13ನೇ ಬಾರಿಗೆ ಮುಂಬಯಿಂದ ಶಬರಿಮಲೆಗೆ ಪಾದಯಾತ್ರೆ ಕೈಗೊಂಡ ಗುರುಸ್ವಾಮಿ
Team Udayavani, Jan 11, 2017, 4:55 PM IST
ಮುಂಬಯಿ: ಶ್ರೀ ಅಯ್ಯಪ್ಪ ಸ್ವಾಮಿಯ ಭಕ್ತರಾದ ಉಪೇಂದ್ರ ಎ. ಪೂಜಾರಿ ಗುರುಸ್ವಾಮಿ ಅವರು 13ನೇ ಬಾರಿಗೆ ಶ್ರೀ ಕ್ಷೇತ್ರ ಶಬರಿಮಲೆಗೆ ಪಾದಯಾತ್ರೆ ಕೈಗೊಂಡಿದ್ದಾರೆ. ಈ ವರ್ಷ 27ನೇ ಬಾರಿಗೆ ಶಬರಿ ಮಲೆಯಾತ್ರೆಗೈಯುತ್ತಿರುವ ಅವರು ವಿವಿಧ ಪುಣ್ಯಕ್ಷೇತ್ರಗಳಿಗೆ ಹಲವು ಬಾರಿ ಪಾದಯಾತ್ರೆಯನ್ನು ಮಾಡಿದ ಹಿರಿಮೆಯನ್ನು ಹೊಂದಿದ್ದಾರೆ.
ನ. 20ರಂದು ನಗರದ ದಹಿಸರ್ ಕಾಶಿಮಠದಲ್ಲಿರುವ ವಿಟuಲ ರುಕ್ಮಿಣಿ ದೇವರಿಗೆ ಪೂಜೆ ಸಲ್ಲಿಸಿದ ಅನಂತರ ಮಾಲಾಧಾರಣೆ ಮಾಡಿ ಶಕ್ತಿನಗರದಲ್ಲಿ ಅಯ್ಯಪ್ಪ ಮಹಾಪೂಜೆ, ಮಂಗಳಾರತಿ, ಅನ್ನಸಂತರ್ಪಣೆಗೈದು, ಥಾಣೆ-ಪುಣೆ ಮಾರ್ಗವಾಗಿ ಶಬರಿಗಿರಿಗೆ 13ನೇ ಬಾರಿಗೆ ಪಾದಯಾತ್ರೆಯನ್ನು ಪ್ರಾರಂಭಿಸಿದರು. ಡಿ. 1ರಂದು ಪಂಢರಾಪುರ, ಡಿ. 12ರಂದು ಮಂತ್ರಾಲಯ, ಡಿ. 22ರಂದು ತಿರುಪತಿ ಹಾಗೂ ತಮಿಳುನಾಡಿನ ಪಳನಿ ಶ್ರೀ ಸುಬ್ರಹ್ಮಣ್ಯ ದೇವರ ದರ್ಶನ ಮಾಡಿದ ಅವರು, ಶಬರಿಮಲೆಗೆ ತೆರಳಿದ್ದಾರೆ. 1989ರಲ್ಲಿ ಅಯ್ಯಪ್ಪ ದೇವರ
ಮಾಲಾಧಾರಣೆ ಮಾಡಿ ದೇವರ ದರ್ಶನಗೈದ ಉಪೇಂದ್ರ ಗುರುಸ್ವಾಮಿ ಅವರು 1993ರಲ್ಲಿ ಪ್ರಪ್ರಥಮ ಬಾರಿಗೆ ಪಾದಯಾತ್ರೆಯನ್ನು ಪ್ರಾರಂಭಿಸಿದರು. ಉಪೇಂದ್ರ ಗುರುಸ್ವಾಮಿ ಅವರು ಶನಿ ಸಿಂಗಾ¡ಪುರಕ್ಕೆ ಒಂದು, ಶಿರ್ಡಿ ಸಾಯಿ ಬಾಬಾ ಮಂದಿರಕ್ಕೆ ಮೂರು ಬಾರಿ, ಪಂಢರಾಪುರಕ್ಕೆ 9, ಮಂತ್ರಾಲಯಕ್ಕೆ 9, ತಿರುಪತಿಗೆ 1, ಅಕ್ಕಲ್‌ಕೋಟ್‌ಗೆ ಎರಡು, ಗಂಗಾಪುರಕ್ಕೆ ಎರಡು, ಆಲಂದಿಗೆ 2, ಡೊಂಗರ್ ಬಂಗಾರ್‌ಗೆ ಎರಡು ಬಾರಿ ಹಾಗೂ ತಮಿಳುನಾಡಿನ ಪಳನಿ ಸುಬ್ರಹ್ಮಣ್ಯ ದೇವಸ್ಥಾನಕ್ಕೆ 5 ಬಾರಿ ಪಾದಯಾತ್ರೆಗೈದು ನಡೆದಾಡುವ ಸ್ವಾಮಿ ಎಂದೇ ಪ್ರಸಿದ್ಧರಾಗಿದ್ದಾರೆ. ದಕ್ಷಿಣ ಕನ್ನಡ ಬಂಟ್ವಾಳದ ಸರಪಾಡಿ ಗ್ರಾಮದ ಸೇದಕೋಡಿ ಮನೆಯ ದಿ| ಅಣ್ಣು ಪೂಜಾರಿ ಮತ್ತು ಜಮುನಾ ಪೂಜಾರಿ ದಂಪತಿಯ ಪುತ್ರರಾಗಿರುವ ಅವರು ಪತ್ನಿ ಪುಷ್ಪಲತಾ ಮತ್ತು ಪುತ್ರ ತೇಜಸ್‌ನೊಂದಿಗೆ ನಗರದಲ್ಲಿ ನೆಲೆಸಿದ್ದು, ಕ್ಯಾಂಟೀನ್ ಕಾರ್ಮಿಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು
ಅಬುಧಾಬಿ ಹಿಂದೂ ಮಂದಿರದಲ್ಲಿ ಪ್ರಥಮ ದೀಪಾವಳಿ ಸಂಭ್ರಮ
ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
MUST WATCH
ಹೊಸ ಸೇರ್ಪಡೆ
ಬಿಜೆಪಿ ಸಭೆಯಲ್ಲಿ ಭಿನ್ನರ ವಿರುದ್ಧ ಕಿಡಿ; ಯತ್ನಾಳ್ ಬಣದ ವಿರುದ್ಧ ಮಾಜಿ ಶಾಸಕರು ಅಸಮಾಧಾನ
Naxal Surrender: ನಕ್ಸಲ್ ಶರಣಾಗತಿ ಪೂರ್ವಯೋಜಿತ ಸ್ಟೇಜ್ ಶೋ ಅಲ್ಲವೇ?
Finance Debt: ಫೈನಾನ್ಸ್ ಸಾಲ ವಸೂಲಿಗೆ ಹೆದರಿ ಊರನ್ನೇ ಬಿಟ್ಟರು!
Naxal Surrender: ರಾಜ್ಯ ಸರಕಾರವೇ ನಕ್ಸಲರಿಗೆ ಶರಣಾಗಿದೆಯೋ?: ಸಿ.ಟಿ. ರವಿ
Manipal: ನಾಲ್ವರು ಅನುಪಮ ಸಾಧಕರಿಗೆ ಇಂದು ಹೊಸ ವರ್ಷದ ಪ್ರಶಸ್ತಿ ಪ್ರದಾನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.