ಮದರ್‌ ಇಂಡಿಯಾ ಟ್ರೋಫಿ ಜಯಿಸಿದ ಕಾರ್ಕಳ ತಾ| ತಂಡ


Team Udayavani, Feb 8, 2017, 4:55 PM IST

07-Mum05a.jpg

ಮುಂಬಯಿ: ನಾವೆಲ್ಲ ಜನ್ಮಭೂಮಿ ಯನ್ನು ಬಿಟ್ಟು ಮಹಾರಾಷ್ಟ್ರದ ಕರ್ಮಭೂಮಿಗೆ ಬಂದು ನಮ್ಮ ಅಭಿವೃದ್ಧಿಯೊಂದಿಗೆ ಊರಿನ ಅಭಿವೃದ್ಧಿಗೂ ಮಹತ್ತರ ದೇಣಿಗೆಯನ್ನು ನೀಡುತ್ತಿದ್ದೇವೆ. ಶ್ರಮಪಟ್ಟರೆ ಅಸಾಧ್ಯ ಎಂಬುದು ಯಾವುದೂ ಇಲ್ಲ. ಕ್ರೀಡಾ ಕ್ಷೇತ್ರ ದಲ್ಲಿ ಸಾಧನೆಗೈಯಲು ಬಹಳಷ್ಟು ಅವಕಾಶಗಳಿವೆ. ಮದರ್‌ ಇಂಡಿಯಾ ಸಂಸ್ಥೆಯು ಯುವ ಪ್ರತಿಭೆಗಳನ್ನು ಗುರುತಿಸುವ ಉದ್ದೇಶದಿಂದ ಈ ಫುಟ್ಬಾಲ್‌ ಪಂದ್ಯಾಟವನ್ನು ಆಯೋಜಿಸಿದ್ದು, ಎಲ್ಲ ತಾಲೂಕುಗಳಿಂದ ಉತ್ತಮ ಪ್ರತಿಕ್ರಿಯೆ ಲಭಿಸಿದೆ. ವಿಜೇತರಾದ ಹಾಗೂ ಭಾಗವಹಿಸಿದ ಎಲ್ಲಾ ಆಟಗಾರರು ಅಭಿನಂದನಾರ್ಹರು ಎಂದು ಒಕ್ಕಲಿಗ ಸಂಘದ ಮಹಾರಾಷ್ಟ್ರ ಅಧ್ಯಕ್ಷ ರಂಗಪ್ಪ ಗೌಡ ಅವರು ನುಡಿದರು.

ಫೆ. 5ರಂದು ಚರ್ಚ್‌ಗೇಟ್‌ ಪರಿಸರದ ಕರ್ನಾಟಕ ನ್ಪೋರ್ಟಿಂಗ್‌ ಅಸೋಸಿಯೇಶನ್‌ ಮೈದಾನದಲ್ಲಿ ಮದರ್‌ ಇಂಡಿಯಾ ಹಳೆ ವಿದ್ಯಾರ್ಥಿ ಸಂಘ ಮತ್ತು  ಜನತಾ ಶಿಕ್ಷಣ ಸಂಘದ ವತಿಯಿಂದ ನಡೆದ ಕರ್ನಾಟಕದ 6 ತಾಲೂಕು ಮಟ್ಟದ ಫುಟ್ಬಾಲ್‌ ಪಂದ್ಯಾಟದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡಿದ ಅವರು, ಮದರ್‌ ಇಂಡಿಯಾ ಶಾಲೆಯ ಹಳೆವಿದ್ಯಾರ್ಥಿ ಸಂಘದ ಪದಾಧಿಕಾರಿಗಳು, ಶಿಕ್ಷಕ ರಾಮದಾಸ ಉಪಾಧ್ಯಾಯ ಅವರ ಉಪಸ್ಥಿತಿಯಲ್ಲಿ ಪಂದ್ಯಾಟವನ್ನು ನಡೆಸಿರುವುದು ಅಭಿನಂದನಾರ್ಹವಾಗಿದೆ ಎಂದರು.

ಗೌರವ ಅತಿಥಿಯಾಗಿ ಪಾಲ್ಗೊಂಡ ಮಲಾಡ್‌ ಪಶ್ಚಿಮದ ಉದ್ಯಮಿ ನವೀನ್‌ ಜೆ. ಭಂಡಾರಿ ಮಾತನಾಡಿ, ಇಂದಿನ ಪಂದ್ಯಾಟವನ್ನು ಕಂಡು ಸಂತೋಷವಾಯಿತು. ಸೋತವರು ನಿರಾಶರಾಗದೆ ಸೋಲೆ ಮುಂದಿನ ಗೆಲುವು ಎಂಬುವುದನ್ನು ಮನಗಂಡು ಶ್ರಮಿಸಬೇಕು. ಪರಿಶ್ರಮಪಟ್ಟಾಗ ಮಾತ್ರ ಜೀವನದಲ್ಲಿ ಯಶಸ್ಸನ್ನು  ಕಾಣಲು ಸಾಧ್ಯ. ಇಂದು ಪಾಲ್ಗೊಂಡ ಕ್ರೀಡಾಪಟುಗಳು ಭವಿಷ್ಯದಲ್ಲಿ ಪ್ರಸಿದ್ಧ ಆಟಗಾರರಾಗಿ ಬೆಳೆಯಲಿ ಎಂದು ನುಡಿದು ಶುಭಹಾರೈಸಿದರು.

ಮದರ್‌ ಇಂಡಿಯಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ, ಉದ್ಯಮಿ ಸುರೇಂದ್ರ ಎ. ಪೂಜಾರಿ ಅವರು ಫುಟ್ಬಾಲ್‌ ಪಂದ್ಯಾಟವನ್ನು ಉದ್ಘಾಟಿಸಿದರು. ಲೀಗ್‌ ಮಾದರಿಯಲ್ಲಿ ನಡೆದ ಪಂದ್ಯಾಟದಲ್ಲಿ ಉಡುಪಿ, ಗುಲ್ಬರ್ಗಾ, ಕಾರ್ಕಳ, ರೆಸ್ಟ್‌ ಅಫ್‌ ಕರ್ನಾಟಕ, ಕುಂದಾಪುರ ಹಾಗೂ ಮಂಗಳೂರು ತಾಲೂಕುಗಳ ಮಧ್ಯೆ ಪಂದ್ಯಾಟಗಳು ನಡೆದವು. ಫೈನಲ್‌ ಪಂದ್ಯದಲ್ಲಿ ಕಾರ್ಕಳ ತಂಡವು ಗುಲ್ಬರ್ಗಾ ತಂಡವನ್ನು ಎದುರಿಸಿ 5-4 ಅಂತರದಿಂದ ಜಯಗಳಿಸಿ ಮದರ್‌ ಇಂಡಿಯಾ ಬಳಗದ ತಾಲೂಕು ಮಟ್ಟದ ಮದರ್‌ ಇಂಡಿಯಾ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು.

ಸಮಾರೋಪ ಸಮಾರಂಭದಲ್ಲಿ ಅತಿಥಿ- ಗಣ್ಯರು ವಿಜೇತ ತಂಡಗಳಿಗೆ ಪ್ರಶಸ್ತಿಯನ್ನು ಪ್ರದಾನಿಸಿದರು. ಸಮಾರಂಭದಲ್ಲಿ ಫುಟ್ಬಾಲ್‌ ಕ್ಷೇತ್ರದಲ್ಲಿ ಗಮನೀಯ ಸಾಧನೆಗೈದ ಹಿರಿಯ ಮಾಜಿ  ಫುಟ್ಬಾಲ್‌ ಆಟಗಾರ ಶೇಖರ್‌ ಪಿ. ಬಂಗೇರ ಅವರನ್ನು  ಕ್ರೀಡಾ ಶಿರೋಮಣಿ ಬಿರುದು ಮತ್ತು ಫುಟ್ಬಾಲ್‌ ತರಬೇತುದಾರ ದಿನೇಶ್‌ ಎಸ್‌. ಪೂಜಾರಿ ಅವರನ್ನು ಕ್ರೀಡಾ ಅಭ್ಯುದಯ ಬಿರುದು ಪ್ರದಾನಿಸಿ ಗಣ್ಯರ ಸಮ್ಮುಖದಲ್ಲಿ ಸಮ್ಮಾನಿಸಲಾಯಿತು.

ಪ್ರತಿಭಾವಂತ ಆಟಗಾರರಾಗಿ ಕಾರ್ಕಳ ತಂಡದ ಲೇಖರಾಜ್‌ ಕೋಟ್ಯಾನ್‌ ಉತ್ತಮ ಫಾರ್ವರ್ಡರ್‌, ಕಾರ್ಕಳ ತಂಡ ರಾಜೇಶ್‌ ಬಂಗೇರ ಅವರು ಉತ್ತಮ ಗೋಲು ರಕ್ಷಕರಾಗಿ, ಉಡುಪಿ ತಂಡದ ಸಾಗರ್‌ ಸಾಲ್ಯಾನ್‌ ಉತ್ತಮ ಡಿಪೆಂಡರ್‌ ಆಗಿ, ರೆಸ್ಟ್‌ ಆಫ್‌ ಕರ್ನಾಟಕ ತಂಡದ ರೋಶನ್‌ ಅವರು ಉತ್ತಮ ಮಿಡ್‌ ಫಿಲ್ಡರ್‌ ಆಗಿ ಪ್ರಶಸ್ತಿ ಪಡೆದರು. ಕಾರ್ಕಳ ತಂಡದ ಪ್ರಾಯೋಜಕರಾಗಿ ರವಿ ಅಂಚನ್‌,  ಉಡುಪಿ ತಂಡದ ಪ್ರಾಯೋಜಕರಾಗಿ ಎಸ್‌ಬಿಐ ಹರೀಶ್‌ ಪೂಜಾರಿ, ಕುಂದಾಪುರ ತಂಡದ ಪ್ರಾಯೋಜಕರಾಗಿ ರಾಜು ಶ್ರೀಯಾನ್‌, ಮಂಗಳೂರು ತಂಡಕ್ಕೆ ಅವಿನಾಶ್‌ ಬಂಗೇರ, ಗುಲ್ಬರ್ಗಾ ತಂಡದ ಪ್ರಾಯೋಜಕರಾಗಿ ಸದಾ ಉಚ್ಚಿಲ್‌, ರೆಸ್ಟ್‌ ಆಫ್‌ ಕರ್ನಾಟಕ ತಂಡಕ್ಕೆ ಪ್ರಾಯೋಜಕರಾಗಿ ಪ್ರೇಮನಾಥ್‌ ಪುತ್ರನ್‌ ಅವರು ಸಹಕರಿಸಿದ್ದು, ಅವರನ್ನು ಗೌರವಿಸಲಾಯಿತು.

ರೆಫ್ರಿಯವರ ಸಮವಸ್ತ್ರವನ್ನು ನೀಡಿದ ಮಂಜುನಾಥ್‌ ಶರ್ಟ್ಸ್ ಮತ್ತು ತಾಲೂಕು ತಂಡದ ಎಲ್ಲ ಆಟಗಾರರಿಗೆ ಶೂವನ್ನು ಪ್ರಾಯೋಜಿಸಿದ ಎಸ್‌ಬಿಐನ ಹರೀಶ್‌ ಪೂಜಾರಿ ಅವರನ್ನು ಗೌರವಿಸಲಾಯಿತು. ಸಮಾರೋಪ ಸಮಾರಂಭದ ವೇದಿಕೆಯಲ್ಲಿ ಶಾಲೆಯ ಶಿಕ್ಷಕ ರಾಮದಾಸ್‌ ನಾಯ್ಕ, ಬ್ಯಾಂಕ್‌ ಆಫ್‌ ಇಂಡಿಯಾದ ಹಿರಿಯ ಮಾಜಿ ಕೋಚ್‌ ದೇವದಾಸ್‌ ಶ್ರೀಯಾನ್‌, ಉದ್ಯಮಿ ಸದಾಶಿವ ಶೆಟ್ಟಿ, ವೀಣಾ ಎಂ. ಭಂಡಾರಿ, ಉಪಾಧ್ಯಕ್ಷರುಗಳಾದ ಉಮೇಶ್‌ ಶೆಟ್ಟಿ, ಸುಂದರ ಮೊಲಿ, ಭಾಸ್ಕರ ಜತ್ತನ್‌, ಟಿ. ವಿ. ಪೂಜಾರಿ, ಅತ್ತೂರು ಭಾಸ್ಕರ ಶೆಟ್ಟಿ  ಉಪಸ್ಥಿತರಿದ್ದರು.

ಪ್ರಧಾನ ಕಾರ್ಯದರ್ಶಿ ಹರೀಶ್‌ ಮೈಂದನ್‌, ಉಪಾಧ್ಯಕ್ಷ ಸುಂದರ ಮೊಲಿ, ಕೋಶಾಧಿಕಾರಿ ಮಂದಾರ ಎನ್‌. ಹೆಗ್ಡೆ  ಅತಿಥಿಗಳನ್ನು ಪರಿಚಯಿಸಿದರು. ಪಿ. ಬಿ. ಚಂದ್ರಹಾಸ್‌ ಸಮ್ಮಾನಿತರನ್ನು ಪರಿಚಯಿಸಿದರು. 

ಗಣೇಶ್‌ ಕುಂದರ್‌, ರಮೇಶ್‌ ಪೂಜಾರಿ, ಭಾಸ್ಕರ್‌ ಜತ್ತನ್‌, ಮಂಜುನಾಥ ಪೂಜಾರಿ, ಕರುಣಾಕರ ಕಾಪು, ರಾಮ ಪೂಜಾರಿ, ಸದಾ ಬಿಎಂಸಿ, ಕೃಷ್ಣ ಶೆಟ್ಟಿ, ಅಶೋಕ್‌ ಶೆಟ್ಟಿ, ಬಾಲಕೃಷ್ಣ ಶೆಟ್ಟಿ ಅವರು ಸಹಕರಿಸಿದರು. ಕ್ರೀಡಾ ಕಾರ್ಯದರ್ಶಿಗಳಾದ ಜಯ ಸಿ. ಪೂಜಾರಿ, ನಲಸೋಪರ ಯಶವಂತ್‌ ಎನ್‌. ಪೂಜಾರಿ, ರಾಯಘಡ ಜಯರಾಮ ಕೆ. ಪೂಜಾರಿ ಅವರು ಪಂದ್ಯಾಟವನ್ನು ಸಂಯೋಜಿಸಿದ್ದರು. ಕರ್ನಾಟಕ ನ್ಪೋರ್ಟಿಂಗ್‌ ಅಸೋಸಿಯೇಶನ್‌ ಸಹಕರಿಸಿದರು. ಹರೀಶ್‌ ಪೂಜಾರಿ ಎಲ್‌ಐಸಿ ಭೋಜನದ ವ್ಯವಸ್ಥೆಯನ್ನು ಆಯೋಜಿಸಿದ್ದರು.

ಮಕ್ಕಳಿಗೆ ನಾವು ಆದಷ್ಟು ತರಬೇತಿಯನ್ನು ನೀಡಿ ಪ್ರೋತ್ಸಾಹಿಸುತ್ತೇವೆ. ಕರ್ನಾಟಕ ನ್ಪೋರ್ಟಿಂಗ್‌ ಅಸೋಸಿಯೇಶನ್‌ ಮೈದಾನದಲ್ಲಿ ಕನ್ನಡಿಗರಿಗೆ ಯಾವತ್ತೂ ಮುಕ್ತ ಪ್ರವೇಶವಿದೆ. ಇಲ್ಲಿ ತರಬೇತಿ ಪಡೆಯುವ ಎಲ್ಲಾ ಪುಟ್ಬಾಲ್‌ಪಟುಗಳಿಗೆ ನಿರಂತರವಾಗಿ ತರಬೇತಿಯನ್ನು ನೀಡಲು ಇಚ್ಛಿಸುತ್ತೇನೆ. ನನ್ನ ಸಾಧನೆಯನ್ನು ಗುರುತಿಸಿ ಮದರ್‌ ಇಂಡಿಯಾ ಸಂಸ್ಥೆಯು ಸಮ್ಮಾನಿಸಿರುವುದಕ್ಕೆ ಸಂತೋಷವಾಗುತ್ತಿದೆ. ನಿಮಗೆಲ್ಲರಿಗೂ ಹೃದಯಾಂತರಾಳದ ಕೃತಜ್ಞತೆಗಳು 
– ಶೇಖರ ಬಂಗೇರ (ಕ್ರೀಡಾಶಿರೋಮಣಿ ಬಿರುದು ಪುರಸ್ಕೃತರು).

ನನ್ನನ್ನು ಕನ್ನಡ ರಾತ್ರಿಶಾಲೆಯ ಮಕ್ಕಳಿಗೆ ಫುಟ್ಬಾಲ್‌ ತರಬೇತು ನೀಡಿರುವುದನ್ನು ಗುರುತಿಸಿ ಮದರ್‌ ಇಂಡಿಯಾ ಬಳಗ ಸಮ್ಮಾನಿಸಿದಕ್ಕೆ ಸಂತೋಷವಾಗುತ್ತಿದೆ. ತುಳು-ಕನ್ನಡಿಗರ ಮಕ್ಕಳಲ್ಲಿರುವ ಅಭಿರುಚಿಯನ್ನು ಅರಿತುಕೊಂಡು ಪಾಲಕರು ಅವರನ್ನು ಬೆಳೆಸಬೇಕು. ಅದಕ್ಕೆ ನಮ್ಮಿಂದಾಗುವ ಸಹಕಾರ ಸದಾಯಿರಲಿದೆ 
– ದಿನೇಶ್‌ ಪೂಜಾರಿ ( ಕ್ರೀಡಾ ಅಭ್ಯುದಯ ಬಿರುದು ಪುರಸ್ಕೃತರು).

ಟಾಪ್ ನ್ಯೂಸ್

CT Ravi Arrested: ಬಿಜೆಪಿ ಕರೆ ನೀಡಿದ್ದ ಬಂದ್ ಗೆ ಚಿಕ್ಕಮಗಳೂರಿನಲ್ಲಿ ಮಿಶ್ರ ಪ್ರತಿಕ್ರಿಯೆ

CT Ravi Arrested: ಬಿಜೆಪಿ ಕರೆ ನೀಡಿದ್ದ ಬಂದ್ ಗೆ ಚಿಕ್ಕಮಗಳೂರಿನಲ್ಲಿ ಮಿಶ್ರ ಪ್ರತಿಕ್ರಿಯೆ

Belagavi: ಹೆಬ್ಬಾಳಕರ್ ಕ್ಷೇತ್ರದಲ್ಲೇ ಸಿ.ಟಿ.ರವಿಗೆ ವೈದ್ಯಕೀಯ ತಪಾಸಣೆ

Belagavi: ಹೆಬ್ಬಾಳಕರ್ ಕ್ಷೇತ್ರದಲ್ಲೇ ಸಿ.ಟಿ.ರವಿಗೆ ವೈದ್ಯಕೀಯ ತಪಾಸಣೆ

14-

Afghanistan: 2 ಅಪಘಾತ: 50 ಸಾವು, 76 ಮಂದಿಗೆ ಗಾಯ

13-ed

Pharma Company ಮೂಲಕ 4500 ಕೋಟಿ ಅಕ್ರಮ: ಇ.ಡಿ.

12-mumbai

Mumbai ದೋಣಿ ದುರಂತ: ಮತ್ತೂಂದು ಮೃತದೇಹ ಪತ್ತೆ

ಮಂಗಳೂರು ಏರ್‌ಪೋರ್ಟ್‌ಗೆ ಪಾಯಿಂಟ್‌ ಆಫ್‌ ಕಾಲ್‌ ಸ್ಟೇಟಸ್‌ ಮಾನ್ಯತೆ ನೀಡಿ: ಕ್ಯಾ.ಚೌಟ ಮನವಿ

ಮಂಗಳೂರು ಏರ್‌ಪೋರ್ಟ್‌ಗೆ ಪಾಯಿಂಟ್‌ ಆಫ್‌ ಕಾಲ್‌ ಸ್ಟೇಟಸ್‌ ಮಾನ್ಯತೆ ನೀಡಿ: ಕ್ಯಾ.ಚೌಟ ಮನವಿ

11-missile

Missile Development: ಕ್ಷಿಪಣಿ ನಿರ್ಮಾಣ ಆರೋಪ: ಪಾಕ್‌ಗೆ ಅಮೆರಿಕ ನಿರ್ಬಂಧ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

11-

ಪ್ರಧಾನ ಸಂಪಾದಕ ನ್ಯೂಯಾರ್ಕ್ ನ ಬೆಂಕಿ ಬಸಣ್ಣ ವಿರಚಿತ ‘ವಿಶ್ವಕನ್ನಡ ಕೂಟಗಳ ಕೈಪಿಡಿ’ ಬಿಡುಗಡೆ

ಹೊಯ್ಸಳ ಕನ್ನಡ ಸಂಘ: ವಿದೇಶದಲ್ಲಿ ಕಣ್ಮನ ಸೆಳೆದ ಗದಾಯುದ್ಧ ಯಕ್ಷಗಾನ

ಹೊಯ್ಸಳ ಕನ್ನಡ ಸಂಘ: ವಿದೇಶದಲ್ಲಿ ಕಣ್ಮನ ಸೆಳೆದ ಗದಾಯುದ್ಧ ಯಕ್ಷಗಾನ

Desi Swara: ಟ್ಯಾಂಪಾ ಸಾಂಸ್ಕೃತಿಕ ವೇದಿಕೆ – ಹರಿಕಥೆ ಆಯೋಜನೆ

Desi Swara: ಟ್ಯಾಂಪಾ ಸಾಂಸ್ಕೃತಿಕ ವೇದಿಕೆ – ಹರಿಕಥೆ ಆಯೋಜನೆ

ಕ್ಲೀವ್‌ ಲ್ಯಾಂಡ್‌: 40ನೇ ಬೆಳಕಿನ ಕನ್ನಡೋತ್ಸವ, ಹಾಸ್ಯ ಹೊನಲು, ಸಂಗೀತ ಸುಧೆ

ಕ್ಲೀವ್‌ ಲ್ಯಾಂಡ್‌: 40ನೇ ಬೆಳಕಿನ ಕನ್ನಡೋತ್ಸವ, ಹಾಸ್ಯ ಹೊನಲು, ಸಂಗೀತ ಸುಧೆ

Baharain1

ಮೊಗವೀರ್ಸ್‌ ಬಹ್ರೈನ್‌ ಪ್ರೊ ಕಬಡ್ಡಿ;ತುಳುನಾಡ್‌ ತಂಡ ಪ್ರಥಮ,ಪುನಿತ್‌ ಬೆಸ್ಟ್‌ All ರೌಂಡರ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

CT Ravi Arrested: ಬಿಜೆಪಿ ಕರೆ ನೀಡಿದ್ದ ಬಂದ್ ಗೆ ಚಿಕ್ಕಮಗಳೂರಿನಲ್ಲಿ ಮಿಶ್ರ ಪ್ರತಿಕ್ರಿಯೆ

CT Ravi Arrested: ಬಿಜೆಪಿ ಕರೆ ನೀಡಿದ್ದ ಬಂದ್ ಗೆ ಚಿಕ್ಕಮಗಳೂರಿನಲ್ಲಿ ಮಿಶ್ರ ಪ್ರತಿಕ್ರಿಯೆ

Belagavi: ಹೆಬ್ಬಾಳಕರ್ ಕ್ಷೇತ್ರದಲ್ಲೇ ಸಿ.ಟಿ.ರವಿಗೆ ವೈದ್ಯಕೀಯ ತಪಾಸಣೆ

Belagavi: ಹೆಬ್ಬಾಳಕರ್ ಕ್ಷೇತ್ರದಲ್ಲೇ ಸಿ.ಟಿ.ರವಿಗೆ ವೈದ್ಯಕೀಯ ತಪಾಸಣೆ

15-

Electricity theft: ಎಸ್ಪಿ, ಸಂಸದನ ವಿರುದ್ಧ ದೂರು ದಾಖಲು

14-

Afghanistan: 2 ಅಪಘಾತ: 50 ಸಾವು, 76 ಮಂದಿಗೆ ಗಾಯ

13-ed

Pharma Company ಮೂಲಕ 4500 ಕೋಟಿ ಅಕ್ರಮ: ಇ.ಡಿ.

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.