ಮುಂಬಯಿ ವಿವಿ ಕನ್ನಡ ವಿಭಾಗ: ಜಾನಪದ ಸಂಭ್ರಮ


Team Udayavani, Apr 11, 2018, 1:01 PM IST

0904mum03a.jpg

ಮುಂಬಯಿ: ನನಗೆ ನಂಬಿಕೆ ಕಟ್ಟಿದ್ದು ಜಾನಪದ. ನಂಬಿಕೆ ಎಂದರೆ ಜಾನಪದ. ಗೌರವವನ್ನು ಪಡೆಯಲು ಕಲಿಸಿದ್ದು ಜಾನಪದ. ಹಿರಿಯರ ಮುಂದೆ ಗೌರವಪೂರ್ವಕವಾಗಿ ಯಾವ ಕೆಲಸ ಮಾಡಬಾರದು ಎಂದು ಸಂಸ್ಕೃತಿ ಕಲಿಸಿದ್ದಲ್ಲ. ಅದು ಜಾನಪದ ಸಂಸ್ಕೃತಿ ಕಲಿಸಿದ್ದು.  ಆದ್ದರಿಂದ ಬಾಳಿನ ಮರ್ಯಾದೆ, ಗೌರವವನ್ನು ಜಾನಪದದಿಂದ ಅರಿತಿದ್ದೇನೆ. ಮಕ್ಕಳಿಗೆ ಬಾಂಧ‌ವ್ಯ, ಮಾವ, ಚಿಕ್ಕಮ್ಮ, ಚಿಕ್ಕಪ್ಪ ಎಂದೆಲ್ಲ ಕಲಿಸಿದ್ದು ಜಾನಪದ. ಆದರೆ ಮಕ್ಕಳಲ್ಲಿ ಆಂಟಿ-ಅಂಕಲ್‌ ಎಂದು ಕರೆಯುವ ಸಂಸ್ಕೃತಿಯೊಳಗೆ ನಾವೂ ಬಾಂಧ‌ವ್ಯವನ್ನು ಕಳೆಕೊಂಡಿದ್ದೇವೆ. ನಾವೂ ದುಡಿಮೆಗಾಗಿ ಮುಂಬಯಿಗೆ ಬಂದಿದ್ದೇವೆ. ಅಂತೆಯೇ ನಮ್ಮ ಸಂಸ್ಕೃತಿ ಕಟ್ಟಲು ಅಥವಾ ಸಂಸ್ಕೃತಿ ಉಳಿಸಲು ಬಂದಿದ್ದೇವೆ ಎಂದೂ ತಿಳಿಯುವ ಅಗತ್ಯವಿದೆ. ಮುಂಬಯಿ ವಿವಿ ಕನ್ನಡ ವಿಭಾಗ 40 ವರ್ಷಗಳಿಂದ ಸಂಸ್ಕೃತಿ ಕಟ್ಟುವ, ಭಾಷೆ ಕಟ್ಟುವ ಕೆಲಸವನ್ನು ಮಾಡುತ್ತಿದೆ. ಸಂಸ್ಕೃತಿ ಮತ್ತು ಭಾಷೆಗೆ ತ್ಯಾಗ ಕೊಟ್ಟಂತಹ ಕವಿಗಳ ವಿಷಯವನ್ನು ಚರ್ಚಿಸುವಂತಹ ಕೆಲಸ ಮಾಡುತ್ತಿದೆ ಅಂದ ಮೇಲೆ ಮುಂಬಯಿಗರಲ್ಲಿ ಮಾತೃ ಸಂಸ್ಕೃತಿ ಜೀವಂತವಾಗಿದೆ ಎಂದಾರ್ಥ ಎಂದು ಬೆಂಗಳೂರಿನ ಸುಪ್ರಸಿದ್ಧ, ಪ್ರಶಸ್ತಿ ಪುರಸ್ಕೃತ ಜಾನಪದ ಕಲಾವಿದ ಡಾ| ಅಪ್ಪಗೆರೆ ತಿಮ್ಮರಾಜು ನುಡಿದರು.

ಎ. 7ರಂದು ಅಪರಾಹ್ನ ಸಾಂತಾಕ್ರೂಜ್‌ ಪೂರ್ವದ ಕಲೀನಾ ಕ್ಯಾಂಪಸ್‌ನ ವಿದ್ಯಾನಗರಿಯ ಕವಿವರ್ಯ  ಡಾ| ಕುಸುಮಾಗ್ರಜ ಮರಾಠಿ ಭಾಷಾ ಭವನದ ಸಭಾಂಗಣದಲ್ಲಿ ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗವು ಆಯೋಜಿಸಿದ್ದ ಜಾನಪದ ಸಂಭ್ರಮ ಮತ್ತು ಕೃತಿ ಬಿಡುಗಡೆ ಕಾರ್ಯಕ್ರಮವನ್ನು  ಉದ್ಘಾಟಿಸಿ “ಜಾನಪದ ಉಳಿವು’ ಕುರಿತು ವಿಶೇಷ ಉಪನ್ಯಾಸ ನೀಡಿದ ಅವರು, ಭಾರತೀಯ ಸಂಸ್ಕೃತಿ  ಕಟ್ಟಿದ್ದೇ ನಾರಿಯರು. ಬೆಳಗಿನಿಂದ ಸಂಜೆಯ ವರೆಗೆ ಎಲ್ಲ ಕೆಲಸಗಳ ಮಧ್ಯೆಯೂ ಸಂಸ್ಕೃತಿ ಕಟ್ಟಿ ಬೆಳೆಸಿದ ಮಹಿಳೆಯರು. ಮಾತೆಯರು  ಈ ತನಕ ಜಾನಪದ ವನ್ನು  ಬದುಕುಳಿಸಿರುವುದೇ  ದೊಡ್ಡತನ. ಇಂತಹ ಮನಸ್ಸು ಶುದ್ಧವಾಗಿಸಿದರೆ ಬದುಕು ಭವ್ಯವಾಗುವುದು. ಆದ್ದರಿಂದ ಯಾವುದೇ ತರ್ಕಕ್ಕೆ ತಲೆಯೊಡ್ಡದೆ ಬಾಳುವ ಪ್ರಯತ್ನ ಮಾಡಿರಿ ಎಂದರು.

ಅನವಶ್ಯಕ ಯೋಚನೆಗಳು ಹೆಚ್ಚಾದರೆ ಆಯುಷ್ಯ ಕಡಿಮೆಯಾಗುತ್ತದೆ.  ಮನುಷ್ಯ ಜಗತ್ತಿನಲ್ಲಿ ಎಷ್ಟೇ ದೊಡ್ಡವನಾದರೂ ಸರಳತೆ  ಸಂಸ್ಕೃತಿಯನ್ನು ಮರೆಯಬಾರದು.  ಬದುಕು ಕಲಿಯುತ್ತಿದ್ದೇನೆ ಎಂಬುದಕ್ಕಿಂತ ಕಲಿಸುತ್ತಿದ್ದೇನೆ ಎಂಬುವುದು ಬಹಳ ಮುಖ್ಯ. ಅಂತೆಯೇ ನಮ್ಮ ಜಾನಪದವು ಬದುಕು ಕಲಿಸುತ್ತಿದೆೆ ಎಂದು ಅವರು ನುಡಿದರು.

ಮುಂಬಯಿ ವಿವಿ ಕನ್ನಡ ವಿಭಾಗದ ಮುಖ್ಯಸ್ಥ ಡಾ| ಜಿ.ಎನ್‌. ಉಪಾಧ್ಯ ಅಧ್ಯಕ್ಷತೆಯಲ್ಲಿ ಜರಗಿದ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಗಳಾಗಿ ಬಿಲ್ಲವರ ಅಸೋ ಸಿಯೇಶನ್‌  ಮುಂಬಯಿ ಅಧ್ಯಕ್ಷ ನಿತ್ಯಾನಂದ ಡಿ. ಕೋಟ್ಯಾನ್‌, ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಅಧ್ಯಕ್ಷ ಚಂದ್ರಶೇಖರ ಪಾಲೆತ್ತಾಡಿ, ಕನ್ನಡ ವಿಭಾಗದ ಸಹ ಪ್ರಾಧ್ಯಾಪಕಿ ಡಾ| ಪೂರ್ಣಿಮಾ ಎಸ್‌. ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಜಾನಪದ ಕಲಾವಿದ ಸಿದ್ದಪ್ಪ ಬಿದರಿ ಅವರ “ಜಾನಪದ ಜವಾರಿ’ ಕೃತಿಯನ್ನು ಡಾ| ಅಪ್ಪಗೆರೆ ಬಿಡುಗಡೆಗೊಳಿಸಿದರು. ಕನ್ನಡ ವಿಭಾಗದ ಸಂದರ್ಶಕ ಪ್ರಾಧ್ಯಾಪಕ ಡಾ| ಜೀವಿ ಕುಲಕರ್ಣಿ ಕೃತಿ ಪರಿಚಯಿಸಿದರು. ಬಳಿಕ ಡಾ| ಅಪ್ಪಗೆರೆ ತಿಮ್ಮರಾಜು, ಸಮಾಜ ಸೇವಕ ಮುದ್ರಾಡಿ ದಿವಾಕರ ಶೆಟ್ಟಿ ಹಾಗೂ ಶ್ರೀಪಾದ ಪಾದಕೀ ನವಿಮುಂಬಯಿ ಅವರನ್ನು ಅತಿಥಿಗಳು ಸಮ್ಮಾನಿಸಿ ಅಭಿನಂದಿಸಿದರು.

ಜಾನಪದ ಕಲಾವಿದ ಸಿದ್ದಪ್ಪ ಬಿದರಿ ಅವರು ಮಾತನಾಡಿ, ಒಂದು ಕಾಲದಲ್ಲಿ ಜಾನಪದ ಹಾಡು ಹಾಡಿದರೆಂದರೆ ಅವರೇ ಧರ್ಮವಂತರು, ಶ್ರೇಷ್ಠ ಸಂತರು ಎಂದಾಗಿತ್ತು. ಸತ್ಯವು ಶರಣರ ಪರವೂ ಗೌರವವೂ ಆಗಿತ್ತು. ಜಾನಪದ ಜನಪರ ಆಸ್ತಿ ಆದಾಗ ಈ ಸಂಸ್ಕೃತಿ  ಬೆಳೆದು ಉಳಿಯುವುದು ಎಂದು ಇಂಪಾಗಿ ಹಾಡುಗಳನ್ನು ಹಾಡುತ್ತಾ ಬಿದರಿ ಅವರು ತಿಳಿಸಿದರು.
ಸಮಾಜ ಸೇವಕ ಮುದ್ರಾಡಿ ದಿವಾಕರ ಶೆಟ್ಟಿ ಇವರು ಗೌರವ ಸ್ವೀಕರಿಸಿ ಮಾತನಾಡಿ, ಎಂದು ನಾಲ್ಕು ಶಬ್ದಗಳು ಹುಟ್ಟಿದವೋ ಅಂದೇ ಜಾನಪದ ಹುಟ್ಟಿತು. ತಾಯಿಯ ಹುಟ್ಟಿನಿಂದ ಇಂತಹ ಜಾನಪದ ವಿಸ್ತೃತಗೊಂಡಿತು. ಇಂತಹ ಜಾನಪದವನ್ನು ಮುಂಬಯಿಗರು  ಬೆಳೆಸಿದ್ದಾರೆ. 

ಮುಂಬಯಿ ಕನ್ನಡಿಗರು  ಸಿದ್ಧಿ ಸಾಧನೆಗೈದ ಪ್ರಾಮಾ ಣಿಕ ಬುದ್ಧಿ ಜೀವಿಗಳು. ಇಂತಹ ಜಾನಪದ ಸಂಭ್ರಮದ ವೇದಿಕೆಯಲ್ಲಿ ನನ್ನಂಥವರನ್ನು ಗುರುತಿಸಿ ಗೌರವಿಸಿದ್ದು ಅಭಿಮಾನ ಅನಿಸುತ್ತಿದೆ ಎಂದರು.

ಕನ್ನಡಿಗರು ಸಾಹಸಿಗರು 
ಮುಂಬಯಿ ವಾಸಿ ಕನ್ನಡಿಗರ ಸಾಧನೆ ಅಪರಿಮಿತ ವಾದದ್ದು. ಇಲ್ಲಿನ ಕನ್ನಡಿಗರು ಧೀರರು, ಶೂರರು, ಮಹಾನ್‌ ಸಾಹಸಿಗರೂ ಹೌದು. ಇಲ್ಲಿನ ಜನತೆಯ ಶ್ರದ್ಧೆ, ನಿಷ್ಠಾವಂತ ಬಾಳು ಸಾಮರಸ್ಯದ ಜೀವನ ಎಲ್ಲವೂ ಸುಂದರಮಯ. ಆದ್ದರಿಂದ ಮುಂಬಯಿ ಭಾರತದ ಭಾಗ್ಯ ನಗರಿಯಾಗಿದೆ  ಎಂದು ಅಧ್ಯಕ್ಷೀಯ ಭಾಷಣದಲ್ಲಿ ಡಾ| ಜಿ. ಎನ್‌. ಉಪಾಧ್ಯ ತಿಳಿಸಿದರು. 

ಸುಶೀಲಾ ಎಸ್‌. ದೇವಾಡಿಗ ಸ್ವಾಗತ ಗೀತೆ ಹಾಡಿದರು.  ನಳಿನಾ ಪ್ರಸಾದ್‌ ಸ್ವಾಗತಿಸಿ ಅತಿಥಿಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದರು. ಸೋಮಶೇಖರ ಮಾಲ್ತಿ ಪಾಟೀಲ್‌ ವಂದಿಸಿದರು. 

ಚಿತ್ರ-ವರದಿ : ರೋನ್ಸ್‌ ಬಂಟ್ವಾಳ್‌

ಟಾಪ್ ನ್ಯೂಸ್

1-aaccc

PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ

Ashok-1

Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್‌.ಅಶೋಕ್‌

HDK (4)

50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ

1-kangu

‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ

Ajit Pawar

BJP;’ಬಟೆಂಗೆ ತೊ ಕಟೆಂಗೆ’ ಹೇಳಿಕೆಗೆ ಬೆಂಬಲವಿಲ್ಲ ಎಂದ ಅಜಿತ್ ಪವಾರ್

01

Catacombs: ಇದು ಎಲುಬುಗಳೇ ತುಂಬಿಕೊಂಡ ಸುರಂಗ; ಸುಂದರ ದೇಶದ ಕರಾಳ ಇತಿಹಾಸ

DVG-Rail

Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್‌!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2-putthige-2

State Formation: ಶ್ರೀ ಕೃಷ್ಣ ಬೃಂದಾವನ ಹೂಸ್ಟನ್ ಶಾಖೆಯಲ್ಲಿ ಸಂಸ್ಥಾಪನಾ ದಿನಾಚರಣೆ

Desi Swara: ಇಟಲಿಯಲ್ಲಿ ದೀಪಾವಳಿ ಬೆಳಕು!

Desi Swara: ಇಟಲಿಯಲ್ಲಿ ದೀಪಾವಳಿ ಬೆಳಕು!

12-

Desiswara: ನ್ಯೂಯಾರ್ಕ್‌ ಸರಕಾರದಿಂದ ಭರ್ಜರಿ ದೀಪಾವಳಿ ಆಚರಣೆ

11-1

Desiswara: ಜಾಗತಿಕ ಬೆಳಕಿನ ಹಬ್ಬ ದೀಪಾವಳಿ – ಬೆಳಕೆಂದರೆ ಬರಿಯ ಬೆಳಕಲ್ಲ…

10-

Desiswara: ಕನ್ನಡ ಉಳಿವಿಗೆ ಜವಾಬ್ದಾರಿಯುತ ನಡೆ ನಮ್ಮದಾಗಲಿ

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

Padubidri-Police

Padubidri: ನವವಿವಾಹಿತೆಗೆ ಕಿರುಕುಳ; ಪತಿಯ ಮನೆಮಂದಿ ವಿರುದ್ಧ ದೂರು

POLICE-5

Karkala: ಗೋವಾ ಮದ್ಯ ಅಕ್ರಮ ದಾಸ್ತಾನು ಪ್ರಕರಣ; ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚನೆ

5

Karkala: ದ್ವೇಷ ಭಾವನೆ ಕೆರಳಿಸುವ ಆರೋಪ; ದೂರು ದಾಖಲು

1-aaccc

PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ

Ashok-1

Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್‌.ಅಶೋಕ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.