ಮಲ್‌ಬಾರ್‌ ಹಿಲ್‌: ಕಲಾಕ್ರೀಡಾ ಕೇಂದ್ರದಲ್ಲಿ ವಿಶೇಷ ಸಂಚಿಕೆ ಬಿಡುಗಡೆ


Team Udayavani, Nov 18, 2018, 5:16 PM IST

1711mum10.jpg

ಮುಂಬಯಿ: ನಮ್ಮ ಓದುವ ಅಭ್ಯಾಸದಿಂದಲೇ ಸಂಸ್ಕೃತಿ- ಸಂಸ್ಕಾರಗಳು ಉಳಿಯಲು ಸಾಧ್ಯ ವಿದೆ. ಇಂದಿನ ಕಂಪ್ಯೂಟರೀಕೃತ ಯುಗದಲ್ಲಿ ಮಕ್ಕಳಲ್ಲಿ ಓದುವ ಹವ್ಯಾಸ ಮಾಯವಾಗುತ್ತಿರುವುದು ವಿಷಾದ‌ನೀಯವಾಗಿದೆ. ಮಕ್ಕಳನ್ನು ಸುಸಂಸ್ಕೃತರನ್ನಾಗಿಸುವಲ್ಲಿ ಒಳ್ಳೆಯ ಸಾಹಿತ್ಯಗಳು ಬಹಳ ಪ್ರಾಮುಖ್ಯತೆ ಯನ್ನು ವಹಿಸುತ್ತವೆ. ಆದ್ದರಿಂದ ಮಕ್ಕಳಲ್ಲಿ ಓದುವ ಹವ್ಯಾಸವನ್ನು ಮೂಡಿಸಲು ಪಾಲಕರು ಹಾಗೂ ಶಿಕ್ಷಕರು ಪ್ರೇರೇಪಿಸಬೇಕು ಎಂದು ಪತ್ರಕರ್ತೆ ಹರ್ಷಲ್‌ ಮಲೇಕರ್‌ ತಿಳಿಸಿದರು.

ಇತ್ತೀಚೆಗೆ ಮಲ್‌ಬಾರ್‌ ಹಿಲ್‌ ಕಲಾಕ್ರೀಡಾ ಕೇಂದ್ರದ ಗ್ರಂಥಾಲಯ ವಿಭಾಗ ಆಯೋಜಿಸಿದ್ದ ದೀಪಾ ವಳಿಯ ವಿಶೇಷ ಸ್ಮರಣ ಸಂಚಿಕೆ ಬಿಡುಗಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮರಾಠಿ ಜನತೆಯ ವೈಶಿಷ್ಟÂವೆಂದರೆ ಸಾಹಿತ್ಯ, ಕಲೆ ಮತ್ತು ರಾಜಕಾರಣ. ಮಲ್‌ಬಾರ್‌ ಹಿಲ್‌ ಕಲಾಕ್ರೀಡಾ ಕೇಂದ್ರ ತಮ್ಮ ವಾಚಕರಿಗಾಗಿ ಕಡಿಮೆ ಹಣದಿಂದ ಒಳ್ಳೆಯ ವಾಚನಾಲಯ ವನ್ನು ನಿರ್ಮಿಸಲಾಗಿದೆ. ಇದರ ಸದುಪಯೋಗವನ್ನು ವಾಲ್ಕೇಶ್ವರದ ಬಾಣಗಂಗಾ ವಿಭಾಗದ ಎಲ್ಲಾ ಜನರು ಪಡೆದುಕೊಳ್ಳಬೇಕು. ಓದುವ ಹವ್ಯಾಸ ಹೆಚ್ಚಿದಾಗ ನಮ್ಮ ಜ್ಞಾನ ಭಂಡಾರ ವೃದ್ಧಿಯಾಗುತ್ತದೆ. ವಾಲ್ಕೇಶ್ವರ ಮಲಬಾರ್‌ ಹಿಲ್‌ ಬಾಣಗಂಗಾ ವಿಭಾಗದಲ್ಲಿ ಕಳೆದ 38 ವರ್ಷಗಳಿಂದ ಸಾಮಾಜಿಕ, ಶೈಕ್ಷ ಣಿಕ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಈ ಸಂಸ್ಥೆಯು ಮಾಡುತ್ತಿರುವ ಸಾಧನೆ ಅಪಾರವಾಗಿದೆ ಎಂದರು.

ಸಮಾರಂಭದಲ್ಲಿ ಸ್ಥಳೀಯ ಸಮಾಜ ಸೇವಕಿ ಸೋನುತಾಯಿ ಚೌಧರಿ ಉಪಸ್ಥಿತರಿದ್ದು ಮಾತನಾಡಿ, ಜನರು ವಾಟ್ಸಾಪ್‌, ಫೇಸ್‌ಬುಕ್‌, ಟ್ವಿಟ್ಟರ್‌ನೊಂದಿಗೆ ಅಂಟಿಕೊಳ್ಳದೆ ಮರಾಠಿ ಸಾಹಿತ್ಯವನ್ನು ಬೆಳೆಸುವಲ್ಲೂ ಮುಂದಾಗಬೇಕು. ಕನ್ನಡ ಸಾಹಿತ್ಯ ದಂತೆ ಮರಾಠಿ ವಲಯವು ಶ್ರೀಮಂ ತಗೊಂಡಿದ್ದು, ಸಾಹಿತ್ಯವನ್ನು ಉಳಿಸಿ- ಬೆಳೆಸುವ ಜವಾಬ್ದಾರಿ ಇಂದಿನ ಯುವಪೀಳಿಗೆಗೆ ಇದೆ ಎಂದರು.

ಸಂಸ್ಥೆಯ ಸ್ವಾತಿ ಮತ್ತು ಮಹೇಶ್‌ ಸಾಕಾರ್‌ದಾಡೆ, ಸ್ಮಿತಾ ಮಹೀಂದ್ರಕರ್‌, ಸಾಹಿತ್ಯಾಭಿಮಾನಿ ಗಳು ಅಧಿಕ ಸಂಖ್ಯೆಯಲ್ಲಿ ಉಪಸ್ಥಿತ ರಿದ್ದು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.  ಮಲ್‌ಬಾರ್‌ ಹಿಲ್‌ ಕಲಾಕ್ರೀಡಾ ಕೇಂದ್ರದ ಪ್ರಕಾಶ್‌ ಬಾಲೇಕರ್‌, ಅನಿಲ್‌ ಕಾನಡೆ, ಗ್ರಂಥಪಾಲ ವಂದನಾ ಗುರಾವ್‌ ಕಾರ್ಯಕ್ರಮದಲ್ಲಿ ಸಹಕರಿಸಿದರು. ಮಲ್‌ಬಾರ್‌ ಹಿಲ್‌ ಕಲಾಕ್ರೀಡಾ ಕೇಂದ್ರದ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.
 

ಟಾಪ್ ನ್ಯೂಸ್

5-udupi

Udupi: ನ. 9-11ರ ವರೆಗೆ 3 ದಿನಗಳ ಹರಿದಾಸ ಸಾಹಿತ್ಯ ಅಂತಾರಾಷ್ಟ್ರೀಯ ಸಮ್ಮೇಳನ

Brijesh-Chowta-Leter

Mangaluru: ಎಡನೀರು ಶ್ರೀಗಳ ಕಾರಿನ ಮೇಲೆ ದಾಳಿ ಖಂಡನೀಯ; ಪುಂಡರ ತಕ್ಷಣವೇ ಬಂಧಿಸಿ: ಕ್ಯಾ.ಚೌಟ

New Delhi: BSNL invites tender for 5G service

New Delhi: 5ಜಿ ಸೇವೆಗಾಗಿ ಬಿಎಸ್‌ಎನ್ಎಲ್‌ನಿಂದ ಟೆಂಡರ್‌ ಆಹ್ವಾನ

KSOU: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ; ಪ್ರವೇಶಾತಿ ಆರಂಭ

KSOU: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ; ಪ್ರವೇಶಾತಿ ಆರಂಭ

Ayushman Bharat; ಎಲ್ಲ ಖಾಸಗಿ ಆಸ್ಪತ್ರೆಗಳ ಸೇರ್ಪಡೆಗೆ ಸಂಸದರ ಸೂಚನೆ  

Ayushman Bharat; ಎಲ್ಲ ಖಾಸಗಿ ಆಸ್ಪತ್ರೆಗಳ ಸೇರ್ಪಡೆಗೆ ಸಂಸದರ ಸೂಚನೆ  

J&K: If Vajpayee had lived, Jammu and Kashmir would not have become a Union Territory: Omar Abdullah

J&K: ವಾಜಪೇಯಿ ಬದುಕಿದ್ದರೆ ಜಮ್ಮು ಕಾಶ್ಮೀರ ಕೇಂದ್ರಾಡಳಿತ ಪ್ರದೇಶವಾಗುತ್ತಿರಲಿಲ್ಲ: ಒಮರ್

Mangaluru: ಪಿಲಿಕುಳ ಮೃಗಾಲಯಕ್ಕೆ “ಏಷ್ಯಾಟಿಕ್‌ ಗಂಡು ಸಿಂಹ’ ಆಗಮನ

Mangaluru: ಪಿಲಿಕುಳ ಮೃಗಾಲಯಕ್ಕೆ “ಏಷ್ಯಾಟಿಕ್‌ ಗಂಡು ಸಿಂಹ’ ಆಗಮನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

12-

Desiswara: ನ್ಯೂಯಾರ್ಕ್‌ ಸರಕಾರದಿಂದ ಭರ್ಜರಿ ದೀಪಾವಳಿ ಆಚರಣೆ

11-1

Desiswara: ಜಾಗತಿಕ ಬೆಳಕಿನ ಹಬ್ಬ ದೀಪಾವಳಿ – ಬೆಳಕೆಂದರೆ ಬರಿಯ ಬೆಳಕಲ್ಲ…

10-

Desiswara: ಕನ್ನಡ ಉಳಿವಿಗೆ ಜವಾಬ್ದಾರಿಯುತ ನಡೆ ನಮ್ಮದಾಗಲಿ

9-desi

Kannada Alphanbets: “ಕ’ ಕಾರದಲ್ಲಿನ ವಿಶೇಷ:‌ ಕನ್ನಡ ಅಕ್ಷರಮಾಲೆಯಲ್ಲಿನ “ಕ’ ಕಾರ ವೈಭವ

8-

ನ.9: ವಿಶ್ವ ಕನ್ನಡ ಹಬ್ಬ: ಈ ಬಾರಿ ಸಿಂಗಾಪುರದಲ್ಲಿ ರಂಗೇರಲಿರುವ ಸಂಭ್ರಮ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

5-udupi

Udupi: ನ. 9-11ರ ವರೆಗೆ 3 ದಿನಗಳ ಹರಿದಾಸ ಸಾಹಿತ್ಯ ಅಂತಾರಾಷ್ಟ್ರೀಯ ಸಮ್ಮೇಳನ

Commonwealth ಸಂಸದೀಯ ಸಭೆ; ಸ್ಪೀಕರ್‌ ಯು.ಟಿ. ಖಾದರ್‌ ಭಾಗಿ

Commonwealth ಸಂಸದೀಯ ಸಭೆ; ಸ್ಪೀಕರ್‌ ಯು.ಟಿ. ಖಾದರ್‌ ಭಾಗಿ

Apologize or give 5 crores: Another threat to actor Salman

Salman Khan: ಕ್ಷಮೆ ಕೇಳಿ ಇಲ್ಲವೇ 5 ಕೋಟಿ ಕೊಡಿ: ನಟ ಸಲ್ಮಾನ್‌ಗೆ ಮತ್ತೂಂದು ಬೆದರಿಕೆ

Brijesh-Chowta-Leter

Mangaluru: ಎಡನೀರು ಶ್ರೀಗಳ ಕಾರಿನ ಮೇಲೆ ದಾಳಿ ಖಂಡನೀಯ; ಪುಂಡರ ತಕ್ಷಣವೇ ಬಂಧಿಸಿ: ಕ್ಯಾ.ಚೌಟ

New Delhi: BSNL invites tender for 5G service

New Delhi: 5ಜಿ ಸೇವೆಗಾಗಿ ಬಿಎಸ್‌ಎನ್ಎಲ್‌ನಿಂದ ಟೆಂಡರ್‌ ಆಹ್ವಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.