ಗ್ರಾಮೀಣ ಸಮಾಜ ಬಾಂಧವರ ಉದ್ಧಾರ ನನ್ನ ಧ್ಯೇಯ:ಐಕಳ
Team Udayavani, Jan 18, 2018, 5:16 PM IST
ಮುಂಬಯಿ: ವಿಶ್ವದ ಸಮಗ್ರ ಬಂಟರ ಸಂಘಗಳನ್ನು ಒಂದುಗೂಡಿಸಿ, ಆರ್ಥಿಕವಾಗಿ ಸಂಕಷ್ಟದಲ್ಲಿರುವ ಸಮಾಜ ಬಾಂಧವರ ಏಳ್ಗೆಗಾಗಿ ಶ್ರಮಿಸಲು ಯೋಜನೆಗಳನ್ನು ಹಾಕಿಕೊಂಡು ಕಾರ್ಯಪ್ರವೃತ್ತನಾಗುವುದಾಗಿ ವಿಶ್ವ ಬಂಟರ ಸಂಘಗಳ ಒಕ್ಕೂಟದ ನೂತನ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ನುಡಿದರು.
ಜ. 16 ರಂದು ಮಂಗಳೂರು ಬಂಟರ ಯಾನೆ ನಾಡವರ ಸಂಘದಲ್ಲಿ ಜರಗಿದ ವಿಶ್ವ ಬಂಟರ ಸಂಘಗಳ ಒಕ್ಕೂಟದ ಕಾರ್ಯಕಾರಿ ಸಮಿತಿಯ ವಿಶೇಷ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿಶ್ವಬಂಟರ ಸಂಘಗಳ ಒಕ್ಕೂಟದ ನಿರ್ಗಮನ ಅಧ್ಯಕ್ಷ, ಸನಿ¾ತ್ರ ಅಜಿತ್ ಕುಮಾರ್ ರೈ ಮಾಲಾಡಿ, ಒಕ್ಕೂಟದ ಉಪಾಧ್ಯಕ್ಷನಾಗಿ ಕಳೆದ ಹತ್ತು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ ನನ್ನನ್ನು ಅಧ್ಯಕ್ಷ ಪದವಿಗೊಳಿಸಿ ಬಹುದೊಡ್ಡ ಜವಾಬ್ದಾರಿಯನ್ನು ಹಸ್ತಾಂತರಿಸಿದ್ದಾರೆ. ಸದಾ ನನ್ನ ಮಾರ್ಗದರ್ಶಕರಾಗಿದ್ದ ರೈ ಅವರ ಮಾರ್ಗದರ್ಶನ, ಒಕ್ಕೂಟದ ಪದಾಧಿಕಾರಿಗಳು ಹಾಗೂ ಸದಸ್ಯರ ಪ್ರೀತಿ-ವಿಶ್ವಾಸ, ಮುಂಬಯಿ ಬಂಟರ ಪ್ರೋತ್ಸಾಹ, ಪ್ರೇರಣೆ ಮತ್ತು ಅಭಿಮಾನಕ್ಕೆ ತಲೆಬಾಗಿ ಅಧ್ಯಕ್ಷ ಪದವಿಯನ್ನು ಸಂತಸದಿಂದ ಸ್ವೀಕರಿಸಿದ್ದೇನೆ. ಅದಕ್ಕೆ ನಿಮ್ಮೆಲ್ಲರ ಸಹಕಾರ ಅಗತ್ಯವಾಗಿದೆ. ಬಂಟ ಸಂಘ-ಸಂಸ್ಥೆಗಳ ಸಲಹೆ-ಸೂಚನೆಗಳನ್ನು ಸದಾ ಸ್ವಾಗತಿಸುತ್ತೇವೆ. ವಿಶ್ವದ ಎಲ್ಲಾ ಬಂಟ ಸಂಘಟನೆಗಳಿಗೆ ಸಹಕಾರ ನೀಡುತ್ತೇವೆ. ವಿಶ್ವದ ಎಲ್ಲಾ ಬಂಟ-ಸಂಘಟನೆಗಳಿಗೆ ಸಹಕಾರ ನೀಡುತ್ತೇನೆ. ಮುಖ್ಯವಾಗಿ ಗ್ರಾಮೀಣ ಪ್ರದೇಶಗಳಲ್ಲಿರುವ ಸಂಘ-ಸಂಸ್ಥೆಗಳ ಸಮಸ್ಯೆಗಳಿಗೆ ಸ್ಪಂದಿಸಿ, ಅಲ್ಲಿಯ ಸಮಾಜ ಬಾಂಧವರಿಗೆ ಪ್ರಯೋಜನ ಸಿಗಲು ಕಾರ್ಯಪ್ರವೃತ್ತರಾಗೋಣ. ಒಕ್ಕೂಟವನ್ನು ಬಲಪಡಿಸಲು ಮಹಾಪೋಷಕರನ್ನು ನೇಮಿಸಿಕೊಳ್ಳಲು ಚಿಂತನೆ ನಡೆಯುತ್ತಿದ್ದು, ಬಂಟ ಬಾಂಧವರೆಲ್ಲರೂ ಸಹಕಾರ ನೀಡಬೇಕು ಎಂದು ನುಡಿದರು.
ಒಕ್ಕೂಟದ ನಿರ್ಗಮನ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಅವರು ಮಾತನಾಡಿ, 2006 ರಿಂದ ಒಕ್ಕೂಟದ ಅಧ್ಯಕ್ಷರಾಗಿ ಸುಮಾರು 12 ವರ್ಷಗಳ ತನಕ ಅಧ್ಯಕ್ಷನಾದರೂ ಕೆಲವೊಂದು ಕೋರ್ಟು, ಕಾನೂನುಗಳ ತೊಂದರೆಯಿಂದಾಗಿ ಕಾರ್ಯಚಟುವಟಿಕೆಗಳಿಗೆ ಅಡಚಣೆ ಉಂಟಾಯಿತು. ಸದ್ಯ ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷನಾಗಿ ಕೆಲವೊಂದು ಜವಾಬ್ದಾರಿಯುತ ಕಾರ್ಯ ಒತ್ತಡವಿರುವುದರಿಂದ ಒಕ್ಕೂಟವನ್ನು ಮುಂದುವರಿಸಿಕೊಂಡು ಹೋಗುವುದು ಸಾಧ್ಯವಿಲ್ಲ. ಹಾಗಾಗಿ ಒಕ್ಕೂಟದ ಅಧ್ಯಕ್ಷ ಪದವಿಗೆ ರಾಜೀನಾಮೆಯನ್ನಿತ್ತು ಈ ಪದವಿಗೆ ಹಿಂದೆ ಉಪಾಧ್ಯಕ್ಷರಾಗಿದ್ದ ಗೆಳೆಯ ಐಕಳ ಹರೀಶ್ ಶೆಟ್ಟಿ ಅವರಿಗೆ ಬಿಟ್ಟುಕೊಡುತ್ತಿದ್ದೇನೆ. ಐಕಳ ಹರೀಶ್ ಶೆಟ್ಟಿ ಅವರು ಒಟ್ಟು ಸಮರ್ಥ ಸಂಘಟರಾಗಿ, ಸಮಾಜ ಸೇವಕರಾಗಿ ಪ್ರಸಿದ್ಧಿ ಪಡೆದಿದ್ದು, ವಿಶ್ವ ಬಂಟರ ಸಂಘಗಗಳ ಒಕ್ಕೂಟಕ್ಕೆ ಓರ್ವ ದಕ್ಷ ನೇತಾರ ನಮಗೆ ಸಿಕ್ಕಂತಾಗಿದೆ ಎಂದು ನುಡಿದು ಐಕಳ ಹರೀಶ್ ಶೆಟ್ಟಿ ಅವರನ್ನು ಅಭಿನಂದಿಸಿ ಶುಭಹಾರೈಸಿದರು.
ಬಂಟರ ಸಂಘ ಮುಂಬಯಿ ಮಾಜಿ ಗೌರವ ಪ್ರಧಾನ ಕಾರ್ಯದರ್ಶಿ ಉಳೂ¤ರು ಮೋಹನ್‌ದಾಸ್ ಶೆಟ್ಟಿ ಅವರು ಮಾತನಾಡಿ, ಅಜಿತ್ ರೈ ಮಾಲಾಡಿ ಅವರು ಒಬ್ಬ ಸಮರ್ಥ ವ್ಯಕ್ತಿಗೆ ಪಟ್ಟ ಕಟ್ಟಿದ್ದಾರೆ ಎಂದು ನುಡಿದು, ನಿರ್ಗಮನ ಅಧ್ಯಕ್ಷ ಮಾಲಾಡಿ ಹಾಗೂ ನೂತನ ಅಧ್ಯಕ್ಷ ಐಕಳರನ್ನು ಅಭಿನಂದಿಸಿದರು.
ಬಂಟ್ವಾಳ ಬಂಟರ ಸಂಘದ ಅಧ್ಯಕ್ಷ ನಗ್ರಿಗುತ್ತು ವಿವೇಕ್ ಶೆಟ್ಟಿ ಅವರು ಮಾತನಾಡಿ, ಒಕ್ಕೂಟದ ಬಗ್ಗೆ ಜನರ ಅಪೇಕ್ಷೆ ಬಹಳಷ್ಟಿದೆ ಎಂದರು. ಮಾತೃಭೂಮಿ ಕೋ. ಆಪರೇಟಿವ್ ಕ್ರೆಡಿಟ್ ಸೊಸೈಟಿಯ ಕಾರ್ಯಾಧ್ಯಕ್ಷ ರತ್ನಾಕರ ಶೆಟ್ಟಿ ಮುಂಡ್ಕೂರು ಅವರು ಮಾತನಾಡಿ, ಐಕಳ ಹರೀಶ್ ಶೆಟ್ಟಿ ಅವರು ಮುಟ್ಟಿದೆಲ್ಲಾ ಚಿನ್ನವಾಗುತ್ತಿದೆ. ಅವರಿಗೆ ಬಂಟರ ಜನಬಲ ಮತ್ತು ಧನಬಲವಿದೆ. ಒಕ್ಕೂಟಕ್ಕೆ ಯಶಸ್ಸು ಕಟ್ಟಿಟ್ಟ ಬುತ್ತಿಯಾಗಿದೆ ಎಂದರು.
ಸಮಾಜ ಸೇವಕ ಗುರ್ಮೆ ಸುರೇಶ್ ಶೆಟ್ಟಿ ಅವರು ಮಾತನಾಡಿ, ಬಂಟರು ಸಂಕಲ್ಪ ಮಾಡಿದರೆ, ಅಸಾಧ್ಯವೆನ್ನುವುದೇ ಇಲ್ಲ. ಐಕಳ ಹರೀಶ್ ಶೆಟ್ಟಿ ಅವರ ಸಮರ್ಥ ನಾಯಕತ್ವಕ್ಕೆ ನಾವೆಲ್ಲರೂ ಸಹಕಾರ ನೀಡೋಣ ಎಂದರು. ಬಂಟರ ಸಂಘ ಜ್ಞಾನಮಂದಿರದ ಕಾರ್ಯಾಧ್ಯಕ್ಷ ರವೀಂದ್ರನಾಥ ಭಂಡಾರಿ, ಅಶೋಕ್ ಎಂ. ಅಡ್ಯಂತಾಯ, ಹಾವೇರಿ ಬಂಟರ ಸಂಘದ ಪ್ರಕಾಶ್ ಶೆಟ್ಟಿ, ಚಿಕ್ಕಮಗಳೂರು ಬಂಟರ ಸಂಘದ ನವೀನ್ ಕುಮಾರ್ ಶೆಟ್ಟಿ, ಇರಾ ಬಂಟರ ಸಂಘ ಚಂದ್ರಹಾಸ ರೈ, ಕೊಪ್ಪಳ-ಮಂಜೇಶ್ವರ ಬಂಟರ ಸಂಘದ ದಾತಣ್ಣ ಆಳ್ವ, ಪಡುಬಿದ್ರೆ ಬಂಟರ ಸಂಘದ ನವೀನ್‌ಚಂದ್ರ ಶೆಟ್ಟಿ, ಮುನಿಯಾಲ್ ಬಂಟರ ಸಂಘದ ಶಂಕರ್ ಶೆಟ್ಟಿ, ಕರ್ನಲ್ ಶಾಂತಾರಾಮ ಭಂಡಾರಿ, ಕರುಣಾಕರ ಶೆಟ್ಟಿ, ಸುದರ್ಶನ್ ಶೆಟ್ಟಿ, ರವಿರಾಜ್ ಶೆಟ್ಟಿ ನಿಟ್ಟೆಗುತ್ತು, ಅಮರ್‌ನಾಥ್ ಶೆಟ್ಟಿ, ಚಂದ್ರಹಾಸ ಶೆಟ್ಟಿ, ಶರತ್ ಭಂಡಾರಿ, ಬಾಬು ಶೆಟ್ಟಿ ಪೆರಾರ, ಸಚ್ಚಿದಾನಂದ ಶೆಟ್ಟಿ, ಜಯರಾಮ ಸಾಂತ ಅಲ್ಲದೆ ಜಪ್ಪಿನಮೊಗರು ಹಾಗೂ ಮುಲ್ಕಿ, ಸುಳ್ಯ, ಬೆಳ್ಮಣ್ ಇನ್ನಿತರ ಸುಮಾರು 60 ಕ್ಕೂ ಹೆಚ್ಚಿನ ಸಂಘಟನೆಗಳ ಪ್ರತಿನಿಧಿಗಳು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿ ಐಕಳ ಹರೀಶ್ ಶೆಟ್ಟಿ ಅವರನ್ನು ಅಭಿನಂದಿಸಿ ಶುಭಹಾರೈಸಿದರು. ಒಕ್ಕೂಟದ ಕಾರ್ಯದರ್ಶಿ ವಿಜಯಪ್ರಸಾದ್ ಆಳ್ವ, ಜತೆ ಕಾರ್ಯದರ್ಶಿ ಇಂದ್ರಾಳಿ ಜಯಕರ ಶೆಟ್ಟಿ, ಕೋಶಾಧಿಕಾರಿ ಬಾಲಕೃಷ್ಣ ರೈ ಕೊಲ್ಲಾಡಿ, ಬಂಟರ ಜಾಗತಿಕ ಪ್ರತಿಷ್ಠಾನದ ಅಧ್ಯಕ್ಷ ಸಚ್ಚಿದಾನಂದ ಶೆಟ್ಟಿ ಅವರು ಸಲಹೆ ಸೂಚನೆಗಳನ್ನು ನೀಡಿದರು. ಸತೀಶ್ ಅಡಪ್ಪ ಪ್ರಾರ್ಥನೆಗೈದರು. ಒಕ್ಕೂಟದ ಪದಾ ಧಿಕಾರಿಗಳಾಗಿ, ಸದಸ್ಯರಾಗಿ ಸೇವೆ ಸಲ್ಲಿಸಿ ನಿಧನರಾದವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ವಿಶೇಷ ವ್ಯಕ್ತಿತ್ವದ ಗುಣವಿರುವ ಐಕಳ ಹರೀಶ್ ಶೆಟ್ಟಿ ಅವರ ಸಮಾಜ ಸೇವಾ ತುಡಿತ ಅನನ್ಯವಾಗಿದೆ. ಅವರ ದೂರದೃಷ್ಟಿತ್ವ ಮೆಚ್ಚುವಂಥದ್ದು. ಸಂಘಟಕರಾಗಿ ಮುಂಬಯಿಯಲ್ಲಿ ವಿಶ್ವಮಟ್ಟದ ಕಾರ್ಯಕ್ರಮಗಳ ಮೂಲಕ ಗುರುತಿಸಿಕೊಂಡಿರುವ ಅವರು ನಮ್ಮೆಲ್ಲರ ಹೃದಯಕ್ಕೆ ತುಂಬಾ ಹತ್ತಿರವಾದವರು. ಅವರಿಗೆ ಮುಂಬಯಿ ಬಂಟರ ಸರ್ವ ಸಹಕಾರ ಇದೆ.
ಪದ್ಮನಾಭ ಎಸ್. ಪಯ್ಯಡೆ (ಅಧ್ಯಕ್ಷರು : ಬಂಟರ ಸಂಘ ಮುಂಬಯಿ)
ಐಕಳ ಹರೀಶ್ ಶೆಟ್ಟಿ ಅವರ ಯೋಜನೆ-ಯೋಚನೆಗಳಿಗೆ ಮುಂಬಯಿ ಬಂಟರ ಸಂಪೂರ್ಣ ಸಹಕಾರವಿದೆ. ಒಕ್ಕೂಟವು ಕೋರ್ಟು, ಮೊಕದ್ದಮೆಗಳಿಂದ ಮುಕ್ತವಾಗಿದೆ. ಇದೊಂದು ಮಾದರಿ ಕಾರ್ಯವನ್ನಾಗಿಸಿದ ಅಜಿತ್ ಕುಮಾರ್ ರೈ ಮಾಲಾಡಿ ಮತ್ತು ಪದಾಧಿಕಾರಿಗಳು ಅಭಿನಂದನಾರ್ಹರು. ಬಂಟ ಸಂಘಟನೆಗಳು ಒಕ್ಕೂಟದ ಸದಸ್ಯರಾಗಬೇಕು.
ಸಿಎ ಶಂಕರ್ ಬಿ. ಶೆಟ್ಟಿ (ಕಾರ್ಯಾಧ್ಯಕ್ಷರು : ಬಂಟರ ಸಂಘ ಎಸ್‌ಎಂ ಶೆಟ್ಟಿ ಶಿಕ್ಷಣ ಸಂಕುಲ ಪೊವಾಯಿ).
ಅತ್ಯುತ್ತಮ ನಾಯಕತ್ವದ ಗುಣ ಹೊಂದಿರುವ ಐಕಳ ಹರೀಶ್ ಶೆಟ್ಟಿ ಶ್ರೀಮಂತರ ಸಂಘ ಎಂದುಕೊಂಡಿದ್ದ ಬಂಟರ ಸಂಘ ಮುಂಬಯಿಯನ್ನು ಬಡವರು, ಜನಸಾಮಾನ್ಯರ ಹತ್ತಿರ ಕೊಂಡೊಯ್ದವರಲ್ಲಿ ಮೊದಲಿಗರು. ಐಕಳ ಆಡಳಿತಾವಧಿಯಲ್ಲಿ ಒಕ್ಕೂಟವು
ವಿಶ್ವದೆತ್ತರಕ್ಕೆ ಹೆಸರುಗಳಿಸಲಿ.
ಕರ್ನಿರೆ ವಿಶ್ವನಾಥ ಶೆಟ್ಟಿ (ಮಾಜಿ ಅಧ್ಯಕ್ಷರು : ಬಂಟರ ಸಂಘ ಮುಂಬಯಿ).
ಸುಮಾರು 12 ಸಾವಿರ ಸದಸ್ಯರಿರುವ ಬೋಂಬೆ ಬಂಟ್ಸ್ ಅಸೋಸಿಯೇಶನ್‌ನ ಪರವಾಗಿ ಐಕಳ ಹರೀಶ್ ಶೆಟ್ಟಿ ಅವರನ್ನು ಅಭಿನಂದಿಸುತ್ತೇನೆ. ಐಕಳ ಅವರ ಸಮಾಜ ಸೇವೆಯನ್ನು ಗುರುತಿಸಿ ಕರ್ನಾಟಕ ಸರಕಾರವೇ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿರುವುದು
ಸಮಾಜಕ್ಕೆ ಹೆಮ್ಮೆಯಾಗಿದೆ
ನ್ಯಾಯವಾದಿ ಸುಭಾಶ್ ಬಿ. ಶೆಟ್ಟಿ (ಅಧ್ಯಕ್ಷರು : ಬೋಂಬೆ ಬಂಟ್ಸ್ ಅಸೋಸಿಯೇಶನ್).
ಇಂದು ಒಕ್ಕೂಟದ ಜೀರ್ಣೋದ್ಧಾರವಾಗಿದೆ. ಓರ್ವ ಪ್ರಾಮಾಣಿಕ, ಚತುರ, ಸಂಘಟಕರಾಗಿರುವ ಐಕಳ ಹರೀಶ್ ಶೆಟ್ಟಿ ಅವರು ಒಕ್ಕೂಟದ ಹೆಸರನ್ನು ವಿಶ್ವಮಟ್ಟದಲ್ಲಿ ರಾರಾಜಿಸುತ್ತಾರೆ ಎಂಬುವುದರಲ್ಲಿ ಎರಡು ಮಾತಿಲ್ಲ. ಅವರಿಗೆ ಎಲ್ಲಾ ರೀತಿಯ ಸಹಕಾರ ದೊರೆಯಲಿದೆ.
ಸಂತೋಷ್ ಶೆಟ್ಟಿ ಇನ್ನಕುರ್ಕಿಲ್‌ಬೆಟ್ಟು (ಅಧ್ಯಕ್ಷರು : ಪುಣೆ ಬಂಟರ ಸಂಘ).
ಚಿತ್ರ-ವರದಿ ಪ್ರೇಮನಾಥ್ ಶೆಟ್ಟಿ ಮುಂಡ್ಕೂರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹೊಯ್ಸಳ ಕನ್ನಡ ಸಂಘ: ವಿದೇಶದಲ್ಲಿ ಕಣ್ಮನ ಸೆಳೆದ ಗದಾಯುದ್ಧ ಯಕ್ಷಗಾನ
Desi Swara: ಟ್ಯಾಂಪಾ ಸಾಂಸ್ಕೃತಿಕ ವೇದಿಕೆ – ಹರಿಕಥೆ ಆಯೋಜನೆ
ಕ್ಲೀವ್ ಲ್ಯಾಂಡ್: 40ನೇ ಬೆಳಕಿನ ಕನ್ನಡೋತ್ಸವ, ಹಾಸ್ಯ ಹೊನಲು, ಸಂಗೀತ ಸುಧೆ
ಮೊಗವೀರ್ಸ್ ಬಹ್ರೈನ್ ಪ್ರೊ ಕಬಡ್ಡಿ;ತುಳುನಾಡ್ ತಂಡ ಪ್ರಥಮ,ಪುನಿತ್ ಬೆಸ್ಟ್ All ರೌಂಡರ್
ಕ್ಯಾಲಿಫೋರ್ನಿಯ: ನಾಡೋತ್ಸವದಲ್ಲಿ ಚಿಣ್ಣರ ಚಿಲಿಪಿಲಿ, ಸಾಂಸ್ಕೃತಿಕ ಪ್ರದರ್ಶನ
MUST WATCH
ಹೊಸ ಸೇರ್ಪಡೆ
Year ender: ಈ ವರ್ಷ ನಕ್ಕು ನಗಿಸಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ವಿಡಿಯೋಗಳಿವು..
Meditation: ವರ್ಧಿತ ಶೈಕ್ಷಣಿಕ ಕಾರ್ಯಕ್ಷಮತೆಗೆ ಧ್ಯಾನ
Shaw left out; ಓ ದೇವರೇ, ನಾನು ಇನ್ನೇನೆಲ್ಲ ನೋಡಬೇಕು..; ಪೃಥ್ವಿ ಶಾ ನೋವು
Loksabha:ಕಾಂಗ್ರೆಸ್ ಅಂಬೇಡ್ಕರ್ ಗೆ ಹಲವು ಬಾರಿ ಅವಮಾನ ಮಾಡಿದೆ: ಪ್ರಧಾನಿ ಮೋದಿ ತಿರುಗೇಟು
ತೀವ್ರ ಸ್ವರೂಪ ಪಡೆದ ಅತಿಥಿ ಶಿಕ್ಷಕರ ಪ್ರತಿಭಟನೆ; ಶಿಕ್ಷಕ ಅಸ್ವಸ್ಥ, ಆಸ್ಪತ್ರೆಗೆ ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.