ಘಾಟ್‌ಕೋಪರ್‌ ಕನ್ನಡ ವೆಲ್ಫೇರ್‌ ಸೊಸೈಟಿಯಿಂದ ಬಹುಭಾಷಾ ಕವಿಗೋಷ್ಠಿ


Team Udayavani, Aug 26, 2018, 4:06 PM IST

2304mum08.jpg

ಮುಂಬಯಿ: ನಮ್ಮ ಬದುಕು ನಮಗೆ ಮುಖ್ಯ. ಆ ಬದುಕು ನಮ್ಮ ಕವಿತೆಗಳಲ್ಲಿ ಪಡಿಮೂಡಬೇಕು. ಕವಿತೆ ಭಾಷೆಯಲ್ಲ ಅದು ಇಂದ್ರಿಯಾತೀತವಾದುದು. ಯಾವತ್ತೋ ಒಂದು ಕೆಟ್ಟ ಮನಸ್ಸು ಕವಿತೆ ರಚಿಸಲಾರದು. ಕವಿತೆ ಕಟ್ಟಲು ಒಳ್ಳೆಯ ಸುಸಂಸ್ಕೃತ ಮನಸ್ಸು ಬೇಕು. ಯಾರಿಗೆ ಅರಿವು ಇಲ್ಲವೋ ಅವರಿಗೆ ಅರಿವನ್ನು ಕೊಡುವ ಕೆಲಸ ಕವಿಗಳಿಂದ ಆಗಬೇಕು. ಏಕೆಂದರೆ ಕವಿತೆ ಬದುಕನ್ನು ಪ್ರೀತಿಸಲು ಕಲಿಸುತ್ತದೆ ಎಂದು ಹಿರಿಯ ಕವಯತ್ರಿ ಡಾ| ಸುನೀತಾ ಎಂ. ಶೆಟ್ಟಿ ತಿಳಿಸಿದರು

ಆ. 19ರಂದು ಕನ್ನಡ ವೆಲ್ಫೆàರ್‌ ಸೊಸೈಟಿ ಘಾಟ್ಕೊàಪರ್‌ ವತಿಯಿಂದ ಸ್ವರ್ಣ ಮಹೋತ್ಸವ ನಿಮಿತ್ತ ಘಾಟ್‌ಕೋಪರ್‌ ಪಂತ್‌ನಗರದಲ್ಲಿನ ವೆಲ್ಫೆàರ್‌ ಸೊಸೈಟಿಯ ಬಾಬಾಸ್‌ ಮಹೇಶ್‌ ಎಸ್‌. ಶೆಟ್ಟಿ ಸಭಾಗೃಹದಲ್ಲಿ ನಡೆದ ಕವಿಗೋಷ್ಠಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಬ್ರಹ್ಮಶ್ರೀ ನಾರಾಯಣಗುರು ಅಧ್ಯಯನ ಪೀಠದ ನಿರ್ದೇಶಕ ಮುದ್ದು ಮೂಡುಬೆಳ್ಳೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂದಿನ ಬಹುಭಾಷಾ ಕವಿಗೋಷ್ಠಿ ಬಹಳ ಅರ್ಥಪೂರ್ಣವಾಗಿ ನಡೆದಿದೆ. ಭಾಗವಹಿಸಿದ ಬಹುಭಾಷೆಯ ಎಲ್ಲಾ  ಕವಿಗಳು ತಮ್ಮ ಒಳ್ಳೆಯ ಕವಿತೆಗಳನ್ನು ಸಾದರ ಪಡಿಸಿದ್ದಾರೆ. ಮನುಷ್ಯತ್ವ ಇಂದು ಅರಳಬೇಕು. ಬದುಕನ್ನು ಸುಂದರವಾಗಿ ಹೇಗೆ ರೂಪಿಸಬೇಕೆಂಬ ಆಶಯವುಳ್ಳ ಕವಿತೆಗಳೇ ಇಂದು ಪ್ರಸ್ತುತಗೊಂಡಿರುವುದು ಸ್ತುತ್ಯರ್ಹ ಎಂದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಚೆಂಬೂರು ಕರ್ನಾಟಕ ಸಂಘದ ಅಧ್ಯಕ್ಷ ಅಡ್ವಕೇಟ್‌ ಎಚ್‌. ಕೆ. ಸುಧಾಕರ್‌ ಅವರು ಮಾತನಾಡಿ, ನೋಡುವಾಗ  ಕನ್ನಡ ವೆಲ್ಫೆàರ್‌ ಸೊಸೈಟಿ ಘಾಟ್ಕೊàಪರ್‌ ಇದು ಚಿಕ್ಕ ಸಂಸ್ಥೆಯಾಗಿ ಕಂಡರೂ ಅರ್ಥಪೂರ್ಣವಾದ ಮಹತ್ತರವಾದ ಕನ್ನಡದ ಕೆಲಸವನ್ನು ನಿಭಾಯಿಸಿದೆ. ಇದಕ್ಕೆ ಸಂಸ್ಥೆಯ ಸ್ವರ್ಣ ಸಂಭ್ರಮವೇ ಇದಕ್ಕೆ ಸಾಕ್ಷಿ. ಸಂಸ್ಥೆಯ ಅನನ್ಯ ಸೇವೆಯಿಂದ ಮುಂಬಯಿನಲ್ಲೂ ಕನ್ನಡ ನಾಡು ಉದಯಿಸ‌ಲಿ ಎಂದು ನುಡಿದರು.

ವೆಲ್ಫೆàರ್‌ ಸೊಸೈಟಿಯ ಅಧ್ಯಕ್ಷ ನವೀನ್‌ ಶೆಟ್ಟಿ ಇನ್ನ°ಬಾಳಿಕೆ ಅವರು ಅತಿಥಿಗಳನ್ನು ಗೌರವಿಸಿದರು. ಡಾ| ಗಿರಿಜಾ ಶಾಸ್ತ್ರಿ, ಗೋಪಾಲ್‌ ತ್ರಾಸಿ, ಗಣೇಶ್‌ ಕುಮಾರ್‌, ಡಾ| ಕರುಣಾಕರ್‌ ಶೆಟ್ಟಿ ಪಣಿಯೂರು, ಸಾ. ದಯಾ, ಡಾ| ಜಿ. ಪಿ. ಕುಸುಮಾ, ಅಶೋಕ್‌ ವಳದೂರು, ಅಶೋಕ್‌ ಪಕ್ಕಳ, ಶಾರದಾ ಎ. ಅಂಚನ್‌, ರೋನ್ಸ್‌ ಬಂಟ್ವಾಳ್‌, ಶಾಂತಿ ಶಾಸ್ತ್ರಿ,  ಅಕ್ಷತಾ ದೇಶಪಾಂಡೆ, ಅರುಷಾ ಎನ್‌. ಶೆಟ್ಟಿ  ವಿವಿಧ ಭಾಷೆಗಳಲ್ಲಿ ಕವಿತೆಗಳನ್ನು ಪ್ರಸ್ತುತಪಡಿಸಿದರು. ನಾರಾಯಣ ಶೆಟ್ಟಿ ನಂದಳಿಕೆ ತಮ್ಮ ಕವಿತೆ ವಾಚಿಸಿ ಕವಿಗೋಷ್ಠಿಯನ್ನು   ನಿರ್ವಹಿಸಿದರು.

ಕಾರ್ಯಕ್ರಮದಲ್ಲಿ ಬಾಬು ಶಿವ ಪೂಜಾರಿ, ಮಂಗಳೂರು ವಿವಿ  ಸಂಯೋಜಕ ಮತ್ತು ಉಪ ಕುಲಸಚಿವ ಪ್ರಭಾಕರ ನೀರುಮಾರ್ಗ, ಮೂಡಬಿದ್ರೆ ಆಳ್ವಾಸ್‌ ಕಾಲೇಜ್‌ನ ಪ್ರಾಧ್ಯಾಪಕ ಡಾ| ಯೋಗೀಶ್‌ ಕೈರೋಡಿ, ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಅಧ್ಯಕ್ಷ ಚಂದ್ರಶೇಖರ ಪಾಲೆತ್ತಾಡಿ, ಬಂಟರವಾಣಿ ಸಂಪಾದಕ ಅಶೋಕ್‌ ಪಕ್ಕಳ, ಜಿ. ಟಿ. ಆಚಾರ್ಯ, ಕರ್ನೂರು ಮೋಹನ್‌ ರೈ, ಸತೀಶ್‌ ಎನ್‌. ಬಂಗೇರ, ರಾಧಾಕೃಷ್ಣ ಶೆಟ್ಟಿ, ಶಂಕರ್‌ ಶೆಟ್ಟಿ, ದಿವಾಕರ್‌ ಶೆಟ್ಟಿ ಮತ್ತಿತರ ಗಣ್ಯರು ಉಪಸ್ಥಿತರಿದ್ದರು. ವೆಲ್ಫೆàರ್‌ ಸೊಸೈಟಿಯ ಕನ್ನಡ ವೆಲ್ಫೆàರ್‌ನ ಉಪಾಧ್ಯಕ್ಷ ಜಯರಾಜ್‌ ಜೈನ್‌, ಕೋಶಾಧಿಕಾರಿ ಹರೀಶ್‌ ಎಂ. ಶೆಟ್ಟಿ, ಜೊತೆ ಕಾರ್ಯದರ್ಶಿ ರಮಾನಂದ ಶೆಟ್ಟಿ, ಮಹಿಳಾ ವಿಭಾಗಧ್ಯಕ್ಷೆ ಶಾಂತಾ  ಎನ್‌. ಶೆಟ್ಟಿ ಮತ್ತಿತರ ಪದಾಧಿಕಾರಿಗಳ ಸದಸ್ಯರು  ಅತಿಥಿಗಳನ್ನು ಗೌರವಿಸಿದರು. ಕಾರ್ಯದರ್ಶಿ ಸುಧಾಕರ ಎಲ್ಲೂರು ವಂದಿಸಿದರು.

ಟಾಪ್ ನ್ಯೂಸ್

Darshan (3)

Renukaswamy ಹ*ತ್ಯೆ ಸ್ಥಳದಲ್ಲಿ ದರ್ಶನ್‌ ಇದ್ದ ಚಿತ್ರ ಲಭ್ಯ: ಪರಂ

ravi-kumar

BJP ಸೋಲಿಗೆ ರಾಜ್ಯಾಧ್ಯಕ್ಷ ಒಬ್ಬರೇ ಹೊಣೆಯಲ್ಲ: ಎನ್‌. ರವಿಕುಮಾರ್‌

1-nikkki

JDS ಕಳೆದುಕೊಂಡಲ್ಲೇ ಹುಡುಕುತ್ತೇನೆ: ನಿಖಿಲ್‌ ಕುಮಾರಸ್ವಾಮಿ

Renukacharya

Davanagere: ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ರಚನೆಯಾದ 3 ತಂಡಗಳೇ ಅಧಿಕೃತ: ರೇಣುಕಾಚಾರ್ಯ

BBK11: ಕಣ್ಣೀರುಡುತ್ತಲೇ ಬಿಗ್ ಬಾಸ್ ಮನೆಯಿಂದ ಆಚೆ ಬಂದ ಧರ್ಮ ಕೀರ್ತಿರಾಜ್

BBK11: ಕಣ್ಣೀರುಡುತ್ತಲೇ ಬಿಗ್ ಬಾಸ್ ಮನೆಯಿಂದ ಆಚೆ ಬಂದ ಧರ್ಮ ಕೀರ್ತಿರಾಜ್

ncp

NCP Vs NCP: ಶರದ್‌ ಬಣದ ವಿರುದ್ಧ 29 ಕ್ಷೇತ್ರ ಗೆದ್ದ ಅಜಿತ್‌ ಬಣ

Maharashtra: ಉದ್ದವ್‌ ಬಣದ 36 ಅಭ್ಯರ್ಥಿ ಸೋಲಿಸಿದ ಶಿಂಧೆ ಶಿವ ಸೇನೆ

Maharashtra: ಉದ್ದವ್‌ ಬಣದ 36 ಅಭ್ಯರ್ಥಿ ಸೋಲಿಸಿದ ಶಿಂಧೆ ಶಿವ ಸೇನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Desi Swara: ಲಕ್ಸಂಬರ್ಗ್‌ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ

Desi Swara: ಲಕ್ಸಂಬರ್ಗ್‌ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ

ಇಂಗ್ಲೆಂಡ್‌ನ‌ ರಾದರಮ್‌ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ

ಇಂಗ್ಲೆಂಡ್‌ನ‌ ರಾದರಮ್‌ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’

Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’

Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್‌

Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್‌

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Darshan (3)

Renukaswamy ಹ*ತ್ಯೆ ಸ್ಥಳದಲ್ಲಿ ದರ್ಶನ್‌ ಇದ್ದ ಚಿತ್ರ ಲಭ್ಯ: ಪರಂ

Tiger

Gundlupet: ಬಂಡೆ ಮೇಲೆ ಹುಲಿ; ಆತಂಕ

ravi-kumar

BJP ಸೋಲಿಗೆ ರಾಜ್ಯಾಧ್ಯಕ್ಷ ಒಬ್ಬರೇ ಹೊಣೆಯಲ್ಲ: ಎನ್‌. ರವಿಕುಮಾರ್‌

1-nikkki

JDS ಕಳೆದುಕೊಂಡಲ್ಲೇ ಹುಡುಕುತ್ತೇನೆ: ನಿಖಿಲ್‌ ಕುಮಾರಸ್ವಾಮಿ

Renukacharya

Davanagere: ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ರಚನೆಯಾದ 3 ತಂಡಗಳೇ ಅಧಿಕೃತ: ರೇಣುಕಾಚಾರ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.