ಪ್ರಸಿದ್ಧ ಗಾಯಕಿ ಉಷಾ ಮಂಗೇಶ್ಕರ್ ಅವರಿಂದ ಸುಗಮ ಸಂಗೀತ
Team Udayavani, Jul 11, 2019, 4:19 PM IST
ಸೊಲ್ಲಾಪುರ: ಅಕ್ಕಲ್‌ಕೋಟೆ ನಗರದ ಶ್ರೀ ಸ್ವಾಮಿ ಸಮರ್ಥ ಅನ್ನ ಕ್ಷೇತ್ರ ಮಂಡಳದ 32ನೇ ವಾರ್ಷಿಕೋತ್ಸವ ಹಾಗೂ ಶ್ರೀ
ಗುರುಪೂರ್ಣಿಮಾ ಉತ್ಸವ ಅಂಗವಾಗಿ ಆಯೋಜಿಸಿದ ಪ್ರಸಿದ್ಧ ಗಾಯಕಿ ಉಷಾ ಮಂಗೇಶ್ಕರ್ ಅವರಿಂದ ಸುಗಮ ಸಂಗೀತ ಕಾರ್ಯಕ್ರಮವು ಜು. 9ರಂದು ಅದ್ದೂರಿಯಾಗಿ ನಡೆಯಿತು.
ಮಹಾರಾಷ್ಟ್ರದ ಪ್ರಸಿದ್ಧ ಗಾಯಕಿ ಉಷಾ ಮಂಗೇಶ್ಕರ್, ಅಲ್ಕಾತಾಯಿ ಭೋಸ್ಲೆ, ಮಾಜಿ ನಗರಾಧ್ಯಕ್ಷ ಅನಿತಾ ಖೋಬರೆ, ಮಿನಲ್ ಶಹಾ, ಅನಿತಾ ಕ್ಷೀರಸಾಗರ್ ಹಾಗೂ ಮಂಡಳದ ಪ್ರಮುಖ ಕಾರ್ಯಕಾರಿ ವಿಶ್ವಸ್ತ ಅಮೋಲ್‌ರಾಜೆ ಭೋಸ್ಲೆ ಅವರು ಸ್ವಾಮಿ ಸಮರ್ಥರ ಪ್ರತಿಮೆಗೆ ಪೂಜೆ ಸಲ್ಲಿಸಿ ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅನ್ನ ಕ್ಷೇತ್ರ ಮಂಡಳದ ಸಂಸ್ಥಾಪಕ ಅಧ್ಯಕ್ಷ ಜನ್ಮೆàಜಯರಾಜೆ ಭೋಸ್ಲೆ ಅವರು ಸಮರ್ಥರ ಪ್ರತಿಮೆ ನೀಡುವ ಮೂಲಕ ಅತಿಥಿಗಳನ್ನು ಸಮ್ಮಾನಿಸಿದರು.
ರಾತ್ರಿ 9.30ರವರೆಗೆ ಪ್ರಸಿದ್ಧ ಗಾಯಕಿ ಉಷಾ ಮಂಗೇಶ್ಕರ್ ಅವರಿಂದ ಸುಗಮ ಸಂಗೀತ ಕಾರ್ಯಕ್ರಮ ನಡೆಯಿತು. ರಾಜೇಂದ್ರ ದೂರಕರ್, ಅಪೂರ್ವಾ ದ್ರಾವಿಡ್, ರಾಜೇಂದ್ರ ಸಾಳುಂಖೆ, ದರ್ಶನಾ ಜೋಗ, ಮಾಧುರಿ ಕುಲಕರ್ಣಿ, ರೋಹನ್ ವನಗೆ ಸೇರಿದಂತೆ ಇನ್ನಿತರ ಕಲಾವಿದರು ಸಹಕರಿಸಿದರು.
ವಟವೃಕ್ಷ ಸ್ವಾಮಿ ಮಹಾರಾಜ ದೇವಸ್ಥಾನ ಅಧ್ಯಕ್ಷ ಮಹೇಶ ಇಂಗಳೆ, ಮಂಡಳದ ಕಾರ್ಯದರ್ಶಿ ಶ್ಯಾಮರಾವ ಮೋರೆ, ಉಪಾಧ್ಯಕ್ಷ ಅಭಯ ಖೋಬರೆ, ಖಜಾಂಚಿ ಲಾಲಾ ರಾಠೊಡ್, ಬಾಳಾಸಾಹೇಬ್ ಮೋರೆ, ದಿಲೀಪ್ ಸಿದ್ಧೆ, ಬಾಳಾಸಾಹೇಬ್ ನಿಂಬಾಳ್ಕರ್, ಅರ್ಪಿತಾ ಭೋಸ್ಲೆ, ಮಾಜಿ ನಗರಾಧ್ಯಕ್ಷೆ ಅನಿತಾ ಖೋಬರೆ, ಮಹಾಂತೇಶ ಸ್ವಾಮಿ, ಪಿಂಟು ಸಾಠೆ, ಗಣೇಶ ಭೋಸ್ಲೆ, ಲಕ್ಷ್ಮಣ್ ಪಾಟೀಲ್, ರಾಜೇಂದ್ರ ಪವಾರ್, ಪ್ರಸಾದ ಹುಲ್ಲೆ, ಶಿವು ಸ್ವಾಮಿ, ಮೈನುದ್ದಿನ್ ಕೊರಬು ಹಾಗೂ ಪ್ರವೀಣ್ ದೇಶು¾ಖ್ ಮತ್ತಿತರರು ಪಾಲ್ಗೊಂಡಿದ್ದರು. ಶ್ವೇತಾ ಹುಲ್ಲೆ ಕಾರ್ಯಕ್ರಮ ನಿರೂಪಿಸಿದರು. ಪ್ರಶಾಂತ್ ಭಗರೆ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desiswara: ನ್ಯೂಯಾರ್ಕ್ ಸರಕಾರದಿಂದ ಭರ್ಜರಿ ದೀಪಾವಳಿ ಆಚರಣೆ
Desiswara: ಜಾಗತಿಕ ಬೆಳಕಿನ ಹಬ್ಬ ದೀಪಾವಳಿ – ಬೆಳಕೆಂದರೆ ಬರಿಯ ಬೆಳಕಲ್ಲ…
Desiswara: ಕನ್ನಡ ಉಳಿವಿಗೆ ಜವಾಬ್ದಾರಿಯುತ ನಡೆ ನಮ್ಮದಾಗಲಿ
Kannada Alphanbets: “ಕ’ ಕಾರದಲ್ಲಿನ ವಿಶೇಷ: ಕನ್ನಡ ಅಕ್ಷರಮಾಲೆಯಲ್ಲಿನ “ಕ’ ಕಾರ ವೈಭವ
ನ.9: ವಿಶ್ವ ಕನ್ನಡ ಹಬ್ಬ: ಈ ಬಾರಿ ಸಿಂಗಾಪುರದಲ್ಲಿ ರಂಗೇರಲಿರುವ ಸಂಭ್ರಮ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.