“ಸೃಜನಾ ಮುಂಬಯಿ’ ಕನ್ನಡ ಲೇಖಕಿಯರ ಬಳಗದಿಂದ 4 ಕೃತಿಗಳ ಲೋಕಾರ್ಪಣೆ

Team Udayavani, Jul 3, 2018, 4:56 PM IST

0107mum02.jpg

ಮುಂಬಯಿ: ಮುಂಬಯಿ  ಮಹಾನಗರದಲ್ಲಿ ಮಹಿಳೆಯರನ್ನು ಒಟ್ಟುಗೂಡಿಸಿ ಕನ್ನಡ ಪರಿಚಾರಿಕೆ ಯನ್ನು ಮಾಡುತ್ತಿರುವ ಸೃಜನಾ ಬಳಗ ಕಾರ್ಯವೈಖರಿ ಅಭಿನಂದ ನೀಯವಾಗಿದೆ. ಬಳಗದ ಬಗ್ಗೆ ಮುಂಬಯಿ ಕನ್ನಡಿಗರು ಅಭಿಮಾನ ಪಡುತ್ತಿದ್ದಾರೆ. ಕೃತಿ ಪ್ರಕಟನೆಯೊಂದಿಗೆ ಸಾಹಿತ್ಯ ಸೇವೆ ಹಾಗೂ ಮಹಿಳಾ ಲೇಖಕಿಯರಿಗೆ ಬರೆಯಲು ಪ್ರೋತ್ಸಾಹ ಕೊಡುತ್ತಿದೆ. ನಾವೂ ಬರೆಯುವುದು ಮೊದಲು ನಮಗಾಗಿ. ಆಮೇಲೆ ಸಮಾಜಕ್ಕಾಗಿ ಈ ಅರಿವು ಎಲ್ಲಾ ಬರಹಗಾರರಿಗೆ ಇರಬೇಕಾದ ಅಗತ್ಯವಾದ ಕೆಲಸ ವಾಗಿದೆ  ಎಂದು ಸೃಜನಾ ಸಹ ಸಂಚಾಲಕಿ ಮೀನಾ ಕಳವಾರ ತಿಳಿಸಿದರು.

ಜೂ. 30 ರಂದು ಸಂಜೆ ಮಾಟುಂಗಾ ಪೂರ್ವದ ಭಾವು ದಾಜಿ ರಸ್ತೆಯ ಮೈಸೂರು ಅಸೋಸಿಯೇಶನ್‌ ಮುಂಬಯಿ ಇದರ ಕಿರುಸಭಾಗೃಹದಲ್ಲಿ ಕನ್ನಡ ಲೇಖಕಿ ಯರ ಬಳಗ “ಸೃಜನಾ ಮುಂಬಯಿ’ ಆಯೋಜಿಸಿದ್ದ ನಾಲ್ಕು ಕೃತಿಗಳ ಬಿಡುಗಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ ಕೃತಿಕಾರರನ್ನು ಅಭಿನಂದಿಸಿದರು.

ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಡಾ| ಸುನೀತಾ ಎಂ. ಶೆಟ್ಟಿ ಅವರ “ಸಮಾರಾಧನೆ’ ಕೃತಿಯನ್ನು  ಹಿರಿಯ ಸಾಹಿತಿ ಡಾ|  ವಿಶ್ವನಾಥ್‌ ಕಾರ್ನಾಡ್‌, ಸೃಜನಾ ಪ್ರಕಾಶಿತ‌ ಕೃತಿಗಳ ಇತರ ಲೇಖಕರ ಅವಲೋಕನ ಬರಹಗಳ “ಓದು ಮುಗಿಸಿದ ಮೇಲೆ’ ಕೃತಿಯನ್ನು ಮೈಸೂರು ಅಸೋಸಿಯೇಶ‌ನ್‌ ಮುಂಬಯಿ ಅಧ್ಯಕ್ಷೆ ಕು| ಕಮಲಾ ಕಾಂತರಾಜ್‌ ಮತ್ತು ಡಾ| ದಾûಾಯಿಣಿ ಯಡಹಳ್ಳಿ ಅವರ ಕೃತಿಗಳಾದ “ವರ್ತುಲ’ ಕಥಾ ಸಂಕಲನವನ್ನು ನಾಡಿನ ಹೆಸರಾಂತ ವಿಮರ್ಶಕ ಡಾ| ಕೆ. ರಘುನಾಥ್‌ ಹಾಗೂ ಜಾನಪದ ಹಾಡುಗಳ ಸಂಕಲನ “ಅವ್ವಂದಿರ ಹಾಡುಗಳು’ ಕೃತಿಗಳನ್ನು ಏಕಕಾಲಕ್ಕೆ ಬಿಡುಗಡೆಗೊಳಿಸಿದರು.

ನಮ್ಮಲ್ಲಿ ಇರುವ ಸಂಸ್ಕೃತಿ ನಮ್ಮ ಆಚಾರ ವಿಚಾರಗಳ ಬಗ್ಗೆ ನಾವು ಹೆಮ್ಮೆ ಹೊಂದಿರಬೇಕು. ಮುಂಬಯಿಯಲ್ಲಿ ಮಹಿಳಾ ಲೇಖಕಿಯರು ತುಂಬಾ ಕ್ರೀಯಾ ಶೀಲರಾಗಿ ಸಾಹಿತ್ಯ ನುಡಿ ಸೇವೆಯಲ್ಲಿ ತೊಡಗಿಸಿಕೊಂಡ ಪರಿ ನಿಜಕ್ಕೂ ನನಗೆ ತುಂಬಾ ಹೆಮ್ಮೆ ಎಣಿಸುತ್ತದೆ. ನಮ್ಮ ಸಂತೋಷವನ್ನು ಬೇರೆಯವರ ಜೊತೆಗೆ ಹಂಚಿಕೊಂಡು ಇನ್ನೊಬ್ಬರಿಗೆ ಖುಷಿ ಕೊಡುವಂತಹ ಬರಹಗಳು ಕೃತಿರೂಪದಲ್ಲಿ ಕಾಣಿಸಿಕೊಳ್ಳುವುದು ಬಹಳ ಅಗತ್ಯವೆನಿಸುತ್ತದೆ ಎಂದು ಕಮಲಾ ಕಾಂತರಾಜ್‌ ತಿಳಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಡಾ| ದಾಕ್ಷಾಯಣಿ ಯಡಹಳ್ಳಿ ಅವರು, ಸೃಜನಕ್ಕೆ ಈಗ ಹದಿ ನಾರ‌ರ ಹರೆಯ. ಮುಂಬಯಿ ಲೇಖಕಿಯರು ಸೇರಿ ಕಟ್ಟಿದ ಸಂಘವಿದು. ಮುಂಬಯಿ ಕನ್ನಡ ಲೇಖಕಿಯರಿಗೆ ವೇದಿಕೆ ಒದಗಿಸು ವುದು ಇದರ ಮುಖ್ಯ ಕೆಲಸ. ಕನ್ನಡ ಸಾಹಿತ್ಯ, ಕನ್ನಡ ಭಾಷೆಯ ಸಂಸ್ಕೃತಿಯ ಕಂಪನ್ನು ಮುಂಬಯಿ ಕನ್ನಡಿಗರಿಗೆ ಊಣಬಡಿಸುತ್ತಿದೆ ಎಂದು ನುಡಿದರು.

ಮೈಸೂರು ಅಸೋ. ಮುಂಬಯಿ ಸಹಯೋಗ ಹಾಗೂ ಸೃಜನಾ ಸಂಸ್ಥೆಯ ಆಶ್ರಯದಲ್ಲಿ ನಡೆಸ‌ಲ್ಪಟ್ಟ ಕಾರ್ಯಕ್ರಮದ ವೇದಿಕೆಯಲ್ಲಿ ಸೃಜನಾ ರೂವಾರಿ ಡಾ| ಸುನೀತಾ ಎಂ. ಶೆಟ್ಟಿ, ಹೇಮಾ ಸದಾನಂದ್‌ ಅಮೀನ್‌ ಉಪಸ್ಥಿತರಿದ್ದು ಅತಿಥಿಗಳಿಗೆ ಕೃತಿ ಗಳನ್ನಿತ್ತು ಗೌರವಿಸಿದರು. 

ಡಾ| ದಾûಾಯಿಣಿ ಯಡಹಳ್ಳಿ ಸ್ವಾಗತಿಸಿ ಪ್ರಸ್ತಾವನೆಗೈದರು. ವಾಣಿ ಶೆಟ್ಟಿ ಅತಿಥಿಗಳನ್ನು ಪರಿಚಯಿಸಿ ಕಾರ್ಯ ಕ್ರಮ ನಿರೂಪಿಸಿದರು. ಶಾರದಾ ಅಂಬೆಸಂಗೆ ಪ್ರಾರ್ಥನೆ ಗೈದರು. ಬಳಗದ ಸದಸ್ಯೆಯರು ಉಪಸ್ಥಿತರಿದ್ದರು.  

ಡಾ| ಸುನೀತಾ ಶೆಟ್ಟಿ ಅವರು ತುಂಬಾ ಸಂಶೋಧನೆ ಮಾಡಿ ಲೇಖನಗಳನ್ನು ಬರೆಯುತ್ತಾರೆ. ಅವರ ಲೇಖನಗಳು ವೈಚಾರಿಕ ನೆಲೆಯಿಂದ ಕೂಡಿರುತ್ತವೆ. ವಿಷಯಗಳ ಆಯ್ಕೆ ಮತ್ತು ವಿವರಿಸುವ ಪದ್ಧತಿ ಗಮನಿಸಿದಾಗ ಅವರ ಆಳವಾದ ಅಧ್ಯಯನ ಕಂಡು ಬರುತ್ತದೆ. ಸಮಾರಾಧನೆ ಇದೊಂದು ಹೊಸ ರೀತಿಯ ಗ್ರಂಥವಾಗಿದೆ.
-ಡಾ| ವಿಶ್ವನಾಥ್‌ ಕಾರ್ನಾಡ್‌, ಹಿರಿಯ ಸಾಹಿತಿ

ಕ್ರಿಯಾಶೀಲತೆಗೆ ಇನ್ನೊಂದು ಹೆಸರು ಮುಂಬಯಿ ಲೇಖಕಿ ಡಾ| ಸುನೀತಾ ಶೆಟ್ಟಿ. ಕನ್ನಡ ಜಾನಪದ ನಮ್ಮ ಆಸ್ತಿ. ಆದರಿಂದ ಹಾಡುಗಳೂ ಕೂಡ ಬಂದು ನಮ್ಮ ಲೌಕಿಕ ಪರಂಪರೆಗೆ ಸೇರಿದವು. ಅವುಗಳನ್ನು ಸಂಗ್ರಹಿಸಿಕೊಟ್ಟವರು ದಾûಾಯಣಿ ಯಡವಳ್ಳಿ ಅವರು. ಮೌಖೀಕ ಪರಂಪರೆಯ ಕಥೆಗಳು ಶಿಷ್ಟ ಸಾಹಿತ್ಯದ ಮೇಲೆ ಪ್ರಭಾವ ಬೀರಿದೆ. ವರ್ತುಲ ಕಥಾ ಸಂಕಲನದಲ್ಲಿ ಹೆಣ್ಣು, ಗಂಡುಗಳ ವರ್ತುಲ ಬಂಧನ ಇರುವುದನ್ನು ಕಾಣಬಹುದು. ನಮ್ಮ ಕನ್ನಡ ಸಂಸ್ಕೃತಿಯ ಅನಾವರಣ ಈ ಕಥೆಗಳಲ್ಲಿ ಪ್ರಕಟವಾಗಿದೆ. ದಾûಾಯಣಿ ಯಡಹಳ್ಳಿ ಅವರ ಜಾನಪದ ಅವ್ವಂದಿರ ಹಾಡುಗಳನ್ನು ಸುಶ್ರಾವ್ಯವಾಗಿ ಕೃತಿಯಲ್ಲಿ ಮೂಡಿಸಿದ್ದಾರೆ.
-ಡಾ| ಕೆ. ರಘುನಾಥ್‌, ಹಿರಿಯ ಸಾಹಿತಿ, ವಿಮರ್ಶಕ

ಚಿತ್ರ-ವರದಿ: ರೋನ್ಸ್‌ ಬಂಟ್ವಾಳ್‌

ಟಾಪ್ ನ್ಯೂಸ್

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

2-vijayapura

Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ

Jaiswal

Canada Vs India: ನಿಜ್ಜರ್‌ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ

Bhagavath

Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್‌

ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

CJI-Ind

Recommendation: ನ್ಯಾ. ಸಂಜೀವ್‌ ಖನ್ನಾ ಸುಪ್ರೀಂಕೋರ್ಟ್‌ ಮುಂದಿನ ಮುಖ್ಯ ನ್ಯಾಯಮೂರ್ತಿ

Koppal: ಚಿಕನ್‌, ಮಟನ್‌ ಸೆಂಟರ್‌ಗೆ ಸಚಿವೆ ಶೋಭಾ ಕರಂದ್ಲಾಜೆ ಹೆಸರಿಟ್ಟ ಅಭಿಮಾನಿ

Koppal: ಚಿಕನ್‌, ಮಟನ್‌ ಸೆಂಟರ್‌ಗೆ ಸಚಿವೆ ಶೋಭಾ ಕರಂದ್ಲಾಜೆ ಹೆಸರಿಟ್ಟ ಅಭಿಮಾನಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Navaratri 2024: ನವರಾತ್ರಿ “ನವ ಚೈತನ್ಯದ ನವರಾತ್ರಿಗಳು”

Navaratri 2024: ನವರಾತ್ರಿ “ನವ ಚೈತನ್ಯದ ನವರಾತ್ರಿಗಳು”

Navaratri 2024:ಕರಾವಳಿಯ ನವದಿನದ ಸಂಭ್ರಮ-ಮಂಗಳೂರು ದಸರಾ’ ಒಂದು ವಿಶಿಷ್ಟ ಅನುಭೂತಿ

Navaratri 2024:ಕರಾವಳಿಯ ನವದಿನದ ಸಂಭ್ರಮ-ಮಂಗಳೂರು ದಸರಾ’ ಒಂದು ವಿಶಿಷ್ಟ ಅನುಭೂತಿ

Navaratri 2024: ನವ ರೂಪದಲ್ಲಿ ದೇವಿಯ ದೈವಿಕ ನವರಾತ್ರಿಗಳು-ಶಕ್ತಿಯ ಸಂಕೇತ ಶೈಲಪುತ್ರಿ

Navaratri 2024: ನವ ರೂಪದಲ್ಲಿ ದೇವಿಯ ದೈವಿಕ ನವರಾತ್ರಿಗಳು-ಶಕ್ತಿಯ ಸಂಕೇತ ಶೈಲಪುತ್ರಿ

ವಿಶ್ವಬ್ರಾಹ್ಮಣ ಒಕ್ಕೂಟ ಮಸ್ಕತ್‌: ಸ್ವಯಂ ಪ್ರೇರಿತ ರಕ್ತದಾನ ಶಿಬಿರ

ವಿಶ್ವಬ್ರಾಹ್ಮಣ ಒಕ್ಕೂಟ ಮಸ್ಕತ್‌: ಸ್ವಯಂ ಪ್ರೇರಿತ ರಕ್ತದಾನ ಶಿಬಿರ

ಯಕ್ಷಧ್ರುವ ಪಟ್ಲ ಫೌಂಡೇಶನ್‌: 75 ದಿನಗಳ ಯಕ್ಷಯಾನ ಸಮಾರೋಪ

ಯಕ್ಷಧ್ರುವ ಪಟ್ಲ ಫೌಂಡೇಶನ್‌: 75 ದಿನಗಳ ಯಕ್ಷಯಾನ ಸಮಾರೋಪ

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

udayavani youtube

ಮಕ್ಕಳ ಸ್ಕ್ರೀನ್ ಟೈಮಿಂಗ್ ಕುರಿತು ಎಚ್ಚರಿಕೆ ಅತ್ಯವಶ್ಯಕ.. ಇಲ್ಲಿದೆ ಅಗತ್ಯ ಮಾಹಿತಿ

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

ಹೊಸ ಸೇರ್ಪಡೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

2-vijayapura

Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ

Jaiswal

Canada Vs India: ನಿಜ್ಜರ್‌ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ

Bhagavath

Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್‌

ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.