ಮುಂಬಯಿ ಆರ್‌ಎಸ್‌ಬಿ ಉತ್ಸವ -2018 ಸಂಭ್ರಮ
Team Udayavani, Feb 9, 2018, 4:14 PM IST
ಮುಂಬಯಿ: ರಾಜಾಪುರ ಸಾರಸ್ವತ ಸಂಘದ ವಾರ್ಷಿಕ ಆರ್‌ಎಸ್‌ಬಿ ಉತ್ಸವ ಸಂಭ್ರಮವು ಜ. 26 ರಂದು ದಹಿಸರ್ ಪೂರ್ವದ ಶ್ರೀ ವಿಟ್ಠಲ ರುಕುಮಾಯಿ ಮಂದಿರದ ಸಭಾಭವನದಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಜರಗಿತು.
ದೇವತಾ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮವು ಆರಂಭಗೊಂಡಿತು. ಆಮಂತ್ರಿತ ಅತಿಥಿಗಳಾದ ಪುತ್ತೂರಿನ ಭಾಲಾವಲಿಕರ್ ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ಅಧ್ಯಕ್ಷ ಸುನೀಲ್ ಬೋರ್ಕರ್ ಮುಂಡಕೊಚ್ಚಿ ಅವರು ಮಾತನಾಡಿ, ಶಿಸ್ತು, ಸಂಯಮ ಹಾಗೂ ಕಠಿಣ ಪರಿಶ್ರಮದ ಸಾಧನೆಯ ಫಲವಾಗಿ ಸಮಾಜ ಇಂದು ಬಹಳಷ್ಟು ಅಭಿವೃದ್ದಿಗೊಂಡಿದೆ. ಕೊಡಗು, ಕಾಸರಗೋಡು ಸೇರಿದಂತೆ ದಕ್ಷಿಣ ಕನ್ನಡದಲ್ಲಿ ಸಮಾಜದ ಸುಮಾರು 2250 ಕುಟುಂಬಗಳ ಅಂಕಿ ಅಂಶಗಳನ್ನು ತೆಗೆಯಲಾಗಿದೆ. ಅದರಂತೆ ಇಲ್ಲಿಯೂ ಒಂದು ಸಮಗ್ರ ಕೈಪಿಡಿ ಹೊರತರಬೇಕಾಗಿದೆ. ಸಮುದಾಯದ ಎಲ್ಲರೂ ಒಂದೇ ವೇದಿಕೆಯಡಿ ಬರುವ ವ್ಯವಸ್ಥೆಯನ್ನು ನಿರ್ಮಾಣಗೊಳಿಸಬೇಕು ಎಂದರು.
ಕಾರ್ಕಳ ರಾಜಾಪುರ ಸಾರಸ್ವತ ಕ್ರೆಡಿಟ್ ಕೋ. ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಕಡಾರಿ ರವೀಂದ್ರ ಪ್ರಭು ಅವರು ಮಾತನಾಡಿ, ಸಂಸ್ಥೆಯೊಂದು ಉದಯಿಸಿ ಬೆಳೆದು ಬರುವಲ್ಲಿ ಎದುರಿಸುವ ಸವಾಲುಗಳ ಬಗ್ಗೆ ವಿವರಿಸಿದರು. ದೇಶದ ವಿವಿಧೆಡೆ ನೆಲೆಸಿರುವವನ್ನು ಪರಸ್ಪರ ಬೆಸೆಯುವಲ್ಲಿ ಇಂದಿನ ಕಾರ್ಯಕ್ರಮ ಸಹಕಾರಿಯಾಗಿದೆ ಎಂದು ಹೇಳಿದರು.
ಮೊಗೇರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಧರ್ಮದರ್ಶಿ ಕುಂಡೇರಿ ಜಯಂತ್ ನಾಯಕ್ ಅವರು ಮಾತನಾಡಿ, ಮುಂಬಯಿಯಲ್ಲಿ ನಮ್ಮ ಮಕ್ಕಳು ಆಧುನಿಕತೆಯ ನಡುವೆಯೂ ಶುದ್ಧ ಪರಂಪರೆಯನ್ನು ಉಳಿಸಿಕೊಂಡು ಬಂದಿರುವುದನ್ನು ಕಂಡು ಸಂತೋಷವಾಗುತ್ತಿದೆ. ಗ್ಯಾಜೆಟ್ ಯುಗದಲ್ಲಿ ಇಂಗ್ಲೀಷ್ ಭಾಷೆಯ ಪ್ರಭಾವ ಅಧಿಕವಾಗುತ್ತಿದ್ದು, ಅಮ್ಮ ಕಲಿಸಿದ ಮಾತೃಭಾಷೆ ನಿಸ್ತೇಜಗೊಳ್ಳುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದರು.
ಸಂಸ್ಥೆಯ ಅಧ್ಯಕ್ಷ ಪ್ರಭಾಕರ ಡಿ. ಬೋರ್ಕರ್ ಅವರು ಮಾತನಾಡಿ, ಮಹಾರಾಷ್ಟ್ರದೆಲ್ಲೆಡೆ ಇರುವ ಸಮಾಜ ಬಾಂಧವರನ್ನು ಸಾಮಾಜಿಕ, ಸಾಂಸ್ಕೃತಿಕವಾಗಿ ಒಗ್ಗೂಡಿಸುವ ಉದ್ಧೇಶ ಹಾಗೂ ಸಾಮಾಜಿಕ ಬದ್ಧತೆಯೊಂದಿಗೆ 1950 ರಲ್ಲಿ ರಾಮನವಮಿಯ ದಿನದಂದು ನಮ್ಮ ಪೂರ್ವಜರಿಂದ ಸ್ಥಾಪಿಸಲ್ಪಟ್ಟ ಸಂಸ್ಥೆಯು 68 ನೇ ವರ್ಷಾಚರಣೆಯ ಸುಸಂದರ್ಭದಲ್ಲಿ ಪ್ರತಿಕೂಲ ಪರಿಸ್ಥಿತಿಯಲ್ಲಿ ಧೃತಿಗೆಡದೆ ಬೆಳೆಸಿಕೊಂಡು ಬಂದ ಹಿರಿಯರನ್ನು ಗೌರವ ಪೂರ್ವಕವಾಗಿ ನೆನಪಿಸಿಕೊಳ್ಳಬೇಕಾಗಿದೆ. ಇಂದು ಆರ್ಥಿಕವಾಗಿ ಮುಂದುವರಿಯುತ್ತಿರುವ ಸಮಾಜಕ್ಕೊಂದು ಬೃಹತ್ ಪ್ರಮಾಣದ ಆರೋಗ್ಯ ನಿಧಿಯೊಂದನ್ನು ಸ್ಥಾಪಿಸಿ ತನ್ಮೂಲಕ ವೈದ್ಯಕೀಯ ಚಿಕಿತ್ಸೆಗೆ ಸಹಾಯ ನೀಡುವ ಬಗ್ಗೆ ಅರಿವು ಮೂಡಿಸುವ ಅಗತ್ಯವಿದೆ ಎಂದು ನುಡಿದರು.
ವೈದ್ಯಕೀಯ ನಿಧಿಗೋಸ್ಕರ ಉಪಾಧ್ಯಕ್ಷ ರಮೇಶ್ ಎನ್. ನಾಯಕ್ ಮತ್ತು ವಾಮನ್ ಎನ್. ಪಾಟ್ಕರ್ ಅವರು ತಲಾ ಒಂದು ಲಕ್ಷ ರೂ. ಹಾಗೂ ತಲಾ 51 ಸಾವಿರ ರೂ. ಗಳ ದೇಣಿಗೆ ನೀಡಿದ ಲಕ್ಷಿ¾à ಬಾಂದೇಲ್ಕರ್ ಮತ್ತು ವಿಶ್ವನಾಥ್ ನಾಯಕ್ ಇವರುಗಳಿಗೆ ಸಮಾರಂಭದಲ್ಲಿ ಕೃತಜ್ಞತೆ ಸಲ್ಲಿಸಲಾಯಿತು. ವಿವಿಧ ಕ್ಷೇತ್ರಗಳ ಗಣ್ಯರುಗಳನ್ನು ಸಮ್ಮಾನಿಸಿ ಗೌರವಿಸಲಾಯಿತು.
ಕನ್ನಡ ಚಲನಚಿತ್ರ ನಟಿ ಸುಕೃತಾ ವಾಗೆÛ, ರಾಷ್ಟ್ರೀಯ ಮಾರ್ಷಲ್ ಆರ್ಟ್ಸ್ನ ಚಾಂಪಿಯನ್ ಸೂರಜ್ ಬಿ. ಪಾಟ್ಕರ್, ಮುಂಬಯಿ ಕ್ರಿಕೆಟ್‌ನ ರಾಷ್ಟ್ರೀಯ ಕ್ರೀಡೆಗಳಲ್ಲಿ ಭಾಗಿಯಾದ ರೇಷ್ಮಾ ಆರ್. ನಾಯಕ್, ಮುಂಬಯಿ ಉದ್ಯಮಿ ವಿಠuಲ್ ಎಸ್. ನಾಯಕ್ ಇವರನ್ನು ಸಮ್ಮಾನಿಸಲಾಯಿತು. ವಿವಿಧ ರೀತಿಯಲ್ಲಿ ಸಹಕರಿಸಿದ ದಹಿಸರ್ ಕಾಶೀಮಠದ ಪದಾಧಿಕಾರಿಗಳಾದ ಮಧುಸೂದನ್ ಎಸ್. ಪೈ ಹಾಗೂ ಆರ್. ವಿ. ಶೆಣೈ ಇವರನ್ನು ಗಣ್ಯರು ಗೌರವಿಸಿದರು. ಪೂಜಾ ಜೆ. ಕಾಮತ್ ಕಾರ್ಯಕ್ರಮ ನಿರ್ವಹಿಸಿದರು.
ಗ್ರೀನ್ ಯಾತ್ರಾ ಸಂಸ್ಥೆಯ ಸಹಯೋಗದಲ್ಲಿ ನಡೆದ ಸಮಾರಂಭದಲ್ಲಿ ಮಹಿಳಾ ವಿಭಾಗದ ಅಧ್ಯಕ್ಷೆ ಸ್ಮಿತಾ ವಿ. ಪಾಟ್ಕರ್, ಯುವ ವೃಂದದ ಅಧ್ಯಕ್ಷೆ ಮಾಧವಿ ಪಿ. ನಾಯಕ್ ಅವರು ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸಿದರು. ಮಹಿಳಾ ವಿಭಾಗ, ಯುವ ವಿಭಾಗದ ಸಹಕಾರದೊಂದಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ಸಮಾಜ ಬಾಂಧವರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಚಿತ್ರ-ವರದಿ: ಪಿ. ಆರ್. ರವಿಶಂಕರ್ ಡಹಾಣೂರೋಡ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
ಇಂಗ್ಲೆಂಡ್‌ನ ರಾದರಮ್ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’
Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.