“ಮುಂಬಯಿ ತುಳು ಕನ್ನಡಿಗರ ರಾಯಭಾರಿ ಎಂ.ಡಿ.ಶೆಟ್ಟಿ’ ಕೃತಿ ಬಿಡುಗಡೆ
Team Udayavani, Mar 17, 2019, 2:25 PM IST
ಮುಂಬಯಿ: ನಾನು ಈ ಮಹಾನಗರಿಯನ್ನು ಸೇರಿ 6 ದಶಕಗಳು ಕಳೆದಿದೆ. ಆದ್ದರಿಂದ ಸ್ಪಷ್ಟ ತುಳು ಕನ್ನಡ ಭಾಷೆ ನನಗೆ ಕಷ್ಟವಾದರೂ ಭಾಷಾಭಿಮಾನ ನನ್ನಲ್ಲಿ ಜೀವಂತ ವಾಗಿದೆ. ಈ ಭಾಷಾಭಿಮಾನವೇ ಎಂ. ಡಿ. ಶೆಟ್ಟಿ ಅವರೊಂದಿಗೆ ಸುಮಾರು 40 ವರ್ಷಗಳ ಸ್ನೇಹವನ್ನು ಬಲಪಡಿಸಿದೆ. ಅವರ ಸಾಮಾಜಿಕ ಕಳಕಳಿ, ತುಳುನಾಡ ಅಭಿಮಾನ, ಸ್ವಸಮಾಜದ ಸ್ವಾಭಿಮಾನ ಅನನ್ಯವಾದುದು. ಎಲ್ಲರಲ್ಲೂ ಧೈರ್ಯ ತುಂಬಿ ಆತ್ಮಸ್ಥೈರ್ಯ ತುಂಬಿಸಿ ಮುಂಬಯಿ ಹೊಟೇಲ್ ಉದ್ಯಮಕ್ಕೆ ಇವರು ಮೇಲ್ಪಂಕ್ತಿಯಾಗಿದ್ದಾರೆ. ಇವರ ಸರ್ವೋತ್ಕೃಷ್ಟ ಸೇವೆಯ ಗೌರವವೇ ಈ ಕೃತಿಯಾಗಿದೆ ಎಂದು ಬೃಹನ್ಮುಂಬಯಿ ಪೊಲೀಸ್ ನಿವೃತ್ತ ಪೊಲೀಸ್ ಆಯುಕ್ತ ರೋನಿ ಎಚ್. ಮೆಂಡೋನ್ಸಾ ನುಡಿದರು.
ಮಾ. 16ರಂದು ಸಂಜೆ ಸಾಂತಾಕ್ರೂಜ್ ಪೂರ್ವದ ವಿದ್ಯಾನಗರಿಯ ಜೆ. ಪಿ. ನಾಯಕ್ ಭವನದಲ್ಲಿ ಮುಂಬಯಿ ವಿವಿ ಕನ್ನಡ ವಿಭಾಗದ ವತಿಯಿಂದ ಸುರೇಖಾ ಹರಿಪ್ರಸಾದ್ ಶೆಟ್ಟಿ ರಚಿತ “ಮುಂಬಯಿ ತುಳು ಕನ್ನಡಿಗರ ರಾಯಭಾರಿ ಎಂ. ಡಿ. ಶೆಟ್ಟಿ’ ಕೃತಿ ಬಿಡುಗಡೆಗೊಳಿಸಿ ಮಾತನಾಡಿ, ಮಹಾನಗರ ದಲ್ಲಿ ಡಾ| ಅಡ್ಯಂತ್ತಾ¤ಯ, ಡಾ| ಕೆ. ಆರ್. ಶೆಟ್ಟಿ, ಫೋರ್‌ಎಸ್ ಸದಾನಂದ ಶೆಟ್ಟಿ ಇವರು ಸಮಾಜಕ್ಕೆ ನೀಡಿದ ಸೇವೆಯೂ ದೊಡ್ಡದು. ಸಂಘಟನೆಗಳ ಸರದಾರ ಎನಿಸಿದ ಎಂ. ಡಿ. ಶೆಟ್ಟಿ ಅಂತಹ ವ್ಯಕ್ತಿ ಪರಿಚಿತ ಕೃತಿ ತುಳುನಾಡ ಭಾವೀ ಯುವ ಜನತೆಗೆ ಒಂದು ಆದರ್ಶವಾಗಲಿ ಎಂದು ಹಾರೈಸಿದರು.
ಮುಂಬಯಿ ವಿವಿ ಕನ್ನಡ ವಿಭಾಗದ ಮುಖ್ಯಸ್ಥ ಡಾ| ಜಿ. ಎನ್. ಉಪಾಧ್ಯ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಮುಂಬಯಿ ಕನ್ನಡಿಗರ ಅಭಿಮಾನದ ಮೂರ್ತಿ ಎಂ. ಡಿ. ಶೆಟ್ಟಿ ಅವರ ವ್ಯಕ್ತಿತ್ವ ಇತರರಿಗೆ ಮಾದರಿಯಾಗಿದೆ ಎಂದರು.
ಮಹಾರಾಷ್ಟ್ರ ಎನ್‌ಐಎ ಇದರ ವಿಶೇಷ ನ್ಯಾಯವಾದಿ ಕಡಂದಲೆ ಪರಾರಿ ಪ್ರಕಾಶ್ ಎಲ್. ಶೆಟ್ಟಿ ಅವರು ಮಾತನಾಡಿ, ಎಂ. ಪಿ. ಶೆಟ್ಟಿ ಅವರು ಎಲ್ಲರಲ್ಲೂ ಆತ್ಮವಿಶ್ವಾಸ ತುಂಬಬಲ್ಲ ವ್ಯಕ್ತಿಯಾಗಿದ್ದಾರೆ. ಇವರ ಜೀವನ ಸಾಧನೆ ದಾಖಲಾಗುತ್ತಿರುವುದು ಸ್ತುತ್ಯರ್ಹ. ಹೊಸ ತಲೆಮಾರಿಗೆ ಈ ಕೃತಿ ಮಾದರಿ ಎಂದರು.
ಅತಿಥಿ ಅಭ್ಯಾಗತರಾಗಿ ಮೈಸೂರಿನ ಹಿರಿಯ ಸಾಹಿತಿ ಡಾ| ಕಾಳೇಗೌಡ ನಾಗವಾರ, ಹುಬ್ಬಳ್ಳಿಯ ವಿಮರ್ಶಕ, ಹಿರಿಯ ಸಾಹಿತಿ ಡಾ| ಶ್ಯಾಮಸುಂದರ ಬಿದರಕುಂದಿ, ಹಿರಿಯ ಸಾಹಿತಿ ಡಾ| ವಿಶ್ವನಾಥ್ ಕಾರ್ನಾಡ್, ಬಂಟರ ಸಂಘ ಮುಂಬಯಿ ಅಧ್ಯಕ್ಷ ಪದ್ಮನಾಭ ಎಸ್. ಪಯ್ಯಡೆ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ರಂಜನಿ ಸುಧಾಕರ್ ಹೆಗ್ಡೆ, ಪತ್ರಕರ್ತ ಚಂದ್ರಶೇಖರ ಪಾಲೆತ್ತಾಡಿ, ಬಂಟರವಾಣಿ ಮಾಸಿಕದ ಮಾಜಿ ಸಂಪಾದಕ ರತ್ನಾಕರ ಆರ್. ಶೆಟ್ಟಿ ಉಪಸ್ಥಿತರಿದ್ದರು.
ಬಂಟರ ಸಂಘ ಮುಂಬಯಿ ಅಧ್ಯಕ್ಷ ಪದ್ಮನಾಭ ಎಸ್. ಪಯ್ಯಡೆ ಮಾತನಾಡಿ, ಎಂ. ಡಿ. ಶೆಟ್ಟಿ ಅವರು ಮೇರು ವ್ಯಕ್ತಿತ್ವವುಳ್ಳ ವರಾಗಿದ್ದು ಇಂತಹ ಯುಗ ಪುರುಷರು ಶತಮಾನ ಮೀರಿ ಬಾಳಬೇಕು ಎಂದು ಅವರ ಭವಿಷ್ಯಕ್ಕೆ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಎನ್. ಸಿ. ಶೆಟ್ಟಿ, ಸಿಎ ಐ. ಆರ್. ಶೆಟ್ಟಿ, ಕವಿತಾ ಐ. ಆರ್. ಶೆಟ್ಟಿ, ಸರಿತಾ ಆರ್. ಶೆಟ್ಟಿ, ಅಶೋಕ್ ಶೆಟ್ಟಿ, ಶಿಮಂತೂರು ಚಂದ್ರಹಾಸ ಶೆಟ್ಟಿ, ಸರಿತಾ ರಮೇಶ್ ಶೆಟ್ಟಿ, ವೇಣು ಆರ್. ಶೆಟ್ಟಿ, ಅಶ್ವಿನ್ ಶೆಟ್ಟಿ, ರವೀಂದ್ರ ಎಂ. ಅರಸ, ಸಂಜೀವ ಶೆಟ್ಟಿ, ಪಾಂಡು ಶೆಟ್ಟಿ, ಶಿವರಾಮ ಜಿ. ಶೆಟ್ಟಿ ಅಜೆಕಾರು, ನ್ಯಾಯವಾದಿ ಅಶೋಕ್ ಶೆಟ್ಟಿ, ಸಿಎ ಸಂಜೀವ ಶೆಟ್ಟಿ, ಡಾ| ವಿಜೇತಾ ಶೆಟ್ಟಿ, ಸುಜಯಾ ಆರ್. ಶೆಟ್ಟಿ, ಲತಾ ಪಿ. ಭಂಡಾರಿ, ಮಮತಾ ಶೆಟ್ಟಿ, ಜಯರಾಮ ಎನ್. ಶೆಟ್ಟಿ, ಶಿವರಾಮ ಜಿ. ಶೆಟ್ಟಿ, ಪಿ. ಗ. ಶೆಟ್ಟಿ, ರತ್ನಾಕರ ವಿ. ಶೆಟ್ಟಿ, ನ್ಯಾಯವಾದಿ ಬಿ. ಸುಭಾಷ್ ಶೆಟ್ಟಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದು ಎಂ. ಡಿ. ಶೆಟ್ಟಿ ಅವರಿಗೆ ಪುಷ್ಪಗುತ್ಛವನ್ನಿತ್ತು ಅಭಿನಂದಿಸಿದರು.
ಅತಿಥಿ-ಗಣ್ಯರು ಮಾತನಾಡಿ ಎಂ. ಡಿ. ಶೆಟ್ಟಿ ಅವರ ಸಿದ್ಧಿ-ಸಾಧನೆಗಳನ್ನು ವಿವರಿಸಿ ಶುಭ ಹಾರೈಸಿದರು. ಸುರೇಖಾ ಹರಿಪ್ರಸಾದ್ ಶೆಟ್ಟಿ ಪರಿವಾರದವರು ಡಾ| ಜಿ. ಎನ್. ಉಪಾಧ್ಯ ಅವರಿಗೆ ಗುರುಕಾಣಿಕೆಯನ್ನಿತ್ತು ಗೌರವಿಸಿದರು. ಅತಿಥಿ-ಗಣ್ಯರನ್ನು ಶಾಲು ಹೊದಿಸಿ, ಪುಷ್ಪಗುತ್ಛ, ಗ್ರಂಥ ಗೌರವವನ್ನಿತ್ತು ಗೌರವಿಸಿದರು. ಡಾ| ಜಿ. ಎನ್. ಉಪಾಧ್ಯ ಸ್ವಾಗತಿಸಿದರು. ಕವಿ, ಸಂಘಟಕ ಪೇತ್ರಿ ವಿಶ್ವನಾಥ ಶೆಟ್ಟಿ ಅವರು ಕೃತಿಗಳನ್ನು ಪರಿಚಯಿಸಿದರು. ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ| ಪೂರ್ಣಿಮಾ ಸುಧಾಕರ್ ಶೆಟ್ಟಿ ಅತಿಥಿಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರೂಸಿದರು. ಸುರೇಖಾ ಹರಿಪ್ರಸಾದ್ ವಂದಿಸಿದರು.
ನಾನು ಉದ್ಯೋಗವನ್ನರಸಿ ಹಣ ಮಾಡಲು ಮುಂಬಯಿ ಸೇರಿದವನಲ್ಲ. ಸಾಮಾಜಿಕ ಕಳಕಳಿ, ಸೇವಾ ತುಡಿತ ನನ್ನನ್ನು ಇಲ್ಲಿಗೆ ಆಹ್ವಾನಿಸಿದಂತಿದೆ. ಅದೇ ನನ್ನನ್ನು ಇಷ್ಟರ ಮಟ್ಟಿಗೆ ಬೆಳೆಸಿ ಇಂತಹ ಕೃತಿಗೆ ಪಾತ್ರವಾಗಿಸಿದೆ. ಬಹುಶಃ ಮುಂಬಯಿ ಮಹಾನಗರದಲ್ಲಿ ನೆಲೆಯಾಗಿ 75 ವರ್ಷಗಳಿಂದ ನಿರಂತರ ಸಂಸ್ಥೆಯೊಂದರ ಮೂಲಕ ಸೇವೆಗೈಯುವ ಭಾಗ್ಯ ನನಗೆ ಸಂತಸ ತಂದಿದೆ. ಈ ಕಾರ್ಯಕ್ರಮದಿಂದ ಅನೇಕರ ಹೊಗಳುವಿಕೆಯಿಂದ ಇನ್ನೂ ಐದಾರು ವರ್ಷಗಳ ಆಯುಷ್ಯ ಹೆಚ್ಚಿಸಿಕೊಂಡಂತಾಗಿದೆ. ಬದುಕಿನಲ್ಲಿ ಕಷ್ಟ ಸುಖ ಅನುಭವಿಸಿದರೂ ವೃದ್ಧಾಪ್ಯ ಜೀವನದಲ್ಲಿ ನೆಮ್ಮದಿ ಅನುಭವಿಸುತ್ತಿರುವುದೇ ನನ್ನ ಯಶಸ್ವಿನ ಬದುಕಾಗಿದೆ
– ಎಂ. ಡಿ. ಶೆಟ್ಟಿ (ನಗರದ ಹಿರಿಯ ಕನ್ನಡಿಗ).
ಚಿತ್ರ-ವರದಿ: ರೋನ್ಸ್ ಬಂಟ್ವಾಳ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ
Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ
Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು
Criminal case; ಏಕಕಾಲಕ್ಕೆ ಪಾಲಿಕೆ, ಮುಡಾದಲ್ಲಿ ಕೆಲಸ: ನೌಕರ ವಜಾ
Gujarat: 700 ಕೆ.ಜಿ. ಡ್ರಗ್ಸ್ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.