ಮುಂಬಯಿ: 1ಲಕ್ಷ ದಾಟಿದ ಚೇತರಿಸಿಕೊಂಡವರ ಸಂಖ್ಯೆ
Team Udayavani, Aug 11, 2020, 6:27 PM IST
ಮುಂಬಯಿ, ಆ. 10: ನಗರದಲ್ಲಿ ಇದುವರೆಗೆ ಪತ್ತೆಯಾದ 1.31 ಲಕ್ಷ ಕೋವಿಡ್ ಸೋಂಕಿತರಲ್ಲಿ ಚೇತರಿಸಿಕೊಂಡವರ ಸಂಖ್ಯೆ 1 ಲಕ್ಷದ ಗಡಿ ದಾಟಿದೆ. ಪ್ರಸ್ತುತ ನಗರದ ಚೇತರಿಕೆ ದರವು ಶೇ. 77ರಷ್ಟಿದ್ದು, ಇದು ರಾಜ್ಯ ಶೇ. 66.76 ಮತ್ತು ರಾಷ್ಟ್ರೀಯ ಶೇ. 67.98ರಷ್ಟು ಸರಾಸರಿ ಚೇತರಿಕೆ ದರಗಳನ್ನು ಕ್ರಮವಾಗಿ ಮೀರಿದೆ.
ಮುಂಬಯಿಯಲ್ಲಿ ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 1,21,012 ತಲುಪಿದ್ದು, ರಾಜ್ಯ ಆರೋಗ್ಯ ಇಲಾಖೆ ಅಂಕಿ ಅಂಶಗಳ ಪ್ರಕಾರ ಒಟ್ಟು ಸಾವಿನ ಸಂಖ್ಯೆ 6, 693 ಆಗಿದೆ. ಈ ಮಧ್ಯೆ ಕಳೆದ 24 ಗಂಟೆಗಳಲ್ಲಿ ಚೇತರಿಸಿಕೊಂಡ 1,239 ರೋಗಿಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಅಂಕಿ ಅಂಶಗಳು ತಿಳಿಸಿವೆ. ಒಟ್ಟು 9,389 ಸೋಂಕಿತರಿಗೆ ಚಿಕಿತ್ಸೆ ನೀಡಿ ಬಿಡುಗಡೆ ಮಾಡಲಾಗಿದೆ. ನಗರದಲ್ಲಿ ಒಟ್ಟು 20,124 ಸಕ್ರಿಯ ಪ್ರಕರಣಗಳಿದ್ದು, ಚೇತರಿಕೆ ಪ್ರಮಾಣವು ಶೇ. 73ರಷ್ಟಿದೆ. ಗುರುವಾರದವರೆಗೆ ಒಟ್ಟು 5.83 ಲಕ್ಷ ಕೋವಿಡ್ ಪರೀಕ್ಷೆಗಳನ್ನು ನಡೆಸಿದೆ. ಶುಕ್ರವಾರದ ವೇಳೆಗೆ ಚೇತರಿಸಿಕೊಂಡವರ ಸಂಖ್ಯೆ 1 ಲಕ್ಷವನ್ನು ದಾಟಿದ್ದು, ಪ್ರತಿದಿನ ಸರಾಸರಿ 1,000 ಸೋಂಕಿತರನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ಬಿಎಂಸಿ ತಿಳಿಸಿದೆ.
ತ್ವರಿತ ಕ್ರೀಯಾ ಯೋಜನೆಯಿಂದ ಕಡಿಮೆ ಬಿಎಂಸಿ ಅಧಿಕಾರಿಯೋಬ್ಬರು ಮಾತನಾಡಿ, ನಗರದ ಚೇತರಿಕೆ ದರವು ಜೂನ್ ಮಧ್ಯದಿಂದ ಶೇ. 50ರಷ್ಟಿದ್ದಾಗ ಗಮನಾರ್ಹ ಸುಧಾರಣೆ ಕಂಡಿದೆ, ಅವರ ಬಳಿಕ ಮುಂಬಯಿ ಮಹಾನಗರ ಪಾಲಿಕೆ ಸೋಂಕು ಹರಡುವಿಕೆಯನ್ನು ಒಳಗೊಂಡಿರುವ ತ್ವರಿತ ಕ್ರಿಯಾ ಯೋಜನೆಯನ್ನು ಪ್ರಾರಂಭಿಸಿತು. ಚೇತರಿಕೆ ದರ ಜುಲೈ 1ರಂದು ಶೇ. 57ಕ್ಕೆ ಮತ್ತು ಮತ್ತು ಜುಲೈ 15ರಂದು ಶೇ. 70ಕ್ಕೆ ಸುಧಾರಿಸಿದೆ. ಸುಧಾರಿತ ರೋಗನಿರೋಧಕ ಶಕ್ತಿ, ಆರಂಭಿಕ ಪತ್ತೆ ಮತ್ತು ಸಮಯಕ್ಕೆ ಸರಿಯಾಗಿ ಚಿಕಿತ್ಸೆಯ ಕಾರಣದಿಂದಾಗಿ ಸುಧಾರಿತ ಚೇತರಿಕೆಯ ಪ್ರಮಾಣವು ಹೆಚ್ಚಾಗಲು ಪ್ರಮುಖ ಕಾರಣವಾಗಿದೆ ಎಂದಿದ್ದಾರೆ.
ರಾಜ್ಯ ಕಾರ್ಯಪಡೆಯ ಸದಸ್ಯ ಶಶಾಂಕ್ ಜೋಶಿ ಅವರು ಮಾತನಾಡಿ, ಹೆಚ್ಚುತ್ತಿರುವ ಚೇತರಿಕೆ ದರದ ಹಿಂದೆ ಎರಡು ಪ್ರಮುಖ ಕಾರಣಗಳಿರಬಹುದು. ಮುಂಬಯಿಗರ ರೋಗನಿರೋಧಕ ಶಕ್ತಿ ಉತ್ತಮವಾಗಿದ್ದು, ಇದು ಇತ್ತೀಚೆಗೆ ನಡೆಸಿದ ಸಿರೊ ಸಮೀಕ್ಷೆಯಲ್ಲಿ ದೃಢಪಟ್ಟಿದೆ. ಚೇತರಿಸಿಕೊಂಡ ವ್ಯಕ್ತಿಗಳನ್ನು ಗುರುತಿಸಲು ಮತ್ತು ಸೋಂಕು ಹರಡುವಿಕೆಯನ್ನು ಅಂದಾಜು ಮಾಡಲು ಜುಲೈ 3ರಂದು ಬಿಎಂಸಿಯಿಂದ ಆರ್ ನಾರ್ತ್ ವಾರ್ಡ್‌ನ ದಹಿಸರ್, ಎಂ-ವೆಸ್ಟ್ ವಾರ್ಡ್‌ನ ಚೆಂಬೂರು ಮತ್ತು ಎಫ್- ನಾರ್ತ್ ವಾರ್ಡ್‌ನ ಸಯಾನ್ ವಾರ್ಡ್‌ಗಳ 6,936 ಜನರಸಿರೊ ಸಮೀಕ್ಷೆಯನ್ನು ನಡೆಸಲಾಯಿತು ಎಂದು ಅವರು ಹೇಳಿದ್ದಾರೆ.
ಬಿವೈಎಲ್ ನಾಯರ್ ಆಸ್ಪತ್ರೆಯ ಮೈಕ್ರೋಬಯಾಲಜಿ ವಿಭಾಗದ ನಿವೃತ್ತ ಪ್ರಾಧ್ಯಾಪಕ ಮಾಧವ್ ಸಾಥೆ ಅವರು ಮಾತನಾಡಿ, ಕೋವಿಡ್ ಸೋಂಕು ಆನುವಂಶಿಕ ಬದಲಾವಣೆಗಳ ಮೂಲಕ ಹೋಗುತ್ತದೆ ಎಂದು ಗುರುತಿಸಲಾಗಿದೆ. ಇದು ಒಂದು ರೀತಿಯ ರೂಪಾಂತರವಾಗಿದ್ದು, ಸೋಂಕು ವೇಗವಾಗಿ ಹರಡುತ್ತದೆ. ಆದರೆ ಅದರ ತೀವ್ರತೆಯು ಕಡಿಮೆಯಾಗುತ್ತದೆ. ಹೆಚ್ಚುತ್ತಿರುವ ಚೇತರಿಕೆ ದರದ ಹಿಂದೆ ಇದು ಒಂದು ಅಂಶವಾಗಿರಬಹುದು. ಆದಾಗ್ಯೂ ಶೀಘ್ರವಾಗಿ ಆ್ಯಂಟಿಜೆನ್ ಪರೀಕ್ಷೆಯ ಮೂಲಕ ಆರಂಭಿಕ ಪತ್ತೆ ಮತ್ತು ಆರಂಭಿಕ ಚಿಕಿತ್ಸೆಯು ಚೇತರಿಕೆ ಹೆಚ್ಚಿಸಲು ಮತ್ತು ಮರಣ ಪ್ರಮಾಣವನ್ನು ತಗ್ಗಿಸಲು ಪ್ರಮುಖವಾಗಬಹುದು. ತಜ್ಞರು ಮುಂದೆ ಆನುವಂಶಿಕ ಬದಲಾವಣೆಗಳನ್ನು ತಿಳಿಯಲು ಸಂಶೋಧನಾ ಅಧ್ಯಯನವನ್ನು ನಡೆಸಬೇಕು ಮತ್ತು ಅದಕ್ಕೆ ಅನುಗುಣವಾಗಿ ಭವಿಷ್ಯದ ಸಾರ್ವಜನಿಕ ಆರೋಗ್ಯ ನೀತಿಗಳನ್ನು ರೂಪಿಸಬೇಕು ಎಂದು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
ಇಂಗ್ಲೆಂಡ್‌ನ ರಾದರಮ್ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’
Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
IPL Auction: ಕೇನ್, ಮಯಾಂಕ್, ಶಾಗಿಲ್ಲ ಬೇಡಿಕೆ; ಉತ್ತಮ ಹಣ ಪಡೆದ ದ. ಆಫ್ರಿಕಾ ವೇಗಿ
Andaman: ಕೋಸ್ಟ್ ಗಾರ್ಡ್ ಕಾರ್ಯಾಚರಣೆ… ಮೀನುಗಾರಿಕಾ ದೋಣಿಯಲ್ಲಿದ್ದ 5ಟನ್ ಮಾದಕ ವಸ್ತು ವಶ
Kundapura: ಮೋಜಿನ ತಾಣಗಳಾಗುತ್ತಿರುವ ಬೀಚ್‌ಗಳು-ಕಡಲಾಮೆಗೆ ಅಪಾಯ!
Vijayapura: ಅಪಹರಿಸಿದ ಮಗು ಮರಳಿಸಿದ ಅಪರಿಚಿತ!: ಕಂದಮ್ಮನ ಕಿಡ್ನ್ಯಾಪ್ ಕೇಸ್ ಸುಖಾಂತ್ಯ
BBK11: ಧರ್ಮ ಬಿಗ್ ಬಾಸ್ ಆಟಕ್ಕೆ ತೊಡಕಾದ ಅಂಶಗಳೇನು? ʼಚಾಕ್ಲೇಟ್ ಹೀರೋʼ ಎಡವಿದ್ದೆಲ್ಲಿ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.