ಮುಂಬಯಿ ಪದ್ಮಶಾಲಿ ಸಮಾಜ ವಾರ್ಷಿಕ ಮಹೋತ್ಸವ,ಸಮ್ಮಾನ
Team Udayavani, Aug 30, 2018, 12:23 PM IST
ಮುಂಬಯಿ: ಪದ್ಮಶಾಲಿ ಸಮಾಜ ಸೇವಾ ಸಂಘ ಮುಂಬಯಿ ಇದರ 82ನೇ ವಾರ್ಷಿಕ ಮಹೋತ್ಸವವು ಮುಲುಂಡ್ ರೈಲ್ವೇ ಸ್ಟೇಷನ್ ಬಳಿಯ ಮಹಾರಾಷ್ಟ್ರ ಸೇವಾ ಸಂಘದ ಸಭಾಗೃಹದಲ್ಲಿ ವೈವಿಧ್ಯಮಯ ಕಾರ್ಯಕ್ರಮ ಗಳೊಂದಿಗೆ ಅದ್ದೂರಿಯಾಗಿ ನಡೆಯಿತು.
ಸಮಾರಂಭದಲ್ಲಿ ನಗರದ ತುಳು ಕನ್ನಡ ರಂಗಭೂಮಿಯ ನಾಮಾಂಕಿತ ನಾಟಕಕಾರ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪಡೆದ, ತುಳು ಚಲನಚಿತ್ರ ನಿರ್ದೇಶಕ ನಿರ್ಮಾಪಕ ಮತ್ತು ಕಲಾಜಗತ್ತಿನ ರೂವಾರಿ ಡಾ| ತೋನ್ಸೆ ವಿಜಯಕುಮಾರ್ ಶೆಟ್ಟಿ ಅವರನ್ನು ಕಲೆಗೆ ನೀಡಿದ ಅನನ್ಯ ಸೇವೆಗಾಗಿ 2018ರ ಕಲಾ ತಪಸ್ವಿ ಬಿರುದು ನೀಡಿ ಸಮ್ಮಾನಿಸಲಾಯಿತು.
ವಿಶ್ವಕರ್ಮ ಅಸೋಸಿಯೇಷನ್‌ನ ಮಾಜಿ ಅಧ್ಯಕ್ಷರಾದ, ಬಾಲಾಜಿ ಕೋ ಆಪರೇಟಿವ್ ಸೊಸೈಟಿಯ ಕಾರ್ಯಾಧ್ಯಕ್ಷ ಹಾಗೂ ಜಗದಂಬಾ ಕಾಲಭೈರವ ಮಂದಿರ ಜೋಗೇಶ್ವರಿಯ ಟ್ರಸ್ಟಿಯಾದ ಜಿ. ಟಿ. ಆಚಾರ್ಯ ಅವರು ಪದ್ಮಶಾಲಿ ಸಮಾಜ ಸೇವಾ ಸಂಘ ಮುಂಬಯಿ ಇದರ 82ನೇ ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಸಂಘದ ಹೊಸತಾಗಿ ವಿನ್ಯಾಸಗೊಳಿಸಿದ ವೆಬ್‌ಸೈಟ್‌ನ್ನು ಲೋಕಾರ್ಪಣೆಗೊಳಿಸಿ ಮಾತನಾಡಿ, ಪದ್ಮಶಾಲಿಯವರಿಗೂ ನನಗೂ ಒಂದು ರೀತಿಯ ಅವಿನಾಭಾವ ಸಂಬಂಧ. ಸುಮಾರು ನಲ್ವತ್ತು ವರ್ಷಗಳಿಂದ ಇವರನ್ನು ಹತ್ತಿರದಿಂದ ಬಲ್ಲೆ. ಅವರು ಕೂಡ ನಮ್ಮ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಾರೆ. ಹೀಗಾಗಿ ಇದು ನಮ್ಮವರ ಕಾರ್ಯಕ್ರಮವೆಂದು ಹೇಳಿಕೊಳ್ಳಲು ಖುಷಿಯಾಗುತ್ತದೆ ಎಂದರು.
ವೆಬ್‌ಸೈಟ್‌ನ್ನು ರೂಪಿಸಿದ ಪ್ರಿತೇಶ್ ಬಿ. ಶೆಟ್ಟಿಗಾರ್ ಅವರು ಅದರ ಸಂಪೂರ್ಣ ಮಾಹಿತಿಯನ್ನು ಸಭೆಯ ಮುಂದಿಟ್ಟರು. ಪದ್ಮಶಾಲಿ ಮಹಿಳಾ ಬಳಗದ ಸದಸ್ಯರಿಂದ ನಡೆಸಲ್ಪಟ್ಟ ಅರಸಿನ ಕುಂಕುಮ ಕಾರ್ಯಕ್ರಮದಿಂದ ಪ್ರಾರಂಭಗೊಂಡ ಸಮಾರಂಭ, ಮಕ್ಕಳ ನೃತ್ಯ ಮತ್ತು ಗಾಯನದ ಜೊತೆಗೆ ವಿವಿಧ ಮನೋರಂಜನಾ ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ಹೆಚ್ಚಿನ ಮೆರುಗು ಪಡೆಯಿತು.
ಸಂಘದ ಅಧ್ಯಕ್ಷರಾದ ಉತ್ತಮ್ ಎ. ಶೆಟ್ಟಿಗಾರ್, ಎಜುಕೇಶನ್ ಸೊಸೈಟಿಯ ಕಾರ್ಯಾಧ್ಯಕ್ಷ ಬಿ. ರಾಮಚಂದ್ರ ಶೆಟ್ಟಿಗಾರ್, ಮಹಿಳಾ ಬಳಗದ ಪ್ರಮುಖೆ ಸರೋಜಿನಿ ಎಚ್. ಶೆಟ್ಟಿಗಾರ್ ಮತ್ತು ಪದ್ಮಶಾಲಿ ಕಲಾಭವನ ನಿರ್ಮಾಣ ಸಮಿತಿಯ ಕಾರ್ಯಾಧ್ಯಕ್ಷ ಕೃಷ್ಣಾನಂದ್ ಶೆಟ್ಟಿಗಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಜತೆ ಕಾರ್ಯದರ್ಶಿಯಾದ ನರೇಂದ್ರ ಕಬ್ಬಿನಾಲೆ ಅವರು ಅತಿಥಿಗಳನ್ನು ಪರಿಚಯಿಸಿದರು. ಇತ್ತೀಚೆಗೆ ನಿಧನರಾದ ಸಮಾಜ ಬಾಂಧವರಿಗೆ, ಸದಸ್ಯರಿಗೆ ಹಾಗೂ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಸಂಘದ ಮಾಜಿ ಅಧ್ಯಕ್ಷರಾದ ಎರ್ಮಾಳ್ ಚಂದ್ರಶೇಖರ್ ಜಿ. ಶೆಟ್ಟಿಗಾರ್ ಅವರು ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡಿ ವಾರ್ಷಿಕೋತ್ಸವದ ಎಲ್ಲ ಕಾರ್ಯಕರ್ತರಿಗೆ ಅಭಿನಂದನೆಯನ್ನು ಸಲ್ಲಿಸಿದರು.
ಸಂಘದ ಬೆಳವಣಿಗೆಗೆ ತಮ್ಮನ್ನು ತೊಡಗಿಸಿಕೊಂಡು ಸುದೀರ್ಘ ವರ್ಷಗಳ ಕಾಲ ಸೇವೆ ಮಾಡಿದ ಸಮಾಜದ ಹಿರಿಯ ಸದಸ್ಯರಾದ ಬಾಲಕೃಷ್ಣ ಎಂ. ಶೆಟ್ಟಿಗಾರ್ ಮತ್ತು ಸುಂದರ ಜಿ. ಶೆಟ್ಟಿಗಾರ್ ಅವರನ್ನು ಸಮ್ಮಾನಿಸಲಾಯಿತು. ಮಂಗಳೂರಿನ ನೃತ್ಯ ಕಲಾವಿದೆ ರûಾ ಶೆಟ್ಟಿಗಾರ, ಕನ್ನಡ ಚಲನಚಿತ್ರಕಾರ ನರೇಂದ್ರ ಕಬ್ಬಿನಾಲೆ ಹಾಗೂ ಚಾರಣ ಯಾತ್ರಿ ದಂಪತಿ ಜಗದೀಶ-ದಿವ್ಯಾ ಇವರನ್ನು ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಡಾ| ತೋನ್ಸೆ ವಿಜಯಕುಮಾರ್ ಶೆಟ್ಟಿ ಅವರ ತಂಡದ ಕಲಾವಿದರುಗಳಿಂದ ಮೋಕ್ಷ ನಾಟಕ ಪ್ರದರ್ಶನಗೊಂಡಿತು. ಮೇಕಪ್ ಮ್ಯಾನ್ ಮಂಜುನಾಥ ಶೆಟ್ಟಿಗಾರ್ ಅವರನ್ನು ಗೌರವಿಸಲಾಯಿತು. ನರ್ಸಿಂಗ್ ಸುಪರಿಂಟೆಂಡೆಂಟ್ ವಿಜಯಲಕ್ಷ್ಮೀ ಶೆಟ್ಟಿಗಾರ್ ಅವರು ಮಹಿಳೆಯರಿಗೆ ಗರ್ಭಧಾರಣೆ ಬಗ್ಗೆ ವಿಶೇಷ ಮಾಹಿತಿಗಳನ್ನು ನೀಡಿದರು. ಸಂಸ್ಥೆಯ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹೊಯ್ಸಳ ಕನ್ನಡ ಸಂಘ: ವಿದೇಶದಲ್ಲಿ ಕಣ್ಮನ ಸೆಳೆದ ಗದಾಯುದ್ಧ ಯಕ್ಷಗಾನ
Desi Swara: ಟ್ಯಾಂಪಾ ಸಾಂಸ್ಕೃತಿಕ ವೇದಿಕೆ – ಹರಿಕಥೆ ಆಯೋಜನೆ
ಕ್ಲೀವ್ ಲ್ಯಾಂಡ್: 40ನೇ ಬೆಳಕಿನ ಕನ್ನಡೋತ್ಸವ, ಹಾಸ್ಯ ಹೊನಲು, ಸಂಗೀತ ಸುಧೆ
ಮೊಗವೀರ್ಸ್ ಬಹ್ರೈನ್ ಪ್ರೊ ಕಬಡ್ಡಿ;ತುಳುನಾಡ್ ತಂಡ ಪ್ರಥಮ,ಪುನಿತ್ ಬೆಸ್ಟ್ All ರೌಂಡರ್
ಕ್ಯಾಲಿಫೋರ್ನಿಯ: ನಾಡೋತ್ಸವದಲ್ಲಿ ಚಿಣ್ಣರ ಚಿಲಿಪಿಲಿ, ಸಾಂಸ್ಕೃತಿಕ ಪ್ರದರ್ಶನ
MUST WATCH
ಹೊಸ ಸೇರ್ಪಡೆ
Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ
K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
Shiva Rajkumar: ಚಿಕಿತ್ಸೆಗಾಗಿ ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ
Alert…! ವಿಮಾನಕ್ಕೆ ಬೆದರಿಕೆ ಹಾಕಿದ್ರೆ 1 ಕೋಟಿವರೆಗೆ ದಂಡ ತೆರಲು ಸಿದ್ಧರಾಗಿ!
Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್ ಎಚ್ಚರಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.