ಜೂ. 30: ಮೈಸೂರು ಅಸೋಸಿಯೇಶನ್‌ 4 ಕೃತಿಗಳ ಅನಾವರಣ

Team Udayavani, Jun 27, 2018, 4:45 PM IST

2606mum04drsunithashetty.jpg

ಮುಂಬಯಿ: ಸೃಜನಾ ಮುಂಬಯಿ ಕನ್ನಡ ಲೇಖಕಿಯರ ಬಳಗ ಹಾಗೂ ಮೈಸೂರು ಅಸೋಸಿಯೇಶನ್‌ ಜಂಟಿ ಆಯೋಜನೆಯಲ್ಲಿ ನಾಲ್ಕು ಕೃತಿಗಳ ಬಿಡುಗಡೆ ಕಾರ್ಯಕ್ರಮ ಜೂ. 30 ರಂದು ಅಪರಾಹ್ನ 4.30 ರಿಂದ ಮಾಟುಂಗ ಪೂರ್ವದ ಮೈಸೂರು ಅಸೋಸಿಯೇಶನ್‌ನ ತಳಮಹಡಿಯಲ್ಲಿ ನಡೆಯಲಿದೆ.

ಕಾರ್ಯಕ್ರಮದಲ್ಲಿ ಸೃಜನಾ ಮುಂಬಯಿ ಕನ್ನಡ ಲೇಖಕಿಯರ ಬಳಗದ “ಓದು ಮುಗಿಸಿದ ಮೇಲೆ’, ನಗರದ ಹಿರಿಯ ಸಾಹಿತಿ ಡಾ| ಸುನೀತಾ ಎಂ. ಶೆಟ್ಟಿ ಅವರ “ಸಮಾರಾಧನೆ’ ಹಾಗೂ ಲೇಖಕಿ, ಕವಿ ಡಾ| ದಾಕ್ಷಾಯಿಣಿ ಯಡಹಳ್ಳಿ ಇವರ “ವರ್ತುಲ’ ಮತ್ತು “ಅವ್ವಂದಿರ ಹಾಡುಗಳು’ ಕೃತಿಗಳನ್ನು ಗಣ್ಯರ ಉಪಸ್ಥಿತಿಯಲ್ಲಿ ಬಿಡುಗಡೆಗೊಳಿಸಲಾಗುವುದು. 

ಮುಖ್ಯ ಅತಿಥಿಗಳಾಗಿ ಮೈಸೂರು ಅಸೋ ಸಿಯೇಶನ್‌ ಮುಂಬಯಿ ಮಹಿಳಾ ವಿಭಾಗದ ಅಧ್ಯಕ್ಷೆ    ಕೆ. ಕಮಲಾ, ನಗರದ ಹಿರಿಯ ಸಾಹಿತಿ   ಡಾ| ವಿಶ್ವನಾಥ್‌ ಕಾರ್ನಾಡ್‌, ನಗರದ ವಿಮರ್ಶಕ  ಡಾ|  ಕೆ. ರಘುನಾಥ್‌ ಅವರು ಆಗಮಿಸಲಿದ್ದಾರೆ.

ಡಾ| ಸುನೀತಾ ಎಂ. ಶೆಟ್ಟಿ 
ಮಂಬಯಿಯ ಹಿರಿಯ ಸಾಹಿತಿಯಾಗಿ ಜನ ಮನ್ನಣೆಯನ್ನು ಪಡೆದ ಪಡೆದ ಡಾ| ಸುನೀತಾ ಎಂ. ಶೆಟ್ಟಿ ಅವರು ಶಿಕ್ಷಕಿಯಾಗಿ, ಪ್ರಾಧ್ಯಾಪಕಿ ಆಗಿ ಒಳ್ಳೆಯ ವಾಗ್ಮಿಯಾಗಿ ಹೆಸರು ಮಾಡಿದ್ದಾರೆ. ತುಳು -ಕನ್ನಡ ಎರಡೂ ಭಾಷೆಗಳಲ್ಲಿ ಸಾಹಿತ್ಯ ರಚನೆ ಮಾಡಿರುವ ಅವರು, ಮಹಿಳೆಗೊಂದು ಸ್ವತಂತ್ರ ವ್ಯಕ್ತಿತ್ವ ಇರಬೇಕು. ಅದನ್ನು ಅವಳು ಬದುಕಿನಲ್ಲಿ ಉಳಿಸಿಕೊಳ್ಳಬೇಕು ಎಂಬುವುದನ್ನು ನಂಬಿ, ನೆಚ್ಚಿ, ಹಾಗೆ ನಡೆದು ಉನ್ನತ ವ್ಯಕ್ತಿತ್ವವನ್ನು ಗಳಿಸಿಕೊಂಡವರು. ಹೊಸ ವಿಚಾರ, ಹೊಸ ಚಿಂತನೆಗೆ ಸದಾ ತೆರೆದುಕೊಂಡು ಓಡಾಡುವ ಅವರು ಮುಂಬಯಿ ಕನ್ನಡಿಗರ ಅಕ್ಕರೆಯ ಅಕ್ಕನಾಗಿ, ಅಭಿಮಾನದ ಅಮ್ಮನಾಗಿ ಅಪಾರ ಮೆಚ್ಚುಗೆಯನ್ನು ಪಡೆದಿದ್ದಾರೆ.

ಅವರ ಸಾಹಿತ್ಯ ಶ್ರದ್ಧೆ ಕಾರ್ಯೋತ್ಸಾಹಕ್ಕೆ ಯಾರೂ ಬೇರಗಾಗಬೇಕು. ತಾವಾಯಿತು, ತಮ್ಮ ಸಾಹಿತ್ಯ ಕೃಷಿಯಾಯಿತು ಎಂದು ಅವರು ಸಮಾಜ ಸೇವೆಯಿಂದ ದೂರ ಉಳಿದವರಲ್ಲ. ಮುಂಬಯಿಯ ಅನೇಕ ಕಿರಿಯ ಪ್ರತಿಭಾವಂತ ಲೇಖಕರಲ್ಲಿ ಲೇಖನಿ ಹಿಡಿಯುವ ಧೈರ್ಯ ಮೂಡಿಸಿದ ಮುಂಬಯಿ ಕನ್ನಡಿಗರ ಶಕ್ತಿಯಾಗಿದ್ದಾರೆ. ನಾಗಸಂಪಿಗೆ, ಪಿಂಗಾರ, ಸಂಕ್ರಾಂತಿ, ಕರಜನ, ಪದಪಣ್‌ ಕಣ್ಣಾರೋ ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಡಾ| ಸುನೀತಾ ಶೆಟ್ಟಿ ಅವರ ಕವನಗಳ ಧ್ವನಿ ಸುರುಳಿ ಮತ್ತು ಸಿಡಿಗಳು ಬಹಳ ಜನಪ್ರಿಯವಾಗಿವೆ. ಪೊಣ್ಣ ಮನಸ್‌Õ ಬೆಂಗ್‌ದ ಕಡಲ್‌ ಇದು ಸುನೀತಾ ಶೆಟ್ಟಿ ಅವರು ತುಳುವಿಗೆ ಅನುವಾದಿಸಿದ ನಾಟಕ. ಇತ್ತೀಚೆಗೆ ಹೃದಯ ಸಂವಾದ ಎಂಬ ಸದರ್ಶನ ಲೇಖನಗಳ ಸಂಗ್ರಹವನ್ನು, ಮೆರವಣಿಗೆ ಎಂಬ ಲೇಖನಗಳ ಸಂಪುಟವನ್ನು ಪ್ರಕಟಿಸಿದ್ದಾರೆ. ಮುಂಬಯಿಯ ಮಹಿಳಾ ಲೇಖಕಿಯನ್ನು ಸೃಜನಾ ವೇದಿಕೆಯಲ್ಲಿ ಒಂದುಗೂಡಿಸಿದ್ದಾರೆ. ಆಗಾಗ ವಿದೇಶ ಸಂದರ್ಶನ ಮಾಡಿ ಪ್ರವಾಸ ಲೇಖನಗಳನ್ನು ಬರೆದಿದ್ದಾರೆ. ಅವರ ಸಿದ್ಧಿ-ಸಾಧನೆಗಳಿಗೆ ಹಲವಾರು ಪ್ರಶಸ್ತಿ, ಪುರಸ್ಕಾರಗಳು ಲಭಿಸಿವೆ. ತುಳು ಮತ್ತು ಕನ್ನಡ ಭಾಷೆಗಳಲ್ಲಿ ಹಲವಾರು ಕೃತಿಗಳನ್ನು ಪ್ರಕಟಿಸಿದ ಹೆಗ್ಗಳಿಕೆ ಅವರದ್ದಾಗಿದೆ.

ಡಾ| ದಾಕ್ಷಾಯಿಣಿ ಯಡಹಳ್ಳಿ 
ಮೂಲತಃ ಹುನಗುಂದಾದ ಚಿನ್ನಾಪೂರ ದವರಾದ ಇವರು ಬಿಎಸ್‌ಸಿ, ಎಂಎ, ಬಿಎಡ್‌ ಪದವಿ ಪಡೆ ದಿದ್ದು ಮುಲುಂಡ್‌ ವಿಪಿಎಂ ಶಿಕ್ಷಣ ಸಂಸ್ಥೆ ಯಲ್ಲಿ  ಇಂಗ್ಲಿಷ್‌ ಶಿಕ್ಷಕಿಯಾಗಿ, ಉಪ ಮುಖ್ಯ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ ನಿವೃತ್ತ ರಾಗಿದ್ದಾರೆ. ಮುಂಬಯಿ ವಿವಿ ಕನ್ನಡ ವಿಭಾಗದಲ್ಲಿ ಎಂಎ, ಎಂಫಿಲ್‌, ಪಿಎಚ್‌ಡಿ ಪದವಿಯನ್ನು ಪಡೆದಿರುವ ಇವರದ್ದು ಬಹುಮುಖ ಪ್ರತಿಭೆ. ಕನ್ನಡ ಮತ್ತು ಆಂಗ್ಲಭಾಷೆಯಲ್ಲಿ ಹಲವು ಲೇಖನಗಳನ್ನು ಬರೆದಿದ್ದಾರೆ. ಇವರ ಕತೆ, ಕವನ, ಲೇಖನಗಳು ನಾಡಿನ ಹಾಗೂ ನಗರದ ಹಲವಾರು ಪತ್ರಿಕೆಗಳಲ್ಲಿ ಪ್ರಕಟಗೊಂಡಿರುವುದಲ್ಲದೆ, ಕತೆ, ಕವನಗಳಿಗೆ ಬಹುಮಾನಗಳು ಲಭಿಸಿವೆ. ಇವರ ಬ್ರಹ್ಮಕಮಲ, ದಂತ ಪಂಕ್ತಿಯ ನಡುವೆ ಇನ್ನಿತರ ಹಲವಾರು ಕೃತಿಗಳು ಪ್ರಕಟವಾಗಿವೆ. 

ಟಾಪ್ ನ್ಯೂಸ್

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

ಪತ್ನಿ ಜತೆ ಸಂಬಂಧ ಮುರಿದಿದ್ದ ಸೈಬರ್‌ ಟ್ರಕ್‌ ಸ್ಫೋ*ಟದ ವ್ಯಕ್ತಿ!

ಪತ್ನಿ ಜತೆ ಸಂಬಂಧ ಮುರಿದಿದ್ದ ಸೈಬರ್‌ ಟ್ರಕ್‌ ಸ್ಫೋ*ಟದ ವ್ಯಕ್ತಿ!

Formula E race corruption case: ಜ.6ರಂದು ಕೆಟಿಆರ್‌ ವಿಚಾರಣೆ

Formula E race corruption case: ಜ.6ರಂದು ಕೆಟಿಆರ್‌ ವಿಚಾರಣೆ

Bangladesh ಸುಧಾರಿಸುವವರೆಗೂ ಪ್ರಾರ್ಥನೆ ನಿಲ್ಲದು: ಇಸ್ಕಾನ್‌

Bangladesh ಸುಧಾರಿಸುವವರೆಗೂ ಪ್ರಾರ್ಥನೆ ನಿಲ್ಲದು: ಇಸ್ಕಾನ್‌

ಸನಾತನ ಅರ್ಥ ತಿಳಿಯದೆ ತಪ್ಪು ದಾರಿಗೆ ಸಮಾಜ: ಧನಕರ್‌

ಸನಾತನ ಅರ್ಥ ತಿಳಿಯದೆ ತಪ್ಪು ದಾರಿಗೆ ಸಮಾಜ: ಧನಕರ್‌

Arvind Kejriwal: ಕೇಂದ್ರ ಸರಕಾರ‌ ದಿಲ್ಲಿಯಲ್ಲಿ ಏನೂ ಮಾಡಿಲ್ಲ

Arvind Kejriwal: ಕೇಂದ್ರ ಸರಕಾರ‌ ದಿಲ್ಲಿಯಲ್ಲಿ ಏನೂ ಮಾಡಿಲ್ಲ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು

ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು

ಅಬುಧಾಬಿ ಹಿಂದೂ ಮಂದಿರದಲ್ಲಿ ಪ್ರಥಮ ದೀಪಾವಳಿ ಸಂಭ್ರಮ

ಅಬುಧಾಬಿ ಹಿಂದೂ ಮಂದಿರದಲ್ಲಿ ಪ್ರಥಮ ದೀಪಾವಳಿ ಸಂಭ್ರಮ

ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸರಣ ಘಟಕಕ್ಕೆ ಗ್ರಹಣ!

ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!

ಕತಾರ್‌:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್‌ ಶಹನ ಜತೆ ಸಂವಾದ

ಕತಾರ್‌:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್‌ ಶಹನ ಜತೆ ಸಂವಾದ

ಬಹ್ರೈನ್‌ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್‌ ಅಬ್ಬರ-ಕ್ರಿಕೆಟ್‌ ಪ್ರೇಮಿಗಳ ಮೆಚ್ಚುಗೆ

ಬಹ್ರೈನ್‌ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್‌ ಅಬ್ಬರ-ಕ್ರಿಕೆಟ್‌ ಪ್ರೇಮಿಗಳ ಮೆಚ್ಚುಗೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

puttige-2

Udupi; ಗೀತಾರ್ಥ ಚಿಂತನೆ 145: ವೇದಪ್ರಾಮಾಣ್ಯದ ಚರ್ಚೆ

crime

Kasaragod: ಘರ್ಷಣೆಯಿಂದ ಮೂವರಿಗೆ ಗಾಯ

1-weewq

Baindur: ಬಟ್ಟೆ ವ್ಯಾಪಾರಿ ನಾಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.