ಮುಂಬಯಿ ಉತ್ತರ: ಗೋಪಾಲ್ ಶೆಟ್ಟಿ ಅವರಿಗೆ ಭರ್ಜರಿ ಜಯ
Team Udayavani, May 24, 2019, 1:17 PM IST
ಮುಂಬಯಿ: ಶಿವಸೇನೆ ಮತ್ತು ಆರ್‌ಪಿಐ ಪಕ್ಷಗಳ ಮೈತ್ರಿಕೂಟದ ಭಾರತೀಯ ಜನತಾ ಪಕ್ಷದಿಂದ ಮುಂಬಯಿ ಉತ್ತರ ಲೋಕಸಭಾ ಕ್ಷೇತ್ರದಿಂದ ದ್ವಿತೀಯ ಬಾರಿಗೆ ಕಣಕ್ಕಿಳಿದ ಬೃಹನ್ಮುಂಬಯಿಯ ಏಕೈಕ ತುಳು-ಕನ್ನಡಿಗ ಅಭ್ಯರ್ಥಿ ಗೋಪಾಲ್ ಸಿ. ಶೆಟ್ಟಿ ಅವರು 4, 64,599 ಮತಗಳ ಅಂತರದಿಂದ ಭರ್ಜರಿ ಜಯ ಗಳಿಸಿದ್ದಾರೆ.
ಬಿಜೆಪಿ ಅಭ್ಯರ್ಥಿ ಗೋಪಾಲ್ ಶೆಟ್ಟಿ ಅವರು 7,05,555ಮತಗಳನ್ನು ಪಡೆದರೆ, ಕಾಂಗ್ರೆಸ್ ಅಭ್ಯರ್ಥಿ ಬಾಲಿವುಡ್ ನಟಿ ಉರ್ಮಿಳಾ ಮಾತೋಂಡ್ಕರ್ 2,40,956 ಮತಗಳನ್ನು ಪಡೆದಿದ್ದಾರೆ. ಮತ ಎಣಿಕೆಯು ಗೋರೆಗಾಂವ್ ಪೂರ್ವದ ವೆಸ್ಟರ್ನ್ ಎಕ್ಸ್‌ಪ್ರೆಸ್ ಹೈವೇ ಸಮೀಪದ ಎನ್‌ಎಸ್‌ಇ ಗ್ರೌಂಡ್‌ನ ನೆಸ್ಕೋ ಸೆಂಟರ್‌ನಲ್ಲಿ ನಡೆಯಿತು. ಬೆಳಗ್ಗೆಯಿಂದಲೇ ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಹೊರಗಡೆ ಜಮಾವಣೆಗೊಂಡು ಪ್ರತಿ ಸುತ್ತಿನ ಮತ ಎಣಿಕೆಯ ಫಲಿತಾಂಶಕ್ಕಾಗಿ ಕಾಯುತ್ತಿದ್ದರು. ಪ್ರತಿಸುತ್ತಿನ ಫಲಿತಾಂಶ ಘೋಷಣೆಯಾಗುತ್ತಿದ್ದಂತೆ ನೆರೆದ ಅಸಂಖ್ಯಾತ ಮತದಾರರು, ಬಿಜೆಪಿ, ಶಿವಸೇನೆ ಮತ್ತು ಆರ್‌ಪಿಐ ಪಕ್ಷಗಳ ಭಾರೀ ಸಂಖ್ಯೆಯ ಕಾರ್ಯಕರ್ತರು, ಅಭಿಮಾನಿಗಳು ಗೋಪಾಲ್ ಶೆಟ್ಟಿ ಅವರನ್ನು ಅಭಿನಂದಿಸಿ ಶುಭ ಹಾರೈಸಿದರು.
ಹನ್ನೆರಡು ಪಕ್ಷಗಳು…
ಆರು ಪಕ್ಷೇತರರು….
ಈ ಬಾರಿ ಬಿಜೆಪಿ ಕಾಂಗ್ರೆಸ್, ಆಮ್ ಆದ್ಮಿ ಪಾರ್ಟಿ, ಸಮಾಜವಾದಿ ಪಕ್ಷ, ಬಹುಜನ ಸಮಾಜವಾದಿ ಪಕ್ಷ, ಎಐಪಿ, ಬಿಬಿಎಂ, ಎಂಪಿಎಸ್ (ಟಿ), ಬಿಎಂಪಿ, ಫಾರ್ವರ್ಡ್ ಬ್ಲಾಕ್ (ಎಫ್‌ಬಿ), ಪ್ರಬುದ್ಧನ್ ರಿಪಬ್ಲಿಕನ್ ಪಾರ್ಟಿ, ಎಸ್‌ವಿಪಿಪಿ, ಪಿಪಿಐ (ಎಸ್) ಪಕ್ಷಗಳು ಸೇರಿದಂತೆ ಸುಮಾರು ಹನ್ನೆರಡು ಪಕ್ಷಗಳು ಮತ್ತು 8-ಪಕ್ಷೇತರರು ಸ್ಪರ್ಧಾ ಕಣದಲ್ಲಿದ್ದರು. ಮನೋಜ್ ಕುಮಾರ್ ಜಯಪ್ರಕಾಶ್ ಸಿಂಗ್ (ಬಹುಜನ ಸಮಾಜ ಪಾರ್ಟಿ), ಆ್ಯಂಡ್ರೂ ಜೋನ್ ಫೆರ್ನಾಂಡಿಸ್(ಹಮ್ ಭಾರತೀಯ ಪಾರ್ಟಿ), ಅಂಕುಶ್‌ರಾವ್ ಶಿವಾಜಿರಾವ್ ಪಾಟೀಲ್ (ರಾಷ್ಟ್ರೀಯ ಮರಾಠ ಪಾರ್ಟಿ), ಚಂದಲಿಯ ಸಮಯ್‌ಸಿಂಗ್ ಆನಂದ್ (ಬಹುಜನ ಮುಕ್ತಿ ಪಾರ್ಟಿ), ಛನ್ನು ಸಹದೇವ್‌ರಾವ್ ಸೊಂಟಕ್ಕೆ (ಭಾರತ್ ಪ್ರಭಾತ್ ಪಾರ್ಟಿ), ಥೊರಟ್ ಸುನೀಲ್ ಉತ್ತಮ್‌ರಾವ್ (ವಂಚಿತ್ ಬಹುಜನ್ ಅಘಾಡಿ), ಡಾ| ಪವನ್ ಕುಮಾರ್ ಪಾಂಡೆ (ಸರ್ವೋದಯ ಭಾರತ್ ಪಾರ್ಟಿ), ಫತ್‌ಹೇಮೊಹ್ಮದ್ ಮನ್ಸುರಿ ಶೇಖ್ (ಭಾರತೀಯ ಲೋಕಮತ್ ರಾಷ್ಟ್ರವಾದಿ ಪಾರ್ಟಿ), ರಂಜಿತ್ ಬಜರಂಗಿ ತಿವಾರಿ (ನೈತಿಕ್ ಪಾರ್ಟಿ), ಕಾಮ್ರೇಡ್ ವಿಲಾಸ್ ವಿವಾಲೆ (ಮಾರ್ಕಿಸ್ಟ್ ಲೆನಿನಿಸ್ಟ್ ಪಾರ್ಟಿ ಆಫ್ ಇಂಡಿಯಾ-ರೆಡ್ ಫ್ಲಾಗ್) ಸೇರಿದಂತೆ ಒಟ್ಟು ಹನ್ನೆರಡು ಪಕ್ಷಗಳ ಮತ್ತು ಅಖಾ¤ರ್ ಮುನ್ಶಿ ಪೇಪರ್‌ವಾಲಾ, ಡಾ| ರೈಸ್ ಖಾನ್, ಅಮೋಲ್ ಅಶೋಕ್‌ರಾವ್ ಜಾಧವ್, ಬಿ. ಕೆ. ಗಧವಿ, ಮಿಲಿಂದ್ ಶಂಕರ್ ರೆಪೆ,ಅನ್ಸಾರಿ ಮೋಹ್ಮದ್ ಅಜಾದ್ ಹೀಗೆ ಆರು ಪಕ್ಷೇತರರು ಸ್ಪರ್ಧಿಸಿದ್ದರು.
ಅಭಿನಂದನೆಯ ಮಹಾಪೂರ
ಗೋಪಾಲ್ ಶೆಟ್ಟಿ ಅವರನ್ನು ಮಾತೃಶ್ರೀ ಗುಲಾಬಿ ಚಿನ್ನಯ್ಯ ಶೆಟ್ಟಿ, ಪತ್ನಿ ಉಷಾ ಜಿ. ಶೆಟ್ಟಿ ಮತ್ತು ಪರಿವಾರ, ಸಂಸದರ ಆಪ್ತ ಹಾಗೂ ಪ್ರತಿಭಾನ್ವಿತ ಸಂಘಟಕ ಎರ್ಮಾಳ್ ಹರೀಶ್ ಶೆಟ್ಟಿ, ಬಂಧು ಮಿತ್ರರು, ಮಹಾರಾಷ್ಟ್ರದ ಶಿಕ್ಷಣ ಸಚಿವ ವಿನೋದ್ ತಾಬ್ಡೆ, ದಹಿಸರ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕಿ ಮನೀಷಾ ಚೌಧರಿ, ಶಿವಸೇನೆಯ ಶಾಸಕರಾದ ಪ್ರಕಾಶ್ ಸುರ್ವೆ, ಬಿಜೆಪಿಯ ಅತುಲ್ ಭಟ್‌ಖಳ್ಕರ್, ಬಿಜೆಪಿ ಮುಂಬಯಿ ಸಮಿತಿಯ ಎಕ್ಸಿಕ್ಯೂಟಿವ್ ಕಮಿಟಿ ಸದಸ್ಯ ಎಲ್. ವಿ. ಅಮೀನ್ ಮತ್ತಿತರ ಗಣ್ಯರು ಉಪಸ್ಥಿತರಿದ್ದು ಅಭಿನಂದಿಸಿದರು. ರಾಷ್ಟ್ರೀಯ ಬಿಲ್ಲವರ ಮಹಾ ಮಂಡಲದ ಅಧ್ಯಕ್ಷ ಜಯ ಸಿ. ಸುವರ್ಣ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಬಂಟರ ಸಂಘ ಮುಂಬಯಿ ಅಧ್ಯಕ್ಷ ಪದ್ಮನಾಭ ಎಸ್. ಪಯ್ಯಡೆ, ಮೊಗವೀರ ವ್ಯವಸ್ಥಾಪಕ ಮಂಡಳಿ ಮುಂಬಯಿ ಅಧ್ಯಕ್ಷ ಕೆ. ಎಲ್. ಬಂಗೇರ, ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ಚಂದ್ರಶೇಖರ ಎಸ್. ಪೂಜಾರಿ, ಬಿಎಸ್‌ಕೆಬಿ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ಡಾ| ಸುರೇಶ್ ಎಸ್.ರಾವ್ ಕಟೀಲು, ಜಿಎಸ್‌ಬಿ ಸಭಾ ದಹಿಸರ್-ಬೋರಿವಿಲಿ ಉಪಾಧ್ಯಕ್ಷ ಸಾಣೂರು ಮನೋಹರ್ ವಿ. ಕಾಮತ್, ಗಾಣಿಗ ಸಮಾಜ ಸೇವಾ ಸಂಘ ಮುಂಬಯಿ ಇದರ ಅಧ್ಯಕ್ಷ ಕುತ್ಪಾಡಿ ರಾಮಚಂದ್ರ ಎಂ. ಗಾಣಿಗ, ಭಂಡಾರಿ ಸೇವಾ ಸಂಘ ಮುಂಬಯಿ ಅಧ್ಯಕ್ಷ ನ್ಯಾಯವಾದಿ ಆರ್. ಎಂ. ಭಂಡಾರಿ, ಸಾಫಲ್ಯ ಸೇವಾ ಸಂಘ ಮುಂಬಯಿ ಇದರ ಅಧ್ಯಕ್ಷ ಶ್ರೀನಿವಾಸ ಪಿ. ಸಾಫಲ್ಯ ಶ್ರೀ ರಜಕ ಸಂಘ ಮುಂಬಯಿ ಅಧ್ಯಕ್ಷ ಡಿ. ಸಿ. ಸಾಲ್ಯಾನ್, ಮಾಜಿ ಅಧ್ಯಕ್ಷ ಸತೀಶ್ ಆರ್. ಸಾಲ್ಯಾನ್, ರಾಮರಾಜ ಕ್ಷತ್ರಿಯ ಸೇವಾ ಸಂಘ ಮುಂಬಯಿ ಅಧ್ಯಕ್ಷ ರಾಜ್‌ಕುಮಾರ್ ಕಾರ್ನಾಡ್, ಭವಾನಿ ಫೌಂಡೇಶನ್ ಮುಂಬಯಿ ಇದರ ಸಂಸ್ಥಾಪಕ ಅಧ್ಯಕ್ಷ ದಡªಂಗಡಿ ಚೆಲ್ಲಡ್ಕ ಕೆ. ಡಿ. ಶೆಟ್ಟಿ, ಅಖೀಲ ಭಾರತ ತುಳು ಒಕ್ಕೂಟ ಅಧ್ಯಕ್ಷ ಧರ್ಮಪಾಲ್ ಯು. ದೇವಾಡಿಗ, ಭಂಡಾರಿ ಮಹಾ ಮಂಡಲ ಸ್ಥಾಪಕಾಧ್ಯಕ್ಷ ಕಡಂದಲೆ ಸುರೇಶ್ ಭಂಡಾರಿ, ರೈಲ್ವೇ ಯಾತ್ರಿ ಸಂಘ ಬೋರಿವಲಿ ಮುಂಬಯಿ ಇದರ ಗೌರವಾಧ್ಯಕ್ಷ ಡಾ| ಶಂಕರ್ ಬಿ. ಶೆಟ್ಟಿ ವಿರಾರ್ ಸೇರಿದಂತೆ ನಗರದ ತುಳು-ಕನ್ನಡಿಗರ ಸಂಘ-ಸಂಸ್ಥೆಗಳ ಮುಖ್ಯಸ್ಥರು, ಪದಾಧಿಕಾರಿಗಳು, ಸದಸ್ಯರು ಗೋಪಾಲ್ ಶೆಟ್ಟಿ ಅವರನ್ನು ಅಭಿನಂದಿಸಿದರು.
ಕ್ಷೇತ್ರದ ಜನತೆಯ ಅಪಾರ ಶ್ರಮ ಮತ್ತು ತ್ಯಾಗದಿಂದ ನನ್ನ ಸಂಸದ ಸ್ಥಾನದ ವಿಜಯೀ ಮುನ್ನಡೆ ಸಾಧ್ಯವಾಗಿದೆ. ಕ್ಷೇತ್ರದಲ್ಲಿನ ಮುಂಬಯಿವಾಸಿ ಮತದಾರರ ಸಹಯೋಗ, ಮಿತ್ರ ಪಕ್ಷಗಳ ಕಾರ್ಯಕರ್ತರ ಅಪಾರ ಶ್ರಮ, ಹಿತೈಷಿಗಳ ಸಹಕಾರದಿಂದ ನನಗೆ ಮತ್ತೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಕಲ್ಪಿಸಿದ ಬಿಜೆಪಿ ಪಕ್ಷದ ಹಿರಿಯ ಮತ್ತು ಕಿರಿಯ ನಾಯಕರಿಗೆ ಮತ್ತು ನನ್ನ ವಿಜಯೀ ಮುನ್ನಡೆಗೆ ಶ್ರಮಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತಿದ್ದೇನೆ
– ಗೋಪಾಲ್ ಶೆಟ್ಟಿ (ಸಂಸದರು).
ಚಿತ್ರ-ವರದಿ: ರೋನ್ಸ್ ಬಂಟ್ವಾಳ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desiswara: ನ್ಯೂಯಾರ್ಕ್ ಸರಕಾರದಿಂದ ಭರ್ಜರಿ ದೀಪಾವಳಿ ಆಚರಣೆ
Desiswara: ಜಾಗತಿಕ ಬೆಳಕಿನ ಹಬ್ಬ ದೀಪಾವಳಿ – ಬೆಳಕೆಂದರೆ ಬರಿಯ ಬೆಳಕಲ್ಲ…
Desiswara: ಕನ್ನಡ ಉಳಿವಿಗೆ ಜವಾಬ್ದಾರಿಯುತ ನಡೆ ನಮ್ಮದಾಗಲಿ
Kannada Alphanbets: “ಕ’ ಕಾರದಲ್ಲಿನ ವಿಶೇಷ: ಕನ್ನಡ ಅಕ್ಷರಮಾಲೆಯಲ್ಲಿನ “ಕ’ ಕಾರ ವೈಭವ
ನ.9: ವಿಶ್ವ ಕನ್ನಡ ಹಬ್ಬ: ಈ ಬಾರಿ ಸಿಂಗಾಪುರದಲ್ಲಿ ರಂಗೇರಲಿರುವ ಸಂಭ್ರಮ
MUST WATCH
ಹೊಸ ಸೇರ್ಪಡೆ
Threat: ತಪ್ಪಾಯಿತೆಂದು ಕ್ಷಮೆ ಕೇಳಿ ಇಲ್ಲ 5ಕೋಟಿ ನೀಡಿ.. ಸಲ್ಮಾನ್ ಖಾನ್ ಗೆ ಮತ್ತೆ ಬೆದರಿಕೆ
ಅಂಗಡಿಯಲ್ಲಿ ಬಿಟ್ಟು ಹೋಗಿದ್ದ 1.20 ಲ.ರೂ ಹಿಂದಿರುಗಿಸಿ ಮಾನವೀಯತೆ ಮೆರೆದ ಶಾಸಕ ಬಸವಂತಪ್ಪ
Kavoor: ಎಡನೀರು ಮಠದ ಶ್ರೀಗಳ ಮೇಲೆ ಹಲ್ಲೆ… ಶಾಸಕ ಡಾ.ಭರತ್ ಶೆಟ್ಟಿ ವೈ. ಖಂಡನೆ
ಅಕ್ರಮ ಮರಳುಗಾರಿಕೆ ಕುರಿತು ಮಾಹಿತಿ ನೀಡಿದ ಆರೋಪ… ವ್ಯಕ್ತಿಗೆ ಹಲ್ಲೆ ನಡೆಸಿ ಇರಿಯಲು ಯತ್ನ
BBK11: ಕ್ಯಾಪ್ಟನ್ ಹನುಮಂತುಗೆ ನಿಯತ್ತಿನ ಪ್ರಶ್ನೆ ಹಾಕಿ, ರೇಗಾಡಿದ ಚೈತ್ರಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.