Mumbai: ಮಕ್ಕಳನ್ನು ತಾಳ್ಮೆಯಿಂದ ನೋಡಿಕೊಳ್ಳ ಬೇಕು- ರಮೇಶ್‌ ಶೆಟ್ಟಿ ಸಿದ್ದಕಟ್ಟೆ


Team Udayavani, Sep 16, 2023, 2:13 PM IST

Mumbai: ಮಕ್ಕಳನ್ನು ತಾಳ್ಮೆಯಿಂದ ನೋಡಿಕೊಳ್ಳ ಬೇಕು- ರಮೇಶ್‌ ಶೆಟ್ಟಿ ಸಿದ್ದಕಟ್ಟೆ

ಭಾಯಂದರ್‌: ಚಿಣ್ಣರ ಬಿಂಬ ಭಾಯಂದರ್‌ ಶಿಬಿರದ ಮಕ್ಕಳ ಸಾಂಸ್ಕೃತಿಕ ಪ್ರತಿಭಾ ಸ್ಪರ್ಧೆ ಆ. 27ರಂದು ಬೆಳಗ್ಗೆ ಭಾಯಂದರ್‌ ಪೂರ್ವದ ನ್ಯೂ ಸೈಂಟ್‌ ಆ್ಯಗ್ನೆಸ್‌ ಹೈಸ್ಕೂಲ್‌ ಸಭಾಗೃಹದಲ್ಲಿ ಚಿಣ್ಣರ ಬಿಂಬದ ರೂವಾರಿ ಪ್ರಕಾಶ್‌ ಭಂಡಾರಿ ಅವರ ಮಾರ್ಗದರ್ಶನದಲ್ಲಿ ನಡೆಯಿತು.

ಶಿಬಿರದ ಮಕ್ಕಳ ಭಜನೆ, ಶಾರದಾ ಪೂಜೆ, ಗಣಪತಿ ಸ್ತುತಿಯೊಂದಿಗೆ ಪ್ರತಿಭಾ ಸ್ಪರ್ಧೆ ಕಾರ್ಯಕ್ರಮ ಆರಂಭಗೊಂಡಿತು. ಬಳಿಕ
ಭಾಷಣ, ಭಾವಗೀತೆ, ಜಾನಪದ ಗೀತೆ, ಏಕಪಾತ್ರಾಭಿನಯ, ಛದ್ಮ ವೇಷ, ಪಾಲಕರಿಗೆ ದೇಶಭಕ್ತಿ ಗೀತೆ ಸ್ಪರ್ಧೆ ನಡೆಯಿತು.
ಕಾರ್ಯಕ್ರಮವನ್ನು ಹೊಟೇಲ್‌ ಉದ್ಯಮಿ ಅರುಣೋದಯ ರೈ ಉದ್ಘಾಟಿಸಿ, ಚಿಣ್ಣರ ಬಿಂಬದ ಮಕ್ಕಳ ಪ್ರತಿಭೆಯಿಂದ ತಿಳಿಯು
ವಂಥದ್ದು ಬಹಳಷ್ಟಿದೆ. ಶಿಬಿರದ ಪ್ರಯೋಜನ ವನ್ನು ಇನ್ನಷ್ಟು ತುಳು – ಕನ್ನಡಿಗರಿಗೆ ಸಿಗುವಂತೆ ಪ್ರಯತ್ನಿಸೋಣ ಎಂದರು.

ಮುಖ್ಯ ಅತಿಥಿಯಾಗಿದ್ದ ಬಂಟರ ಸಂಘ ಮೀರಾ – ಭಾಯಂದರ್‌ ಪ್ರಾದೇಶಿಕ ಸಮಿತಿಯ ಜತೆ ಕೋಶಾಧಿಕಾರಿ ರಮೇಶ್‌ ಎಂ. ಶೆಟ್ಟಿ ಸಿದ್ದಕಟ್ಟೆ ಮಾತನಾಡಿ, ಮಕ್ಕಳು ತಮ್ಮ ಸುತ್ತಮುತ್ತಲಿನ ಆಗುಹೋಗುಗಳನ್ನು ಬಹುಬೇಗ ತಮ್ಮಲ್ಲಿ ಅಳವಡಿಸಿಕೊಳ್ಳುತ್ತಾರೆ.
ಸಂಸ್ಕಾರ ಕಲಿತ ವ್ಯಕ್ತಿ ಯಾವತ್ತೂ ಕೆಟ್ಟವನಾಗಲಾರ. ಮಕ್ಕಳನ್ನು ಶಿಕ್ಷಿಸದೆ, ಪ್ರೀತಿ-ತಾಳ್ಮೆಯಿಂದ ನೋಡಿಕೊಳ್ಳಬೇಕು. ಮಕ್ಕಳನ್ನು ಪೋಷಿಸುವ ಕೆಲಸ ಪಾಲಕರದ್ದಾದರೂ ಚಿಣ್ಣರ ಬಿಂಬ ಈ ಕೆಲಸ ಮಾಡುತ್ತಿದೆ ಎಂದರು.

ಉದ್ಯಮಿ ವಿಜಯ್‌ ಬಾಲಕೃಷ್ಣ ರಾವ್‌ ಮಾತನಾಡಿ, ಮಕ್ಕಳನ್ನು ತಿದ್ದಿ, ತೀಡಿ ಸಂಸ್ಕಾರ, ಸಂಸ್ಕೃತಿ ಕೊಟ್ಟು ಸಲಹಿದ ಎಲ್ಲ ಶಿಕ್ಷಕರಿಗೂ ಪಾಲಕರಿಗೂ ಹಾಗೂ ಚಿಣ್ಣರ ಬಿಂಬ ಸಂಸ್ಥೆಗೂ ಅಭಿನಂದನೆ ಸಲ್ಲಿಸಿದರು. ಕರ್ನಾಟಕ ಮಹಾಮಂಡಲ ಮೀರಾ-
ಭಾಯಂದರ್‌ ಸ್ಥಾಪಕ ಚಂದ್ರಶೇಖರ ವಿ. ಶೆಟ್ಟಿ ಮಾತನಾಡಿ, ಯಾವುದೇ ಸಂಸ್ಥೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಸೇವೆ ಮಾಡುವ ವ್ಯಕ್ತಿಗಳನ್ನು ಯಾವತ್ತೂ ಮರೆಯಬಾರದು. ಪಾಲಕರಿಗೆ ಅವಕಾಶ ಕೊಡುವಂತಹ ಏಕೈಕ ಸಂಸ್ಥೆ ಚಿಣ್ಣರ ಬಿಂಬವಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮೀರಾ-ಭಾಯಂದರ್‌ ಮಾಜಿ ಕಾರ್ಪೊರೇಟರ್‌ ಅರವಿಂದ್‌ ಎ. ಶೆಟ್ಟಿ ಮಾತನಾಡಿ,
ಪ್ರಕಾಶಣ್ಣನ ಚಿಂತನೆ ಬಹಳ ಒಳ್ಳೆಯದು. ಈ ಸಂಸ್ಥೆಯ ಮಕ್ಕಳು ಮುಂದೆ ಒಂದು ದಿನ ಉತ್ತಮ ಪ್ರಜೆಗಳಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಇಲ್ಲಿ ಕಲಿಸುವ ಶಿಕ್ಷಕರು ಹಾಗೂ ಪಾಲಕರಿಗೆ ವಂದನೆಗಳು ಎಂದರು.

ಅತಿಥಿಯಾಗಿದ್ದ ಉದ್ಯಮಿ ಅರುಣ್‌ ಟಿ. ಪಕ್ಕಳ, ಮಾಟುಂಗ ಲಯನ್ಸ್‌ ಪಯೋನಿಯರ್‌ ಇಂಗ್ಲಿಷ್‌ ಸ್ಕೂಲ್‌ ಮತ್ತು ಜೂನಿಯರ್‌ ಕಾಲೇಜಿನ ನಿವೃತ್ತ ಪ್ರಾಂಶುಪಾಲೆ ಸುಮತಿ ಎಸ್‌. ಶೆಟ್ಟಿ, ಅಯ್ಯಪ್ಪ ಭಕ್ತವೃಂದ ಶಿರ್ಡಿ ನಗರ ಭಾಯಂದರ್‌ ಈಸ್ಟ್‌ ಅಧ್ಯಕ್ಷ
ಸತೀಶ್‌ ಜೆ. ಪೂಜಾರಿ ಶುಭ ಹಾರೈಸಿದರು.

ಪ್ರಾದೇಶಿಕ ಮುಖ್ಯಸ್ಥೆ ವಿನಯಾ ಶೆಟ್ಟಿ, ವಲಯ ಮುಖ್ಯಸ್ಥೆ ಆಶಾಲತಾ ಕೊಠಾರಿ ಉಪಸ್ಥಿತರಿದ್ದರು. ತೀರ್ಪುಗಾರರಾಗಿದ್ದ
ಸುಜಾತಾ ಶೆಟ್ಟಿ, ಅಕ್ಷತಾ ದೇಶಪಾಂಡೆ ಮಕ್ಕಳಿಗೆ ಶುಭ ಹಾರೈಸಿದರು. ಶಿಬಿರದ ಚಿಣ್ಣರು ಜಾನಪದ ನೃತ್ಯ ಪ್ರದರ್ಶನ ನೀಡಿದರು. ಕಳೆದ ಸಾಲಿನ ಎಸ್‌ಎಸ್‌ಸಿ, ಎಚ್‌ಎಸ್‌ಸಿ ಪ್ರತಿಭಾವಂತ ಮಕ್ಕಳನ್ನು, ಶಿಬಿರ ಮಾಜಿ ಮುಖ್ಯಸ್ಥೆ ಅಮಿತಾ ಶೆಟ್ಟಿ, ಸಾಂಸ್ಕೃತಿಕ
ಮುಖ್ಯಸ್ಥೆ ಕುಶಲಾ ಪೂಜಾರಿ ಅವರನ್ನು ಗೌರವಿಸಲಾಯಿತು.

ಶಿಬಿರದ ಮುಖ್ಯಸ್ಥೆ ಜಯಲಕ್ಷ್ಮೀ ಪಿ. ಶೆಟ್ಟಿ ಸ್ವಾಗತಿಸಿದರು. ಕೇಂದ್ರ ಸಮಿತಿಯ ಸದಸ್ಯೆ ವಿಶಾಲಾಕ್ಷಿ ಶೆಟ್ಟಿ ಪ್ರಾಸ್ತಾವಿಸಿದರು.
ಚಿಣ್ಣರಾದ ಗೆಹನಾ ಶೆಟ್ಟಿ, ಸಾಕ್ಷಿ ಶೆಟ್ಟಿ, ಸಾಗರ್‌ ಪೂಜಾರಿ, ವಂಶಿ ಶೆಟ್ಟಿ, ತನ್ವಿ ಶೆಟ್ಟಿ, ಖುಶಿ ಶೆಟ್ಟಿ, ಪ್ರಜ್ಯೋತ್‌ ಶೆಟ್ಟಿ, ನಿಹಾಲ್‌ ಪೂಜಾರಿ ಅತಿಥಿಗಳನ್ನು ಪರಿಚಯಿಸಿದರು. ರಕ್ಷಿತ್‌ ಶೆಟ್ಟಿ, ಪ್ರಾಚಿ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.

ಬಹುಮಾನ ವಿತರಣ ಕಾರ್ಯಕ್ರಮವನ್ನು ಕಾಂದಿವಲಿ ಶಿಬಿರದ ಆಶಾ ಮೊಗವೀರ, ಆಶಾ ಚೇವಾರ್‌ ಹಾಗೂ ಮೀರಾರೋಡ್‌
ಶಿಬಿರದ ಶರ್ಮಿಳಾ ಶೆಟ್ಟಿ ನಡೆಸಿಕೊಟ್ಟರು. ಸಾಂಸ್ಕೃತಿಕ ಮುಖ್ಯಸ್ಥೆ ಸುಚಿತ್ರಾ ಎಚ್‌. ಪೂಜಾರಿ ವಂದಿಸಿದರು. ಶಿಬಿರದ ಪಾಲಕರು,
ಮಕ್ಕಳು, ಶಿಕ್ಷಕರು, ಸ್ವಯಂಸೇವಕರು, ಹಳೆ ವಿದ್ಯಾರ್ಥಿಗಳು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಕಾರ್ಯಕ್ರಮದಲ್ಲಿ 300ಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು.

ಬಹುಮಾನ ವಿಜೇತರು
ಜೂನಿಯರ್‌ ವಿಭಾಗದ ಮಕ್ಕಳ ಪ್ರತಿಭಾ ಸ್ಪರ್ಧೆಯಲ್ಲಿ ಪ್ರಥಮ ಸಾನ್ವಿ ಎಸ್‌. ಶೆಟ್ಟಿ, ದ್ವಿತೀಯ ಆರೋಹಿ ಶೆಟ್ಟಿ, ತೃತೀಯ ಮನ್ವಿತ್‌ ಪೂಜಾರಿ, ಸೀನಿಯರ್‌ ವಿಭಾಗದ ಚರ್ಚಾ ಸ್ಪರ್ಧೆಯಲ್ಲಿ ಪ್ರಥಮ ಆರಾಧ್ಯಾ ಶೆಟ್ಟಿ, ದ್ವಿತೀಯ ನಮನ್‌ ಶೆಟ್ಟಿ, ತೃತೀಯ ಸಾನ್ವಿ ಎಸ್‌. ಶೆಟ್ಟಿ, ಜೂನಿಯರ್‌ ವಿಭಾಗದ ಜಾನಪದ ಗೀತೆ ಸ್ಪರ್ಧೆಯಲ್ಲಿ ಪ್ರಥಮ ಮನ್ವಿತ್‌ ಪೂಜಾರಿ, ದ್ವಿತೀಯ ಆರೋಹಿ ಶೆಟ್ಟಿ, ತೃತೀಯ ವಿಖ್ಯಾತ್‌ ಶೆಟ್ಟಿ, ಸೀನಿಯರ್‌ ವಿಭಾಗದ ಭಾವಗೀತೆಯಲ್ಲಿ ಪ್ರಥಮ ಆರಾಧ್ಯಾ ಶೆಟ್ಟಿ, ದ್ವಿತೀಯ ಸಾನ್ವಿ ಶೆಟ್ಟಿ, ತೃತೀಯ ನಮನ್‌ ಶೆಟ್ಟಿ ಬಹುಮಾನ ಗಳಿಸಿದರು. ಏಕಪಾತ್ರಾಭಿನಯ ಸೀನಿಯರ್‌ ವಿಭಾಗ ದಲ್ಲಿ ಪ್ರಥಮ ಸಾನ್ವಿ ಎಸ್‌. ಶೆಟ್ಟಿ, ದ್ವಿತೀಯ ಚಿರಶ್ರೀ ಬಂಜನ್‌, ತೃತೀಯ ಆರಾಧ್ಯಾ ಶೆಟ್ಟಿ, ಛದ್ಮವೇಷ ಸ್ಪರ್ಧೆಯ ಜೂನಿಯರ್‌ ವಿಭಾಗದಲ್ಲಿ ಪ್ರಥಮ ಆರೋಹಿ ಶೆಟ್ಟಿ, ದ್ವಿತೀಯ ಸಾನ್ವಿ ಶೆಟ್ಟಿ, ತೃತೀಯ ಸ್ವರ್ಣಿಕ್‌ ಗೌಡ, ಪಾಲಕರ ದೇಶಭಕ್ತಿ ಗೀತೆ ಸ್ಪರ್ಧೆಯಲ್ಲಿ ಪ್ರಥಮ ಜಯಲಕ್ಷ್ಮೀ ಶೆಟ್ಟಿ, ದ್ವಿತೀಯ ದಿವ್ಯಾ ಶೆಟ್ಟಿ, ತೃತೀಯ ಪ್ರಿಯಾಂಕಾ ಶೆಟ್ಟಿ ಬಹುಮಾನ ಪಡೆದರು.

ಟಾಪ್ ನ್ಯೂಸ್

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕರ್ನಾಟಕ ಸಂಘ ಕತಾರ್‌: ಮಹಿಳಾ ಮತ್ತು ಮಕ್ಕಳ ಪ್ರತಿಭಾನ್ವೇಷಣೆ-2025

ಕರ್ನಾಟಕ ಸಂಘ ಕತಾರ್‌: ಮಹಿಳಾ ಮತ್ತು ಮಕ್ಕಳ ಪ್ರತಿಭಾನ್ವೇಷಣೆ-2025

ಮನದ ಮಾತು ಎಂದರೇನು:ಅರಿವಿರುವುದು ಗೋಚರ, ಅರಿವಿಲ್ಲದ್ದು ಅಗೋಚರ!

ಮನದ ಮಾತು ಎಂದರೇನು:ಅರಿವಿರುವುದು ಗೋಚರ, ಅರಿವಿಲ್ಲದ್ದು ಅಗೋಚರ!

ಈ ಬಾರಿ ಫ್ಲೋರಿಡಾದ ಲೇಕ್‌ಲ್ಯಾಂಡ್‌ನ‌ಲ್ಲಿ ನಾವಿಕೋತ್ಸವ

ಈ ಬಾರಿ ಫ್ಲೋರಿಡಾದ ಲೇಕ್‌ಲ್ಯಾಂಡ್‌ನ‌ಲ್ಲಿ ನಾವಿಕೋತ್ಸವ

Desi Swara: ವಿಮಾನ ಪ್ರಯಾಣಗಳಲ್ಲಿ ನವರಸಾನುಭವಗಳು ಮತ್ತು ಫ‌ಜೀತಿಯ ಕ್ಷಣ!!

Desi Swara: ವಿಮಾನ ಪ್ರಯಾಣಗಳಲ್ಲಿ ನವರಸಾನುಭವಗಳು ಮತ್ತು ಫ‌ಜೀತಿಯ ಕ್ಷಣ!!

ಲಂಡನ್‌: ವಿಶ್ವದಲ್ಲೇ ಪ್ರಥಮ ಬಾರಿಗೆ “ಪುರಂದರ ನಮನ’

ಲಂಡನ್‌: ವಿಶ್ವದಲ್ಲೇ ಪ್ರಥಮ ಬಾರಿಗೆ “ಪುರಂದರ ನಮನ’

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

19

Bharamasagara: ವಿದ್ಯುತ್ ಕಿಡಿಗೆ ಎರಡು‌ ಮೇವಿನ ಬಣವೆ ಸಂಪೂರ್ಣ ಭಸ್ಮ

1-tengu-dsdsa

Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.