ಮುಂಬಯಿ ವಿವಿ ಕನ್ನಡ ವಿಭಾಗ: ಘಟಿಕೋತ್ಸವ
Team Udayavani, Nov 17, 2017, 3:44 PM IST
ಮುಂಬಯಿ: ಆಧುನಿಕ ಕಾವ್ಯ ಸೃಷ್ಟಿಯ ರಚನೆ ಬದಲಾಗಿದೆ. ಇಂತಹ ಬರವಣಿಗೆಯ ಅವ್ಯಕ್ತ ಶಕ್ತಿಯನ್ನು ಹಿರಿಯರು ಒಪ್ಪಿಕೊಂಡಿದ್ದಾರೆ. ಆದ್ದರಿಂದ ಬರಹಗಾರರಲ್ಲಿ ಭಾವನಾತ್ಮಕ ತುಡಿತ ಇರಬೇಕಾಗಿದೆ. ಬರವಣಿಗೆಯಲ್ಲಿ ಲೋಕದ ಬಗ್ಗೆ ದಯೆ, ಪ್ರೀತಿ, ತಣ್ಣನೆಯ ಭಾವನೆ ಇರಬೇಕು. ಆ ಮೂಲಕ ಲೇಖಕರು ಸ್ಫೂರ್ತಿಯ ಚಿಂತಕರಾಗಬೇಕು ಎಂದು ಮೈಸೂರಿನ ಪ್ರಸಿದ್ಧ ವಿದ್ವಾಂಸ, ಶ್ರೇಷ್ಠ ಚಿಂತಕ, ಸಂಶೋಧಕ ಡಾ| ಕೃಷ್ಣಮೂರ್ತಿ ಹನೂರು ತಿಳಿಸಿದರು.
ನ. 15ರಂದು ಪೂರ್ವಾಹ್ನ ಸಾಂತಾಕ್ರೂಜ್ ಪೂರ್ವ ಕಲೀನಾ ಕ್ಯಾಂಪಸ್‌ನ ವಿದ್ಯಾನಗರಿಯ ಅಲ್ಲಿನ ಜೆ. ಪಿ. ನಾಯಕ್ ಭವನದಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ನವ ದೆಹಲಿ ಸಂಸ್ಥೆಯ ಸಹಯೋಗದೊಂದಿಗೆ ಮುಂಬಯಿ ವಿಶ್ವ ವಿದ್ಯಾಲಯದ ಕನ್ನಡ ವಿಭಾಗವು “ಮಧ್ಯಕಾಲಿನ ಕನ್ನಡ ಸಾಹಿತ್ಯ’ ವಿಚಾರವಾಗಿ ಆಯೋಜಿಸಿದ್ದ ಸಾಹಿತ್ಯ ಸಂವಾದ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, ಸಂಗೀತ ಕ್ಷೇತ್ರದ ಮಹಾಪ್ರಬಂಧ ಆಶ್ಚರ್ಯಕವಾದರೂ ಇದೊಂದು ಶ್ರೇಷ್ಠವಾದ ಮಹಾಪ್ರಬಂಧ. ಶ್ಯಾಮಲಾ ಅವರು ಓರ್ವ ಸಂಗೀತಗಾರ್ತಿಯಾಗಿದ್ದು ಮಹಾನ್ ಕೃತಿ ರಚಿಸಿ ಲೋಕವೇ ಗುರುತು ಹಚ್ಚುವ ಕಾಯಕ ನಿರ್ವಹಿಸಿದ್ದಾರೆ. ಸಂಗೀತ ಮತ್ತು ಸಾಹಿತ್ಯಕ್ಕೆ ಗಾಢ ಸಂಬಂಧವಿದ್ದು ನಾವು ಕಾವ್ಯ ವಸ್ತುಕ್ಕಿಂತ ಕಲೆಯ ಕರ್ತವ್ಯದ ಬಗ್ಗೆ ಚರ್ಚಿಸುವ ಅಗತ್ಯವಿದೆ. ಪೂರ್ವಜರು ಅಭ್ಯಾಸ ಬಲದಿಂದ ಪದ್ಯದಿಂದಲೂ ಬದುಕು ರೂಪಿಸಿಕೊಳ್ಳುವುದನ್ನು ಅರಿತಿದ್ದರು. ಮಾತ್ರವಲ್ಲದೆ ಕಾವ್ಯದಲ್ಲಿ ಪ್ರಕೃತಿ ಮತ್ತು ಮನುಷ್ಯನ ಸಂಬಂಧವನ್ನು ಮೂಡಿಸಿ ಬದುಕಿನ ಮೌಲ್ಯದ ಅರಿವು ಮೂಡಿಸಿದ್ದರು. ಆದರೆ ಆಧುನಿಕ ಜನತೆ ವಿಷಯಗಳನ್ನೇ ವಿವರವಾಗಿ ಓದುವ ಪರಿಪಾಠ ಹೊಂದಿಲ್ಲ ಎನ್ನುವುದೇ ಶೋಚನೀಯ. ಈ ಕೃತಿಯಿಂದ ಮತ್ತೆ ಸಂಗೀತ ಸಾಹಿತ್ಯ ಚರಿತ್ರೆ ಓದುವ ಆಸಕ್ತಿ ನನ್ನಲ್ಲಿ ಬೆಳೆದಿದೆ ಎಂದೂ ಹನೂರು ತಿಳಿಸಿದರು.
ವಿದುಷಿ ಶ್ಯಾಮಲಾ ಪ್ರಕಾಶ್ ಅವರು ತನ್ನ “ಕನ್ನಡ ಸಾಹಿತ್ಯದಲ್ಲಿನ ಸಂಗೀತಾತ್ಮಕ ಅಧ್ಯಯನ’ ಪ್ರಬಂಧ ಮಂಡಿಸಿ ಅದರ ದಾಖಲಾಧಾರಿತ ವಿಷಯಗಳ ಮೌಕಿಕ ಮೌಲ್ಯಮಾಪನ ನಡೆಸಿದರು. ಬಳಿಕ ಮುಂಬಯಿ ವಿವಿ ಕನ್ನಡ ವಿಭಾಗದ ಮುಖ್ಯಸ್ಥ ಡಾ| ಜಿ. ಎನ್. ಉಪಾಧ್ಯ ಅವರನ್ನೊಳಗೊಂಡು ಡಾ| ಕೃಷ್ಣಮೂರ್ತಿ ಅವರು ಶ್ಯಾಮಲಾ ಪ್ರಕಾಶ್ ಎನ್. ಜಿ. ಅವರಿಗೆ “ಡಾಕ್ಟರೇಟ್ ಸನದು’ ಪ್ರದಾನಿಸಿ ಅಭಿನಂದಿಸಿದರು.
ನಿವೃತ್ತ ಪ್ರಾಧ್ಯಾಪಕ ಡಾ| ಎಸ್. ಕೆ. ಭವಾನಿ ಅವರು ಪ್ರಧಾನ ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡಿ, ಇಲ್ಲಿನ ಕನ್ನಡ ವಿಭಾಗವು ಸಾಹಿತ್ಯ, ಪದ್ಯ, ನಾಟಕ, ಯಕ್ಷಗಾನ ಇತ್ಯಾದಿಗಳ ಪ್ರಬಂಧಗಳನ್ನು ಪ್ರಕಟಿಸಿ ತನ್ನತನ ಮೆರೆದಿದೆ. ಆದರೆ ಇಂದು ಮತ್ತೂಂದು ಹೆಜ್ಜೆ ಮುಂದಿರಿಸಿ ಸುಮಾರು 900 ಪುಟಗಳ ಮಹಾಪ್ರಬಂಧಕ್ಕೆ ಅವಕಾಶ ಕಲ್ಪಿಸಿ ಸಂಗೀತ ಕ್ಷೇತ್ರದ ಪ್ರಥಮ ಮಹಾತ್ಕಾರ್ಯ ಸಾಧಿಸಿದೆ. ಸಂಗೀತ ಸಾಹಿತ್ಯ ಒಂದಕ್ಕೊಂದು ಪೂರಕವಾಗಿದೆ ಎಂದು ನುಡಿದರು.
ಕೇಂದ್ರ ಸಾಹಿತ್ಯ ಅಕಾಡೆಮಿ ಸಲಹಾ ಸಮಿತಿಯ ಸದಸ್ಯ ಹಾಗೂ ಕನ್ನಡ ವಿಭಾಗದ ಮುಖ್ಯಸ್ಥ ಡಾ| ಜಿ. ಎನ್. ಉಪಾಧ್ಯ ಅವರು ಸ್ವಾಗತಿಸಿ ಮಾತನಾಡಿ, ನಮ್ಮಲ್ಲಿ ಕನ್ನಡೇತರಿಗೆ ದೊಡ್ಡ ಪ್ರಮಾಣದ ಅಧ್ಯಯನ ನಡೆಯುತ್ತಿದೆ. ಸಂಶೋಧನೆಗೆ ಉತ್ತೇಜಿಸುವುದು ನಮ್ಮ ಉದ್ದೇಶವಾಗಿರಿಸಿದ್ದೇವೆ. ಕನ್ನಡಪರ ನಿಷ್ಠೆ ಕಾಳಜಿಗೆ ಸಮರ್ಪಿಕೊಂಡಿರುವ ನಮ್ಮ ವಿಭಾಗ ಸಾಧನೆಯ ಹಾದಿಯಲ್ಲಿದೆ. ಶ್ಯಾಮಲಾ ಪ್ರಕಾಶ್ ಮಹಾಪ್ರಬಂಧ ರಚಿಸಿ ಬೆಟ್ಟಗಳನ್ನು ತೂಗುವ ಕೆಲಸ ಮಾಡಿದ್ದಾರೆ. ಪಿಎಚ್‌ಡಿ ಕೃತಿ ರದ್ದಿಯಾಗದೆ, ಪ್ರಕಟವಾಗಿ ಲೋಕಕ್ಕೆ ಉಪಯೋಗವಾಗಲಿ ಎನ್ನುವ ಆಶಯ ನಮ್ಮದು. ಅದಕ್ಕಾಗಿಯೇ ಹನೂರು ಅವರಂತಹ ಬಹುಮುುಖೀ ಸಂವೇದನಗಾರರಿಂದ ಇಂತಹ ಸಂವಾದ ಉಚಿತವಾಗಿದೆ ಎಂದರು.
ಕನ್ನಡ ವಿಭಾಗದ ಉಪನ್ಯಾಸಕಿ ಡಾ| ಪೂರ್ಣಿಮಾ ಸುಧಾಕರ ಶೆಟ್ಟಿ, ಡಾ| ಸಿ. ಆರ್. ಶ್ಯಾಮಲಾ, ವಿದುಷಿ ಶ್ಯಾಮಲಾ ಪ್ರಕಾಶ್ ವಿಚಾರ ಸಂಕಿರಣ ಸಾಹಿತ್ಯ ಸಂವಾದ ಕಾರ್ಯಕ್ರಮದಲ್ಲಿ ತಮ್ಮ ವಿಚಾರ ಮಂಡಿಸಿದರು. ಡಾ| ವಿಶ್ವನಾಥ್ ಕಾರ್ನಾಡ್ ಮತ್ತು ಎಚ್. ಬಿ. ಎಲ್. ರಾವ್ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಡಾ| ಸುನೀತಾ ಎಂ. ಶೆಟ್ಟಿ, ಪತ್ರಕರ್ತ ಚಂದ್ರಶೇಖರ ಪಾಲೆತ್ತಾಡಿ, ಡಾ| ಭರತ್‌ಕುಮಾರ್ ಪೊಲಿಪು, ಡಾ| ಮಮತಾ ರಾವ್, ಮನೋಹರ್ ಎಂ. ಕೋರಿ, ಸುಜತಾ ಎಸ್. ದೇವಾಡಿಗ, ಮೋಹನ್ ಮಾರ್ನಾಡ್, ಡಾ| ಕೆ. ರಘುನಾಥ್, ಡಾ| ಗಿರಿಜಾ ಶಾಸ್ತ್ರಿ, ಆರ್. ಪ್ರಕಾಶ್, ಪದ್ಮನಾಭ ಸಸಿಹಿತ್ಲು, ಮಧುಸೂದನ ರಾವ್, ಡಾ| ದಾûಾಯಣಿ ಯಡವಳ್ಳಿ, ಡಾ| ಸುಮಾ ದ್ವಾರಕನಾಥ್, ಅನುಸೂಯ ಗಲಗಲಿ, ಡಾ| ಸಹನಾ ಪೋತಿ, ಯಜ್ಞನಾರಾಯಣ ಕೆ.ಸುವರ್ಣ, ಸುರೇಂದ್ರಕುಮಾರ್ ಮಾರ್ನಾಡ್, ಸುರೇಖಾ ಸುಂದರ್ ದೇವಾಡಿಗ, ಸಾ.ದಯಾ, ಗೋಪಾಲ ತ್ರಾಸಿ, ಅವಿನಾಶ್ ಕಾಮತ್, ಜಯ ಪೂಜಾರಿ ಕೊಜಕೊಳ್ಳಿ, ಅನಿತಾ ಪಿ. ಪೂಜಾರಿ ತಾಕೋಡೆ, ಹೇಮಾ ಎಸ್. ಅಮೀನ್ ಮತ್ತಿತರರು ಹಾಜರಿದ್ದು ಶ್ಯಾಮಲಾ ಪ್ರಕಾಶ್‌ಗೆ ಶುಭ ಹಾರೈಸಿದರು. ಕನ್ನಡ ವಿಭಾಗದ ಉಪನ್ಯಾಸಕಿ ಡಾ| ಪೂರ್ಣಿಮಾ ಎಸ್. ಶೆಟ್ಟಿ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಶಿವರಾಜ್ ಎಂ. ಜಿ. ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
ಇಂಗ್ಲೆಂಡ್‌ನ ರಾದರಮ್ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’
Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.