ಕಾಲ್ತುಳಿತ: ವಿಕ್ರೋಲಿ ಬಂಟ್ಸ್‌ನಿಂದ ಶ್ರದ್ಧಾಂಜಲಿ ಸಭೆ
Team Udayavani, Oct 4, 2017, 12:06 PM IST
ಮುಂಬಯಿ: ಎಲ್ಫಿನ್‌ಸ್ಟನ್ ರೈಲ್ವೇ ಬ್ರಿಡ್ಜ್ ಕಾಲ್ತುಳಿತ ದುರಂತದಲ್ಲಿ ಸಾವನ್ನಪ್ಪಿರುವ ತುಳು-ಕನ್ನಡಿಗ ಸುಮಲತಾ ಸಿ. ಶೆಟ್ಟಿ ಮತ್ತು ಸುಜಾತಾ ಪಿ. ಶೆಟ್ಟಿ ಅವರಿಗೆ ವಿಕ್ರೋಲಿ ಬಂಟ್ಸ್ ವತಿಯಿಂದ ಶ್ರದ್ಧಾಂಜಲಿ ಸಭೆ ವಿಕ್ರೋಲಿ ಪೂರ್ವದ ಠಾಕೂರ್ ನಗರ, ವಿಕ್ರೋಲಿ ಕನ್ನಡ ಸಂಘದ ಸಂಚಾಲಕತ್ವದ ವೀಕೇಸ್ ಇಂಗ್ಲಿಷ್ ಹೈಸ್ಕೂಲ್ ಸಭಾಂಗಣದಲ್ಲಿ ಜರಗಿತು.
ನೂರಾರು ಸಂಖ್ಯೆಯಲ್ಲಿ ಆಗ ಮಿಸಿದ ಮೃತರ ಹಿತೈಷಿಗಳು, ಸಮಾಜದವರು, ವಿವಿಧ ಸಂಘ ಟನೆಗಳ ಪದಾಧಿಕಾರಿಗಳು, ಕಾರ್ಯ ಕಾರಿ ಸಮಿತಿಯ ಸದಸ್ಯರು, ತುಳು- ಕನ್ನಡಿಗರು, ಮೃತರ ಅಭಿಮಾನಿಗಳು ಸುಮಲತಾ ಸಿ. ಶೆಟ್ಟಿ ಮತ್ತು ಸುಜಾತಾ ಪಿ. ಶೆಟ್ಟಿ ಅವರ ಭಾವಚಿತ್ರಕ್ಕೆ ಪುಷ್ಪವೃಷ್ಟಿಗೈದು ಕಂಬನಿ ಮಿಡಿದರು.
ವಿಕ್ರೋಲಿ ಬಂಟ್ಸ್‌ನ ಗೌರವ ಪ್ರಧಾನ ಕಾರ್ಯದರ್ಶಿ ಉದಯ್ ಎಲ್. ಶೆಟ್ಟಿ ಪೇಜಾವರ ಅವರು ಮಾತನಾಡಿ, ಬಾಲ್ಯದಿಂದಲೇ ಸ್ನೇಹಿತೆಯರಾಗಿದ್ದೂ ಸಾವಿನಲ್ಲೂ ಒಂದಾದ ಸುಮಲತಾ ಸಿ. ಶೆಟ್ಟಿ ಮತ್ತು ಸುಜಾತಾ ಪಿ. ಶೆಟ್ಟಿ ಅವರು ನಗರದ ಹೆಚ್ಚಿನ ಸಂಘಟನೆಗಳಲ್ಲಿ ಸಕ್ರಿಯರಾಗಿದ್ದು, ಎಲ್ಲರಿಗೂ ಸ್ಫೂರ್ತಿ ತುಂಬುತ್ತಿದ್ದರು. ಅದರಲ್ಲೂ ವಿಕ್ರೋಲಿ ಬಂಟ್ಸ್‌ನಎಲ್ಲ ಕಾರ್ಯಕ್ರಮಗಳಲ್ಲಿ ಅವರ ಯೋಗದಾನ ಮಹತ್ವದ್ದಾಗಿತ್ತು. ಇದೇ ಸಭಾಗೃಹದಲ್ಲಿ ಪ್ರತಿಯೊಂದು ಕಾರ್ಯಕ್ರಮದಲ್ಲಿ ನಾವು ಒಂದಾ ಗುತ್ತಿದ್ದೆವು. ಪ್ರಸ್ತುತ ಇದೇ ಸಭಾಗೃಹ ದಲ್ಲಿ ಅವರಿಬ್ಬರ ಶ್ರದ್ಧಾಂಜಲಿ ಸಭೆ ಯನ್ನು ಆಯೋಜಿಸುತ್ತಿರುವುದು ದುರಂತವೇ ಸರಿ. ಪ್ರತಿಭಾವಂತ ಇಬ್ಬರು ಕಲಾವಿದರನ್ನು ನಾವು ಕಳೆದು ಕೊಂಡಿದ್ದೇವೆ. ಅವರ ದಿವ್ಯಾತ್ಮಕ್ಕೆ ಭಗವಂತ ಚಿರಶಾಂತಿ ಕರುಣಿಸಲಿ ಎಂದು ನುಡಿದರು.
ವಿಕ್ರೋಲಿ ಬಂಟ್ಸ್‌ನ ಅಧ್ಯಕ್ಷ ಗಣೇಶ್ ಎಂ. ಶೆಟ್ಟಿ ಮತ್ತು ಇತರ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರ ಆಯೋಜನೆ ಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಕ್ರೋಲಿ ಬಂಟ್ಸ್‌ನ ನವೀನ್ ಕೆ. ಶೆಟ್ಟಿ, ಚಂದ್ರಶೇಖರ್ ಶೆಟ್ಟಿ, ನಾರಾಯಣ ಶೆಟ್ಟಿ ನಂದಳಿಕೆ, ಶಾಂತಾ ಎನ್. ಶೆಟ್ಟಿ, ಸುರೇಶ್ ಶೆಟ್ಟಿ ಅವರು ಮೃತರ ಕಾರ್ಯ ಚಟುವಟಿಕೆಗಳನ್ನು ವಿವರಿಸಿ ನುಡಿ ನಮನ ಸಲ್ಲಿಸಿದರು. ಅಮೃತಾ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಎಲ್ಲರೂ ಎದ್ದು ನಿಂತು ಮೌನ ಪ್ರಾರ್ಥನೆಯ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದರು.
ಮುಗಿಲು ಮುಟ್ಟಿದ ಮಕ್ಕಳ ಕೂಗು…
ವಿಕ್ರೋಲಿ ಬಂಟ್ಸ್‌ನ ಎಲ್ಲ ಕಾರ್ಯಕ್ರಮಗಳಲ್ಲಿ ಸುಮಲತಾ ಸಿ. ಶೆಟ್ಟಿ ಮತ್ತು ಸುಜಾತಾ ಪಿ. ಶೆಟ್ಟಿ ಅವರಲ್ಲದೆ ಅವರ ಮಕ್ಕಳು ಕೂಡಾ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದರು. ಶ್ರದ್ಧಾಂಜಲಿ ಸಭೆಯಲ್ಲೂ ಭಾಗ ವಹಿಸಿದ ಇಬ್ಬರು ಮಕ್ಕಳು ಹಾಗೂ ಕುಟುಂಬದ ಸದಸ್ಯರು ಸಭಾಂಗಣದಲ್ಲಿ ಇಟ್ಟಂತಹ ಮೃತರ ಭಾವಚಿತ್ರವನ್ನು ನೋಡುತ್ತಿದ್ದಂತೆ ಅವರ ಕೂಗು ಮುಗಿಲುಮುಟ್ಟಿತು. ಸೇರಿದ ನೂರಾರು ಮಂದಿ ಮಕ್ಕಳ ರೋದನವನ್ನು ಕಂಡು ಮೂಕ ವಿಸ್ಮಿತರಾಗಿ ಕಣ್ಣೀರು ಸುರಿಸಿದರು.
ಪಾಲ್ಗೊಂಡವರ ಬಾಯಲ್ಲಿ ಒಂದೇ ಶಬ್ದ ದೇವರೆಲ್ಲಿದ್ದಾನೆ…?
ದುರಂತ ಸಾವನ್ನಪ್ಪುವ ಎರಡು ದಿನಗಳ ಹಿಂದೆ ಮುಂಬಯಿಯ ಒಂಬತ್ತು ದೇವಸ್ಥಾನಗಳಿಗೆ ಭೇಟಿ ನೀಡಿ ದರ್ಶನ ಪಡೆದಿದ್ದ ಸುಮಲತಾ ಮತ್ತು ಸುಜಾತಾ ಶೆಟ್ಟಿ ಕೊನೆಗೂ ನವರಾತ್ರಿಯ ಒಂಬತ್ತನೇ ದಿನ ದುರಂತ ಸಾವಿಗೆ ಕೊರಳೊಡ್ಡಿದರು. ಒಂದು ಹೊತ್ತಿನ ಊಟದೊಂದಿಗೆ ನವರಾತ್ರಿ ವ್ರತ ಕೈಗೊಂಡಿದ್ದ ಇವರ ಜೀವವನ್ನು ಉಳಿಸಲಾಗದ ದೇವರು ಎಲ್ಲಿದ್ದಾನೆ…ಎಂದು ಪಾಲ್ಗೊಂಡವರು ಒಬ್ಬರನ್ನೊಬ್ಬರು ಪ್ರಶ್ನಿಸುತ್ತಿದ್ದರು.
ಬಿಡದ ಸ್ನೇಹದ ನಂಟು…!
ಆಪ್ತ ಸ್ನೇಹಿತೆಯರಾಗಿದ್ದ ಸುಮ ಲತಾ ಶೆಟ್ಟಿ ಮತ್ತು ಸುಜಾತಾ ಶೆಟ್ಟಿ ಅವರು ಸಾವಲ್ಲೂ ಒಂದಾಗಿದ್ದರೆ. ವಿಚಿತ್ರವಾದರೂ ಸತ್ಯ ಎಂಬಂತೆ ಅವರು ಚಿತೆಯಲ್ಲೂ ಒಬ್ಬರನ್ನೊಬ್ಬರು ಬಿಟ್ಟುಕೊಡಲೇ ಇಲ್ಲ. ಶುಕ್ರವಾರ ರಾತ್ರಿ 12.15ಕ್ಕೆ ಸುಮಲತಾ ಅವರ ಮೃತದೇಹಕ್ಕೆ ವಿಕ್ರೋಲಿಯ ಶ್ಮಶಾನದ ಚಿತಾಗಾರದಲ್ಲಿ ಅಗ್ನಿ ಸ್ಪರ್ಶಗೊಳಿಸಲಾಯಿತು. ಅವರ ಮೃತದೇಹವನ್ನಿಟ್ಟ ಅದೇ ಚಿತೆಯಲ್ಲಿ ಶನಿವಾರ ಮಧ್ಯಾಹ್ನ 12.30ರ ಸುಮಾರಿಗೆ ಸುಜಾತಾ ಶೆಟ್ಟಿ ಅವರ ಮೃತದೇಹಕ್ಕೆ ಅಗ್ನಿಸ್ಪರ್ಶಿಸಲಾಗಿದೆ. ವಿಸ್ಮಯವೆಂದರೆ ಇದರ ನಡುವೆ ಈ ಚಿತೆಯಲ್ಲಿ ಬೇರಾವುದೇ ಮೃತದೇಹಗಳನ್ನು ಸುಡಲಾಗಿಲ್ಲ ಎಂಬುದು. ಸಭೆಯಲ್ಲಿ ಸೇರಿದ ಎಲ್ಲರೂ ಇವರಿಬ್ಬರ ಸ್ನೇಹದ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸುತ್ತಿದ್ದರು.
ಮಕ್ಕಳ ಭವಿಷ್ಯಕ್ಕಾಗಿ ಏನಾದರೂ ಮಾಡಬೇಕು: ಚೌಟ
ಕಾಲ ಮಿಂಚಿ ಹೋಗಿದೆ. ಇಬ್ಬರು ಪ್ರತಿಭಾವಂತರನ್ನು ನಾವು ಕಳೆದುಕೊಂಡಿದ್ದೇವೆ. ಆ ದುಃಖ ವನ್ನು ಸಹಿಸಿಕೊಳ್ಳುವ ಶಕ್ತಿ ಅವರ ಮಕ್ಕಳಿಗೆ, ಕುಟುಂಬಿಕರಿಗೆ ಭಗವಂತ ಕರುಣಿಸಲಿ. ಮುಂದಿರುವ ಪ್ರಶ್ನೆ ಮಕ್ಕಳ ಭವಿಷ್ಯ. ಮಕ್ಕಳ ಭವಿಷ್ಯವನ್ನು ರೂಪಿಸಲು ನಾವೇನಾದರೂ ಮಾಡ ಬೇಕಾಗಿದೆ. ಅಂತಹ ಯೋಚನೆ- ಯೋಜನೆಗಳಿಗೆ ನನ್ನ ಸಂಪೂರ್ಣ ಸಹಕಾರವಿದೆ. ನಾವೆಲ್ಲರು ಮಕ್ಕಳ ಭವಿಷ್ಯವನ್ನು ರೂಪಿಸುವಲ್ಲಿ ಕಿಂಚಿತ್ತಾ ದರೂ ಸಹಕರಿಸೋಣ. ಇದರ ಬಗ್ಗೆ ಚಿಂತಿಸೋಣ ಎಂದು ಪತ್ರಕರ್ತ ದಯಾ ಸಾಗರ್ ಚೌಟ ಹೇಳಿದರು.
ಚಿತ್ರ-ವರದಿ:ಸುಭಾಷ್ ಶಿರಿಯಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ
ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!
ಲ್ಯಾಂಬೆತ್‌ಗೆ ಸಚಿವ ಎಂ.ಬಿ.ಪಾಟೀಲ್ ಭೇಟಿ-ಬಸವೇಶ್ವರ ಪ್ರತಿಮೆ ವೀಕ್ಷಣೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!
Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ
Rain Alert: ರಾಜ್ಯದಲ್ಲಿ ಕನಿಷ್ಠ ತಾಪಮಾನ 4 ಡಿ.ಸೆ ಏರಿಕೆ; ಹಲವೆಡೆ 24ರಂದು ಮಳೆ ಸಾಧ್ಯತೆ
Karnataka; ರಾಜ್ಯದ ಕಾಡಿಗೆ ಕೊಡಲಿ! ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಳ?
Puri; ವರ್ಷಾರಂಭದೊಂದಿಗೆ ಜಗನ್ನಾಥ ದೇಗುಲದಲ್ಲಿ ಹೊಸ ದರ್ಶನ ವ್ಯವಸ್ಥೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.