ಮುಂಬಯಿ ವಿವಿಯಲ್ಲಿ “ಓ ಮನಸೇ ತಲ್ಲಣಿಸದಿರು’ ಕೃತಿ ಬಿಡುಗಡೆ
Team Udayavani, Oct 30, 2018, 3:19 PM IST
ಮುಂಬಯಿ: ಗುಜರಾತ್‌ನಲ್ಲಿ ಹಿರಿಯ ಸಾಹಿತಿ ಎಸ್ಕೆ ಹಳೆಯಂಗಡಿ ಎಂದರೆ ಎಲ್ಲರಿಗೂ ಅಚ್ಚುಮೆಚ್ಚು. ಯಾವುದೇ ತುಳು- ಕನ್ನಡ ಕಾರ್ಯಕ್ರಮಕ್ಕೆ ಅವರ ಸಂಚಲನೆಯೇ ಪ್ರಧಾನ ವಾದುದು. ಎಲ್ಲರಿಗೂ ಪ್ರೇರಕರಾದ ಅವರು ಓರ್ವ ಜಾತ್ಯತೀತ ಹಿರಿಯ ಚೇತನರಾ ಗಿದ್ದಾರೆ. ಆದ್ದರಿಂದ ಗುಜರಾತ್‌ನಲ್ಲಿ ಎಸ್ಕೆ ತುಳು-ಕನ್ನಡಿಗರ ರಾಯಭಾರಿ ಎಂದೇ ಜನಜನಿತರಾಗಿದ್ದಾರೆ. ಅವರ ಸಾಹಿತ್ಯಕ ಕೆಲಸಗಳು ಇನ್ನೂ ಸ್ಫೂರ್ತಿದಾಯಕವಾಗಿ ಮುನ್ನಡೆಯಲಿ ಎಂದು ಬರೋಡದ ಹಿರಿಯ ಉದ್ಯಮಿ, ಗುಜರಾತ್ ಬಿಲ್ಲವ ಸಂಘದ ಗೌರವಾಧ್ಯಕ್ಷ ದಯಾನಂದ ಬೋಂಟ್ರಾ ನುಡಿದರು.
ಅ.27 ರಂದು ಪೂರ್ವಾಹ್ನ ಸಾಂತಾಕ್ರೂಜ್ ಪೂರ್ವದ ಮುಂಬಯಿ ವಿಶ್ವವಿದ್ಯಾಮಯ ಕಲೀನ ಕ್ಯಾಂಪಸ್ ಜೆ.ಪಿ ನಾಯಕ್ ಭವನದಲ್ಲಿ ಮುಂಬಯಿ ವಿವಿ ಕನ್ನಡ ವಿಭಾಗವು ನಾಡೋಜ ಪ್ರೊ| ಬರಗೂ ರು ರಾಮಚಂದ್ರಪ್ಪ ಪ್ರತಿಷ್ಠಾನ ಬೆಂಗಳೂರು ಇದರ ಸಹಯೋಗದೊಂದಿಗೆ ಆಯೋಜಿಸಿದ್ದ ಅಭಿಜಿತ್ ಪ್ರಕಾಶನ ಪ್ರಕಾಶಿತ, ಬರೋಡಾದ ಹಿರಿಯ ಸಾಹಿತಿ ಎಸ್ಕೆ ಹಳೆಯಂಗಡಿ ಅವರ “ಓ ಮನಸೇ ತಲ್ಲಣಿಸದಿರು’ ಕೃತಿ ಬಿಡುಗಡೆಗೊಳಿಸಿ ಮಾತ ನಾಡಿದ ಶುಭಹಾರೈಸಿದರು.
ಪ್ರಸಿದ್ಧ ಸಿನಿಮಾ ನಿರ್ದೇಶಕ, ಸಾಹಿತಿ ನಾಡೋಜ ಪ್ರೊ| ಬರಗೂರು ರಾಮಚಂದ್ರಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ, ಪುಸ್ತಕಕ್ಕೆ ಎಂದಿಗೂ ಸಾವು ಎನ್ನುವುದೇ ಇಲ್ಲ. ಡಿಜಿಟಲ್ ಯುಗದಲ್ಲಿ ಎಷ್ಟೋ ಆಧುನಿಕತೆಯುಳ್ಳ ಮಾಧ್ಯಮಗಳು ರಾರಾಜಿಸಿದರೂ ಅವು ಬರೇ ಆರಂಭಿಕ ಮುನ್ನಡೆಯಷ್ಟೇ. ಇಂತಹ ತಂತ್ರಜ್ಞಾನಗಳು ಬರೇ ಬಳಕೆಗಷ್ಟೇ ಮೀಸಲು. ಆದರೇ ಕೃತಿ, ಪುಸ್ತಕಗಳು ಮೂಲಧಾರಿತ ಶಕ್ತಿಯುಳ್ಳವು. ಅದರಲ್ಲೂ ಕನ್ನಡದ ಒಟ್ಟು ಸಂಸ್ಕೃತಿಗೆ ದೀರ್ಘಕಾಲದ ಇತಿಹಾಸವಿದೆ. ಆದರೆ ತಂತ್ರಜ್ಞಾನ ಮಾಧ್ಯಮಗಳ ಬಳಕೆಯ ವಿವೇಕಯುಕ್ತವಾಗಿದೆ. ಕನ್ನಡ ಎನ್ನುವುದು ಭಾಷೆ ಯೂ ಹೌದು ಬಹುಭಾಷಿಕವೂ ಮತ್ತು ಜೀವನವೂ ಹೌದು. ನಮ್ಮ ರಾಷ್ಟ್ರದಲ್ಲಿ ಸಾವಿರಾರು ಭಾಷೆಗಳಿದ್ದು ಅನೇಕವು ನಾಶವಾಗಿವೆ. ಆದರೆ ಕನ್ನಡ ಭಾಷೆಗೆ ಅಪಾಯವಿಲ್ಲ ಎಂದರು.
ಪತ್ರಕರ್ತ ಚಂದ್ರಶೇಖರ ಪಾಲೆತ್ತಾಡಿ, ಬೆಂಗಳೂರಿನ ಪ್ರಾಧ್ಯಾಪಕಿ ಡಾ| ಮನೋನ್ಮನಿ ಉದಯ, ಕರ್ನಾಟಕ ಸಂಘ ಮುಂಬಯಿ ಕಾರ್ಯದರ್ಶಿ ಡಾ| ಭರತ್‌ಕುಮಾರ್ ಪೊಲಿಪು, ತುಮಕೂರು ಸಿದ್ದಗಂಗಾ ವಿದ್ಯಾಲಯದ ಪ್ರಾಚಾರ್ಯ ನಿರಂಜನ್ ಸಿ.ಎಸ್, ಕವಿ, ಲೇಖಕ ಗೋಪಾಲ ತ್ರಾಸಿ ಉಪಸ್ಥಿತರಿದ್ದರು.
ತುಮಕೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ಡಾ| ಗೀತಾ ವಸಂತ ಅವರು “ಕನ್ನಡ ಪ್ರಜ್ಞೆ ನಿನ್ನೆ ಇಂದು ನಾಳೆ’ ವಿಚಾರವಾಗಿ ಉಪನ್ಯಾಸ ನೀಡಿ, ಪ್ರಜ್ಞೆ ಎನ್ನುವುದು ನದಿಯಂತೆ ನಿರಂತರವಾ ದುದು. ಕನ್ನಡ ಪ್ರಜ್ಞೆ ಎಂದರೆ ಸಾಂಘಿಕವಾದ ಬುದ್ಧಿಪೂರ್ವತೆವುಳ್ಳದ್ದು. ಎಲ್ಲವನ್ನೂ ಸ್ವೀಕರಿ ಸುವ ಗುಣ ಕನ್ನಡಕ್ಕಿದೆ. ಧರ್ಮ ಮತ್ತು ಪ್ರಭುತ್ವದ ನೆಲೆಯಲ್ಲೂ ಕನ್ನಡ ಪ್ರಜ್ಞೆಯನ್ನು ನಾವು ಕಾಣಬಹುದು. ರೂಪದ ದೃಷ್ಟಿಯಿಂದ ಮಾತ್ರವಲ್ಲ ಗುಣದ ದೃಷ್ಟಿಯಿಂದಲೂ ಕನ್ನಡ ಎತ್ತರದ ಸ್ಥಾನ ಅಲಂಕರಿಸಿದೆ ಎಂದು ಅಭಿಪ್ರಾಯಿಸಿದರು.
ಅಕ್ಷಯ ಮಾಸಿಕದ ಸಂಪಾದಕ ಡಾ| ಈಶ್ವರ್ ಅಲೆವೂರು ಕೃತಿ ಪರಿಚಯಿಸಿ, ಮನಸ್ಸಿನ ಕುರಿತು ಇಡೀ ಕೃತಿ ಮಾತನಾಡುತ್ತ ಧ್ವನಿ ಆಗಿ ಮೂಡುತ್ತದೆ. ನಾನು ಎನ್ನುವ ಅಹಂ ಕೆಟ್ಟದ್ದು, ಮನಸ್ಸು ಅನ್ನುವುದೇ ಮಹತ್ವದು ಎಂದು ಕೃತಿಯು ಸಾರಿ ಹೇಳುತ್ತದೆ. ಆತ್ಮವಿಶ್ವಾಸವಾಗಿ ಮನಸ್ಸನ್ನು ಬೆಳೆಸಬೇಕು ಎಂಬುದು ಈ ಕೃತಿಯ ಒಟ್ಟು ಸಾರಂಶವಾಗಿದೆ ಎಂದರು.
ಮುಂಬಯಿ ವಿವಿ ಕನ್ನಡ ವಿಭಾಗದ ಮುಖ್ಯಸ್ಥ ಹಾಗೂ ಪ್ರಾಧ್ಯಾಪಕ ಡಾ| ಜಿ.ಎನ್ ಉಪಾಧ್ಯ ಪ್ರಸ್ತಾವನೆಗೈದು, ಇದೊಂದು ಬಣ್ಣಬಣ್ಣದ ವರ್ಣಮಯ ಕಾರ್ಯಕ್ರಮ. ಇದು ಹಚ್ಚಿಕೊಂಡ ಬಣ್ಣವಲ್ಲ ಹಾಕಿಕೊಂಡ ಬಣ್ಣವಾಗಿದೆ ಎಂದರು. ಪ್ರೊ| ರಾಮಚಂದ್ರಪ್ಪ ಅವರು ದಯಾನಂದ ಬೋಂಟ್ರಾ ಮತ್ತು ಎಸ್ಕೆ ಹಳೆಯಂಗಡಿ ಅವರನ್ನು ಶಾಲು ಹೊದೆಸಿ, ಗ್ರಂಥಗೌರವ ನೀಡಿ ಅಭಿನಂದಿಸಿದರು. ಕನ್ನಡ ವಿಭಾಗದ ಸಹ ಪ್ರಾಧ್ಯಾಪಕಿ ಡಾ| ಪೂರ್ಣಿಮಾ ಎಸ್. ಶೆಟ್ಟಿ ಸ್ವಾಗತಿಸಿ, ಅತಿಥಿಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರೂಸಿದರು. ದಿನಕರ್ ಚಂದನ್ ವಂದಿಸಿದರು.
ತಾಯ್ನಾಡಿನಿಂದ ಬಹಳ ದೂರದ ಗುಜರಾತ್‌ನಲ್ಲಿದ್ದರೂ ಮಾತೃಭಾಷೆ, ಸಾಹಿತ್ಯವನ್ನು ಒಪ್ಪಿ ಅಪ್ಪಿಕೊಂಡು ಮುನ್ನಡೆದಿದ್ದೇವೆ. ನಾವು ಗುಜರಾತ್‌ನಲ್ಲಿದ್ದರೂ ಮುಂಬಯಿ ಕನ್ನಡಿಗರೇ ನಮ್ಮ ಬಂಧುಗಳು ಮತ್ತು ಪ್ರೋತ್ಸಾಹಕರು. ಇವರನ್ನೇ ನಾವು ಹೊಂದಿದ್ದೇವೆ. ಡಾ| ಜಿ. ಎನ್. ಉಪಾಧ್ಯ ಅವರ ಪ್ರೇರಣೆ ಮತ್ತು ಡಾ| ಅಲೆವೂರು ಅವರ ಸಹಯೋಗದಿಂದ ನನ್ನ ಕೃತಿಗಳು ಪ್ರಕಟಗೊಳ್ಳಲು ಸಾಧ್ಯವಾಯಿತು.
– ಎಸ್. ಕೆ. ಹಳೆಯಂಗಡಿ, ಕೃತಿಕಾರರು
ಚಿತ್ರ-ವರದಿ : ರೋನ್ಸ್ ಬಂಟ್ವಾಳ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
ಇಂಗ್ಲೆಂಡ್‌ನ ರಾದರಮ್ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’
Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Dharwad: 15 ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆ, ನಾನೂ ಕೂಡ ಆಕಾಂಕ್ಷಿ: ವಿನಯ್ ಕುಲಕರ್ಣಿ
Karnataka Govt.,: ರಾಜ್ಯ ಪ್ರವಾಸೋದ್ಯಮ ನೀತಿಗೆ ಸಂಸದ ಕಾಗೇರಿ ಖಂಡನೆ
ಚಂದ್ರಶೇಖರ ಶ್ರೀ ವಿರುದ್ಧ ಕೇಸ್; ಒಕ್ಕಲಿಗರು ತಿರುಗಿ ಬೀಳುತ್ತಾರೆ: ಆರ್.ಅಶೋಕ್ ಎಚ್ಚರಿಕೆ
Notice: ಈ ಆಹಾರ ಪದ್ಧತಿಯಿಂದಲೇ ಪತ್ನಿಯ ಕ್ಯಾನ್ಸರ್ ಗುಣವಾಯಿತೆಂದ ಸಿಕ್ಸರ್ ಸಿಧುಗೆ ನೋಟಿಸ್
ಬಾಲ್ಯದ ಮಧುರ ನೆನೆಪಿನೊಳಗೆ…: ಆ ಕಾಲ ಹೀಗಿತ್ತು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.