ಮುಂಬಯಿ: ಸಂಘದ ಕಾರ್ಯಕ್ರಮಗಳಲ್ಲಿ ಕನ್ನಡಿಗರ ಸಹಕಾರ ಅಗತ್ಯ- ನಿತ್ಯಾನಂದ ಕೋಟ್ಯಾನ್
Team Udayavani, Jun 29, 2023, 12:35 PM IST
ಮುಂಬಯಿ: ಗೋರೆ ಗಾಂವ್ ಕರ್ನಾಟಕ ಸಂಘದ ಮಹಿಳಾ ವಿಭಾಗದ ವತಿಯಿಂದ ಯೋಗ ತಜ್ಞೆ ಚಂದ್ರಾವತಿ ಎಸ್. ಕಾರಂತರ ಸ್ಮರಣಾರ್ಥ ಅವರ ಪತಿ ಯು. ಎಸ್. ಕಾರಂತ್ ಮತ್ತು ಮಕ್ಕಳು ಸ್ಥಾಪಿಸಿದ ದತ್ತಿನಿಧಿ ಹಾಗೂ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಜೂ. 21ರಂದು ಸಂಜೆ ಗೋರೆಗಾಂವ್ ಪಶ್ಚಿಮದ ಆರೇ ರೋಡ್‌ನಲ್ಲಿರುವ ಕೇಶವ ಗೋರೆ ಸ್ಮಾರಕ ಟ್ರಸ್ಟಿನ ಎರಡನೇ ಮಹಡಿಯಲ್ಲಿ ನಡೆಯಿತು.
ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ನಿತ್ಯಾನಂದ ಕೋಟ್ಯಾನ್ ಮಾತನಾಡಿ, ಐದು ಸಾವಿರ ವರ್ಷಗಳಿಂದ ನಮ್ಮ ಭಾರತದಲ್ಲಿ ಯೋಗವು ಋಷಿ ಮುನಿಗಳಿಂದಾಗಿ ಭಾರತೀಯ ಪರಂಪರೆಯಲ್ಲಿ ಹೊಂದಿಕೊಂಡು ಬಂದಿದೆ.
ದತ್ತಿನಿಧಿಯನ್ನು ಸ್ಥಾಪಿಸಿದ ಕಾರಂತರ ಪರಿವಾರಕ್ಕೆ ಧನ್ಯವಾದಗಳು. ಸಂಘವು ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ
ಸಕ್ರಿಯವಾಗಿದ್ದು, ತುಳು-ಕನ್ನಡಿ ಗರು ಸಂಘದ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಸಹಕರಿಸಬೇಕು ಎಂದು ಕರೆ ನೀಡಿದರು.
ಇದೇ ಸಂದರ್ಭ 2023ರ ದತ್ತಿ ನಿಧಿ ಪ್ರಶಸ್ತಿಯನ್ನು ಯೋಗ ತಜ್ಞೆ ಕಮಲಾಕ್ಷಿ ಕೋಟ್ಯಾನ್ ಅವರಿಗೆ ಪ್ರದಾನ ಮಾಡಲಾಯಿತು. ಕಾರ್ಯ ಕ್ರಮವು ಸೀಮಾ ಕುಲಕರ್ಣಿ ಹಾಗೂ ವಸಂತಿ ಕೋಟೆಕಾರ್ ಅವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾ ಯಿತು. ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ವಾಣಿ ಶೆಟ್ಟಿ ಅವರು ಸಂಘದ ಬಗ್ಗೆ ಮಾತನಾಡಿದರು.
ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಇಂದಿರಾ ಮೊಲಿ ಸ್ವಾಗತಿಸಿ, ಪ್ರಾಸ್ತಾವಿಸಿ ದರು. ದಿ| ಚಂದ್ರಾವತಿ ಎಸ್. ಕಾರಂತರ
ಸ್ಮರಣಾರ್ಥ ದತ್ತಿನಿಧಿ ಸ್ಥಾಪಿಸಿದ ಯು.ಎಸ್. ಕಾರಂತ ಅವರನ್ನು ಲಕ್ಷ್ಮೀ ವಿ. ಶೆಟ್ಟಿ ಹಾಗೂ ಯೋಗ ತಜ್ಞೆ ಚಂದ್ರಾವತಿ ಎಸ್. ಕಾರಂತರನ್ನು ಮೇರಿ ಲಿಲ್ಲಿ ಡಿ’ಸೋಜಾ ಪರಿಚಯಿಸಿದರು. ಸಂಘದ ಎಲ್ಲ ಪದಾಧಿಕಾರಿಗಳು ಚಂದ್ರಾವತಿ ಕಾರಂತರ ಭಾವಚಿತ್ರಕ್ಕೆ ಗೌರವ ಸಲ್ಲಿಸಿದರು.
ಯೋಗ ತಜ್ಞೆ ಕಮಲಾಕ್ಷಿ ಕೋಟ್ಯಾನ್ ಅವರನ್ನು ಸವಿತಾ ಭಟ್ ಪರಿಚಯಿಸಿದರು. ಸಮ್ಮಾನಪತ್ರ ವನ್ನು ಉಷಾ ಪಿ. ಸುವರ್ಣ ವಾಚಿಸಿದರು. ಪಾರುಪತ್ಯಗಾರರಾದ ಜಿ. ಟಿ. ಆಚಾರ್ಯ, ಸಂಘದ ಅಧ್ಯಕ್ಷ ನಿತ್ಯಾನಂದ ಕೋಟ್ಯಾನ್, ಉಪಾಧ್ಯಕ್ಷ ವಿಶ್ವನಾಥ್ ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ವಾಣಿ ಶೆಟ್ಟಿ, ಕೋಶಾಧಿಕಾರಿ ಆನಂದ ಶೆಟ್ಟಿ ಹಾಗೂ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಇಂದಿರಾ ಮೊಲಿ ಅವರು ಪ್ರಶಸ್ತಿಪುರಸ್ಕೃತರನ್ನು ಅಭಿನಂದಿಸಿ ಶುಭ ಹಾರೈಸಿದರು. ಯೋಗ ತಜ್ಞೆ ಕಮಲಾಕ್ಷಿ
ಕೋಟ್ಯಾನ್ ಅವರು ಪ್ರಶಸ್ತಿ ಸ್ವೀಕರಿಸಿ ಕೃತಜ್ಞತೆ ಸಲ್ಲಿಸಿದರು.
ಕಮಲಾಕ್ಷಿ ಕೋಟ್ಯಾನ್ ಅವರು ಸರ್ಪಾಸನ, ಊರ್ದ್ವ ಹಸ್ತ, ಕಟಿ ವಕ್ರಾಸನ, ಸಮಾನ ಹಸ್ತ ಕಟಿ ಚಕ್ರಾಸನ, ಕಾಗಾಸನ, ಶಂಖ ಪ್ರಕ್ಷಾಲನ ಕ್ರಿಯಾ ಮೊದಲಾದ ಕೆಲವು ಯೋಗಗಳನ್ನು ಕಲಿಸಿ ಅದರಿಂದಾಗುವ ಪ್ರಯೋಜನಗಳನ್ನು ತಿಳಿಸಿದರು. ತುಳು-ಕನ್ನಡಿಗರಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಈ ದತ್ತಿಯನ್ನು ಸ್ಥಾಪಿಸಿರುವುದೆಂದು ಯು. ಎಸ್. ಕಾರಂತರು ಅಭಿಪ್ರಾಯ
ವ್ಯಕ್ತಪಡಿಸಿದರು. ಮಹಿಳಾ ವಿಭಾಗದ ಸಂಚಾಲಕಿ ಸಾವಿತ್ರಿ ಎಂ. ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಮಹಿಳಾ ವಿಭಾಗದ ಸದಸ್ಯೆ ವಸಂತಿ ಶೆಟ್ಟಿ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ
ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!
ಲ್ಯಾಂಬೆತ್‌ಗೆ ಸಚಿವ ಎಂ.ಬಿ.ಪಾಟೀಲ್ ಭೇಟಿ-ಬಸವೇಶ್ವರ ಪ್ರತಿಮೆ ವೀಕ್ಷಣೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.