ಶೀಘ್ರ ಮತ್ತೆ ಮೂರು ಎಸಿ ಲೋಕಲ್ ಸೇವೆಗೆ ಲಭ್ಯ
Team Udayavani, Dec 14, 2020, 1:21 PM IST
ಮುಂಬಯಿ, ಡಿ. 13: ಕೋವಿಡ್ ಕಾಲಾವಧಿಯಲ್ಲಿ ವಿವಿಧ ಹಂತಗಳಲ್ಲಿ ಪಶ್ವಿಮ ಉಪನಗರ ರೈಲ್ವೇಯ ಮೂರು ಹೊಸ ಹವಾನಿಯಂತ್ರಿತ ಲೋಕಲ್ ರೈಲುಗಳು ಶೀಘ್ರದಲ್ಲೇ ಪ್ರಯಾಣಿಕರ ಸೇವೆಗಳಿಗೆ ಹಾಜರಾಗಲಿದೆ ಎಂದು ಪಶ್ಚಿಮ ರೈಲ್ವೇ ಇಲಾಖೆ ತಿಳಿಸಿದೆ.
ಪ್ರಸ್ತುತ ಅಗತ್ಯ ಸೇವೆಯಲ್ಲಿರುವವರಿಗೆ ಮತ್ತು ಮಹಿಳೆಯರಿಗೆ ಮಾತ್ರ ಲೋಕಲ್‌ನಲ್ಲಿ ಪ್ರಯಾಣಿಸಲು ಅನುಮತಿ ನೀಡಿದ್ದು, ಹೊಸ ವರ್ಷದಲ್ಲಿ ಪ್ರಯಾಣಿಕರ ಸೇವೆಯಲ್ಲಿ ಲಭ್ಯವಾಗಲಿದೆ ಎಂದು ರೈಲ್ವೇ ಆಡಳಿತ ತಿಳಿಸಿದೆ.
ಪಶ್ಚಿಮ ಮಾರ್ಗಗಳಲ್ಲಿ ಈಗಾಗಲೇ ನಾಲ್ಕು ಹವಾ ನಿಯಂತ್ರಿತ ಸ್ಥಳೀಯ ರೈಲುಗಳು ಸೇವೆಯ ಲ್ಲಿದ್ದರೆ, ಕೋವಿಡ್ ಅವಧಿಯಲ್ಲಿ ಇನ್ನೂ ಮೂರು ಹವಾ ನಿ ಯಂತ್ರಿತ ರೈಲುಗಳು ಪಶ್ಚಿಮ ರೈಲ್ವೇಗೆ ಸೇರಿ ಕೊಂಡಿವೆ. ಮಾರ್ಚ್‌ನಲ್ಲಿ ಐದನೇ ಹವಾನಿ ಯಂತ್ರಿತ ಲೋಕಲ್ ಅನ್ನು, ಸೆಪ್ಟಂಬರ್‌ನಲ್ಲಿ ಆರನೇ ಮತ್ತು ಡಿಸೆಂಬರ್‌ನಲ್ಲಿ ಏಳನೆಯ ಲೋಕಲ್ ರೈಲ್ವೇ ಆಡಳಿತದ ವಶಕ್ಕೆ ನೀಡಲಾಯಿತು ಎಂದು ಪಶ್ಚಿಮ ರೈಲ್ವೆಯ ಮುಖ್ಯ ಜನಸಂಪರ್ಕ ಅಧಿಕಾರಿ ಸುಮಿತ್ ಠಾಕೂರ್ ಹೇಳಿದ್ದಾರೆ.
ಪ್ರಸ್ತುತ ಪಶ್ಚಿಮ ಮಾರ್ಗಗಳಲ್ಲಿ ನಾಲ್ಕು ಹವಾನಿ ಯಂತ್ರಿತ ಸ್ಥಳೀಯ ರೈಲುಗಳು ಸೇವೆಯಲ್ಲಿವೆ. ಮತ್ತೆ ಮೂರು ಹವಾ ನಿಯಂತ್ರಿತ ಲೋಕಲ್‌ಗಳನ್ನು ಹೇಗೆ ಚಲಾಯಿಸಬೇಕು ಎಂಬುದರ ಕುರಿತು ಯೋಜನೆ ನಡೆಯುತ್ತಿದೆ. ಈ ಮೂರು ಹವಾನಿಯಂತ್ರಿತ ಲೋಕಲ್ ಪೈಕಿ ಎರಡು ರೈಲುಗಳು 2021ರ ಮಾರ್ಚ್ ವೇಳೆಗೆ ಸೇವೆಗೆ ಹಾಜರಾಗಲಿದ್ದು, ಬಾಕಿ ಒಂದನ್ನು ಮಾರ್ಚ್ ಬಳಿಕ ಲಭ್ಯವಾಗಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಪಶ್ಚಿಮ ರೈಲ್ವೇಯ ಹವಾನಿಯಂತ್ರಿತ ಲೋಕಲ್ ಗಳನ್ನು ಏಳು ತಿಂಗಳಿಗಿಂತ ಹೆಚ್ಚು ಕಾಲ ಮುಚ್ಚಲಾಯಿತು. ಹವಾನಿಯಂತ್ರಿತ ಲೋಕಲ್ ಸೇವೆಯು ಅ. 15ರಿಂದ ಪ್ರಾರಂಭವಾಯಿತು. ಈ ರೈಲು ದಿನಕ್ಕೆ 12 ಸುತ್ತುಗಳ ಸೇವೆ ಸಲ್ಲಿಸುತ್ತವೆ. ಪ್ರಸ್ತುತ ಹವಾನಿಯಂತ್ರಿತ ಸ್ಥಳೀಯ ರೈಲುಗಳಿಗೆ ಕಡಿಮೆ ಪ್ರತಿಕ್ರಿಯೆ ಇದೆ. ನವೆಂಬರ್‌ವರೆಗೆ 1,023 ಟಿಕೆಟ್‌ಗಳು ಮತ್ತು 667 ಪಾಸ್‌ಗಳನ್ನು ಮಾರಾಟ ಮಾಡಲಾಗಿದೆ. ಪಶ್ಚಿಮ ರೈಲ್ವೇ ಪ್ರಕಾರ ಡಿಸೆಂಬರ್‌ನಲ್ಲಿ 331 ಟಿಕೆಟ್‌ಗಳು ಮತ್ತು 223 ಪಾಸ್‌ಗಳನ್ನು ಮಾರಾಟ ಮಾಡಲಾಗಿದೆ. ಹವಾ ನಿಯಂತ್ರಿತ ಲೋಕಲ್ ಗಳಲ್ಲಿ 5,964 ಪ್ರಯಾ ಣಿಕರ ಸಾಮರ್ಥ್ಯವಿದೆ ಆದರೆ ಕೊರೊನಾ ಅವಧಿ ಯಲ್ಲಿ 700 ಪ್ರಯಾಣಿಕರಿಗೆ ಮಾತ್ರ ಪ್ರಯಾ ಣಿಸಲು ಅವಕಾಶ ನೀಡಲು ರೈಲ್ವೇ ಆಡಳಿತ ನಿರ್ಧರಿಸಿದೆ. ಆದರೆ ಅದಕ್ಕಿಂತ ಕಡಿಮೆ ಪ್ರತಿ ಕ್ರಿಯೆ ದೊರೆಯುತ್ತಿದೆ. ಮಧ್ಯ ರೈಲ್ವೇಯಲ್ಲಿ ಥಾಣೆ ಯಿಂದ ಪನ್ವೆಲ್‌ವರೆಗೆ ಹವಾನಿಯಂತ್ರಿತ ಒಂದು ಲೋಕಲ್ ಇದ್ದು, ಕೊರೊನಾ ಹಿನ್ನೆಲೆಯಲ್ಲಿ ಇದನ್ನು ಕೆಲವು ಸಮಯದಿಂದ ಮುಚ್ಚಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
ಇಂಗ್ಲೆಂಡ್‌ನ ರಾದರಮ್ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’
Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್
MUST WATCH
ಹೊಸ ಸೇರ್ಪಡೆ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.