ಮುಂಬಯಿ: “ಜಾವಂಯ್ ನಂಬರ್ ವನ್’ ಕೊಂಕಣಿ ಸಿನೆಮಾ ಪ್ರೀಮಿಯರ್ ಶೋ
Team Udayavani, Apr 29, 2018, 12:02 PM IST
ಮುಂಬಯಿ: ಸಿನೆಮಾ ನಿರ್ಮಾಣ ಸುಲಭವಲ್ಲ. ಅದೂ ಅಲ್ಪಸಂಖ್ಯಾಕ ಭಾಗದ ಚಿತ್ರ ರಚನೆ ಸಾಹಸವೇ ಸರಿ. ವಾಲ್ಟರ್, ಲಿಯೋ ಮತ್ತು ಸಿರಿಲ್ ಸಾಂಗತ್ಯದ ಸಾಂಗಾತಿ ಕ್ರಿಯೇಶನ್ಸ್ ಕೊಂಕಣಿ ಸಿನೆಮಾ ನಿರ್ಮಾಣಕ್ಕೆ ಧುಮುಕಿ ದೊಡ್ಡ ಸಾಧನೆ ಮಾಡಿದೆ. ಈ ತ್ರಿಮೂರ್ತಿ ಸಾಹಸಿಗರ ದಿಟ್ಟತನಕ್ಕೆ ಮತ್ತು ಇಡೀ ಚಿತ್ರ ತಂಡಕ್ಕೆ ಶುಭ ಕೋರುವೆ. ಇದೀಗಲೇ ತವರೂರಲ್ಲಿ ತೆರೆಕಂಡ ಈ ಚಿತ್ರ ಕೊಂಕಣಿಗರ ಮನೆಮನ ಗೆದ್ದಿದೆ. ಇಂತಹ ಸಿನೆಮಾಗಳನ್ನು ಮಾಡುವ ಮೂಲಕ ಮಾತೃಭಾಷಾ ಮೋಹ ಹೆಚ್ಚುತ್ತದೆ. ತಮ್ಮತನದ ಭಾವನೆ ಉದ್ಭವಿಸುತ್ತದೆ. ಆ ಮೂಲಕ ಸಮುದಾಯದ ಸಂಸ್ಕೃತಿ ಮತ್ತು ಮಾತೃಭಾಷೆಯ ಉಳಿವು ಸಾಧ್ಯ. ಸಿನೆಮಾ ಅನ್ನುವುದು ಭಾಷೆ ಮತ್ತು ಸಂಸ್ಕೃತಿ ಜೀವಂತವಾಗಿಸುವ ಬಲಿಷ್ಠ ಮಾಧ್ಯಮ. ಆದುದರಿಂದಲೇ ನಿಮ್ಮ ಮಕ್ಕಳಲ್ಲಿ ಇಂತಹ ಚಲನಚಿತ್ರಗಳನ್ನು ವೀಕ್ಷಿಸುವಂತೆ ಪ್ರೋತ್ಸಾಹಿಸಿ ಆವಾಗಲೇ ಮಕ್ಕಳಲ್ಲೂ ಮಾತೃ ಭಾಷೆಯ ಮೇಲೆ ಒಲವು ಹೆಚ್ಚುತ್ತದೆ ಎಂದು ಕೆನರಾ ಪಿಂಟೋ ಟ್ರಾವೆಲ್ಸ್ ಮಾಲಕ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಲ್ಪಸಂಖ್ಯಾತ ವಿಭಾಗದ ಸಂಯೋಜಕ ಸುನೀಲ್ ಪಾçಸ್ ತಿಳಿಸಿದರು.
ಶನಿವಾರ ಸಂಜೆ ಕುರ್ಲಾ ಪಶ್ಚಿಮದ ಜೆರಿಮೆರಿ ಅಲ್ಲಿನ ಮ್ಯಾಕ್ಸಸ್ ಥಿಯೇಟರ್‌ನಲ್ಲಿ ಬೆಳ್ಳಿ ತೆರೆಯನ್ನೇರಿದ “ಜಾವಂಯ್ ನಂಬರ್ ವನ್’ ಕೊಂಕಣಿ ಸಿನೆಮಾದ ಪ್ರೀಮಿಯರ್ ಪ್ರದರ್ಶನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದು ಸುನೀಲ್ ಪಾçಸ್ ನುಡಿದಿದರು.
ಸೈಂಟ್ ಜೂಡ್ ಚರ್ಚ್ ಜೆರಿಮೆರಿ ಇದರ ಮುಖ್ಯ ಧರ್ಮಗುರು ರೆ| ಫಾ| ಲ್ಯಾನ್ಸಿ ಪಿಂಟೋ ಆಶೀರ್ವಚನಗೈದರು. ಗೌರವ ಅಥಿತಿಗಳಾಗಿ ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಅಧ್ಯಕ್ಷ ಚಂದ್ರಶೇಖರ ಪಾಲೆತ್ತಾಡಿ, ಕ್ರಿಶ್ಚನ್ ಛೇಂಬರ್ ಆಫ್ ಕಾಮರ್ಸ್ ಎಂಡ್ ಇಂಡಸ್ಟ್ರೀಸ್ ಸಂಸ್ಥೆಯ ಸಂಸ್ಥಾಪಕ ಕಾರ್ಯಾಧ್ಯಕ್ಷ ವಿನ್ಸೆಂಟ್ ಮಥಾಯಸ್, ಹಾಲಿ ಕಾರ್ಯಾಧ್ಯಕ್ಷ ಆ್ಯಂಟನಿ ಸಿಕ್ವೇರಾ, ಮಾಜಿ ಕಾರ್ಯಾಧ್ಯಕ್ಷ ಹೆನ್ರಿ ಲೊಬೋ, ಉದ್ಯಮಿಗಳಾದ ಫ್ರಾನ್ಸಿಸ್ ರಸ್ಕೀನ್ಹಾ,ರೋನಿ ಗೋವಿಯಸ್, ಹಿರಿಯ ರಂಗನಟ ಫ್ರಾನ್ಸಿಸ್ ಫೆರ್ನಾಂಡಿಸ್ ಕಾಸ್ಸಿಯಾ, ಮಹಾರಾಷ್ಟ್ರ ಕೊಂಕಣ್ ಅಸೋಸಿಯೇಸನ್‌ನ ಅಧ್ಯಕ್ಷೆ ಬೆನಿಡಿಕ್ಟಾ ಬಿ.ರೆಬೆಲ್ಲೋ, ಮುಂಬಯಿ ಹೈಕೋರ್ಟ್‌ನ ನ್ಯಾಯವಾದಿ ಪಿಯೂಷ್ ವಾಸ್, ನಟ ಕೆವಿನ್ ಡಿಮೆಲ್ಲೊ, ನಟಿ ವರ್ಷಾ ಉಜಾYಂವ್ಕರ್ ಮತ್ತಿತರರು ಉಪಸ್ಥಿತರಿದ್ದರು.
ಕೊಂಕಣಿ ಭಾಷೆಗೆ ಎಂದೂ ಅಳಿವು ಇಲ್ಲ. ಸಿನೆಮಾದಂತಹ ಮಾಧ್ಯಮಗಳೂ ಭಾಷೆಗಳನ್ನು ಜೀವಂತ ಆಗಿರಿಸಲು ಪೂರಕವಾಗಿವೆ. ಈ ಮೂಲಕ ಸಮಾಜದಲ್ಲಿನ ಹೊಸ ಪ್ರತಿಭೆಗಳ ಅನಾವರಣ ಸಾಧ್ಯ. ನಾನೂ ಓರ್ವ ಅಪ್ಪಟ ಕೊಂಕಣಿ ವ್ಯಕ್ತಿ. ಮಾತೃಭಾಷೆಯಲ್ಲಿ ನಟಿಸುವ ಕನಸು ಈ ಚಿತ್ರದಲ್ಲಿ ಅಭಿನಯಿಸುವ ಮೂಲಕ ನನಸಾಗಿದೆ ಎಂದು ನಟಿ ವರ್ಷಾ ಸಾಂದರ್ಭಿಕವಾಗಿ ಮಾತನಾಡಿ ಸಿನೆಮಾದ ಯಶಸ್ಸಿಗೆ ಶುಭ ಹಾರೈಸಿದರು.
ಅತಿಥಿಗಳು ಬೃಹನ್ಮುಂಬಯಿಯಲ್ಲಿನ “ತ್ರಿಮೂರ್ತಿ ಕಲಾ ಸಂಘಟಕರು’ ಎಂದೇ ಹೆಸ ರಾಂತ ಲಿಯೋ ಫೆರ್ನಾಂಡಿಸ್ ಜೆರಿಮೆರಿ, ವಾಲ್ಟರ್ ಡಿ’ಸೋಜಾ ಕಲ್ಮಾಡಿ ಮತ್ತು ಸಿರಿಲ್ ಕ್ಯಾಸ್ತಲೀನೊ ಇವರ ಸಾಂಗಾತಿ ಕ್ರಿಯೇಶನ್ಸ್ ಮುಂಬಯಿ ಪ್ರೊಡಕ್ಷನ್ಸ್ ಮುಖೇನ ಬೋಜ್‌ಪುರಿ, ಬಾಲಿವುಡ್ ಹಾಗೂ ಕೊಂಕಣಿ ಚಲನಚಿತ್ರಗಳ ಅನುಭವಿ ಚಿತ್ರನಿರ್ದೇಶಕ ಹ್ಯಾರಿ ಫೆರ್ನಾಂಡಿಸ್ ಬಾಕೂìರು ಕಥೆ ರಚನೆೆ ಹಾಗೂ ಸ್ವನಿರ್ದೇಶನದಲ್ಲಿ ನಿರ್ಮಿಸಿರುವ “ಜಾವಂಯ್ ನಂಬರ್ ವನ್’ ಚಲನಚಿತ್ರದ ಯಶಸ್ಸಿಗೆ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಜೆಸಿಂತ ಆರ್. ಗೋವಿಯಸ್, ಜೋರ್ಜ್ ಸಿಕ್ವೇರ ಭಾಯಂದರ್, ಪೀಟರ್ ರೆಬೆರೋ, ಜೋನ್ ರೋಡ್ರಿಗಸ್, ಕ್ರಿಸ್ಟೋಫರ್ ಸೊಲೊಮನ್, ಗಿಲ್ಬರ್ಟ್ ಬ್ಯಾಪ್ಟಿ ಸ್ಟ್, ಮರ್ಸೆಲಿನ್ ಜಿ.ಬ್ಯಾಪ್ಟಿಸ್ಟ್, ದಿವೋ ಕೊಂಕಣಿ ಸಾಪ್ತಾಹಿಕದ ಸಂಪಾದಕ ಲಾರೆನ್ಸ್ ಕುವೆಲ್ಲೊ, ಸುಝಾನ್ ಕುವೆಲ್ಲೊ, ಪ್ರಮಿಳಾ ಮಥಾಯಸ್, ಜೆನೆವೀವ್Ø ವಾಸ್, ಫಿಲೋಮೆನಾ ಲೋಬೊ, ತಾರಾ ಆರ್.ಬಂಟ್ವಾಳ್ ಮತ್ತಿತರರು ಉಪಸ್ಥಿತರಿದ್ದರು.
ಲಿಯೋ ಫೆರ್ನಾಂಡಿಸ್ ಜೆರಿಮೆರಿ ಸ್ವಾಗತಿಸಿದರು. ರೋನ್ಸ್ ಬಂಟ್ವಾಳ್ ಕಾರ್ಯಕ್ರಮ ನಿರೂಪಿಸಿ ಅತಿಥಿಗಳನ್ನು ಪರಿಚಯಿಸಿ ಕೃತಜ್ಞತೆ ಸಲ್ಲಿಸಿದರು.
ಇತ್ತಿಚೆಗಷ್ಟೇ ಮಂಗಳೂರು, ಉಡುಪಿ ನಗರದಾದ್ಯಂತ ಬಿಡುಗಡೆಗೊಂಡು ಯಶಸ್ಸು ಕಂಡ ಈ “ಜಾವಂಯ್ ನಂಬರ್ ವನ್’ ಕೊಂಕಣಿ ಚಲನಚಿತ್ರ ಸಿನೆಮಾಭಿಮಾನಿಗಳ ವೀಕ್ಷಣೆಗಾಗಿ ಪ್ರಪ್ರಥಮ ಪ್ರದರ್ಶನವಾಗಿ ಮೇ 29ರಂದು ಬೆಳಗ್ಗೆ 10 ಕ್ಕೆ ಮತ್ತು ಸಂಜೆ 6.30 ಕ್ಕೆ ಹಾಗೂ ಎ. 30ರಿಂದ ಮೇ 03ರ ತನಕ ದಿನಂಪ್ರತಿ ಸಂಜೆ 6.30ಕ್ಕೆ ಇದೇ ಮ್ಯಾಕ್ಸಸ್ ಚಿತ್ರಮಂದಿರದಲ್ಲಿ ಪ್ರದರ್ಶನ
ಕಾಣಲಿದೆ.
ಮಹಾನಗರದಲ್ಲಿನ ಎಲ್ಲಾ ಕೊಂಕಣಿ ಜನತೆ ಮತ್ತು ಚಲನಚಿತ್ರ ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪ್ರದರ್ಶನದ ಯಶಸ್ಸಿಗೆ ಸಹಕರಿಸುವಂತೆ ಸಾಂಗಾತಿ ಬಳಗ ತಿಳಿಸಿದ್ದಾರೆ.
ಚಿತ್ರ-ವರದಿ: ರೋನ್ಸ್ ಬಂಟ್ವಾಳ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ
ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!
ಲ್ಯಾಂಬೆತ್‌ಗೆ ಸಚಿವ ಎಂ.ಬಿ.ಪಾಟೀಲ್ ಭೇಟಿ-ಬಸವೇಶ್ವರ ಪ್ರತಿಮೆ ವೀಕ್ಷಣೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.