ಸಂಸದ ಗೋಪಾಲ್ ಶೆಟ್ಟಿ ಅಭಿನಂದನಾ ಸಮಾರಂಭದ ಪೂರ್ವಭಾವಿ ಸಭೆ
Team Udayavani, Feb 27, 2019, 2:53 PM IST
ಮುಂಬಯಿ: ಫೇಮ್ ಇಂಡಿಯಾದ ಅಭಿಮತದ ಮೂಲಕ ಶ್ರೇಷ್ಠ ಸಂಸದ್ ಅವಾರ್ಡ್-2019ಕ್ಕೆ ಭಾಜನರಾದ ಸಂಸದ ಗೋಪಾಲ್ ಶೆಟ್ಟಿ ಅಭಿಮಾನಿ ಬಳಗ ಮುಂಬಯಿ ವತಿಯಿಂದ ಮಾ. 2ರಂದು ನಡೆಯಲಿರುವ ಅಭಿನಂದನಾ ಸಮಾ ರಂಭದ ಪೂರ್ವಭಾವಿ ಸಭೆಯು ಪೊಯಿಸರ್ ಜಿಮಾVನದ ಸಭಾಂಗಣ ದಲ್ಲಿ ನಡೆಯಿತು. ಸಭೆಯಲ್ಲಿ ಹಲವಾರು ತುಳು- ಕನ್ನಡಿಗರು, ರಾಜಕೀಯ ಧುರೀಣರು ಪಾಲ್ಗೊಂಡು ತಮ್ಮ ಅಮೂಲ್ಯ ಸಲಹೆ-ಸೂಚನೆಗಳನ್ನು ನೀಡಿದರು.
ಕಾರ್ಯಕ್ರಮದ ಸಂಚಾಲಕ, ಸಮಾಜ ಸೇವಕ ಎರ್ಮಾಳ್ ಹರೀಶ್ ಶೆಟ್ಟಿ ಅವರು ಮಾತನಾಡಿ, ಗೋಪಾಲ್ ಶೆಟ್ಟಿ ಅವರು ರಾಜಕೀಯ ರಂಗದ ಎಲ್ಲ ಹಂತಗಳಲ್ಲೂ ತಮ್ಮ ಸಮಾಜ ಸೇವೆಯ ಕಲಾ ನೈಪುಣ್ಯದಿಂದ ಸಂಸದರಾಗಿ ದೇಶದಲ್ಲಿಯೇ ಓರ್ವ ಸರ್ವಶ್ರೇಷ್ಠ ಸಂಸದರಾಗಿ ಹೆಸರು ಪಡೆದಿರುವುದು ತುಳು-ಕನ್ನಡಿಗರಿಗೆ ಹೆಮ್ಮೆಯ ವಿಷಯವಾಗಿದೆ. ಅವರ ಅಭಿನಂದನ ಸಮಾರಂಭವು ಅಭೂತ ಪೂರ್ವಕವಾಗಿ ನಡೆದು ಎಲ್ಲರ ಹೃದಯದಲ್ಲಿ ನೆಲೆ ನಿಲ್ಲುವಂತೆ ಮಾಡಬೇಕಾಗಿರುವುದು ನಮ್ಮ ಕರ್ತವ್ಯವಾಗಿದೆ. ಈ ಉದ್ದೇಶದಿಂದ ಸಭೆಯನ್ನು ಕರೆಯಲಾಗಿದೆ ಎಂದು ನುಡಿದರು.
ವಿಶ್ವ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಇವರು ಮಾತನಾಡಿ, ಕಾರ್ಯಕ್ರಮವು ನಮ್ಮ ಸಂಸ್ಕೃತಿ, ಪರಂಪರೆಯನ್ನು ಪ್ರತಿ ಬಿಂಬಿಸುವಂತಿರಬೇಕು. ತುಳು- ಕನ್ನಡಿಗರ ಕಾರ್ಯಕ್ರಮಗಳು ಯಾವಾಗಲೂ ವೈವಿಧ್ಯತೆಯಿಂದ ಕೂಡಿರುತ್ತದೆ. ಆ ನಿಟ್ಟಿನಲ್ಲಿ ನಾವು ಸಮಾರಂಭ ಆಯೋಜಿಸಿ ಪ್ರಶಂಸೆಗೆ ಪಾತ್ರರಾಗಬೇಕು ಎಂದರು.
ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ಚಂದ್ರಶೇಖರ ಎಸ್. ಪೂಜಾರಿ ಇವರು ಮಾತನಾಡಿ, ಮಹಾನಗರದ ಎಲ್ಲಾ ಸಂಘಗಳ ಒಕ್ಕೂಟದಿಂದ ಜರಗಲಿರುವ ಈ ಸಮಾರಂಭವು ರಾಜಕೀಯ ಕಾರ್ಯಕ್ರಮವಾಗದೆ ಒಗ್ಗಟ್ಟಿನಿಂದ ಸಂಭ್ರಮವಾಗಬೇಕು. ನಮ್ಮ ಮುಂದಾಳು ಜಯ ಸಿ. ಸುವರ್ಣರ ಸಹಕಾರ ಹಾಗೂ 26 ಸ್ಥಳೀಯ ಸಮಿತಿಗಳ ಸಂಪೂರ್ಣ ಸಹಕಾರ ಈ ಸಂಭ್ರಮಕ್ಕೆ ದೊರೆಯಲಿದೆ ಎಂದರು.
ಮೊಗವೀರ ವ್ಯವಸ್ಥಾಪಕ ಮಂಡಳಿಯ ಅಧ್ಯಕ್ಷ ಕೆ. ಎಲ್. ಬಂಗೇರ ಇವರು ಮಾತನಾಡಿ, ಓರ್ವ ಪ್ರಾಮಾಣಿಕ ವ್ಯಕ್ತಿಗೆ ಸಂದ ಗೌರವ ನಮ್ಮ ಎಲ್ಲ ತುಳು-ಕನ್ನಡಿಗರಿಗೆ ದೊರೆತ ಗೌರವವಾಗಿದ್ದು, ಮೊಗವೀರ ಸಮಸ್ತ ಬಂಧು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಮೀರಾ-ಡಹಾಣೂ ಬಂಟ್ಸ್ ಇದರ ಗೌರವಾಧ್ಯಕ್ಷ ಡಾ| ವಿರಾರ್ ಶಂಕರ್ ಶೆಟ್ಟಿ ಇವರು ಮಾತನಾಡಿ, ನಮ್ಮ ಕರ್ತವ್ಯಕ್ಕೆ ಅನುಗುಣವಾಗಿ ನಾವೆಲ್ಲರೂ ಕಾರ್ಯವೆಸಗುವ ಮೂಲಕ ಸಮಾರಂಭವನ್ನು ಮಹಾನಗರ ಅಲ್ಲದೆ ಉತ್ತರ ಮುಂಬಯಿ, ಥಾಣೆ, ಪಾಲ^ರ್ ಪ್ರದೇಶದಲ್ಲಿ ಕೂಡ ಅವರ ಬ್ಯಾನರ್‌ಗಳು ರಾರಾಜಿಸಬೇಕು. ಪ್ರತಿಯೊಬ್ಬರೂ ಜವಾಬ್ದಾರಿಯಿಂದ ಕಾರ್ಯಪ್ರವೃತ್ತರಾಗಬೇಕು ಎಂದರು.
ಸಭೆಯಲ್ಲಿ ಮೆರವಣಿಗೆ, ಜನಸ್ತೋಮ ನಿಯಂತ್ರಣ, ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಯೋಜನೆ, ದೇಶ ಭಕ್ತಿಗಾಯನ ಹಾಗೂ ಶಿಸ್ತಿನ ಸಿಪಾಯಿಯಾಗಿರುವ ಗೋಪಾಲ್ ಶೆಟ್ಟಿ ಅವರ ವ್ಯಕ್ತಿತ್ವಕ್ಕೆ ಅನುಗುಣವಾಗಿ ನಾವು ಕಾರ್ಯಕ್ರಮ ಆಯೋಜನೆ, ಮುಖ್ಯವಾಗಿ ಭದ್ರತೆಯ ಬಗ್ಗೆ ಚರ್ಚಿಸಲಾಯಿತು.
ಮೀರಾ-ಭಾಯಂದರ್ ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಸಚ್ಚಿದಾನಂದ ಶೆಟ್ಟಿ ಮುನ್ನಲಾಯಿಗುತ್ತು, ಕೃಷ್ಣಪ್ಪ ಪೂಜಾರಿ, ಗೋರೆಗಾಂವ್ ಕರ್ನಾಟಕ ಸಂಘದ ಮಾಜಿ ಅಧ್ಯಕ್ಷ ಪಯ್ನಾರು ರಮೇಶ್ ಶೆಟ್ಟಿ, ಮಹೇಶ್ ಶೆಟ್ಟಿ, ಚಾರ್ಕೋಪ್ ಕನ್ನಡಿಗ ಬಳಗದ ಅಧ್ಯಕ್ಷ ಎಂ. ಕೃಷ್ಣ ಎನ್. ಶೆಟ್ಟಿ, ಸಾಂತಾಕ್ರೂಜ್ ಕನ್ನಡ ಸಂಘದ ಅಧ್ಯಕ್ಷ ಎಲ್. ವಿ. ಅಮೀನ್, ಸುರೇಶ್ ಅಂಚನ್, ಬಿಲ್ಲವರ ಅಸೋಸಿಯೇಶನ್ ಉಪಾಧ್ಯಕ್ಷರಾದ ಶಂಕರ ಡಿ. ಪೂಜಾರಿ, ಬೊರಿವಲಿ ತುಳು ಸಂಘದ ಅಧ್ಯಕ್ಷ ವಾಸು ಕೆ. ಪುತ್ರನ್, ಮೊಗವೀರ ಕೋ ಆಪರೇಟಿವ್ ಬ್ಯಾಂಕಿನ ನಿರ್ದೇಶಕ ಗೋಪಾಲ್ ಪುತ್ರನ್, ಭಾರತ್ ಬ್ಯಾಂಕಿನ ನಿರ್ದೇಶಕರಾದ ಗಂಗಾಧರ ಜೆ. ಪೂಜಾರಿ, ಪ್ರೇಮನಾಥ ಪಿ. ಕೋಟ್ಯಾನ್, ಬಂಟರ ಸಂಘ ಜೋಗೇಶ್ವರಿ-ದಹಿಸರ್ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ರವೀಂದ್ರ ಎಸ್. ಶೆಟ್ಟಿ, ಜಿ. ಟಿ. ಆಚಾರ್ಯ, ಪೇಟೆಮನೆ ಪ್ರಕಾಶ್ ಶೆಟ್ಟಿ, ನಿಟ್ಟೆ ದಾಮೋದರ ಆಚಾರ್ಯ, ಪೊಯಿಸರ್ ಜಿಮಾVನದ ಉಪಾಧ್ಯಕ್ಷ ಕರುಣಾಕರ ಶೆಟ್ಟಿ, ಸುರೇಶ್ ಅಂಚನ್, ವಿನೋದಾ ಎ. ಶೆಟ್ಟಿ, ವಿನೋದಾ ಡಿ. ಶೆಟ್ಟಿ, ಪ್ರಭಾಕರ ಶೆಟ್ಟಿ, ಇತರ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದು, ಅಭಿನಂದನಾ ಸಮಾರಂಭದ ಯಶಸ್ಸಿಗೆ ಸೂಕ್ತ ಸಲಹೆ-
ಸೂಚನೆಗಳನ್ನು ನೀಡಿದರು. ಕಲಾ ಜಗತ್ತು ಡಾ| ವಿಜಯ ಕುಮಾರ್ ಶೆಟ್ಟಿ ಮತ್ತು ರಘುನಾಥ ಎಸ್. ಶೆಟ್ಟಿ ಅವರು ಕಾರ್ಯಕ್ರಮದ ಬಗ್ಗೆ ವಿವರ ನೀಡಿದರು.
ಚಿತ್ರ-ವರದಿ: ರಮೇಶ್ ಉದ್ಯಾವರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ
ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಸಿ.ಟಿ.ರವಿ ಮನಸ್ಸಲ್ಲೇ ಕೊಳೆ ತುಂಬಿದೆ, ಫೆನಾಯಿಲ್ ಹಾಕಿ ತೊಳೆದುಕೊಳ್ಳಲಿ: ಸಚಿವೆ ಲಕ್ಷ್ಮೀ
Bantwal: ತುಂಬೆ ಜಂಕ್ಷನ್; ಸರಣಿ ಅಪಘಾತ
Kasaragod ಅಪರಾಧ ಸುದ್ದಿಗಳು: ವಿದ್ಯಾರ್ಥಿನಿಯರಿಗೆ ಕಿರುಕುಳ; ಕೇಸು ದಾಖಲು
Brahmavar: ಆರೂರು; ಬೆಂಕಿ ತಗಲಿ ಗಾಯಗೊಂಡಿದ್ದ ಮಹಿಳೆ ಸಾವು
Kalaburagi: ಟಿಟಿ ಟಯರ್ ಸ್ಫೋಟಗೊಂಡು ಸರಣಿ ಅಪಘಾತ; ಮೂವರು ಸ್ಥಳದಲ್ಲೇ ಮೃತ್ಯು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.