ಮುಂಬಯಿ ಅರುಣೋದಯ ಕಲಾನಿಕೇತನ ವಜ್ರ ಮಹೋತ್ಸವ ಸಂಭ್ರಮ
Team Udayavani, Nov 27, 2018, 5:17 PM IST
ಮುಂಬಯಿ: ಸೂರ್ಯೋದಯಕ್ಕೆ ಮೊದಲು ಅರುಣೋದಯದ ಕಿರಣವು ಜಗತ್ತಿಗೆ ಬೆಳಕನ್ನು ನೀಡುವಂತೆ ಅರುಣೋದಯ ಕಲಾ ನಿಕೇತನವು ಕಳೆದ 60 ವರ್ಷಗಳಿಂದ ಕಲಾ ಸೇವೆಯನ್ನು ಮಾಡುತ್ತ ವಿಶ್ವಾದ್ಯಂತ ಭಾರತೀಯ ಕಲೆಯ ಪ್ರತಿಬಿಂಬವನ್ನು ಪಸರಿಸುವ ಕಾರ್ಯದಲ್ಲಿ ನಿರತವಾಗಿದೆ. ಅನೇಕ ಮಕ್ಕಳನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆಸಿದ ಕೀರ್ತಿ ಸಂಸ್ಥೆಗಿದೆ. ಸಂಸ್ಥೆಯಿಂದ ಕಲೆಯ ಉಳಿವು ಮತ್ತು ಬೆಳೆಸುವಿಕೆಯ ಕಾರ್ಯ ಅಭಿನಂದನೀಯವಾಗಿದೆ ಎಂದು ವಿದ್ಯಾವಿಹಾರ್ ಶ್ರೀ ಅಂಬಿಕಾ ಅನ್ನಪೂರ್ಣೇಶ್ವರಿ ಮಂದಿರದ ವೇ| ಮೂ| ಪೆರ್ಣಂಕಿಲ ಹರಿದಾಸ್ ಭಟ್ ಹೇಳಿದರು.
ನ. 25ರಂದು ಚೆಂಬೂರು ಫೈನ್‌ಆಟ್ಸ್ ಸೊಸೈಟಿಯ ಸಭಾಗೃಹದಲ್ಲಿ ನಡೆದ ನಗರದ ಅರುಣೋದಯ ಕಲಾನಿಕೇತನ ಸಂಸ್ಥೆಯ ವಜ್ರ ಮಹೋತ್ಸವ ಸಂಭ್ರಮವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದ ಅವರು, ಡಾ| ಮೀನಾಕ್ಷೀ ರಾಜು ಶ್ರೀಯಾನ್ ಅವರು ತಮ್ಮ ಪಿತಾಮಹರಾದ ಎಂ. ಎನ್. ಸುವರ್ಣ ಅವರ ಆಶೀರ್ವಾದ ಮತ್ತು ಮಾರ್ಗದರ್ಶನದೊಂದಿಗೆ ಅವರು ಸ್ಥಾಪಿಸಿದ ಈ ಸಂಸ್ಥೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆಸಿದ ಕೀರ್ತಿಯನ್ನು ಹೊಂದಿದ್ದಾರೆ. ಅರುಣೋದಯ ಕಲಾನಿಕೇತನದ ಕೀರ್ತಿ ಇನ್ನಷ್ಟು ಪಸರಿಸಲಿ ಎಂದು ನುಡಿದು ಶುಭಹಾರೈಸಿದರು.
ಕನಸು ನನಸಾಗುತ್ತಿದೆ
ಅತಿಥಿಯಾಗಿ ಪಾಲ್ಗೊಂಡ ಕನ್ನಡಿಗ ಪತ್ರಕರ್ತರ ಸಂಘದ ಅಧ್ಯಕ್ಷ ಚಂದ್ರಶೇಖರ ಪಾಲೆತ್ತಾಡಿ ಅವರು ಮಾತನಾಡಿ, ಅರುವತ್ತ ವರ್ಷಗಳ ಹಿಂದೆ ಎಂ. ಎನ್. ಸುವರ್ಣ ಅವರು ಕಂಡ ಕನಸು ನನಸಾಗುತ್ತಿದೆ. ಅವರು ತಮ್ಮಲ್ಲಿದ್ದ ಕಲೆಯನ್ನು ಇತರರಿಗೆ ಧಾರೆ ಎರೆಯುವ ಮೂಲಕ ಅನೇಕ ಶಿಷ್ಯರನ್ನು ರೂಪಿಸಿದ್ದಾರೆ. ಪುತ್ರಿ ಮೀನಾಕ್ಷೀ ರಾಜು ಶ್ರೀಯಾನ್ ಅವರನ್ನು ಉತ್ತಮ ನಾಟ್ಯಗುರುವನ್ನಾಗಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಅವರ ಪರಿಶ್ರಮದ ಫಲದಿಂದ ಇಂದು ಮೀನಾಕ್ಷೀ ರಾಜು ಶ್ರೀಯಾನ್ ಅವರು ಸಾವಿರಾರು ಮಕ್ಕಳಿಗೆ ನಾಟ್ಯ ಶಿಕ್ಷಣವನ್ನು ನೀಡಿ ಉತ್ತಮ ನಾಟ್ಯ ಶಿಕ್ಷಕಿಯಾಗಿ ಪ್ರಸಿದ್ಧಿಯನ್ನು ಪಡೆದಿರುವುದು ತುಳು-ಕನ್ನಡಿಗರಿಗೆ ಅಭಿಮಾನದ ವಿಷಯವಾಗಿದೆ ಎಂದು ನುಡಿದು ಸಂಸ್ಥೆಯು ಇನ್ನಷ್ಟು ಬೆಳೆಯಲಿ ಎಂದು ಹಾರೈಸಿದರು.
ಕನ್ನಡಿಗ ಕಲಾವಿದರ ಪರಿಷತ್ತು ಮಹಾರಾಷ್ಟ್ರ ಅಧ್ಯಕ್ಷ ಡಾ| ಸುರೇಂದ್ರ ಕುಮಾರ್ ಹೆಗ್ಡೆ ಇವರು ಮಾತನಾಡಿ, ಮುಂಬಯಿಯಲ್ಲಿ ತುಳು-ಕನ್ನಡಿಗ ಅನೇಕ ಕಲಾವಿದರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದ್ದಾರೆ. ಅವರುಣೋದಯ ಕಲಾಸಂಸ್ಥೆಯು ನೃತ್ಯ ಕಲೆಯನ್ನು ಅಂತಾರಾಷ್ಟಿÅàಯ ಮಟ್ಟಕ್ಕೇರಿಸಿದ ಸಾಧನೆಯನ್ನು ಮಾಡಿದೆ. ಮೀನಾಕ್ಷೀ ರಾಜು ಶ್ರೀಯಾನ್ ಅವರು ಕನ್ನಡಿಗ ಕಲಾವಿದರ ಪರಿಷತ್ತಿನ ಸದಸ್ಯರಾಗಿರುವುದು ಅಭಿಮಾನದ ಸಂಗತಿಯಾಗಿದೆ. ಅರುಣೋದಯ ಕಲಾಸಂಸ್ಥೆಯು ಇನ್ನಷ್ಟು ಕಲಾ ಸೇವೆಯ ಮೂಲಕ ಪ್ರಸಿದ್ಧಿ ಪಡೆಯಲಿ ಎಂದರು.
ಅತಿಥಿಯಾಗಿ ಪಾಲ್ಗೊಂಡ ಸಾಫಲ್ಯ ಸೇವಾ ಸಂಘ ಮುಂಬಯಿ ಅಧ್ಯಕ್ಷ ಶ್ರೀನಿವಾಸ ಸಾಫಲ್ಯ ಅವರು ಮಾತನಾಡಿ, ಭಾರತೀಯ ಸಂಸ್ಕೃತಿಯ ಈ ಕಲೆಯನ್ನು ಅಂತಾರಾಷ್ಟ್ರೀಯ ಮಟ್ಟಕ್ಕೇರಿಸಿದ ಶ್ರೇಯಸ್ಸು ಈ ಸಂಸ್ಥೆಗೆ ಸಲ್ಲುತ್ತದೆ. ಅಂಗವಿಕಲ ಕಲಾವಿದರಿಗೂ ನೃತ್ಯವನ್ನು ಕಲಿಸಿ ಅವರ ಕಲಾಪ್ರತಿಭೆಗೆ ಜಗತ್ತಿಗೆ ಪರಿಚಯಿಸಿದ ಹೆಗ್ಗಳಿಕೆ ಅರುಣೋದಯ ಸಂಸ್ಥೆಗಿದೆ ಎಂದು ನುಡಿದರು.
ಸಮಾಜ ಸೇವಕಿ, ಓಂಶಕ್ತಿ ಮಹಿಳಾ ಸಂಸ್ಥೆ ಕಲ್ಯಾಣ್ ಇದರ ಅಧ್ಯಕ್ಷೆ ಚಿತ್ರಾ ಆರ್. ಶೆಟ್ಟಿ ಅವರು ಮಾತನಾಡಿ, ಮೀನಾಕ್ಷೀ ರಾಜು ಶ್ರೀಯಾನ್ ಅವರು ಉತ್ತಮ ನೃತ್ಯ ಕಲಾವಿದೆ. ಅವರನ್ನು ನಾವು ಹಲವು ವರ್ಷಗಳಿಂದ ಹತ್ತರದಿಂದ ಬಲ್ಲವಳಾಗಿದ್ದೇನೆ. ಅನೇಕ ಮಕ್ಕಳಿಗೆ ನೃತ್ಯದ ವಿವಿಧ ಪ್ರಕಾರಗಳನ್ನು ಕಲಿಸಿದ ಅವರ ಸಾಧನೆ ಅಪಾರವಾಗಿದೆ ಎಂದರು.
ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಮನೀಯ ಸಾಧನೆಗೈದ ಊರ-ಪರವೂರಿನ 60 ಮಂದಿ ಸಾಧಕರನ್ನು ಸಮ್ಮಾನಿಸಲಾಗುವುದು. ಮುಂಬಯಿ ಸಾಧಕರಾದ ಯಕ್ಷಗಾನ ಕಲಾವಿದ ಕೆ. ಕೆ. ಶೆಟ್ಟಿ, ಸಂಘಟಕ ಬಾಲಚಂದ್ರ ಬಿ. ರಾವ್, ರಂಗಕರ್ಮಿ-ಸಂಘಟಕ ವಿ. ಕೆ. ಸುವರ್ಣ, ರಂಗಕರ್ಮಿ ಅನಿಲ್ ಕುಮಾರ್ ಹೆಗ್ಡೆ, ಸಾಹಿತಿ, ರಂಗಕರ್ಮಿ ನಂದಳಿಕೆ ನಾರಾಯಣ ಶೆಟ್ಟಿ, ರಂಗಕರ್ಮಿ ಕಮಲಾಕ್ಷ ಸರಾಫ್, ರಂಗಕರ್ಮಿ ಡಾ| ಸುರೇಂದ್ರ ಕುಮಾರ್ ಹೆಗ್ಡೆ, ಯಕ್ಷಗಾನ ಕಲಾವಿದೆ ಗೀತಾ ಭಟ್, ನೃತ್ಯ ಕಲಾವಿದೆ ಶೈಲಜಾ ಮಧುಸೂದನ್, ಕೊಳಲು ವಾದಕ ರಾಘವೇಂದ್ರ ಬಾಳಿಗ, ಸಂಗೀತಕಾರ ಶ್ರೀಪತಿ ಹೆಗ್ಡೆ, ಚೆಂಡೆ ವಾದಕ ಪ್ರವೀಣ್ ಶೆಟ್ಟಿ ಎಕ್ಕಾರು, ಸಂಘಟಕ-ಸಮಾಜ ಸೇವಕ ಜಿ. ಟಿ. ಆಚಾರ್ಯ, ಸಂಗೀತ ಕಲಾವಿದ ಪದ್ಮನಾಭ ಸಸಿಹಿತ್ಲು, ಹರೀಶ್ ಪೂಜಾರಿ, ಕವಿರಾಜ್ ಸುವರ್ಣ, ಕುತ್ಪಾಡಿ ರಾಮಚಂದ್ರ ಗಾಣಿಗ ಮೊದಲಾದವರನ್ನು ಗಣ್ಯರ ಸಮ್ಮುಖದಲ್ಲಿ ಶಾಲು ಹೊದೆಸಿ, ಫಲಪುಷ್ಪ, ಸ್ಮರಣಿಕೆಯನ್ನಿತ್ತು ಸಮ್ಮಾನಿಸಲಾಯಿತು.
ವೇದಿಕೆಯಲ್ಲಿ ಅತಿಥಿಗಳಾಗಿ ಸಮಾಜ ಸೇವಕಿ ಗೀತಾ ಎ. ಶೆಟ್ಟಿ, ಉದ್ಯಮಿ ಅಶೋಕ್ ಶೆಟ್ಟಿ, ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ ಅಧ್ಯಕ್ಷ ರಮೇಶ್ ಎಂ. ಬಂಗೇರ, ಕನ್ನಡಿಗ ಕಲಾವಿದರ ಪರಿಷತ್ತು ಮಹಾರಾಷ್ಟ್ರ ಉಪಾಧ್ಯಕ್ಷ ಕಮಲಾಕ್ಷ ಸರಾಫ್, ಉದ್ಯಮಿ ಪ್ರದೀಪ್ ಎಂ. ಚಂದನ್, ಉದ್ಯಮಿ ರಾಜೀವ ಎಂ. ಚಂದನ್ ಅವರು ಉಪಸ್ಥಿತರಿದ್ದು ಶುಭಹಾರೈಸಿದರು.
ಅರುಣೋದಯ ಕಲಾನಿಕೇತನದ ನೃತ್ಯ ಗುರು ಡಾ| ಮೀನಾಕ್ಷೀ ರಾಜು ಶ್ರೀಯಾನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪತ್ರಕರ್ತ ದಯಾ ಸಾಗರ್ ಚೌಟ ಅವರು ಅತಿಥಿಗಳನ್ನು ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು. ವೇದಿಕೆಯಲ್ಲಿ ಸಂಸ್ಥೆಯ ಟ್ರಸ್ಟಿಗಳಾದ ಸುರೇಶ್ ಕಾಂಚನ್, ಸಂಜೀವ ಕೆ. ಸಾಲ್ಯಾನ್, ಗೋಪಾಲ್ ಪುತ್ರನ್ ಹಾಗೂ ರಾಜು ಶ್ರೀಯಾನ್ ಅವರು ಉಪಸ್ಥಿತರಿದ್ದು ಅತಿಥಿ-ಗಣ್ಯರುಗಳನ್ನು ಗೌರವಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮವಾಗಿ ಸಂಸ್ಥೆಯ ನƒತ್ಯ ಗುರು ನಿರ್ದೇಶಕಿ ಡಾ| ಗುರು ಮೀನಾಕ್ಷಿ ರಾಜು ಶ್ರೀಯಾನ್ ಅವರ ನೇತೃತ್ವದಲ್ಲಿ ಒಂದೇ ವೇದಿಕೆಯಲ್ಲಿ ಒಂದೇ ವೇಳೆ 60 ಕಲಾವಿದರಿಂದ ಭಾರತದ ಶಾಸ್ತ್ರೀಯ ನೃತ್ಯಗಳಾದ ಭರತನಾಟ್ಯಂ, ಕೊಚುಪುಡಿ, ಮೋಹಿನಿಯಾಟ್ಟಂ, ಮಣಿಪುರಿ, ಕಥಕ್, ಓಡಿಸ್ಸಿ, ಕಥ್‌ಕಳಿ ನೃತ್ಯಗಳ ಜುಗಲ್‌ಬಂದಿ ನಡೆಯಲಿದೆ. 60 ಕಲಾವಿದರಿಂದ ತಾಳ- ವಾದ್ಯ, ಜುಗಲ್ ಬಂದಿ ಮತ್ತು ಮ್ಯೂಸಿಕಲ್ ಇನ್‌ಸ್ಟ್ರೆಮೆಂಟ್ ಹಾಗೂ ಸ್ಟ್ರಿÅಂಗ್ ಸಲಕರಣೆಗಳಿಂದ ತಾಳವಾದ್ಯ, ಗಾಯನ, ಗಾಳಿ ವಾದ್ಯ ವೈವಿಧ್ಯಮಯ ಇನ್‌ಸ್ಟುÅಮೆಂಟ್‌ಗಳಿಂದ ಜುಗಲ್ ಬಂದಿಯನ್ನು ಆಯೋಜಿಸಲಾಗಿತ್ತು.
ಸಹಕಾರ, ಪ್ರೋತ್ಸಾಹ ಇರಲಿ
ತಂದೆಯವರು ಸ್ಥಾಪಿಸಿದ ಅರುಣೋದಯ ಕಲಾನಿಕೇತನ ಸಂಸ್ಥೆಯು ಇಂದು ತಮ್ಮೆಲ್ಲರ ಸಹಕಾರ, ಪ್ರೋತ್ಸಾಹದಿಂದ ವಜ್ರ ಮಹೋತ್ಸವವನ್ನು ಆಚರಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ತಾವು ಕಲಿತ ವಿದ್ಯೆಯನ್ನು ಇನ್ನೊಬ್ಬರಿಗೆ ಧಾರೆ ಎರೆಯಬೇಕು ಎಂಬ ತಂದೆಯವರ ಮಾತಿನಿಂದ ಪ್ರೇರಿತಳಾಗಿ ನನ್ನ ಪತಿ, ಕುಟುಂಬಿಕರ ಸಹಕಾರದಿಂದ ಸಂಸ್ಥೆಯನ್ನು ಇಷ್ಟೊಂದು ಎತ್ತರಕ್ಕೆ ಬೆಳೆಸಲು ಸಹಕಾರಿಯಾಯಿತು. ಭವಿಷ್ಯದಲ್ಲೂ ಈ ಸಂಸ್ಥೆಯನ್ನು ಆದರ್ಶಪಥದಲ್ಲಿ ಕೊಂಡೊಯ್ಯುವ ನನ್ನ ಕನಸಿಗೆ ಎಲ್ಲರ ಸಹಕಾರ, ಪ್ರೋತ್ಸಾಹ ಇರಲಿ ಎಂದು ಅರುಣೋದಯ ಕಲಾನಿಕೇತನ ಮುಂಬಯಿಯ ನೃತ್ಯ ಗುರು ಡಾ| ಮೀನಾಕ್ಷೀ ರಾಜು ಶ್ರೀಯಾನ್ ಅವರು ಹೇಳಿದರು.
ಚಿತ್ರ-ವರದಿ:ಸುಭಾಷ್ ಶಿರಿಯಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
ಇಂಗ್ಲೆಂಡ್‌ನ ರಾದರಮ್ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’
Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Assembly bypolls; 14 ರಾಜ್ಯಗಳ 48 ಸ್ಥಾನಗಳ ಗೆಲುವಿನ ವಿವರ ಇಲ್ಲಿದೆ: ಎನ್‌ಡಿಎ ಮೇಲುಗೈ
Uppinangady: ಸರಣಿ ಅಪಘಾತ; 19 ಮಂದಿಗೆ ಗಾಯ
Maharashtra ; ಕೈ ಯಿಂದ ಲೋಕಸಭಾ ಸ್ಥಾನ ಕಸಿದ ಬಿಜೆಪಿ: ರಾಜ್ಯಸಭೆ ಬಹುಮತದತ್ತ ಚಿತ್ತ
By Election: ಮೂರು ಕ್ಷೇತ್ರದಲ್ಲೂ ಬಿಜೆಪಿ ಸೋತಿದ್ದಕ್ಕೆ ಟಿವಿಯನ್ನೇ ಒಡೆದು ಹಾಕಿದ ಮುಖಂಡ!
Basavaraj Bommai: ಹಣದ ಹೊಳೆಹರಿಸಿ ಕಾಂಗ್ರೆಸ್ ಗೆಲುವು: ಬೊಮ್ಮಾಯಿ ಆರೋಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.