ಮಿ| ಮ್ಯಾಂಗ್ಳೂರ್ ಹಿರಿಮೆಗೆ ಪಾತ್ರನಾದ ಸಿದ್ಧಾಂತ್ ಶೆಟ್ಟಿ ಕಲ್ಯಾಣ್
Team Udayavani, Mar 28, 2017, 4:47 PM IST
ಮುಂಬಯಿ: ವೆಸ್ಟ್‌ಲೈನ್ ಸಮೂಹದ ಪ್ರಾಯೋಜಕತ್ವದಲ್ಲಿ ಇನ್‌ಫೈವ್‌ನಿಟಿ ಸಂಸ್ಥೆಯು ಸೌಂದರ್ಯ ಪ್ರದರ್ಶನಕ್ಕಾಗಿ ಯುವಜನತೆಗೆ ಮಂಗಳೂರಿನಲ್ಲಿ ಆಯೋಜಿಸಿದ್ದ ಇನ್5ನಿಟಿ ಮಿಸ್ ಆ್ಯಂಡ್ ಮಿಸ್ಟರ್ ಮ್ಯಾಂಗ್ಳೂರ್-2017 ಸ್ಪರ್ಧೆಯಲ್ಲಿ ಮುಂಬಯಿ ಉಪನಗರ ಕಲ್ಯಾಣ್‌ನ ಸಿದ್ಧಾಂತ್ ಶೆಟ್ಟಿ “ಮಿಸ್ಟರ್ ಮ್ಯಾಂಗ್ಳೂರ್’ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಪ್ರಥಮ ರನ್ನರ್ ಪ್ರಶಸ್ತಿಯನ್ನು ರಿತೇಶ್ ಶೆಟ್ಟಿ ಮುಂಬಯಿ ಹಾಗೂ ತೃತೀಯ ಸ್ಥಾನವನ್ನು ಉಡುಪಿಯ ಶಾಂತನು ಶೆಟ್ಟಿ ಅವರು ಮುಡಿಗೇರಿಸಿಕೊಂಡಿದ್ದಾರೆ.
ವೆಲ್ಲಿಂಗ್‌ಕರ್ ಕಾಲೇಜಿನ ಪದವೀಧರ ವಿದ್ಯಾರ್ಥಿಯಾಗಿರುವ ಸಿದ್ಧಾಂತ್ ಶೆಟ್ಟಿ ಉಡುಪಿ ಪಾಂಗಳ ಮೂಲದ, ಕಲ್ಯಾಣ್ ಪಶ್ಚಿಮದ ಹೊಟೇಲ್ ಉದ್ಯಮಿ ರಮೇಶ್ ಶೆಟ್ಟಿ ಮತ್ತು ಕಲ್ಯಾಣ್ ಕರ್ನಾಟಕ ಸಂಘದ ಮಹಿಳಾ ವಿಭಾಗದ ಅಧ್ಯಕ್ಷೆ ಮೂಡಬಿದ್ರೆ ಕಡಂದಲೆ ಅಲ್ಲಿನ ಪ್ರತಿಷ್ಠಿತ ಕುಟುಂಬದ ಅಹಲ್ಯಾ ಶೆಟ್ಟಿ ದಂಪತಿ ಸುಪುತ್ರನಾಗಿದ್ದಾರೆ. ರಿತೇಶ್ ಶೆಟ್ಟಿ ಅವರು ಬೊರಿವಿಲಿಯ ನಿವಾಸಿಯಾಗಿದ್ದಾರೆ.
18 ರಿಂದ 24ರ ಹರೆಯದ ಸುಮಾರು 300 ಸ್ಪರ್ಧಿಗಳು ಪಾಲ್ಗೊಂಡಿದ್ದ ಸ್ಪರ್ಧೆಯ ಆಡಿಶನ್ ಮಂಗಳೂರಿನ ಫೂರಮ್ ಪಿಜಾØ ಮಾಲ್ ಮತ್ತು ಮಣಿಪಾಲದ ಹಕುನ ಮಟ ಕ್ಲಬ್‌ನಲ್ಲಿ ನಡೆದಿತ್ತು. ಅಂತಿಮ ಸುತ್ತಿನ ಸ್ಪರ್ಧೆಯು ಮಾ. 24 ರಂದು ಸಂಜೆ ಮಂಗಳೂರು ಬೊಂದೆಲ್ ಇಲ್ಲಿನ ಮ್ಯಾಂಗ್ಳೂರ್‌ಹಿಲ್ಸ್‌ನಲ್ಲಿ ನಡೆಯಿತು. ಸ್ಪರ್ಧಾ ಸಂಘಟಕ ಪ್ರತೀಕ್ ಶೆಟ್ಟಿ ಮತ್ತಿತರರು ಸಮಾರಂಭದಲ್ಲಿ ಉಪಸ್ಥಿತರಿದ್ದು, ವಿನ್ನರ್ ಪ್ರಶಸ್ತಿ ಪಡೆದ ಸಿದ್ಧಾಂತ್ ಶೆಟ್ಟಿ ಅವರಿಗೆ ಮಾಲ್ಗುಡಿ ಟಾಕೀಸ್‌ನ ಅಶೋಕ್ ಶೆಟ್ಟಿ ನಿರ್ಮಾಪಕತ್ವದ ಚಲನಚಿತ್ರದಲ್ಲಿ ನಟಿಸುವ ಅವಕಾಶ ಒದಗಲಿದೆ ಎನ್ನಲಾಗಿದೆ.
ಚಿತ್ರ- ವರದಿ: ರೊನಿಡಾ ಮುಂಬಯಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’
Desi Swara@150: ನವವಿಂಶತಿ ನೃತ್ಯ ಹಬ್ಬದಲ್ಲಿ ದ್ವಿದಳದ ಸತ್ರಿಯ ಪ್ರದರ್ಶನ
State Formation: ಶ್ರೀ ಕೃಷ್ಣ ಬೃಂದಾವನ ಹೂಸ್ಟನ್ ಶಾಖೆಯಲ್ಲಿ ಸಂಸ್ಥಾಪನಾ ದಿನಾಚರಣೆ
Desi Swara: ಇಟಲಿಯಲ್ಲಿ ದೀಪಾವಳಿ ಬೆಳಕು!
MUST WATCH
ಹೊಸ ಸೇರ್ಪಡೆ
Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ
Actor Darshan ವಿರುದ್ದ ಸುಪ್ರೀಂನಲ್ಲಿ ಮೇಲ್ಮನವಿ: ಬೆಂಗ್ಳೂರು ಕಮೀಷನರ್
Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Maharashtra Election: ಬೂತ್ ಗೆಲ್ಲುವತ್ತ ಗಮನ ಹರಿಸಿ: ಕಾರ್ಯಕರ್ತರಿಗೆ ಮೋದಿ ಕರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.