ಮುಂಬಯಿ ವಿಶ್ವವಿದ್ಯಾಲಯ ಕನ್ನಡ ಕಲಿಕೆಗೆ ಅರ್ಜಿ ಆಹ್ವಾನ
Team Udayavani, Jul 13, 2018, 2:01 PM IST
ಮುಂಬಯಿ: ಮುಂಬಯಿ ವಿಶ್ವವಿದ್ಯಾಲಯ, ಕನ್ನಡ ವಿಭಾಗದಲ್ಲಿ ಎಂ.ಎ, ಕನ್ನಡ ಸರ್ಟಿಫಿಕೇಟ್ ಕೋರ್ಸ್ ಹಾಗೂ ಡಿಪ್ಲೋಮಾ ತರಗತಿಗಳಿಗೆ ಪ್ರವೇಶಕ್ಕೆ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗವು ಕನ್ನಡ ಓದಲು ಬರೆಯಲು ಬಾರದ ಕನ್ನಡಿಗರಿಗೆ, ಆಸಕ್ತ ಕನ್ನಡೇತರರಿಗೆ ಕನ್ನಡ ಸರ್ಟಿಫಿಕೇಟ್ ಕೋರ್ಸ್ ಹಾಗೂ ಡಿಪ್ಲೋಮಾ ತರಗತಿಗಳನ್ನು ನಡೆಸುತ್ತಿದ್ದು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿ ಸಲಾಗಿದೆ. ಎಸ್‌ಎಸ್‌ಸಿ ಉತ್ತೀರ್ಣರಾದವರು ಕನ್ನಡ ಸರ್ಟಿಫಿಕೇಟ್ ಕೋರ್ಸಿಗೆ ಸೇರ ಬಹುದಾಗಿದೆ. ಕನ್ನಡದಲ್ಲಿ ಪ್ರಭುತ್ವವನ್ನು ಸಾಧಿಸಿದ, ಯಾವುದೇ ಪದವಿ ಗಳಿಸಿದವರು ವಿಶ್ವವಿದ್ಯಾಲಯ ನಡೆಸುವ ಕನ್ನಡ ಡಿಪ್ಲೋಮಾ ತರಗತಿಗೆ ಪ್ರವೇಶ ಪಡೆಯಬಹುದಾಗಿದೆ. ಈ ವರ್ಷದ ಪ್ರವೇಶಕ್ಕೆ ಆಸಕ್ತ ವಿದ್ಯಾರ್ಥಿಗಳಿಂದ ಆಗಸ್ಟ್ 14ರ ಒಳಗಾಗಿ ಅರ್ಜಿ ಆಹ್ವಾನಿಸಿದೆ.
ಪ್ರತಿ ಶುಕ್ರವಾರ ಡಿಪ್ಲೊಮಾ ಹಾಗೂ ಶನಿವಾರ ಸರ್ಟಿಫಿಕೇಟ್ ತರಗತಿ ನಡೆಯಲಿವೆ. ಅಲ್ಲದೆ ಕನ್ನಡ ತರಗತಿ ನಡೆಯುವ ಇತರ ಕೇಂದ್ರಗಳಾದ ನವಿ ಮುಂಬಯಿ ಕನ್ನಡ ಸಂಘ ( 27653443) ಅಣುಶಕ್ತಿ ಕನ್ನಡ ಸಂಘ (8197997681), ಪನ್ವೇಲ್ ಕರ್ನಾಟಕ ಸಂಘ (99305151123) ಇವರನ್ನು ಸಂಪರ್ಕಿಸಬಹುದು.
ಕನ್ನಡ ವಿಭಾಗ, ಮುಂಬಯಿ ವಿಶ್ವವಿದ್ಯಾಲ ಯವು ಕನ್ನಡ ಎಂಎ ಸೆಮಿಸ್ಟರ್ ಪ್ರಥಮ ವರ್ಷ ತರಗತಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಬಿ.ಎ, ಬಿ.ಕಾಂ, ಬಿ.ಎಸ್ಸಿ ಉತ್ತೀರ್ಣರಾದವರು ಅರ್ಜಿಯನ್ನು ಸಲ್ಲಿಸಬಹುದು. 2018 – 2019ನೇ ಸಾಲಿನ ತರಗತಿಗಳಿಗೆ ಸೇರಬಯಸುವ ಅರ್ಹ ಅಭ್ಯರ್ಥಿಗಳು ವಿಭಾಗದ ಕಚೇರಿಯಿಂದ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು. ಅರ್ಜಿಗಳನ್ನು ಅಂಚೆ ಮೂಲಕ ತರಿಸಿಕೊಳ್ಳುವ ಅಭ್ಯರ್ಥಿಗಳು ಮುಂಬಯಿ ವಿಶ್ವವಿದ್ಯಾಲಯದ ವಿಳಾಸಕ್ಕೆ ಸ್ವವಿಳಾಸ ಹೊಂದಿದ 10ರೂಪಾಯಿಯಸ್ಟಾಂಪ್ ಹಚ್ಚಿದ ಕವರುಗಳನ್ನು ಲಗತ್ತಿಸಿ ವ್ಯವಹರಿಸಬೇಕು.
ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅರ್ಹ ವಿದ್ಯಾರ್ಥಿಗಳಿಗೆ ವಾರ್ಷಿಕ 25,000 ರೂ. ಹಾಗೂ ಕರ್ನಾಟಕ ಸಂಘ ಮುಂಬಯಿ ವಾರ್ಷಿಕ ಮೂರು ಸಾವಿರ ರೂ. ವಿದ್ಯಾರ್ಥಿವೇತನ ನೀಡುತ್ತಿದೆ. ತುಂಬಿದ ಅರ್ಜಿಯನ್ನು ಜು. 15 ರೊಳಗೆ ತಲುಪುವಂತೆ ಕಳುಹಿಸಿಕೊಡಬಹುದು. ಜು. 30 ರಂದು ಲಿಖೀತ ಪ್ರವೇಶ ಪರೀಕ್ಷೆ ನಡೆಯಲಿದ್ದು ಈ ಕುರಿತು ವಿಭಾಗದಿಂದ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಕನ್ನಡ ವಿಭಾಗ ಮುಂಬಯಿ ವಿವಿ ಮುಖ್ಯಸ್ಥ ಡಾ| ಜಿ. ಎನ್. ಉಪಾಧ್ಯ, ಮುಖ್ಯಸ್ಥರು, ಕನ್ನಡ ವಿಭಾಗ, ಮುಂಬಯಿ ವಿಶ್ವವಿದ್ಯಾಲಯ, ರಾನಡೆ ಭವನ, ವಿದ್ಯಾನಗರಿ, ಸಾಂತಾಕ್ರೂಜ್, (ಪೂರ್ವ) ಮುಂಬಯಿ- 400 098 ಅಥವಾ (ದೂರವಾಣಿ ಸಂಖ್ಯೆ 26543530, 26543469, 26543345) 26543469, 26543345) Email: [email protected]
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.