಿಲ್ಲ. ಒಪ್ಪಂದದ ಆಧಾರದ ಮೇಲೆ ಭರ್ತಿ ಮಾಡಬೇಕಾದ ಹುದ್ದೆಗಳು ನಿಗದಿತ ಅವಧಿಗೆ ಇರುವುದರಿಂದ ಆ ಹುದ್ದೆಗಳೂ ಖಾಲಿಯಾಗುತ್ತವೆ. ಆದ್ದರಿಂದ ಸರಕಾರವು ಖಾಲಿ ಹುದ್ದೆಗಳನ್ನು ಎಂಪಿಎಸ್‌ಸಿ ನೇಮಕಾತಿಯ ಮೂಲಕ ಮಾತ್ರ ಭರ್ತಿ ಮಾಡಬೇಕು.-ಸುರೇಶ್ ಗಜ್ಜಲ್ವಾರ್ ಮಾಹಿತಿ ಹಕ್ಕು ಕಾರ್ಯಕರ್ತ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು
ಅಬುಧಾಬಿ ಹಿಂದೂ ಮಂದಿರದಲ್ಲಿ ಪ್ರಥಮ ದೀಪಾವಳಿ ಸಂಭ್ರಮ
ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mangaluru: ಗುತ್ತಿಗೆದಾರ ಸಚಿನ್ ಪ್ರಕರಣ; ಪ್ರಿಯಾಂಕ್ ಖರ್ಗೆ ರಾಜೀನಾಮೆಗೆ ಬಿಜೆಪಿ ಆಗ್ರಹ
Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್
Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ
Madikeri ಅಪರಿಚಿತ ವಾಹನ ಡಿಕ್ಕಿ: ಚಿಕಿತ್ಸೆ ಫಲಿಸದೆ ವ್ಯಕ್ತಿ ಸಾವು
Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.